ಈ ಚಿಹ್ನೆಗಳು ನಿಮ್ಮ ಗರ್ಭದೊಳಗಿರುವ ಮಗುವು ಗಂಡು ಎಂದು ಹೇಳುತ್ತವೆ

ಮಹಿಳೆಗೆ ತಾನು ತಾಯಿ ಆಗುತ್ತಿರುವೆ ಎಂಬುದೇ ಅತ್ಯಂತ ಖುಷಿಯ ವಿಷಯ, ಆದರೆ ಸಾಮಾನ್ಯವಾಗಿ ಎಲ್ಲಾ ಗರ್ಭಿಣಿಯರಲ್ಲಿ ಕಾಡುವ ಒಂದೇ ಒಂದು ಗೊಂದಲ ಎಂದರೆ ನನ್ನ ಮಗು ಗಂಡೋ ಅಥವಾ ಹೆಣ್ಣೋ ಎಂಬುದು. ಮಗುವು ಗಂಡಾಗಲಿ ಅಥವಾ ಹೆಣ್ಣಾಗಲಿ ಅದನ್ನು ತಾಯಿಯು ಪ್ರೀತಿಸುವಳು ಆದರೆ ಗರ್ಭದೊಳಗಿರುವ ಮಗುವು ಹೆಣ್ಣೋ ಅಥವಾ ಗಂಡೋ ಎಂದು ತಿಳಿದುಕೊಳ್ಳಲು ಏನೋ ಕುತೂಹಲ. ಇಲ್ಲಿ ಹೇಳಿರುವ ಚಿಹ್ನೆಗಳನ್ನು ನಿಮ್ಮ ಗರ್ಭಾವಸ್ಥೆಯಲ್ಲಿ ನೀವು ಅನುಭವಿಸಿದರೆ ಅಥವಾ ಅನುಭವಿಸುತ್ತಿದ್ದರೆ, ನಿಮಗೆ ಗಂಡು ಮಗು ಆಗುವ ಸಾಧ್ಯತೆಗಳು ಹೆಚ್ಚು ಎಂದು ಹೇಳಬಹುದು.

೧.ಬೆಳಗ್ಗಿನ ಕಾಯಿಲೆ

ಬೆಳಗಿನ (ಕಾಯಿಲೆ)ಬೇನೆಯು ಅಥವಾ ವಾಕರಿಕೆ ಮುಂತಾದ ಗರ್ಭಾವಸ್ಥೆಯ ಆರಂಭಿಕ ಲಕ್ಷಣಗಳನ್ನು ನೀವು ಅನುಭವಿಸಿಲ್ಲ ಎಂದರೆ ನಿಮ್ಮ ಉದರದೊಳಗೆ ಗಂಡು ಮಗುವು ಬೆಳೆಯುತ್ತಿದೆ ಎಂದು ಹೇಳಬಹುದು.

೨.ಹೃದಯ ಬಡಿತ

ನಿಮ್ಮ ಮಗುವಿನ ಹೃದಯ ಬಡಿತ ನಿಮಿಷಕ್ಕೆ ೧೪೦ಕ್ಕಿಂತಲೂ ಕಡಿಮೆ ಬಾರಿ ಬಡಿಯುತ್ತಿದೆ ಎಂದರೆ, ಇದು ನೀವು ಗಂಡು ಮಗುವಿನ ತಾಯಿ ಆಗುವಿರಿ ಎಂದು ಸೂಚಿಸುತ್ತದೆ.

೩.ಮೊಡವೆ ಪ್ರಕೋಪಗಳು

ನೀವು ಗರ್ಭಾವಸ್ಥೆಯಲ್ಲಿ ಹೆಚ್ಚು ಮೊಡವೆಯ ತೊಂದರೆಗಳನ್ನು ಎದುರಿಸುವುದು ನೀವು ಗಂಡು ಮಗುವನ್ನು ಉದರದೊಳಗೆ ಇರಿಸಿಕೊಂಡಿರುವುದರ ಮತ್ತೊಂದು ಚಿಹ್ನೆಯಾಗಿದೆ.

೪.ಆಹಾರ ಬಯಕೆಗಳು

ನಿಮ್ಮ ಉದರದೊಳಗೆ ಗಂಡು ಮಗುವು ಇರುವುದಾದರೆ, ನೀವು ಹೆಚ್ಚು ಆಹಾರ ಬಯಕೆಗಳನ್ನು ಪಡೆಯುವಿರಿ ಅದರಲ್ಲೂ ಹುಳಿ ಮತ್ತು ಉಪ್ಪು ರುಚಿಯುಳ್ಳ ಆಹಾರವನ್ನು ಹೆಚ್ಚು ಸೇವಿಸಲು ಬಯಸುವಿರಿ.

೫.ಹೊಟ್ಟೆಯ ಸ್ಥಿತಿ

ಮಗುವಿನ ಲಿಂಗವನ್ನು ಪತ್ತೆ ಮಾಡಲು ಹೊಟ್ಟೆಯ ಸ್ಥಿತಿಯನ್ನು ನೋಡುವುದು ತುಂಬಾ ಸಾಮಾನ್ಯ ಚಿಹ್ನೆಯಾಗಿದೆ. ನಿಮ್ಮ ಉದರವು ಸ್ವಲ್ಪ ಸಣ್ಣಗೆ ಅಂದರೆ ಹೆಚ್ಚು ದಪ್ಪ ಇಲ್ಲದಿದ್ದರೆ ನೀವು ಗಂಡು ಮಗುವನ್ನು ಪಡೆಯುವಿರಿ.

೬.ಮೂತ್ರದ ಬಣ್ಣ

ಗರ್ಭಾವಸ್ಥೆಯಲ್ಲಿ ಮೂತ್ರದ ಬಣ್ಣ ಸ್ಪಷ್ಟವಾಗಿ ಬದಲಾಗುತ್ತದೆ. ಅದು ಗಾಢ ಬಣ್ಣದಲ್ಲಿ ಕಾಣಿಸಿದರೆ ನೀವು ಶೀಘ್ರದಲ್ಲೇ ಗಂಡು ಮಗುವಿಗೆ ಜನ್ಮ ನೀಡುವಿರಿ.

೭.ಸ್ತನದ ಗಾತ್ರ

ಗರ್ಭಾವಸ್ಥೆಯಲ್ಲಿ, ಮೊಲೆಹಾಲು ಉಣಿಸಲು ಮತ್ತು ಶಿಶುವಿನ ಪೋಷಣೆ ಮಾಡಲು ಸ್ತನವು ತಯಾರಾಗುವ ಸಲುವಾಗಿ ಸಾಮಾನ್ಯವಾಗಿ ದಪ್ಪವಾಗುತ್ತದೆ ಅಥವಾ ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತದೆ. ಆದರೆ ನೀವು ಗಂಡು ಮಗುವಿಗೆ ಜನ್ಮ ನೀಡುವುದಾದರೆ ನಿಮ್ಮ ಬಲ ಸ್ತನವು ಎಡಗಡೆ ಸ್ತನಕ್ಕಿಂತ ಹೆಚ್ಚು ದಪ್ಪವಾಗುತ್ತದೆ.

೮.ಶೀತ

ನಿರಂತರವಾಗಿ ನಿಮ್ಮ ಕೈ ಮತ್ತು ಪಾದಗಳು ಹೆಚ್ಚು ತಂಪಾಗಿದ್ದರೆ, ಅಂದರೆ ತಣ್ಣಗಿದ್ದರೆ ನೀವು ಸ್ಪಷ್ಟವಾಗಿ ನಿಮ್ಮ ಉದರದಲ್ಲಿ ಗಂಡು ಮಗು ಬೆಳೆಯುತ್ತಿದೆ ಎಂದು ಹೇಳಬಹುದು.

ಗರ್ಭದಲ್ಲಿ ಹೆಣ್ಣು ಮಗು ಇರುವ ಚಿಹ್ನೆಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Leave a Reply

%d bloggers like this: