ನೈಸರ್ಗಿಕವಾಗಿ ಮುಖದ ಕಲೆಗಳನ್ನು (ಸ್ಕಾರ್) ತೆಗೆದುಹಾಕಿ

ಮುಖದ ಮೇಲೆ ಕಲೆಗಳು, ಗಾಯದ ಗುರುತುಗಳು ನಿಮ್ಮ ಸುಂದರ ತ್ವಚೆಯನ್ನು ಹಾಳುಮಾಡುತ್ತವೆ, ಅದರಲ್ಲೂ ಮೊಡವೆಗಳಿಂದ ಆದ ಕಲೆ ಅಥವಾ ಗುರುತುಗಳು ನಿಮ್ಮ ಮನಸ್ಸಿನ ಮೇಲು ಪರಿಣಾಮ ಬೀರಬಹುದು. ಮೊಡವೆಗಳು ಹೋದರು ಅದರಿಂದ ಆದ ಗುರುತುಗಳು ನಿಮ್ಮನ್ನು ಕಾಡಬಹುದು. ರಾಸಾಯನಿಕ ಕ್ರೀಮ್ ಅಥವಾ ಲೋಷನ್ ಗಳನ್ನು ನೀವು ಬಳಸಬಹುದು ಆದರೆ ಇವುಗಳು ಕೂಡ ನಿಮ್ಮ ತ್ವಚೆಯನ್ನು ಮತ್ತಷ್ಟು ಹಾಳುಮಾಡಬಹುದು. ಅದಕ್ಕಾಗಿ ಯಾವುದೇ ಅಡ್ಡಪರಿಣಾಮ ಇಲ್ಲದ ನೈಸರ್ಗಿಕ ವಿಧಾನ ಬಳಸುವುದು ನಿಮ್ಮ ತ್ವಚೆಯನ್ನು ಮೊದಲಿನ ಸ್ಥಿತಿಗೆ ತರುವಲ್ಲಿ ಸಹಾಯವಾಗುತ್ತದೆ. ಇದು ಸ್ವಲ್ಪ ನಿಧಾನವಾಗಿ ಕೆಲಸ ಮಾಡಿದರು ನಿಮ್ಮ ತ್ವಚೆಗೆ ಶಾಶ್ವತ ಮತ್ತು ಸುಂದರ ಪರಿಹಾರವನ್ನು ನೀಡುತ್ತದೆ.

ಇವುಗಳನ್ನು ಉಪಯೋಗಿಸುವುದರಿಂದ ನಿಮ್ಮ ತ್ವಚೆಯಲ್ಲಿರುವ ಸತ್ವ ಇಲ್ಲದ ಅಥವಾ ಸತ್ತ ಚರ್ಮವನ್ನು ತೆಗೆದುಹಾಕಿ ಹೊಸ ಚರ್ಮವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

೧.ಲೋಗಸರ(ಅಲೋವೆರಾ)

ನೀವು ಏನು ಮಾಡಬೇಕು

೧.ಲೋಗಸರ ಅಥವಾ ಅಲೋವೆರಾದ ಒಂದು ಎಲೆಯನ್ನು ತೆಗೆದುಕೊಂಡು ಅದರಲ್ಲಿರುವ ಲೋಳೆಯನ್ನು(ಜೆಲ್) ತೆಗೆದುಕೊಳ್ಳಿ, ಅದು ಮೃದುವಾದ ಸ್ಥಿರತೆ ಹೊಂದುವವರೆಗು ಕಲಸಿ.

೨.ನಿಮ್ಮ ಮುಖವನ್ನು ತೊಳೆದುಕೊಂಡು, ವಸ್ತ್ರ ಅಥವಾ ಟವೆಲ್ ನಿಂದ ಮುಖವನ್ನು ಒರೆಸಿ(ಮುಖದಲ್ಲಿ ನೀರು ಇರಬಾರದು).

೩.ನಂತರ ಲೋಗಸರವನ್ನು ನಿಮ್ಮ ಮುಖದಲ್ಲಿ ಕಲೆಗಳಿರುವ ಜಾಗಕ್ಕೆ ಹಚ್ಚಿ.

೪.ಅದನ್ನು ಹಾಗೆಯೆ ಸ್ವಲ್ಪ ಸಮಯದ ತನಕ ಬಿಡಿ.

ಇದನ್ನು ನೀವು ದಿನದಲ್ಲಿ ಎರಡರಿಂದ ಮೂರು ಬಾರಿ ಮಾಡಬಹುದು.

೨.ಕೊಬ್ಬರಿ ಎಣ್ಣೆ

ನೀವು ಮಾಡಬೇಕಾದುದು

೧.ಸ್ವಲ್ಪ ಬೆಚ್ಚಗಾಗುವ ತನಕ ಎಣ್ಣೆಯನ್ನು ಬಿಸಿ ಮಾಡಿ.

೨.ನಿಮ್ಮ ಮುಖವನ್ನು ತೊಳೆದುಕೊಂಡು ಚೌಕದಿಂದ ಒರೆಸಿಕೊಳ್ಳಿ.

೩.ಎಣ್ಣೆಯನ್ನು ನಿಮ್ಮ ಮುಖಕ್ಕೆ ಮಸಾಜ್ ತರಹ ೨ ನಿಮಿಷ ಹಚ್ಚಿಕೊಳ್ಳಿ.

೪.ಸ್ವಲ್ಪ ಸಮಯ ಅದನ್ನು ಮುಖದ ಮೇಲೆ ಇರುವಂತೆ ನೋಡಿಕೊಳ್ಳಿ.

ದಿನಕ್ಕೆ ಒಂದು ಬಾರಿ ಇದನ್ನು ಮಾಡಿ.

೩.ಜೇನುತುಪ್ಪ

ನೀವು ಮಾಡಬೇಕಾದುದು

೧.ನಿಮ್ಮ ಮುಖವನ್ನು ತೊಳೆದುಕೊಂಡು ಚೌಕದಿಂದ ಒರೆಸಿಕೊಳ್ಳಿ, ಮುಖದ ಮೇಲೆ ನೀರು ಇರದ ಹಾಗೆ ಅಥವಾ ಮುಖವು ಒದ್ದೆ ಆಗಿರದ ಹಾಗೆ ನೋಡಿಕೊಳ್ಳಿ.

೨.ಚೌಕವನ್ನು ಬಿಸಿ ಮಾಡಿ, ಅದನ್ನು ನಿಮ್ಮ ಮುಖದ ಮೇಲೆ ಇರಿಸಿಕೊಳ್ಳಿ, ಇದರಿಂದ ನಿಮ್ಮ ತ್ವಚೆಯಲ್ಲಿರುವ ರಂಧ್ರಗಳು ತೆರೆದುಕೊಳ್ಳಲು ಸಹಾಯ ಮಾಡುತ್ತದೆ.

೩.ನಂತರ ಚೌಕವನ್ನು ತೆಗೆದು ಹಾಕಿ, ಜೇನುತುಪ್ಪವನ್ನು ಮುಖಕ್ಕೆ ಹಚ್ಚಿ.

೪.ಇದನ್ನು ೧೦ ನಿಮಿಷಗಳ ಕಾಲ ಮುಖದ ಮೇಲೆ ಬಿಟ್ಟು ನಂತರ ನೀರಿನಿಂದ ತೊಳೆಯಿರಿ.

ದಿನಕ್ಕೆ ಒಂದು ಬಾರಿ ಇದನ್ನು ಮಾಡಿ.

೪.ನಿಂಬೆರಸ

ನೀವು ಏನು ಮಾಡಬೇಕು

೧.ನಿಂಬೆಹಣ್ಣನ್ನು ತೆಗೆದುಕೊಂಡು ಅದರಿಂದ ರಸವನ್ನು ಒಂದು ಬಟ್ಟಲಿಗೆ ಹಿಂಡಿಕೊಂಡು ಪಕ್ಕದಲ್ಲಿ ಇಡಿ.

೨.ನಿಮ್ಮ ಮುಖವನ್ನು ಚೆನ್ನಾಗಿ ತೊಳೆದುಕೊಂಡು ಬಂದು ಚೌಕದಿಂದ ಒರೆಸಿಕೊಳ್ಳಿ, ಮುಖದ ಮೇಲೆ ತೇವಾಂಶ ಇಲ್ಲದಿರಲಿ.

೩.ಹತ್ತಿಯನ್ನು ನಿಂಬೆರಸದೊಳಗೆ ಹೆಜ್ಜಿ, ನಿಮ್ಮ ಮುಖಕ್ಕೆ ಹಚ್ಚಿರಿ.

೪.೧೦ ನಿಮಿಷಗಳ ಕಾಲ ಇದನ್ನು ಹಾಗೆಯೆ ಬಿಡಿ.

೫.ನಂತರ ಮುಖವನ್ನು ತೊಳೆದುಕೊಳ್ಳಿ.

ಇದರಿಂದ ಕಲೆಯು ಮಾಯವಾಗುವುದರ ಜೊತೆಗೆ ನಿಮ್ಮ ತ್ವಚೆಯು ಹೊಳಪನ್ನು ಪಡೆಯುತ್ತದೆ.

೫.ಅಡುಗೆ ಸೋಡಾ

ನಿಮಗೆ ಬೇಕಾಗಿರುವುದು

ಒಂದು ಚಮಚ ನೀರು

ಎರಡು ಚಮಚ ಅಗುಗೆ ಸೋಡಾ

ನೀವು ಮಾಡಬೇಕಾಗಿರುವುದು

೧.ಅಡುಗೆ ಸೋಡಾ ಮತ್ತು ನೀರನ್ನು ಮಿಶ್ರಣ ಮಾಡಿ, ಪೇಸ್ಟ್ ತರಹ ಮಾಡಿಕೊಳ್ಳಿ.

೨.ನಿಮ್ಮ ಮುಖವನ್ನು ತೊಳೆದುಕೊಳ್ಳಿ.

೩.ನಂತರ ಈ ಅಡುಗೆ ಸೋಡಾ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ.

೪.ಇನ್ನು ೫ ನಿಮಿಷ ಮಿಶ್ರಣ ಮುಖದ ಮೇಲೆ ಇರಲು ಬಿಡಿ.

೫.ನಂತರ ನಿಮ್ಮ ಮುಖವನ್ನು ತೊಳೆದುಕೊಳ್ಳಿ.

ವಾರದಲ್ಲಿ ಎರಡರಿಂದ ಮೂರು ಬಾರಿ ಇದನ್ನು ಮಾಡಿದರೆ ಬೇಗನೆ ಫಲಿತಾಂಶವನ್ನು ಕಾಣಬಹುದು.

ಇವುಗಳು ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸಿ ಕಲೆಗಳು ಹಾಗದಂತೆ ಮತ್ತು ಮುಖದ ಮೇಲೆ ಯಾವುದೇ ಮೊಡವೆ ಮೂಡದಂತೆ ನೋಡಿಕೊಳ್ಳಲು ಸಹಾಯ ಆಗುತ್ತದೆ.

ಸೂಚನೆ: ಇವುಗಳನ್ನು ಮಾಡುವ ಮೊದಲು ನಿಮ್ಮ ಮುಖವನ್ನು ತೊಳೆದುಕೊಂಡು ಚೌಕದಿಂದ ಒರೆಸುಕೊಂಡು, ಯಾವುದೇ ತೇವಾಂಶ ಅಥವಾ ಮುಖವು ಒದ್ದೆ ಆಗಿರದ ಹಾಗೆ ನೋಡಿಕೊಳ್ಳಿ.

Leave a Reply

%d bloggers like this: