ಓಲಾ ಕ್ಯಾಬ್ ಹತ್ತಿದ ಈ ತುಂಬು ಗರ್ಭಿಣಿಗೆ ಸಿಕ್ಕಿದ್ದು ಏನು ಗೊತ್ತಾ?!

ಈಶ್ವರಿ ವಿಶ್ವಕರ್ಮ ಎಂಬುವಳು ಮೊದಲ ಬಾರಿಗೆ ಕ್ಯಾಬ್ ಅನ್ನು ಹತ್ತಿದರು. ಈಕೆಯು ತುಂಬು ಗರ್ಭಿಣಿ. ಆ ಕಡೆ ಈಕೆಯ ಪತಿಯು ಬೈಕ್ ಮೇಲೆ ಆಸ್ಪತ್ರೆ ಕಡೆ ಧಾವಿಸುತ್ತಿದ್ದಾರೆ. ಈಶ್ವರಿ ಜೊತೆ ಕ್ಯಾಬ್ ಅಲ್ಲಿ ಕುಳಿತಿರುವುದು ಆಕೆಯ ಪತಿಯ ಸಹೋದರ. ಆ ಕ್ಯಾಬ್ ಒಂದು 3 ಮೈಲಿಗಳಷ್ಟು ಚಲಿಸಿದ ನಂತರ, ಈಶ್ವರಿಯ ಪತಿಯ ಮೊಬೈಲಿಗೆ ಒಂದು ಕರೆ ಬಂತು. ಆ ಕರೆಯ ಇನ್ನೊಂದು ಬದಿಯಲ್ಲಿ ಮಾತಾಡುತ್ತಿದ್ದದ್ದು ಈಶ್ವರಿ ಜೊತೆ ಇದ್ದ ಆಕೆಯ ಬಾಮೈದ. ಅವನು ಹೇಳಿದ್ದು ಒಂದು ವಾಕ್ಯ “ಅತ್ತಿಗೆಗೆ ಕಾರ್ ಅಲ್ಲೇ ಹೆರಿಗೆ ಆಯಿತು!” ಎಂದು.

ಈಶ್ವರಿಯ ಪತಿಯ ಹೆಸರು ರಮೇಶ್ ವಿಶ್ವಕರ್ಮ. ಆ ದಿನ ಏನಾಯಿತು ಎಂಬುದು ಅವರ ಮಾತಲ್ಲೇ ಕೇಳಿ – “ನನ್ನ ಹೆಂಡತಿಯ ಹೆರಿಗೆ ದಿನವು 24ನೇ ಅಕ್ಟೋಬರ್ ಎಂದು ಊಹಿಸಲಾಗಿತ್ತು. ಆದರೆ ಅಕ್ಟೋಬರ್ 2 ರಂದೇ ಆಕೆಗೆ ಹೆರಿಗೆ ನೋವು ಶುರು ಆಯಿತು. ಹೀಗಾಗಿ ನಾವು ಆಕೆಯನ್ನ ಕಮಲಾ ನೆಹರು ಆಸ್ಪತ್ರೆಗೆ ಕರೆದೊಯ್ಯಲು ಕ್ಯಾಬ್ ಅನ್ನು ಬುಕ್ ಮಾಡಿದೆವು. ಸುಮಾರು 7:20 ಅಷ್ಟೊತ್ತಿಗೆ ಕ್ಯಾಬ್ ಡ್ರೈವರ್ ನಮ್ಮ ಮನೆಯ ಬಳಿಗೆ ಬಂದ”. ಇದು ನಡೆದದ್ದು ಮಹಾರಾಷ್ಟ್ರದ ಪುಣೆ ನಗರದಲ್ಲಿ.

ಕ್ಯಾಬ್ ಅಲ್ಲಿ ಈಶ್ವರಿ ಜೊತೆ ಇದ್ದದ್ದು ಆಕೆಯ ಅತ್ತೆ ಮತ್ತು ಬಾಮೈದ. ಕ್ಯಾಬ್ ಡ್ರೈವರ್ ಆ ದಿನದ ಬಗ್ಗೆ ಹೇಳಿದ್ದು ಹೀಗೆ – “ಮನೆಯಿಂದ ಆಸ್ಪತ್ರೆ 12 ಕಿಲೋಮೀಟರ್ ದೂರದಲ್ಲಿ ಇತ್ತು. ದಾರಿ ಸಾಗುತ್ತಿದ್ದಂತೆ ಆಕೆಯ ನೋವು ಹೆಚ್ಚಾಗುತ್ತಾ ಹೋಯಿತು. ಆಕೆ ಇದ್ದ ಪರಿಸ್ಥಿತಿ ನೋಡಿ ನಾನು ಎಲ್ಲಿಯೂ ನಿಲ್ಲಿಸದೆ ಸೀದಾ ಆಸ್ಪತ್ರೆಗೆ ಡ್ರೈವ್ ಮಾಡಬೇಕು ಎಂದುಕೊಂಡೆ. ಆದರೆ ನಾವು ಅಬ್ಬಬ್ಬಾ ಎಂದರೆ ಒಂದು ನಾಲ್ಕೈದು ಕಿಲೋಮೀಟರ್ ಸಾಗಿದೊಡನೆ ಹಿಂದಿನ ಸೀಟ್ ಅಲ್ಲಿ ಆಕೆಯು ಸಂಬಂಧಿಕರ ಸಹಾಯದಿಂದ ಮಗುವಿಗೆ ಜನ್ಮ ಕೊಟ್ಟುಬಿಟ್ಟಳು”.

ಕ್ಯಾಬ್ ಡ್ರೈವರ್ ಗಾಡಿಯನ್ನ ಆಸ್ಪತ್ರೆಗೆ ತರುವಷ್ಟರಲ್ಲಿ 30 ನಿಮಿಷಗಳು ಬೇಕಾಯಿತು. ಪರಿಸ್ಥಿತಿಯ ಬಗ್ಗೆ ರಮೇಶ್ ವಿಶ್ವಕರ್ಮ ಆಸ್ಪತ್ರೆ ಸಿಬ್ಬಂದಿಗೆ ಮೊದಲೇ ಫೋನಿನ ಮೂಲಕ ತಿಳಿಸಿದ್ದರಿಂದ, ವೈದ್ಯರು ಬಾಗಿಲ ಬಳಿಯಲ್ಲೇ ಕಾರಿಗಾಗಿ ಕಾಯುತ್ತಾ ನಿಂತಿದ್ದರು. ಕಾರ್ ಆಸ್ಪತ್ರೆಗೆ ಬಂದೊಡನೆ ವೈದ್ಯರು ಮಗುವಿನ ಕರಳು ಬಳ್ಳಿಯನ್ನ ಕತ್ತರಿಸಿ, ತಾಯಿ ಮತ್ತು ಮಗು ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿಕೊಂಡರು.

ರಮೇಶ್ ವಿಶ್ವಕರ್ಮ ಅವರು ಆ ದಿನ ಕ್ಯಾಬ್ ಡ್ರೈವರ್ ಮಾಡಿದ ಅಮೂಲ್ಯವಾದ ಕೆಲಸಕ್ಕೆ ಆಭಾರಿ ಆಗಿದ್ದಾರೆ. ಈ ಘಟನೆ ಆದ ನಂತರ, ವಿಶ್ವಕರ್ಮ ದಂಪತಿಗಳಿಗೆ ಮತ್ತೊಂದು ಸಿಹಿ ಅಚ್ಚರಿ ಕಾದಿತ್ತು. ಅದೇನೆಂದರೆ, ಈಶ್ವರಿ ಜನ್ಮ ನೀಡಿದ್ದ ಕ್ಯಾಬ್ ಕಂಪನಿ ಆದ ಓಲಾ ಆಕೆಗೆ ಉಡುಗೊರೆಯಾಗಿ ಐದು ವರ್ಷಗಳ ಕಾಲ ಉಚಿತ ರೈಡ್ ಗಳನ್ನೂ ನೀಡಿತು. ಈ ಬಗ್ಗೆ ಓಲಾ ಕಂಪನಿ ಫೇಸ್ಬುಕ್ ಅಲ್ಲಿ ಪೋಸ್ಟ್  ಮಾಡಿದ್ದು ಇಲ್ಲಿದೆ ನೋಡಿ.  

 

Leave a Reply

%d bloggers like this: