ಮೊದಲ ಬಾರಿಗೆ ಹೆರಿಗೆಯಾದ ನಂತರ ಎದೆಹಾಲುಣಿಸಲು ಸಲಹೆಗಳು

ನಿಮ್ಮ ಮಗುವಿಗೆ ಕನಿಷ್ಠ ೧೦ತಿಂಗಳವರೆಗೆ ನೀವು ಎದೆಹಾಲನ್ನು ನೀಡಬೇಕು, ಎದೆಹಾಲು ನಿಮ್ಮ ಮಗುವಿಗೆ ಉತ್ತಮ ಆಹಾರವಾಗಿದ್ದು ಅದರಲ್ಲಿರುವ ಪೌಷ್ಟಿಕಾಂಶಗಳು ಮತ್ತು ಮಗುವಿಗೆ ಅಗತ್ಯವಿರುವ ಪೋಷಕಗಳು, ಪ್ರತಿರಕ್ಷಕಗಳು ನಿಮ್ಮ ಎದೆಹಾಲಿನಲ್ಲಿ ಮಾತ್ರ ಇರುವುದು. ನಿಮ್ಮ ಎದೆಹಾಲಿಗೆ ಪರ್ಯಾಯವಾದ ಬೇರೆ ಯಾವುದೇ ಆಹಾರ ಅಥವಾ ಪದಾರ್ಥಗವು ಇಲ್ಲ.

ಎದೆಹಾಲು ನಿಮ್ಮ ಮಗುವು ಚುರುಕಾಗಲು, ಬುದ್ಧಿಶಕ್ತಿ ಹೆಚ್ಚಿಸಿಕೊಳ್ಳುವಂತೆ ಮಾಡುತ್ತದೆ. ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸಿ ಕರುಳನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು, ಅಸ್ತಮಾ, ಅಲರ್ಜಿ, ಮಧುಮೇಹ ಮತ್ತು ಒಬೆಸಿಟಿ ಇಂದ ರಕ್ಷಿಸುತ್ತದೆ.

ಎದೆಹಾಲುಣಿಸುವುದು ಬರಿ ಮಗುವಿಗೆ ಮಾತ್ರವಲ್ಲ ಇದು ತಾಯಿಯ ಆರೋಗ್ಯಕ್ಕೂ ಒಳ್ಳೆಯದು.

ಎದೆಹಾಲುಣಿಸಲು ತಾಯಿಯಂದಿರಿಗೆ ಕೆಲವು ಸಲಹೆಗಳು
೧.ಸರಿಯಾಗಿ ಕಚ್ಚಿಸಿ

ಎದೆಹಾಲುಣಿಸುವ ಬಗ್ಗೆ ಎಷ್ಟೇ ಕೇಳಿದರು, ಓದಿದರು, ನಿಮ್ಮ ಸ್ವಂತ ಅನುಭವ ಪಡೆಯುವವರೆಗೆ ಅದರ ಬಗ್ಗೆ ನಿಮಗೆ ಸ್ಪಷ್ಟ ನಿಲುವು ಸಿಗುವುದಿಲ್ಲ. ಆದ್ದರಿಂದ ನೀವು ಮೊದಲ ಬಾರಿಗೆ ಹೆರಿಗೆಯಾದ ನಂತರ ಸ್ತನ್ಯಪಾನ ಮಾಡಿಸುವಾಗ ನಿಮ್ಮ ಆಪ್ತರ ಸಹಾಯವನ್ನು ಪಡೆಯಲು ಅಥವಾ ಕೇಳಲು ಮುಜುಗರ ಪಡಬೇಡಿ.

ನಿಮ್ಮ ತಾಯಿ, ಅಥವಾ ಆಸ್ಪತ್ರೆಯಲ್ಲಿ ವೈದ್ಯರು ಅಥವಾ ನರ್ಸ್ ಗಳು ನಿಮಗೆ ಸರಿಯಾಗಿ ಮಗುವನ್ನು ಯಾವ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು, ಎಂಬುದನ್ನು ಸಂಪೂರ್ಣವಾಗಿ ಹೇಳಿಕೊಡುತ್ತಾರೆ.

ಮೊದಲ ಬಾರಿಗೆ ನೀವು ಎದೆಹಾಲುಣಿಸುವಾಗ ಆರಾಮದಾಯಕವಲ್ಲದ ಹಾಗೆ ಭಾವಿಸಿದರು, ಅದು ನಿಮಗೆ ನೋವನ್ನು ಉಂಟು ಮಾಡುವುದಿಲ್ಲ. ಒಂದು ವೇಳೆ ನೀವು ಮಗುವನ್ನು ಸರಿಯಾದ ಸ್ಥಿತಿಯಲ್ಲಿ ಇರಿಸಿಕೊಂಡಿಲ್ಲ ಎಂದರೆ ನಿಮ್ಮ ಸ್ತನ ಹೆಚ್ಚು ನೋವಲು ಶುರುವಾಗಬಹುದು.

೨.ಆರಾಮದಾಯಕವನ್ನು ಪಡೆಯಿರಿ

ಎದೆಹಾಲುಣಿಸುವುದು ನಿಮಗೆ ಸ್ವಲ್ಪ ಆಯಾಸವನ್ನುಂಟು ಮಾಡಬಹುದು, ಆದ್ದರಿಂದ, ಮಗುವಿಗೆ ಎದೆಹಾಲುಣಿಸುವ ಮೊದಲು ಸ್ವಲ್ಪ ವಿಶ್ರಾಂತಿಯನ್ನು ಮತ್ತು ನಿಮಗೆ ಆರಾಮು ಎನಿಸುವ ಸ್ಥಳವನ್ನು ಮತ್ತು ಭಂಗಿಯನ್ನು ಆಯ್ಕೆಮಾಡಿಕೊಳ್ಳಿ(ಮಲಗಿಕೊಂಡು ಹಾಲುಣಿಸುವುದು ಅಥವಾ ಕೂತುಕೊಂಡು).

ಹೆರಿಗೆ ನಂತರ ನಿಮಗೆ ಸುಸ್ತಾಗಿರುವುದರಿಂದ, ದಿಂಬುಗಳ ಸಹಾಯದಿಂದ ಆರಾಮ ಸ್ಥಿತಿಯನ್ನು ಪಡೆಯಿರಿ ಮತ್ತು ನೀವು ಮಲಗಿಕೊಂಡೆ ಮಗುವಿಗೆ ಹಾಲುಣಿಸಿ. ನಿಮ್ಮ ಸ್ಥಾನವನ್ನು ಮಗುವಿನ ಬಳಿ ತರಿಸಿ ಹಾಗೆಯೆ ಹಾಲುಣಿಸಿ, ಇದರ ಬಗ್ಗೆ ವೈದ್ಯರನ್ನು ಕೇಳಿ, ಅವರು ನಿಮಗೆ ಸಹಾಯ ಮಾಡುವರು.

ಹೆರಿಗೆಯಾಗಿ ಸ್ವಲ್ಪ ದಿನಗಳವೆರೆಗೂ ನಿಮ್ಮ ಒಂದು ಕೈಯನ್ನು ಮಗುವಿನ ತಲೆಗೆ ಬೆಂಬಲವಾಗಿ ಮತ್ತು ಇನ್ನೊಂದು ಕೈಯನ್ನು ನಿಮ್ಮ ಸ್ತನಕ್ಕೆ ಬೆಂಬಲವಾಗಿ ನೀಡಿ.

೩.ಸನ್ನೆಯನ್ನು ಗಮನಿಸಿ

ನಿಮ್ಮ ಮಗುವಿಗೆ ಹಸಿವಾಗಿದ್ದರೆ, ನನಗೆ ಹಸಿವಾಗಿದೆ ಎಂದು ಮಗುವು ಸನ್ನೆಯನ್ನು ಮಾಡುತ್ತದೆ. ತನ್ನ ಬಾಯಿಯಿಂದ ನಿಮ್ಮ ಸ್ತನವನ್ನು ನಿರಂತರವಾಗಿ ಹುಡುಕುತ್ತಿರುತ್ತದೆ, ಅಥವಾ ತನ್ನ ಬೆರಳನ್ನು ಬಾಯಿಗೆ ಹಾಕಿಕೊಂಡು ಚೀಪಲು ಪ್ರಾರಂಭಿಸುತ್ತದೆ, ಕೆಲ ಶಿಶುಗಳು ತಮ್ಮ ನಾಲಿಗೆಯನ್ನು ಆಚೆ ತಗೆದು ಚೀಪುತ್ತಿರುವಂತೆ ಮಾಡುತ್ತವೆ.

ಇಂತಹ ಸನ್ನೆಗಳನ್ನು ನೀವು ಗಮನಿಸಿದ ಕೂಡಲೇ ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ಮಗುವನ್ನು ಎತ್ತಿಕೊಂಡು ಹಾಲುಣಿಸಲು ಪ್ರಾರಂಭಿಸುವುದು. ಪ್ರಾರಂಭದಲ್ಲಿ, ನೀವು ದಿನಕ್ಕೆ ಕನಿಷ್ಠ ೧೦ ರಿಂದ ೧೨ ಬಾರಿ ಎದೆಹಾಲನ್ನು ಉಣಿಸಬೇಕು. ನೀವು ಹೆಚ್ಚು ಹಾಲನ್ನು ಉಣಿಸಿದಷ್ಟು ನಿಮ್ಮ ಸ್ತನ ಹೆಚ್ಚು ಹಾಲನ್ನು ಉತ್ಪತ್ತಿ ಮಾಡುತ್ತದೆ.

೪.ನಿಮ್ಮ ಎರಡು ಸ್ತನಗಳಿಂದ ಹಾಲುಣಿಸಿ

ಎದೆಹಾಲುಣಿಸುವಾಗ, ಮಗುವಿಗೆ ನಿಮ್ಮ ಎರಡು ಸ್ತನಗಳಿಂದ ಹಾಲುಣಿಸಿ. ನಿಮ್ಮ ಮಗುವಿಗೆ ಹಸಿವಾಗಿದ್ದರೆ, ಎರಡನೇ ಸ್ತನವನ್ನು ಬೇಗನೆ ಕಚ್ಚಿ ಹಾಲು ಕುಡಿಯಲು ಪ್ರಾರಂಭಿಸುತ್ತವೆ, ಇಲ್ಲದಿದ್ದರೆ, ಬೇಗ ಕಚ್ಚುವುದಿಲ್ಲ, ಒಂದು ವೇಳೆ ಮಗುವು ಮಲಗಿಕೊಂಡರೆ, ನಿಮ್ಮ ಮುಂದಿನ ಸಲ ಎರಡನೇ ಸ್ತನದಿಂದ ಹಾಲುಣಿಸಲು ಮೊದಲು ಪ್ರಾರಂಭಿಸಿ.

೫.ನಿಮ್ಮ ದೇಹವನ್ನು ನೀರಿನಾಂಶದಿಂದ ಕೂಡಿರುವಂತೆ ನೋಡಿಕೊಳ್ಳಿ

ನೀವು ಈ ಸಮಯದಲ್ಲಿ ಹೆಚ್ಚು ನೀರು ಕುಡಿಯುವುದು ಒಳ್ಳೆಯದು. ನೀವು ಸರಿಯಾಗಿ ನೀರು ಕುಡಿಯಲಿಲ್ಲ ಎಂದರೆ ನಿಮ್ಮ ಸ್ತನ ಹಾಲನ್ನು ಉತ್ಪತ್ತಿ ಮಾಡಲು ತೊಂದರೆಯನ್ನು ಅನನುಭವಿಸುತ್ತದೆ.

ಜೊತೆಗೆ ಕಡಿಮೆ ನೀರು ಕುಡಿಯುವುದರಿಂದ ನೀವು ಮಲಬದ್ಧತೆ, ಆಯಾಸ ಮತ್ತು ಕಡಿಮೆ ಏಕಾಗ್ರತೆಯನ್ನು ಪಡೆಯುವಿರಿ.

ನಿಮಗೆ ಯಾವಾಗಲು ಬರಿ ನೀರು ಕುಡಿಯಲು ಇಷ್ಟ ಆಗದಿದ್ದರೆ, ತಾಜಾ ಹಣ್ಣಿನ ರಸವನ್ನು ಕುಡಿಯಿರಿ ಅಥವಾ ಹಾಲನ್ನು ಕುಡಿಯಿರಿ.

ನಿಮ್ಮ ಸಾಮಾನ್ಯ ದಿನಗಳಿಗಿಂತ ಎದೆಹಾಲುಣಿಸುವ ದಿನಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ನೀರು ಕುಡಿಯಬೇಕು.

Leave a Reply

%d bloggers like this: