ಗರ್ಭಾವಸ್ಥೆಯಲ್ಲಿ ಕೇಸರಿ ಸೇವನೆಯ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು

ಹಲವರು, ಗರ್ಭಿಣಿ ಮಹಿಳೆಯರಿಗೆ ಹಾಲಿನ ಜೊತೆ ಕೇಸರಿಯನ್ನು ಸೇರಿಸಿ ಕುಡಿಯಲು ಸಲಹೆ ನೀಡುತ್ತಾರೆ. ಗರ್ಭಾವಸ್ಥೆಯಲ್ಲಿ ಇದರ ಸೇವನೆ ಸುರಕ್ಷಿತವೇ? ಗರ್ಭಾವಸ್ಥೆಯಲ್ಲಿ ಇದನ್ನು ಹಾಲಿನೊಂದಿಗೆ ಸ್ವಲ್ಪ ಸೇರಿಸಿ ಕುಡಿಯುವುದು ಒಳ್ಳೆಯದು, ಆದರೆ ಇದು ಮಿತವಾಗಿರಬೇಕು. ಏಕೆಂದರೆ, ಇದು ವಿಲಕ್ಷಣ ಮಸಾಲೆ ಪದಾರ್ಥವಾಗಿದ್ದು, ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಹಾಲು, ಕ್ಯಾಲ್ಸಿಯಮ್ ನ ಒಂದು ಸಮೃದ್ಧ ಮೂಲವಾಗಿದ್ದು, ಗರ್ಭಾವಸ್ಥೆಯಲ್ಲಿ ಅವರಿಗೆ ನಿಜಕ್ಕೂ ಅವಶ್ಯವಾಗಿರುವಂತದ್ದು. ಸ್ವಲ್ಪ ಕೇಸರಿಯನ್ನು ನಿಮ್ಮ ಹಾಲಿಗೆ ಸೇರಿಸಿ ಕುಡಿಯುವುದರಿಂದ ನಿಮ್ಮ ಸ್ನಾಯುಗಳಿಗೆ ಬಲ ಸಿಗುತ್ತದೆ, ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ, ನಿಮ್ಮ ಮೈ ಕೈ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅತಿಯಾದರೆ ಅಮೃತವು ವಿಷ ಎಂಬಂತೆ, ಕೇಸರಿಯನ್ನು ಹೆಚ್ಚು ಸೇವಿಸುವುದು, ನಿಮ್ಮ ಗರ್ಭಕೋಶವನ್ನು ಸಂಕುಚಿತಗೊಳ್ಳುವಂತೆ ಮಾಡಿ, ನಿಮ್ಮ ಗರ್ಭಾವಸ್ಥೆಯನ್ನು ತೊಂದರೆಯಲ್ಲಿ ಸಿಲುಕಿಸಬಹುದು. ಆದ್ದರಿಂದ ನೀವು ಇದರ ಪ್ರಯೋಜನ ಮತ್ತು ಅಡ್ಡಪರಿಣಾಮಗಳನ್ನು ತಿಳಿದುಕೊಳ್ಳುವುದು ಉತ್ತಮ.

ಗರ್ಭಾವಸ್ಥೆಯಲ್ಲಿ ಕೇಸರಿಯ ಪ್ರಯೋಜನಗಳು

ಮಿತವಾಗಿ ಬಳಸಬೇಕು, ದಿನಕ್ಕೆ ಸ್ವಲ್ಪ ಕೇಸರಿಯನ್ನು ಬಳಸುವುದರಿಂದ (ದಿನಕ್ಕೆ ೧೦ ಗ್ರಾಂ. ಗಿಂತ ಹೆಚ್ಚು ಸೇವಿಸುವಂತಿಲ್ಲ), ನಿಮ್ಮ ದೇಹಕ್ಕೆ ಆಗುವ ಪ್ರಯೋಜನಗಳು,

೧.ಮನಸ್ಥಿತಿ ಏರುಪೇರಾಗುವುದನ್ನು ನಿಯಂತ್ರಿಸುತ್ತದೆ : ನಿಮ್ಮ ದೇಹದಲ್ಲಿ ಆಗುವ ಹಾರ್ಮೋನುಗಳ ಬದಲಾವಣೆ ಇಂದ ನಿಮ್ಮ ಮನಸ್ಥಿತಿಯು ಗರ್ಭಾವಸ್ಥೆಯಲ್ಲಿ ಬದಲಾಗುತ್ತಿರುತ್ತದೆ, ಇದನ್ನು ಸೇವಿಸುವುದರಿಂದ ಮನಸ್ಥಿತಿ ಬದಲಾವಣೆಯನ್ನು ಕಡಿಮೆ ಮಾಡಿಕೊಳ್ಳಬಹುದು.

೨.ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ : ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿರುವ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

೩.ಜೀರ್ಣ ಕ್ರಿಯೆಯನ್ನು ವೃದ್ಧಿಸುತ್ತದೆ : ಗರ್ಭಾವಸ್ಥೆಯಲ್ಲಿ ಮಲಬದ್ಧತೆ, ಗ್ಯಾಸ್ ತುಂಬಾ ಸಾಮಾನ್ಯವಾದ ತೊಂದರೆಗಳು ಇದಕ್ಕೆ ಕಾರಣವೆಂದರೆ, ಆಹಾರ ಸರಿಯಾಗಿ ಜೀರ್ಣವಾಗದಿರುವುದು. ಇದನ್ನು ಸೇವಿಸುವುದರಿಂದ ಆಹಾರ ಜೀರ್ಣವಾಗುವಂತೆ ಮಾಡುತ್ತದೆ, ಇದರಿಂದ ಗರ್ಭಾವಸ್ಥೆಯಲ್ಲಿ ಸಾಮಾನ್ಯ ತೊಂದರೆಗಳು ನಿವಾರಣೆ ಆಗುತ್ತವೆ.

೪.ಬೆಳಗಿನ ಕಾಯಿಲೆಯನ್ನು ತಡೆಯುತ್ತದೆ : ಈ ಕೇಸರಿಯು ವಾಕರಿಕೆ ಮತ್ತು ತಲೆತಿರುಗುವಿಕೆ ವಿರುದ್ಧ ಹೋರಾಡುತ್ತದೆ.

೫.ನೋವು ನಿವಾರಿಸುತ್ತದೆ : ಇದು ನೈಸರ್ಗಿಕ ನೋವು ನಿವಾರಕ. ಇದು ಸ್ನಾಯುಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ.

೬.ರಕ್ತಹೀನತೆಯನ್ನು ತಡೆಯುತ್ತದೆ : ಕೇಸರಿ ಐರನ್ ಮತ್ತು ಕೆಂಪು ರಕ್ತ ಕಣಗಳನ್ನು ಸಂಯೋಜಿಸುವ ಗುಣವನ್ನು ಹೊಂದಿದೆ.

೭.ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಿಸುತ್ತದೆ : ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.

೮.ನಿದ್ರೆ ಬರಿಸುತ್ತದೆ : ರಾತ್ರಿ ಸಮಯ ನಿದ್ರೆ ಬರದೆ ಸುಮ್ಮನೆ ಟಿ.ವಿ ನೋಡುತ್ತಾ ಅಥವಾ ಬೇರೆ ಕೆಲಸಗಳಿಂದ ಕಾಲ ಕಳೆಯುವ ಬದಲು ಮಲಗುವ ಸ್ವಲ್ಪ ಸಮಯದ ಮೊದಲು ಹಾಲಿನ ಜೊತೆ ಇದನ್ನು ಸೇವಿಸಿ.

೯.ಅಲರ್ಜಿ ಜೊತೆ ಹೋರಾಟ ಮಾಡುತ್ತದೆ : ಗರ್ಭಾವಸ್ಥೆಯಲ್ಲಿ ನಿಮಗೆ ಹಲವು ವಿಷಯಗಳಲ್ಲಿ ಅಲರ್ಜಿಯಾಗಬಹುದು, ಇದರ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ, ಮತ್ತು ಅಲರ್ಜಿಯಿಂದ ರಕ್ಷಿಸುತ್ತದೆ.

೧೦.ಮಗುವಿನ ಚಲನವಲನ ಗುರುತಿಸಲು ಸಹಾಯ ಮಾಡುತ್ತದೆ : ಕೇಸರಿಯಿಂದ ಮಹಿಳೆಯ ದೇಹದ ಉಷ್ಣಾಂಶವು ಹೆಚ್ಚಾಗುತ್ತದೆ, ಇದರಿಂದ ಮಗುವಿನ ಚಲನವಲನವನ್ನು ಸುಲಭವಾಗಿ ಗುರಿತಿಸಬಹುದು, ಹಾಗೆಂದು ಹೆಚ್ಚು ಕೇಸರಿಯನ್ನು ಸೇವಿಸಬೇಡಿ, ನಿಮ್ಮ ಮಗುವಿನ ಉದರದೊಳಗಿನ ಆಟವನ್ನು ಸ್ವಲ್ಪ ದಿನಗಳ ಬಳಿಕ ನೀವೇ ಗುರುತಿಸಬಹುದು.

ಕೇಸರಿಯ ಅಡ್ಡಪರಿಣಾಮಗಳು

೧.ಗರ್ಭಪಾತ : ವೈದ್ಯರ ಪ್ರಕಾರ ದಿನಕ್ಕೆ ೧೦ ಗ್ರಾಂ ಗಿಂತ ಹೆಚ್ಚು ಕೇಸರಿಯನ್ನು ಸೇವಿಸುವುದು ನಿಮ್ಮ ದೇಹದಲ್ಲಿ ಉಷ್ಣಾಂಶವನ್ನು ಹೆಚ್ಚಿಸುವುದರ ಜೊತೆಗೆ ಮಗುವಿಗೆ ತೊಂದರೆಯಾಗುತ್ತದೆ. ನಿಮಗೆ ಅನುಮಾನವಿದ್ದರೆ, ನಿಮ್ಮ ವೈದ್ಯರ ಬಳಿ ವಿಚಾರಿಸಿಕೊಳ್ಳುವುದು ಒಳ್ಳೆಯದು.

೨.ಅಲರ್ಜಿ : ನೀವು ಒಣ ಬಾಯಿ, ಆತಂಕ, ತಲೆನೋವು ಮತ್ತು ವಾಕರಿಕೆ ಅನುಭವಿಸಿದರೆ, ಅದು ಕೇಸರಿಯಿಂದ ನಿಮಗೆ ಆಗಿರುವ ಅಲರ್ಜಿ ಅಥವಾ ನಿಮ್ಮ ಸೂಕ್ಹ್ಮ ದೇಹ ಅದನ್ನು ತಡೆಯುತ್ತಿಲ್ಲ ಎಂದರ್ಥ.

೩.ವಾಂತಿ : ಹೊಟ್ಟೆ ಮತ್ತು ಜಠರಗಳಲ್ಲಿ ಆಮ್ಲ ಅಡಚಣೆ ಉಂಟಾಗಿ ವಾಂತಿಗೆ ಕಾರಣವಾಗಬಹುದು.

ಗರ್ಭಾವಸ್ಥೆಯಲ್ಲಿ ಕೇಸರಿಯ ಈ ಗಂಭೀರ ಅಡ್ಡ ಪರಿಣಾಮಗಳು ತಕ್ಷಣದ ವೈದ್ಯಕೀಯ ಗಮನವನ್ನು ಪಡೆಯುವುದು ಒಳ್ಳೆಯದು

೧.ಮೂಗು, ತುಟಿ ಮತ್ತು ಕಣ್ಣಿನ ರೆಪ್ಪೆಗಳಿಂದ ರಕ್ತಸ್ರಾವ ಆದರೆ

೨.ಕೈ ಕಾಲು ಅಥವಾ ದೇಹದ ಭಾಗ ಮರಗಟ್ಟುವಂತೆ ಆಗುವುದು(ಜೋಗು ಹಿಡಿಯುವುದು)

೩.ಮೂತ್ರದಲ್ಲಿ ಅಥವಾ ಮಲದಲ್ಲಿ ರಕ್ತ

೪.ಜಾಂಡಿಸ್ (ಕಾಮಾಲೆ).

Leave a Reply

%d bloggers like this: