ಈ ಚಿಹ್ನೆಗಳು ನಿಮ್ಮ ಉದರದೊಳಗಿನ ಮಗುವು ಹೆಣ್ಣು ಎಂದು ಹೇಳುತ್ತವೆ

ವಿಜ್ಞಾನದ ಪ್ರಕಾರ ಮಗುವಿನ ಲಿಂಗವನ್ನು ಪತ್ತೆಹಚ್ಚಲು ಅಲ್ಟ್ರಾಸೌಂಡ್ ಸ್ಕ್ಯಾನ್ ಉಪಯೋಗಿಸಬೇಕು. ಅದು ನಿಜ ಅದರಿಂದ ಮಗುವಿನ ಲಿಂಗ ನಿಖರವಾಗಿ ಪತ್ತೆಹಚ್ಚಬಹುದು, ಆದರೆ ಭ್ರೂಣ ಲಿಂಗ ಪತ್ತೆಹಚ್ಚುವುದು ಕಾನೂನು ಬಾಹಿರ. ನಿಮ್ಮ ಪೂರ್ವಜರು ನಿಮ್ಮನ್ನು ನೋಡಿ ಅಥವಾ ನಿಮ್ಮ ನಡವಳಿಕೆಯನ್ನು ನೋಡಿ ನಿಮ್ಮ ಗರ್ಭದೊಳಗಿರುವ ಮಗುವು ಗಂಡೋ ಅಥವಾ ಹೆಣ್ಣೋ ಎಂದು ಹೇಳುವರು.

ಇವುಗಳನ್ನು ನೆನಪಿಡಿ

೧.ಇವುಗಳು ಅವೈಜ್ಞಾನಿಕ ಪದ್ಧತಿ ಆಗಿವೆ. ಅಂದರೆ, ಇವುಗಳ ಬಗ್ಗೆ ಯಾರು ಅಧ್ಯಯನ ನಡೆಸಿಲ್ಲ. ಮತ್ತು ಇದು ವೈಜ್ಞಾನಿಕವಾಗಿ ಸಾಭೀತಾಗಿಲ್ಲ.

೨.ಇದನ್ನು ಒಂದು ವಿನೋದ ವ್ಯಾಯಾಮ ಎಂದು ಪರಿಗಣಿಸಿ. ಏಕೆಂದರೆ ಮಗುವು ಜನಿಸುವ ವರೆಗು ನಿಮಗೆ ಕುತೂಹಲ ಇದ್ದೆ ಇರುತ್ತದೆ.

ಈ ಚಿಹ್ನೆಗಳನ್ನು ನೀವು ಗಮನಿಸಿದರೆ ನಿಮ್ಮ ಉದರದೊಳಗೆ ಇರುವುದು ಹೆಣ್ಣು ಮಗು ಎಂದು ನೀವು ಊಹಿಸಬಹುದು.

೧.ನಿಮಗೆ ದೊಡ್ಡ ಹೊಟ್ಟೆ ಇದ್ದರೆ

ನಿಮ್ಮ ಉದರ ಸಾಮಾನ್ಯವಾಗಿ ಇರುವುದಕ್ಕಿಂತ ಹೆಚ್ಚು ದಪ್ಪದಾಗಿ ಅಥವಾ ದೊಡ್ಡದಾಗಿ ಇದ್ದರೆ ಹಲವು ಮಹಿಳೆಯರು ಹೇಳುವ ಪ್ರಕಾರ ನಿಮಗೆ ಹೆಣ್ಣು ಮಗು ಜನಿಸುತ್ತದೆ. ಇದು ಅವರು ಹೇಳುವ ಪ್ರಕಾರ ಬಹುತೇಕ ಸಂದರ್ಭಗಳಲ್ಲಿ ನಿಜವಾಗಿದೆಯಂತೆ.

೨.ಮಗುವಿನ ಹೃದಯ ಬಡಿತ ವೇಗವಾಗಿದೆ

ಗರ್ಭಾಶಯದಲ್ಲಿ ಮಗುವಿನ ಸರಾಸರಿ ಹೃದಯಬಡಿತವು ನಿಮಿಷಕ್ಕೆ 140 ಬಾರಿ ಆಗಿದೆ. ಒಂದು ವೇಳೆ ನಿಮ್ಮ ಮಗುವಿನ ಹೃದಯ ಬಡಿತವು 140ಕ್ಕಿಂತ ಹೆಚ್ಚಾಗಿದ್ದರೆ ನೀವು ಶೀಘ್ರದಲ್ಲೇ ಹೆಣ್ಣು ಮಗುವಿನ ತಾಯಿ ಆಗುವಿರಿ. ನೀವು ಮುಂದಿನ ಬಾರಿ ಸ್ಕ್ಯಾನಿಂಗ್ ಗೆ ಹೋದಾಗ ನಿಮ್ಮ ಮಗುವಿನ ಹೃದಯ ಬಡಿತವನ್ನು ತಿಳಿದುಕೊಳ್ಳಿ.

೩.ನೀವು ಪ್ರಜ್ವಲಿಸಿದರೆ

ಗರ್ಭಾವಸ್ಥೆಯಲ್ಲಿ ನಿಮ್ಮ ಪ್ರಕಾಶತೆ ಸಾಮಾನ್ಯವಾಗಿ ನೀವು ಹೆಣ್ಣು ಮಗುವಿನ ತಾಯಿ ಆಗುವಿರಿ ಎಂದು ಸೂಚಿಸುತ್ತದೆ. ಗರ್ಭಾವಸ್ಥೆಯಲ್ಲಿ ಹೊಳಪು ಬರಲು ಕಾರಣ, ನಿಮ್ಮ ದೇಹದಲ್ಲಿ ಹೆಚ್ಚಾಗಿ ಉತ್ಪತ್ತಿ ಆಗುವ ಈಸ್ಟ್ರೋಜೆನ್. ಹೆಚ್ಚು ಚುರುಕಿಲ್ಲದ, ಮೊಡವೆಯನ್ನು ಹೆಚ್ಚು ಅನುಭವಿಸಿದರೆ ಬಹುಶಃ ನೀವು ಗಂಡು ಮಗುವಿಗೆ ಶೀಘ್ರದಲ್ಲೇ ಜನ್ಮ ನೀಡುವಿರಿ.

೪.ಮನಸ್ಥಿತಿ

ಎಲ್ಲಾ ಗರ್ಭಿಣಿಯರು ಮನಸ್ಥಿತಿ ಏರುಪೇರನ್ನು ಅನುಭವಿಸುವರು, ಅದರಲ್ಲಿ ಅನುಮಾನ ಇಲ್ಲ. ನೀವು ಹೆಚ್ಚು ಯಾವ ಮನಸ್ಥಿತಿಗೆ ಹೊಳಗಾಗುವಿರಿ ಅದರಿಂದ ನಿಮ್ಮ ಮಗುವಿನ ಲಿಂಗವನ್ನು ಪತ್ತೆ ಮಾಡಬಹುದು ಅದು ನಿಮಗೆ ಗೊತ್ತೇ? ನೀವು ಹೆಚ್ಚಾಗಿ ಬೇಸರಗೊಳ್ಳುವುದು, ಕಿರಿಕಿರಿ ಅನುಭವಿಸುವುದು, ಮತ್ತು ಬೇಗನೆ ಕೋಪಗೊಳ್ಳುವ ಮನಸ್ಥಿತಿಯು ನೀವು ಹೆಣ್ಣು ಮಗುವಿನ ತಾಯಿ ಎಂದು ಹೇಳುತ್ತದೆ. ಮತ್ತು ನೀವು ಆಕ್ರಮಣಕಾರಿ ಮತ್ತು ದೈರ್ಯದಿಂದ ಇದ್ದರೆ ನೀವು ಗಂಡು ಮಗುವಿಗೆ ಜನ್ಮ ನೀಡುವಿರಿ.

೫.ನೀವು ಬಲ ಮಗ್ಗುಲಾಗಿ ಮಲಗಿದರೆ

ಗರ್ಭಾವಸ್ಥೆಯಲ್ಲಿ ವೈದ್ಯರು ಎಡ ಮಗ್ಗುಲಾಗಿ ಮಲಗಲು ಸೂಚಿಸುತ್ತಾರೆ, ಏಕೆಂದರೆ, ಉಸಿರಾಟದ ಕ್ರಿಯೆ ಸರಿಯಾಗಿ ಆಗಲಿ ಎಂದು, ಆದರೆ ನೀವು ಬಲ ಮಗ್ಗುಲಾಗಿ ಮಲಗಿದಾಗ ಹೆಚ್ಚು ಆರಾಮದಾಯಕವನ್ನು ಅನುಭವಿಸಿದರೆ ನಿಮ್ಮ ಮುದ್ದು ಮಗಳ ಜೊತೆ ಆಟವಾಡಲು ತಯಾರಾಗಿ.

Leave a Reply

%d bloggers like this: