ಎದೆಹಾಲುಣಿಸುವಾಗ ನಿಮ್ಮ ಮಗುವು ನಿದ್ರೆಗೆ ಜಾರಿದರೆ ನೀವು ಏನು ಮಾಡಬೇಕು?

ನಿಮ್ಮ ಮಗುವಿಗೆ ಎದೆಹಾಲುಣಿಸಲು ನೀವು ಆರಾಮದಾಯಕ ಸ್ಥಿತಿಯಲ್ಲಿ ಕುಳಿತು, ಸಂತೋಷದಾಯಕವಾಗಿ ಎದೆಹಾಲನ್ನು ನೀಡುತ್ತಿರುವಿರಿ, ಆದರೆ ಸ್ವಲ್ಪ ಸಮಯ ಆಗುತ್ತಿದ್ದಂತೆ, ನಿಮ್ಮ ಮಗುವು ಹಾಲು ಚೀಪುವುದನ್ನು ಕಡಿಮೆ ಮಾಡಿ, ಮಲಗಿ ಬಿಡುತ್ತದೆ, ನಿಮ್ಮ ತೊಟ್ಟು ಮಗುವಿನ ಬಾಯಿಯಲ್ಲಿಯೇ ಇರುತ್ತದೆ. ಇಂತಹ ಸಮಯದಲ್ಲಿ ನೀವು ಏನು ಮಾಡಬೇಕು ಎಂಬ ಗೊಂದಲದಲ್ಲಿ ಸಿಲುಕುವುದು ಸಹಜ. ನೀವು ಯಾವಾಗ ತಲೆ ಕೆಡಿಸಿಕೊಳ್ಳಬೇಕು ಮತ್ತು ಯಾವುದು ಸಾಮಾನ್ಯ ಎಂಬುದನ್ನು ಈ ಲೇಖನವು ನಿಮಗೆ ತಿಳಿಸುತ್ತದೆ.

ಯಾವಾಗ ಎಚ್ಚರಿಕೆ ವಹಿಸಬೇಕು?

ಸರಿಯಾದ ಪರಿಣಾಮಕಾರಿ ಪೋಷಣೆಯನ್ನು ಪಡೆಯುವುದರಲ್ಲಿ ಪರಿತಪಿಸುತ್ತಿರುವ/ಹೆಣಗಾಡುತ್ತಿರುವ ಶಿಶುಗಳು ಎದೆಹಾಲುಣುವಾಗ ಅಲ್ಲಿಯೇ ನಿದ್ರೆಗೆ ಜಾರುವರು, ಅದು ಅವರಿಗೆ ಸಾಕಾದಷ್ಟು ಹಾಲನ್ನು ಅವರು ಪಡೆಯದೇ ಇದ್ದರು. ಇದು ಅವರು ಸ್ವಲ್ಪ ಹಾಲನ್ನು ಚೀಪಿದ ತಕ್ಷಣ ಆಯಾಸಗೊಂಡು ಹಾಗೆ ಮಲಗಿ ಬಿಡುವರು, ಅಥವಾ ಅವರಿಗೆ ಅವಶ್ಯವಿರುವ ಹಾಲು ಅವರಿಗೆ ಸಿಗುತ್ತಿಲ್ಲ ಎಂಬ ಹತಾಶೆಯಿಂದ ಅವರು ಮಲಗುವರು.

ಹಲವು ತಾಯಿಯಂದಿರು ಹೇಳುವ ಪ್ರಕಾರ ಮಗುವಿಗೆ ಹೊಟ್ಟೆ ತುಂಬಿದ ಮೇಲೆ ಮಗುವು ಮಲಗಿಕೊಳ್ಳುವುದು.

ಮಗುವಿಗೆ ಅವಶ್ಯವಿರುವ ಹಾಲನ್ನು ನೀಡುತ್ತಿರುವಿರಾ? ಇದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ!

ಹಾಲುಣಿಸುವಾಗ ನಿಮ್ಮ ಮಗುವು ನಿದ್ರೆ ಮಾಡಿದರೆ, ಕೆಳಗಿರುವ ಚಿಹ್ನೆಗಳನ್ನು ಗಮನಿಸಿ ಮಗುವು ಅವಶ್ಯವಿರುವ ಹಾಲನ್ನು ಪಡೆಯುತ್ತಿದೆಯೇ ಎಂಬುದನ್ನು ಗಮನಿಸಿ.

೧.ಮಗುವು ಹಾಲು ಕುಡಿಯಲು ಪ್ರಾರಂಭಿಸಿದಾಗ, ಕಣ್ಣು ಬಿಟ್ಟುಕೊಂಡು, ಗಮನ ಹರಿಸಿ ಮತ್ತು ಜಾಗೃತನಾಗಿ ಕುಡಿಯುತ್ತಿದೆ ಎಂಬುದನ್ನು ಗಮನಿಸಿ.

೨.ಮಗುವು ಕಡಿಮೆ ಸಮಯದಲ್ಲಿ ಬೇಗನೆ ಹಾಲನ್ನು ಚೀಪುತ್ತಿದ್ದರೆ, ಪ್ರತಿ ಚೀಪುವಿಕೆ ನಂತರ ಹಾಲನ್ನು ನುಂಗುತ್ತಿದೆ ಎಂಬುದನ್ನು ಗಮನಿಸಿ(ಹಾಲನ್ನು ನುಂಗುವುದು ಮಗುವಿನ ಗಂಟಲಿನ ಮೂಲಕ ನೀವು ನೋಡಬಹುದು).

೩.ಹಾಲುಣಿಸಿದ ನಂತರ ನಿಮ್ಮ ಮೊಲೆಯು ಮೃದುವಾಗಿರುವ ಮತ್ತು ಕಡಿಮೆ ತುಂಬಿದ ಅನುಭವ ನಿಮಗೆ ಆಗಬೇಕು.

೪.ಮಗುವು ಹಾಲುಣುವಾಗ ಮಲಗಿದರೆ, ಮಗುವಿನ ಕೈ ಮತ್ತು ಮುಖ ಆರಾಮವಾಗಿರುವಂತೆ ಕಾಣಬೇಕು. ಒಂದು ವೇಳೆ ಮಗು ಕೈ ಮುಷ್ಠಿ ಬಿಗಿ ಹಿಡಿದು ಮತ್ತು ಮುಖದಲ್ಲಿ ಅಶಾಂತಿ ಅಥವಾ ಉದ್ವಿಗ್ನತೆ ಕಾಣಿಸುತ್ತಿದ್ದರೆ, ಮಗುವಿಗೆ ಇನ್ನು ಹಸಿವಿದೆ, ಮಗುವಿನ ಹೊಟ್ಟೆ ಪೂರ್ತಿ ತುಂಬಿಲ್ಲ ಎಂದು ತಿಳಿದುಕೊಳ್ಳಬಹುದು.

ನೀವು ಮಗುವು ಮಲಗುತ್ತಿರುವುದನ್ನು ಗಮನಿಸಿದರೆ, ನಿಮ್ಮ ಸ್ತನವನ್ನು ಬದಲಿಸಿ ಇನ್ನೊಂದು ಸ್ತನದಲ್ಲಿ ಹಾಲುಣಿಸಲು ಪ್ರಾರಂಭ ಮಾಡಿ. ಮತ್ತು ನಿಮ್ಮ ಸ್ತನದಿಂದ ಹಾಲು ಸರಾಗವಾಗಿ ಹೋಗುವಂತೆ ಸ್ತನವನ್ನು ಹೊತ್ತಿ ಪ್ರೋತ್ಸಾಹಿಸಿ.

Leave a Reply

%d bloggers like this: