ಹೆರಿಗೆ ನಂತರ ಜಳಕ(/ಸ್ನಾನ) : ನೀವು ತಿಳಿದಿರ ಬೇಕಾದುದು!

೯ ತಿಂಗಳ ದೀರ್ಘ ಪ್ರಯಾಣದ ನಂತರ ನೀವು ಕಾಯುತ್ತಿದ್ದ ಆ ಸಮಯ ಬಂದಿದ್ದು, ನಿಮ್ಮ ತೋಳಿನಲ್ಲಿ ಈಗ ನಿಮ್ಮ ಮುದ್ದು ಕಂದಮ್ಮ ಮುಗುಳ್ನಗುತ್ತಿರುವುದು ನಿಮ್ಮ ಹೆರಿಗೆಯ ಸಾರ್ಥಕತೆಯನ್ನು ಸಾರುತ್ತದೆ. ಇದು ನಿಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣ. ಜೊತೆಗೆ ಹೆರಿಗೆಯೂ ನಿಮಗೆ ನೋವನ್ನು ಮತ್ತು ಆಯಾಸವನ್ನು ಉಂಟು ಮಾಡಿರುತ್ತದೆ. ಮತ್ತು ಹೆರಿಗೆ ನಂತರ ತಾಯಿಯು ಮಿಶ್ರಿತ ಖುಷಿ, ನೋವು, ಆನಂದವನ್ನು ಅನುಭವಿಸುತ್ತಾಳೆ. ಜೊತೆಗೆ ಅವಳಿಗೆ ಅಶುಚಿಯಾಗಿರುವೆನೆಂದು ಅನಿಸಬಹುದು, ಅದಕ್ಕೆ ಅವಳು ಬೆವತಿರುವುದು, ಹೆರಿಗೆ ಸಮಯದಲ್ಲಿ ರಕ್ತವಾಗಿರುವುದು, ಕಣ್ಣೀರು, ಮತ್ತು ಕೆಲವು ದೇಹದಿಂದ ಹೊರಬಂದ ದ್ರವಗಳು ಕಾರಣ. ಹೆರಿಗೆ ನಂತರ ನೀವು ಸ್ನಾನ ಮಾಡುವ ಮೊದಲು ಕೆಲವು ವಿಷಯಗಳನ್ನು ನೆನಪಿನಲ್ಲಿ ಅಥವಾ ತಿಳಿದುಕೊಂಡಿರುವುದು ಒಳ್ಳೆಯದು.

ಹೆರಿಗೆ ನಂತರ ನಾನು ಯಾವಾಗ ಸ್ನಾನ ಮಾಡಬಹುದು?

ಇದು ಸ್ವಲ್ಪ ಮಟ್ಟಿಗೆ ನೀವು ಯಾವ ವಿಧದ ಹೆರಿಗೆಗೆ ಒಳಗಾಗಿರುತ್ತೀರಿ ಅದರ ಮೇಲೆ ಅವಲಂಬಿತವಾಗಿದೆ. ಯಾವುದೇ ವೈದ್ಯಕೀಯ ತೊಡಕುಗಳಿಲ್ಲದೆ, ಹೆರಿಗೆ ಆಗಿದ್ದರೆ, ಹೆರಿಗೆ ಆದ ೨೪ ಗಂಟೆಗಳ ನಂತರ ಸ್ವಲ್ಪ ಬಿಸಿ ನೀರಿನಿಂದ ಸ್ನಾನ ಮಾಡಬಹುದು. ಇದರಿಂದ ಆಗುವ ಕೆಲವು ಪ್ರಯೋಜನಗಳೆಂದರೆ,

೧.ನೀವು ಶುದ್ಧ, ಆರಾಮದಾಯಕ ಮತ್ತು ಶಕ್ತಿಯುತರಾಗಿರುವಂತೆ ಮಾಡುತ್ತದೆ.

೨.ರಕ್ತ ಸಂಚಲವನ್ನು ಸರಾಗವಾಗಿ ಮಾಡುವಂತೆ ಉತ್ತೇಜಿಸುತ್ತದೆ.

೩.ನೀವು ಯೋನಿಯಿಂದ ಮಗುವಿಗೆ ಜನ್ಮ ನೀಡಿದ್ದರೆ, ನಿಮ್ಮ ಯೋನಿಯ ಪ್ರದೇಶ ನೋವಿನಿಂದ ಮುಕ್ತಿಪಡೆಯಲು ಸಹಾಯ ಮಾಡುತ್ತದೆ.

೪.ದೇಹದ ನೋವನ್ನು ಕಡಿಮೆ ಮಾಡುತ್ತದೆ, ಮತ್ತು ಯೋನಿಯ ಪ್ರದೇಶದಲ್ಲಿನ ಊತವನ್ನು ಕಡಿಮೆ ಮಾಡುತ್ತದೆ.

೫.ಒಲಿಗೆಯನ್ನು ಶುದ್ಧವಾಗಿರಿಸಿ, ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.

೬.ಎದೆಹಾಲುಣಿಸುವ ಸಮಯದಲ್ಲಿ ಶುದ್ಧತೆಯನ್ನು ಕಾಪಾಡುವುದು ಉತ್ತಮ, ಇದು ನಿಮ್ಮ ಮಗುವನ್ನು ಯಾವುದೇ ಸೋಂಕಿನಿಂದ ಆಗುವ ಅಪಾಯವನ್ನು ತಡೆಯುತ್ತದೆ.

ಸಾಮಾನ್ಯ ಹೆರಿಗೆ ನಂತರ ಸ್ನಾನ

ನಿಮಗೆ ಹೆಚ್ಚು ರಕ್ತಸ್ರಾವ, ಜ್ವರ ಮುಂತಾದ ಯಾವುದೇ ತೊಡಕುಗಳಿಲ್ಲದೆ,  ಸಾಮಾನ್ಯ ಹೆರಿಗೆ ಆಗಿದ್ದರೆ, ನೀವು ಹೆರಿಗೆಯ ನಂತರ ಕೆಲವು ತಾಸುಗಳನ್ನು ಬಿಟ್ಟು ಸ್ನಾನ ಮಾಡಬಹುದು. ಈ ರೀತಿ ಹೆರಿಗೆಯಾಗಿದ್ದರೆ, ಸ್ವಲ್ಪ ಸಮಯದ ನಂತರ ಸಾಮಾನ್ಯವಾಗಿ ೭-೮ಗಂಟೆಗಳ ನಂತರ ಸ್ವಲ್ಪ ಬಿಸಿ ನೀರಿನಿಂದ ಸ್ನಾನ ಮಾಡುವುದು ನಿಮಗೆ ಹೊಸ ಉತ್ಸಾಹವನ್ನು ನೀಡುತ್ತದೆ.

ಒಂದು ವೇಳೆ ನಿಮಗೆ ಸಾಮಾನ್ಯ ಹೆರಿಗೆ ಆಗಿ ಮಗುವು ಸುಲಭವಾಗಿ ಹೊರ ಬರಲು ಯೋನಿಯ ಬಳಿ ಸ್ವಲ್ಪ ಕತ್ತರಿಸಿದರೆ, ನೀವು ನಡೆಯುವಾಗ ಕೆಲವು ದಿನಗಳವರೆಗೆ ಯೋನಿಯಲ್ಲಿ ನೋವು ಕಾಣಿಸಬಹುದು. ವೈದ್ಯರು ೨೪ ಗಂಟೆಗೆಳ ನಂತರ ನಿಮ್ಮನ್ನು ಸ್ವಲ್ಪ ದೂರ ನಡೆದಾಡುವಂತೆ ಸಲಹೆ ನೀಡುತ್ತಾರೆ. ನೀವು ಇಂತಹ ಸಂದರ್ಭಗಳಲ್ಲಿ ೨೪ಗಂಟೆಗೆಳ ನಂತರ ಸ್ವಲ್ಪ ನಡೆದಾಡಲು ಪ್ರಾರಂಭಿಸಿದ ನಂತರ ಸ್ನಾನವನ್ನು ಮಾಡುವುದು ಒಲಿಗೆ ಹಾಕಿರುವ ಜಾಗ ಸೋಂಕಿನಿಂದ ಅಪಾಯಕ್ಕೆ ಒಳಗಾಗುವುದನ್ನು ತಡೆಯುತ್ತದೆ. ಸ್ನಾನದ ನಂತರ ನಿಮ್ಮ ಒಲಿಗೆಯನ್ನು ಮೃದುವಾಗಿ ತೆಳು ಬಟ್ಟೆ ಅಥಾವ ಹತ್ತಿಯಿಂದ ನಿಧಾನವಾಗಿ ಒರಿಸುವುದು ಒಳ್ಳೆಯದು.

ಸಿಸೇರಿಯನ್ ಹೆರಿಗೆ ಬಳಿಕ ಸ್ನಾನ

ಒಂದು ವೇಳೆ ನೀವು ಸಿಸೇರಿಯನ್ ಹೆರಿಗೆಗೆ ಒಳಗಾಗಿರುವಿರಿ ಎಂದರೆ, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೀರಿ ಎಂದರ್ಥ, ಇದರಿಂದ ಚೇತರಿಸಿಕೊಳ್ಳಲು ನೀವು ತುಂಬಾ ಎಚ್ಚರಿಕೆ ವಹಿಸುವುದು ಒಳ್ಳೆಯದು. ಸಿಸೇರಿಯನ್ ನಲ್ಲಿ ನಿಮಗೆ ಹಲವು ಒಲಿಗೆಗಳನ್ನು ಹಾಕಿರುವುದರಿಂದ ವೈದ್ಯರು ನಿಮಗೆ ಒಂದು ದಿನ ಅಲ್ಲೇ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸುವರು ಮತ್ತು ಎರಡನೇ ದಿನ ಅದೇ ಕೊನೆಯಲ್ಲಿ ಸ್ವಲ್ಪ ನಡೆದಾಡಲು ಹೇಳುವರು ಮತ್ತು ನಿಮ್ಮ ಸ್ಥಿತಿಯನ್ನು ಗಮನಿಸಿ ಅವರು ನೀವು ಸ್ನಾನ ಮಾಡಬಹುದೇ ಇಲ್ಲವೇ ಎಂಬುದನ್ನು ತಿಳಿಸುವರು. ನಿಮಗೆ ಛೇದನ ಮಾಡಿರುವ ಜಗದಲ್ಲಿ ಸೋಂಕು ಆಗುವ ಸಾಧ್ಯತೆಗಳು ಹೆಚ್ಚಿರುತ್ತವೆ ಆ ಜಾಗವನ್ನು ಶುದ್ಧವಾಗಿರುವಂತೆ ನೋಡಿಕೊಳ್ಳಿ. ನಿಮ್ಮ ದೇಹ ಸ್ಥಿತಿಗೆ ಅನುಗುಣವಾಗಿ ವೈದ್ಯರು ನೀವು ಯಾವಾಗ ಸ್ನಾನ ಮಾಡಬೇಕೆಂಬುದನ್ನು ಅವರು ಸೂಚಿಸುವರು. ಇದು ತುಂಬಾ ಸೂಕ್ಷ್ಮ ವಿಚಾರವಾಗಿರುವುದರಿಂದ ವೈದ್ಯರ ಸಲಹೆಯಂತೆ ನಡೆಯುವುದು ಒಳ್ಳೆಯದು.

Leave a Reply

%d bloggers like this: