ಹೆಂಗಸರು ಅವರ ಬಗ್ಗೆ ತಾವೇ ಇಷ್ಟಪಡದ ಆದರೆ ಗಂಡಸರಿಗೆ ಹಾಟ್ ಅನಿಸುವ ಅವರ ಬಗೆಗಿನ 8 ವಿಷಯಗಳು

ಕೆಲವೊಂದು ವಿಷಯಗಳು ಇನ್ನುಳಿದ ವಿಷಯಗಳಿಗಿಂತ ಕಡಿಮೆ ಆಕರ್ಷಣೀಯ ಅಥವಾ ಹಾಟ್ ಅನಿಸಬಹುದು. ಹೀಗೆಂದ ಮಾತ್ರಕ್ಕೆ ನೀವು ನೋಡಲು ಚೆನ್ನಾಗಿಲ್ಲ ಎಂದರ್ಥವಲ್ಲ, ಬದಲಿಗೆ ನಿಮ್ಮ ಕೆಲವು ನಡವಳಿಕೆಗಳನ್ನ ನೀವೇ ಹಾಟ್ ಅಲ್ಲ ಎಂದು ಅಂದುಕೊಂಡಿರುತ್ತೀರಾ. ಕೆಲವು ಆಕರ್ಷಣೀಯ ಅಲ್ಲದ ದೇಹದ ಭಾಗಗಳಿಂದ ಹಿಡಿದು, ಆಕರ್ಷಣೀಯ ಅಲ್ಲದ ಚಟುವಟಿಕೆಗಳವರೆಗೆ ನಾವು ಅಂದುಕೊಂಡಿರುವುದು ಇನ್ನೊಬ್ಬರ ಯೋಚನೆ ಆಗಿರುವುದಿಲ್ಲ. ಗಂಡಸರು ಆಕರ್ಷಣೆಗೆ ಒಳಗಾಗುವ ಎಷ್ಟೊಂದು ವಿಷಯಗಳನ್ನ ನಾವು ಅಸಹ್ಯ ಅಥವಾ ಆಕರ್ಷಣೀಯ ಅಲ್ಲ ಎಂದು ಅಂದುಕೊಳ್ಳುತ್ತೇವೆ. ಅಂತಹ ಕೆಲವೊಂದು ವಿಷಯಗಳು ಯಾವು ಎಂಬುದು ಇಲ್ಲಿವೆ ನೋಡಿ :

೧. ಬೆವರುವುದು

ನೀವು ಕೆಲಸ ಮಾಡಿ ಅಥವಾ ವ್ಯಾಯಾಮ ಮಾಡಿ ಬೆವರು ಸುರಿಸುತ್ತಿದ್ದರೆ, ಆ ಕ್ಷಣದಲ್ಲಿ ನೀವು ಇತರರಿಂದ ಸ್ವಲ್ಪ ದೂರವೇ ಇರಬೇಕೆಂದು ಅಂದುಕೊಳ್ಳಬಹುದು. ಆದರೆ ಕಾಸ್ಮೊಪಾಲಿಟನ್ ಪತ್ರಿಕೆ ನಡೆಸಿದ ಅಧ್ಯಯನದಲ್ಲಿ ಗಂಡಸರು ಹೆಂಗಸರ ಮೇಲೆ ಸ್ವಲ್ಪ ಪ್ರಮಾಣದ ಬೆವರು ಹಾಟ್ ಎಂದು ಭಾವಿಸುತ್ತಾರೆ ಎಂಬುದು ತಿಳಿದು ಬಂದಿದೆ.

೨. ಕೆದರಿದ ಕೂದಲು

ನೀವು ಸರಿಯಾಗಿ ಬಾಚಿದ್ದ ಕೂದಲು ನಡೆದು ಬರುವ ದಾರಿಯಲ್ಲಿ ಜೋರಾಗಿ ಬಿಸಿದ ಗಾಳಿಗೆ ಕೆದರಿರಬಹುದು ಅಥವಾ ಸುಸ್ತಾಗಿ ರಾತ್ರಿ ಮಲಗಿ, ದೀರ್ಘ ನಿದ್ದೆ ಹೊಂದು ಈಗ ತಾನೇ ಎದ್ದು ಬಂದಿರಬಹುದು. ಇದರಿಂದ ಇತರರಿಗೆ ಇರಿಸು ಮುರಿಸು ಉಂಟಾಗುವುದೋ ಇಲ್ಲವೋ ಗೊತ್ತಿಲ್ಲ, ಆದರೆ ಹೆಂಗಸರಿಗೇನೇ ಇದು ತಲೆ ನೋವು ಆಗಿರುತ್ತದೆ. ಆದರೆ ಮೊದಲೇ ಹೇಳಿದ ಕಾಸ್ಮೊಪಾಲಿಟನ್ ಪತ್ರಿಕೆಯ ಅಧ್ಯಯನದಲ್ಲಿ ತಿಳಿದು ಬಂದಿರುವ ಇನ್ನೊಂದು ವಿಷಯ ಎಂದರೆ ಅದು ಗಂಡಸರಿಗೆ ಕೆದರಿದ ಕೂದಲು ಮಾದಕವಾಗಿ ಕಾಣಿಸುತ್ತದೆ ಎಂದು.

೩. ಬೀಳಿಸಿಕೊಂಡು ತಿನ್ನುವುದು

ನೀವು ಹೊರಗಡೆ ಎಲ್ಲಾದರೂ ಹೋದಾಗ, ಅಲ್ಲಿ ನೂಡಲ್ಸ್ ಅಥವಾ ದೊಡ್ಡನೆ ಬರ್ಗರ್ ಅನ್ನು ಕಷ್ಟ ಪಟ್ಟು, ಬೀಳಿಸಿಕೊಂಡು ತಿನ್ನುತ್ತಿದ್ದರೆ ನಿಮಗೆ ನಾಚಿಕೆ ಅನಿಸಬಹುದು. ಆದರೆ, ಗ್ಲಾಮರ್ ಪತ್ರಿಕೆ ಪ್ರಕಾರ ಗಂಡಸರಿಗೆ ಇದು ಇಷ್ಟ ಆಗುತ್ತದೆ. ಏಕೆಂದರೆ ಇದು ಅವರಿಗೆ ನೀವು ಸ್ವಲ್ಪ ಒರಟಾಗಿ ವರ್ತಿಸಲು ಹೆದರುವುದಿಲ್ಲ ಎಂದು ತೋರಿಸುತ್ತದೆ.

೪. ಮಚ್ಚೆಗಳು ಮತ್ತು ಕಲೆಗಳು

ನೀವು ನಿಮ್ಮ ಮುಖದ ಮೇಲಿನ ಕಲೆ-ಗುರುತುಗಳು, ಮಚ್ಚೆಗಳ ಬಗ್ಗೆ ನಾಚಿಕೆ ಪಟ್ಟುಕೊಳ್ಳಬಹುದು ಮತ್ತು ಅವುಗಳನ್ನ ಹೋಗಲಾಡಿಸಲು ಎಲ್ಲವನ್ನೂ ಪ್ರಯತ್ನಿಸಿರಬಹುದು. ಆದರೆ ಕೆಲವು ಗಂಡಸರಿಗೆ ಇವುಗಳೆಂದರೆ ಬಹಳ ಇಷ್ಟ. ರೆಡ್ ಬುಕ್ ಪತ್ರಿಕೆ ನಡೆಸಿದ ಅಧ್ಯಯನದಲ್ಲಿ ಒಬ್ಬ ವ್ಯಕ್ತಿ ಹೇಳಿದಂತೆ “ಮಚ್ಚೆಗಳು ಮತ್ತು ಕಲೆಗಳು ಹುಡುಗಿಯರ ಮೇಲಿದ್ದರೆ ಚೆಂದ, ಅವುಗಳು ಅವರನ್ನು ವಿಭಿನ್ನವಾಗಿ ಮತ್ತು ಇನ್ನಷ್ಟು ಆಕರ್ಷಣೀಯವಾಗಿ ಕಾಣುವಂತೆ ಮಾಡುತ್ತವೆ”.

೫. ಕಣ್ಣಿನ ಕೆಳಗಿನ ಚೀಲಗಳು

ರಾತ್ರಿ ಎಲ್ಲಾ ಓದುವ ಅಥವಾ ಕೆಲಸಗಳಿಂದ ರಾತ್ರಿ ಸರಿಯಾಗಿ ನಿದ್ದೆ ಮಾಡದೇ ಕಣ್ಣಿನ ಕೆಳಗೆ ಚೀಲಗಳನ್ನ ಬೆಳೆಸಿಕೊಂಡಿರುವ ಹೆಂಗಸರಿಗೆ ಒಂದು ಸಿಹಿಯ ಸುದ್ದಿ. ರೆಡ್ಡಿಟ್ ಅಲ್ಲಿ ನಡೆದ ಸಮೀಕ್ಷೆಯಲ್ಲಿ ಬಹಳಷ್ಟು ಗಂಡಸರು ತಮಗೆ ಹೆಂಗಸರ ಕಣ್ಣಿನ ಕೆಳಗಿನ ಚೀಲಗಳು “ಮುದ್ದಾಗಿ” ಕಾಣುತ್ತವೆ ಎಂದಿದ್ದಾರೆ. ಆದರೆ ಬಹಳಷ್ಟು ಹೆಂಗಸರಿಗೆ ಇದು ಇಷ್ಟವಾಗುವುದಿಲ್ಲ.

೬. ಅವರಲ್ಲದೆ ಬೇರೆ ಕಡೆ ಗಮನ ಹರಿಸುವುದು

ನಿಮಗೆ ನಿಮ್ಮದೇ ಆದ ಜೀವನ ಇದೆ ಮತ್ತು ನಿಮ್ಮದೇ ಆದ ಗುರಿಗಳು ಮತ್ತು ಜವಾಬ್ದಾರಿಗಳು ಇವೆ. ನೀವು ಇದರ ಗಮನ ಹರಿಸಬೇಕಾಗಿರುವುದು ನಿಮ್ಮ ಕರ್ತವ್ಯ. ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿ ಪಾತ್ರರ ಕಡೆ ಹೆಚ್ಚು ಗಮನವಹಿಸಲಿಕ್ಕೆ ಸಾಧ್ಯ ಆಗದೆ ಇರಬಹುದು. ಇದು ನಿಮ್ಮನ್ನು ನಿಮ್ಮ ಸಂಗತಿಯು ದೂರ ಮಾಡಲು ಕಾರಣ ಆಗುವುದು ಎಂದು ನೀವು ಅಂದುಕೊಳ್ಳುವಿರಿ. ಆದರೆ ವಾಸ್ತವದಲ್ಲಿ, ಮೊದಲೇ ಹೇಳಿದ ಗ್ಲಾಮರ್ ಪತ್ರಿಕೆ ನಡೆಸಿದ ಅಧ್ಯಯನದಲ್ಲಿ, ಗಂಡಸರು ಹೆಂಗಸರು ತಮ್ಮ ಗುರಿಗಳ ಮೇಲೆ ತೀಕ್ಷ್ಣ ಕಣ್ಣು ಇಟ್ಟಿರುವುದು, ಅದಕ್ಕಾಗಿ ಜವಾಬ್ದಾರಿಗಳನ್ನ ವಹಿಸಿಕೊಳ್ಳುವುದು ಸೂಪರ್ ಆಕರ್ಷಣೀಯ ಎಂದು ತಿಳಿಸಿದ್ದಾರೆ.

೭. ನಿಮ್ಮ ಬೆಳ್ಳಂ ಬೆಳಗಿನ ಲುಕ್

ರೆಡ್ಡಿಟ್ ಅಲ್ಲಿನ ಬಹುತೇಕ ಗಂಡಸರ ಪ್ರಕಾರ ಹೆಂಗಸರು ಬೆಳಗಿನ ಜಾವ ಎದ್ದಿದ್ದ ತಕ್ಷಣ ಹೊಂದಿರುವ ನೋಟವು, ಅವರನ್ನೇ ಅವರು ನಿಯಂತ್ರಿಸಿಕೊಳ್ಳದಷ್ಟು ಮಾದಕವಾಗಿ ಇರುತ್ತದೆ ಎಂದಿದ್ದಾರೆ. ಮೇಕ್ಅಪ್ ಇಲ್ಲದೆಯೇ, ಮನೆಯಲ್ಲೇ ಹಾಕಿಕೊಳ್ಳುವ ಬಟ್ಟೆಯಲ್ಲಿ, ಕೆದರಿದ ಕೂದಲಿನಲ್ಲಿ, ಹೆಂಗಸರು ಅಂದುಕೊಂಡಿರುವುದಕ್ಕಿಂತ ಹೆಚ್ಚು ಆಕರ್ಷಣೀಯವಾಗಿ ಗಂಡಸರಿಗೆ ಕಾಣಿಸುತ್ತಾರೆ.

೮. ನಿಮ್ಮ ದೊಡ್ಡ ಮೂಗು

ನೀವು ನಿಮ್ಮ ಅತಿಯಾದ ದೊಡ್ಡ ಮೂಗು ಆಕರ್ಷಣೀಯ ಅಲ್ಲ ಎಂದುಕೊಳ್ಳಬಹುದು. ಆದರೆ ಮೊದಲೇ ಹೇಳಿದ ರೆಡ್ಡಿಟ್ ಸಮೀಕ್ಷೆಯಲ್ಲಿ ದೊಡ್ಡ ಮೂಗು ಸೆಕ್ಸಿ ಎಂದು ಭಾವಿಸುವ ಗಂಡಸರು ಬಹಳಷ್ಟು ಜನರಿದ್ದಾರೆ ಎಂಬುದು ತಿಳಿದು ಬಂದಿದೆ. ಇನ್ನೂ ಸುಲಭವಾಗಿ ಹೇಳಬೇಕೆಂದರೆ, ನಿಮ್ಮ ದೇಹದಲ್ಲಿನ ಪ್ರತಿಯೊಂದು ಅಂಶವೂ ಅವರಿಗೆ ಆಕರ್ಷಣೀಯ!

Leave a Reply

%d bloggers like this: