ನಿಮ್ಮ ಮಗುವಿನ ತ್ವಚೆಯು ಬೆಳ್ಳಗಾಗಿಸುವುದಕ್ಕೆ 8 ಪರಿಣಾಮಕಾರಿ ಉಪಾಯಗಳು

ತಾಯ್ತನ ಅನ್ನುವುದು ಹೆಣ್ಣಿನ ಜೀವನದ ಒಂದು ವಿಸ್ಮಯಕಾರಿ ಮತ್ತು ಉಲ್ಲಾಸಮಯ ಹಂತ. ನೀವು ಒಮ್ಮೆ ತಾಯಿ ಆದಮೇಲೆ, ನಿಮ್ಮ ಆದ್ಯತೆಗಳು ಬದಲಾಗುತ್ತವೆ. ನಿಮ್ಮ ಪುಟ್ಟ ಮಗುವಿನ ಆರೈಕೆಯೇ ನಿಮ್ಮ ಜೀವನದ ಗುರಿ ಆಗಿಬಿಡುತ್ತದೆ. ಬಹುತೇಕ ತಾಯಂದಿರು ಬಯಸುವ ಒಂದು ವಿಷಯ ಎಂದರೆ ಅದು ತಮ್ಮ ಮಕ್ಕಳ ತ್ವಚೆಯು ಕಾಂತಿಯುಕ್ತವಾಗಿ ಇರಬೇಕೆಂಬುದು. ಆದರೆ ನಿಮ್ಮ ಮಗುವಿನ ತ್ವಚೆಯನ್ನು ನೈಸರ್ಗಿಕವಾಗಿ ಬೆಳ್ಳಗಾಗಿಸುವುದು ಹೇಗೆ? ನೀವು ಮಾಡಬೇಕಿರುವುದು ಕೇವಲ ಕೆಲವು ಸರಳ ಹೆಜ್ಜೆಗಳನ್ನ ಪಾಲಿಸಿ ನಿಮ್ಮ ಮಗುವಿನ ತ್ವಚೆಯು ಆರೋಗ್ಯದಿಂದ ಮತ್ತು ಕಾಂತಿಯಿಂದ ಕೂಡಿರುವಂತೆ ನೋಡಿಕೊಳ್ಳುವುದು. ಅಂತಹ ಸರಳ ಹೆಜ್ಜೆಗಳು ಇಲ್ಲಿವೆ ಓದಿ

೧. ಬಿಸಿ ಎಣ್ಣೆಯ ಮಸಾಜ್

ಮಕ್ಕಳಿಗೆ ಮಸ್ಸಾಜ್ ಮಾಡುವುದರ ಬಗ್ಗೆ ಮತ್ತು ಅದರ ಉಪಯೋಗದ ಬಗ್ಗೆ ನಿಮಗೆ ಈಗಾಗಲೇ ತಿಳಿದಿರುತ್ತದೆ. ಆದರೆ ಅದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಮಗುವಿನ ತ್ವಚೆಯ ಮತ್ತು ಮೂಳೆಯ ಪೋಷಣೆಯಲ್ಲೂ ಸಹಾಯ ಮಾಡುತ್ತದೆ ಎಂಬುದು ನಿಮಗೆ ತಿಳಿದಿತ್ತೇ? ಹೌದು ಬಿಸಿ ಎಣ್ಣೆಯ ಮಸಾಜ್ ನಿಮ್ಮ ಮಗುವಿನ ತ್ವಚೆಯ ಮೇಲೆ ಇನ್ನೊಂದು ತೇವಾಂಶದಿಂದ ಕೂಡಿರುವ ಪದರವನ್ನ ಒದಗಿಸಿ, ನಿಮ್ಮ ಮಗುವಿನ ತ್ವಚೆ ಕಾಂತಿ ಇಂದ ಕೂಡಿ ಹೊಳೆಯುವಂತೆ ಮಾಡುತ್ತದೆ. ನಿಮ್ಮ ಮಗುವಿನ ತ್ವಚೆಯು ಒಣಗಿದ್ದು, ಚರ್ಮ ಸುಳಿಯುತ್ತಿದ್ದರೆ ನೀವು ಈ ಕಾಂತಿಯನ್ನ ಕಾಣಲು ಸಾಧ್ಯವಿಲ್ಲ.

೨. ಸರಿಯಾದ ತಾಪಮಾನದ ನೀರಿನ ಸ್ನಾನ

ಹೇಗೆ ವಯಸ್ಕರರು ಅತಿಯಾದ ಬಿಸಿ ಅಥವಾ ತಣ್ಣನೆ ನೀರಿಗೆ ತಮ್ಮ ತ್ವಚೆಯನ್ನು ಒಡ್ಡುವುದು ಒಳ್ಳೆಯದು ಅಲ್ಲವೋ, ಹಾಗೆಯೆ ನಿಮ್ಮ ಮಗುವಿನ ತ್ವಚೆಗೂ ಕೂಡ. ಶುಷ್ಕತೆಯು ನಿಮ್ಮ ಮಗುವಿನ ತ್ವಚೆಯನ್ನು ಮಂದ ಮಾಡುವುದು ಮತ್ತು ಕಪ್ಪು ಮಾಡುವುದು. ಹೀಗಾಗಿ ನಿಮ್ಮ ಮಗುವಿಗೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸುವುದು ಒಳ್ಳೆಯದು. ಅತಿಯಾದ ತಾಪಮಾನದ ನೀರು ನಿಮ್ಮ ಮಗುವಿನ ಸೂಕ್ಷ್ಮವಾದ ತ್ವಚೆಯು ಸತ್ವ ಕಳೆದುಕೊಳ್ಳುವಂತೆ ಮಾಡುವುದು.

೩. ಬೇಬಿ  ಸ್ಕ್ರಬ್

ಹೌದು ಇದು ಅತಿಶಯೋಕ್ತಿ ಅಲ್ಲ. ಮಗುವಿನ ದೇಹದ ಎಲ್ಲಾ ಭಾಗದ ಮೇಲೆಯೂ ಕೂದಲು ಇರುತ್ತವೆ, ಮುಖ ಮತ್ತು ಬೆನ್ನಿನ ಮೇಲೂ ಸಹ. ಈ ಕೂದಲುಗಳಿಗೆ ದುರ್ಬಲವಾದ ಬೇರುಗಳಿದ್ದು ನೋಡಲು ಅಸಹಜವಾಗಿ ಕಾಣುತ್ತವೆ. ಸ್ವಲ್ಪ ಕಡ್ಲೆಪುಡಿ, ರೋಜ್ ವಾಟರ್, ಬೇಬಿ ಆಯಿಲ್ ಮತ್ತು ಹದವಾಗಿ ಜೇಜ್ಜಿದ ಕಡಲೆಬೇಳೆಯ ಮಿಶ್ರಣ ಮಗುವಿಗೆ ಅತ್ಯುತ್ತಮ ಸ್ಕ್ರಬ್ ಆಗುತ್ತದೆ. ಇದನ್ನು ನಿಮ್ಮ ಮಗುವಿಗೆ ಹಚ್ಚುವುದರ ಮೂಲಕ ಅದರ ದೇಹದ ಮೇಲಿರುವ ಬೇಡದ ಕೂದಲುಗಳನ್ನ ತೆಗೆಯಬಹುದು. ಇದು ನಿಮ್ಮ ಮಗುವಿನ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ರಕ್ತದ ಸಂಚಾರ ಹೆಚ್ಚಿಸಿ ನಿಮ್ಮ ಮಗುವಿನ ತ್ವಚೆಯು ತಿಳಿಬಣ್ಣ ಹೊಂದಲು ಸಹಾಯ ಮಾಡುತ್ತದೆ.

೪. ಆರ್ದ್ರಕಾರಿಗಳು (ಮೊಯಿಶ್ಚರೈಸರ್)

ಇದು ನಿಮ್ಮ ಮಗುವಿನ ತ್ವಚೆಯ ಪೋಷಣೆಯ ಒಂದು ಅಬಿಭಾಜ್ಯ ಭಾಗ. ಮಗುವಿನ ಚರ್ಮಕ್ಕೆ ಇರಿಸು ಮುರಿಸು ಉಂಟು ಮಾಡದೇ ಇರಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಕಂಪನಿಯ ಆರ್ದ್ರಕಾರಿಗಳನ್ನ ಬಳಸಿ. ಇದನ್ನು ಪ್ರತಿ 4 ಗಂಟೆಗಳಿಗೆ ಒಮ್ಮೆ ಹಚ್ಚುವುದರಿಂದ ಉತ್ತಮ ಫಲಿತಾಂಶ ನಿಮ್ಮದಾಗಿಸಿಕೊಳ್ಳಬಹುದು. ಇದು ನಿಮ್ಮ ಮಗುವಿನ ತ್ವಚೆಯ ಹೊಳಪನ್ನು ಕಾಪಾಡುತ್ತದೆ ಮತ್ತು ಶುಷ್ಕತೆಯನ್ನು ದೂರ ಇಡುತ್ತವೆ.

೫. ಸೋಪ್ ಅನ್ನು ದೂರವಿಡಿ

ನಿಮ್ಮ ಮಗುವಿನ ದೇಹಕ್ಕೆ ಸೋಪ್ ಅನ್ನು ಬಳಸಬೇಡಿ. ಸೋಪ್ ನಿಮ್ಮ ಮಗುವಿನ ಚರ್ಮವನ್ನು ಸುಳಿಯುವಂತೆ ಮಾಡಿ, ಅದು ಕಳೆಗುಂದುವಂತೆ ಮತ್ತು ಕಪ್ಪು ಬಣ್ಣ ಹೊಂದುವಂತೆ ಮಾಡುತ್ತದೆ. ಹೀಗಾಗಿ ಇದರ ಬದಲಾಗಿ ಹಾಲು ಮತ್ತು ರೋಜ್ ವಾಟರ್ ಅನ್ನು ಬಳಸಿ. ಅಥವಾ ನೀವು ಗ್ಲಿಸೆರಿನ್ ಬೇಬಿ ಸೋಪ್ ಅನ್ನು ಕೂಡ ಬಳಸಬಹುದು.

೬. ಸೂರ್ಯದರ್ಶನ

ನಿಮ್ಮ ಮಗುವನ್ನು ಆಗಾಗ್ಗೆ ಒಂದು ಬಾರಿ ಸೂರ್ಯನ ಕಿರಣಗಳಿಗೆ ಒಡ್ಡುವುದು ತುಂಬಾನೇ ಅಗತ್ಯವಾದದ್ದು. ಆದರೆ ಇದು ನಿಯಂತ್ರಣದಲ್ಲಿ ಇರಬೇಕು. ನಿಮ್ಮ ಮಗುವನ್ನು ಬಹಳ ಸಮಯದವರೆಗೆ ಸೂರ್ಯನ ಬಿಸಿಲಿಗೆ ಒಡ್ಡಿದರೆ, ಮಗುವಿನ ತ್ವಚೆಯು ಕಪ್ಪಗೆ ಆಗುತ್ತದೆ.

೭. ಮ್ಯಾಜಿಕ್ ಸಿರಪ್

ಹೌದು, ನಿಮ್ಮ ಮಗುವನ್ನು ಬೆಳ್ಳಗೆ ಮಾಡಲಿಕ್ಕೆ ಒಂದು ಅದ್ಭುತವಾದ ಮ್ಯಾಜಿಕ್ ಸಿರಪ್ ಇದೆ – ಅದೇ ನೀರು! ಹೌದು ನಿಮ್ಮ ಮಗು ನಿರ್ಜಲೀಕರಣ ಹೊಂದುವಂತೆ ಬಿಡಬೇಡಿ. ಇದು ಬಹಳಷ್ಟು ಆರೋಗ್ಯದ ತೊಡಕುಗಳನ್ನು ಉಂಟು ಮಾಡುತ್ತದೆ ಮತ್ತು ನಿಮ್ಮ ಮಗುವಿನ ಚರ್ಮವು ಕೂಡ ನಿರ್ಜಲೀಕರಣ ಹೊಂದುವಂತೆ ಮಾಡುತ್ತದೆ.

೮. ಹಣ್ಣಿನ ರಸ

ಮೂರು ತಿಂಗಳಿಗಿಂತ ಹೆಚ್ಚಿನ ಮಕ್ಕಳಿಗೆ ಇದು ಮ್ಯಾಜಿಕ್ ಮಂತ್ರ. ನಿಮ್ಮ ಮಗುವಿಗೆ ತಾಜಾ ದ್ರಾಕ್ಷಿ ಹಣ್ಣಿನ ರಸ ಕುಡಿಸುವುದು ಮಗುವಿನ ತ್ವಚೆಯ ಎಪಿಡರ್ಮಿಸ್ ಕಾಂತಿಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಇತರೆ ಹಣ್ಣುಗಳಾದ ಸೇಬು ಮತ್ತು ಕಿತ್ತಳೆ ಹಣ್ಣಿನ ರಸಗಳು ಕೂಡ ಮಗುವಿನ ಚರ್ಮವನ್ನು ಒಳಗಿನಿಂದ ಆರೋಗ್ಯಕರವಾಗಿ ಇಡಲು ಸಹಾಯ ಮಾಡುತ್ತವೆ.

Leave a Reply

%d bloggers like this: