ಈ 6 ಸಂಗತಿಗಳು ನಿಮ್ಮ ಪತಿಯಲ್ಲಿ ನೀವು ಗುರುತಿಸಿದ್ದರೆ, ಅವರು ನಿಮ್ಮನ್ನ ಬಿಟ್ಟಿರುವುದಿಲ್ಲ ಎಂದರ್ಥ!

ಯಾವತ್ತಾದರೂ ನೀವು ಮತ್ತು ನಿಮ್ಮ ಪತಿ “ನೀನು ಇಲ್ಲದಿದ್ದರೆ ನಾನು ಹೇಗೆ ಇರ್ತಿದ್ದೆನೋ” ಎಂಬ ಚರ್ಚೆ ನಡೆಸಿದ್ದೀರಾ? ಇದು ಒಂದು ಅನಾರೋಗ್ಯಕರ ಸಾಲು ಎಂದೆನಿಸಬಹುದು, ಆದರೆ ನಿಮ್ಮ ಜೀವನದಲ್ಲಿ ಒಮ್ಮೆ ಆದರೂ ಈ ಮಾತು ಬಂದೇ ಬರುತ್ತದೆ. ಇದರೊಂದಿಗೆ ಕೆಲವೊಮ್ಮೆ ನೀವು “ನೀನು ಇಲ್ಲದೆ ನನಗೆ ಏನು ಮಾಡೋದಕ್ಕೆ ಆಗಲ್ಲ” ಎಂಬ ಮಾತು ಕೂಡ ಬಂದಿರುತ್ತದೆ. ಅಂತಹ ಕೆಲವು ಸಂದರ್ಭಗಳು ಯಾವುದು ಎಂದು ಇಲ್ಲಿ ಪಟ್ಟಿ ಮಾಡಿದ್ದೀವಿ ಓದಿ.

೧. ನಿಮ್ಮೊಂದಿಗೆ ಮಾತಾಡದೆ ಒಂದು ದಿನವೂ ಮುಗಿಯುವುದಿಲ್ಲ

ನಿಮ್ಮ ಪತಿಯು ಕೂಡ ದಿನದ ಸಲ್ಲದ ಸಮಯಗಳಲ್ಲಿ ಫೋನ್ ಕಾಲ್ ಮಾಡುತ್ತಾರೆಯೇ? ಅದು ಕೂಡ ಏನು ಮುಖ್ಯವಾದದ್ದು ಇಲ್ಲದೆ, ಹಾಗೆ ಸುಮ್ಮನೆ ಮಾತಾಡಲು? ಅದರಲ್ಲೂ ಅವರೇನಾದರೂ ಊರಿನಲ್ಲಿ ಇಲ್ಲ ಎಂದರೆ, ಅವರಿಗೆ ತೋಚಿದ ಸಮಯದಲ್ಲಿ, ಯಾವಾಗ ಬೇಕೋ ಅವಾಗ (ಹೆಚ್ಚಿನ ಬಾರಿ ಈ ಕಾಲ್ ಬಂದಾಗ ನೀವು ಬಾತ್ರೂಮ್ ಅಲ್ಲೋ ಅಥವಾ ಮನೆ ಹೊರಗಡೆಯೋ ಇರುತ್ತೀರಾ!) ನಿಮ್ಮನ್ನ ಎಷ್ಟು ಮಿಸ್ ಮಾಡ್ಕೊಳ್ತಾ ಇದ್ದಾರೆ ಎಂದು ಹೇಳಲು ಕರೆ ಮಾಡುತ್ತಾರೆಯೇ? ಅವರು ದೊಡ್ಡ ದೊಡ್ಡ ಮಾತುಗಳಲ್ಲಿ ಅದನ್ನು ಹೇಳದೆ ಇರಬಹದು, ಆದರೆ ಕೊನೆಪಕ್ಷ “ಊಟ ಆಯ್ತಾ?”, “ತಿಂಡಿ ಆಯ್ತಾ?” ಅಂತ ಆದರೂ ಕೇಳದೆಯೇ ದಿನ ಪೂರ್ತಿ ಆಗುವುದಿಲ್ಲ.

೨. ಅವರು ಭವಿಷ್ಯದ ಬಗ್ಗೆ ಮಾತಾಡುವಾಗ, ಅದರಲ್ಲಿ ನೀವು ಇದ್ದೇ ಇರುತ್ತೀರಾ

ಅದು ನೀವು ಕಟ್ಟಿಸಬೇಕೆಂದಿರುವ ಒಂದು ಮನೆಯೇ ಆಗಿರಬಹುದು ಅಥವಾ ನೀವು ಖರೀದಿಸಬೇಕು ಎಂದಿರುವ ಒಂದು ಆರಾಮ್ ಕುರ್ಚಿ ಆದರೂ ಇರಲಿ, ನಿಮ್ಮ ಪತಿಯು “ನಾವು ಇದರಲ್ಲೇ ಕೂತು ಒಟ್ಟಿಗೆ ಮುದುಕರಾಗೋಣ” ಎಂದು ಹೇಳಿದರೆ, ಭವಿಷ್ಯಕ್ಕೆಂದು ಅವರು ಯೋಚಿಸಿರುವ ಪ್ರತಿಯೊಂದು ಯೋಜನೆಯಲ್ಲೂ ನೀವು ಇದ್ದೀರಾ ಎಂದರ್ಥ. ನೀವು ಈಗಾಗಲೇ ಮಕ್ಕಳನ್ನ ಹೇಗೆ ಬೆಳಸಬೇಕೆಂದು ಮತ್ತು ಅವರು ದೊಡ್ಡವರಾಗಿ, ನಿಮ್ಮನ್ನು ಬಿಟ್ಟು ಹೋದಮೇಲೆ ಹೇಗೆ ಜೀವನ ನಿಭಾಯಿಸಬೇಕು ಎಂಬುದನ್ನ ಕೂಡ ಮಾತಾಡಿರಬಹುದು!

೩. ಮನೆಯಲ್ಲಿ ಯಾವ ವಸ್ತು ಎಲ್ಲಿದೆ ಎಂಬುದು ಒಂಚೂರು ಅವರಿಗೆ ತಿಳಿದಿರುವುದಿಲ್ಲ

ನಿಮ್ಮ ಬೆಳಿಗ್ಗೆಗಳು ಕೂಡ “ನನ್ನ ಬೈಕ್ ಕೀ ಎಲ್ಲಿದೆ?”, “ನನ್ನ ವಾಲೆಟ್ ಎಲ್ಲಿದೆ?” ಅಂತ ಶುರು ಆಗುತ್ತವೆಯೇ? ನೀವು ಮನೆಯಲ್ಲಿ ಇಲ್ಲವೆಂದರೆ ಅವರ ಕೈ-ಕಾಲುಗಳೇ ಆಡುವುದಿಲ್ಲ. ಒಂದು ಕ್ಷಣ ಅವರು ಇಲ್ಲಿ ಯಾಕೆ ಒಂದೇ ಕಾಲುಚೀಲ ಇದೆ, ಇನ್ನೊಂದು ಎಲ್ಲಿ ಹೋಯ್ತು ಎಂದು ಗೊಣಗಾಡುತ್ತಿದ್ದರೆ, ಅದರ ಮರುಕ್ಷಣವೇ ನೀವು ಅದನ್ನು ಹುಡುಕಿ ಕೊಟ್ಟಿದ್ದಕ್ಕೆ ಹಲ್ಲು ಬಿರಿಯುತ್ತ ಥ್ಯಾಂಕ್ಸ್ ಎಂದು ಹೇಳುತ್ತಾರೆ. “ನೀನಿಲ್ಲದೆ ನಾನು ಏನು ಮಾಡಲಿ?” ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕೇ?!

೪. ನಿಮ್ಮ ಜೊತೆ ಸಮಯ ಕಳೆಯಲು ಅವರು ಪ್ಲಾನ್ ಮಾಡುತ್ತಾರೆ

ಅದು ನಿಮ್ಮ ಪತಿಯು ಸಮಯವೇ ಇಲ್ಲದೆ ದುಡಿದಿರುವ ವಾರ ಆಗಿರಬಹುದು, ಅಥವಾ ಆ ವಾರವೆಲ್ಲಾ ಏನೋ ಬೋರಿಂಗ್ ಆಗಿ ಇರಬಹುದು. ಅಂತಹ ಸಂದರ್ಭದಲ್ಲಿ ಅವರು ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ನಿಮ್ಮ ಜೊತೆ ಹೊರ ಹೋಗಲು, ಒಳ್ಳೆಯ ಕಾಲ ಕಳೆಯಲು ಯೋಜಿಸುತ್ತಿದ್ದಾರೆ ಎಂದರೆ, ಅದು ಅವರು ನಿಮ್ಮೊಂದಿಗಿನ ಸಂಬಂಧಕ್ಕೆ ಕೊಡುವ ಬೆಲೆ. ಇದು ಅವರು ನಿಮಗೆ ಎಷ್ಟೊಂದು ಆದ್ಯತೆ ಮತ್ತು ಪ್ರಶಂಸೆ ನೀಡುತ್ತಾರೆ ಎಂಬುದಕ್ಕೆ ಪುರಾವೆ.

೫. ನೀವು ಜೊತೆಯಿಲ್ಲದೆ ಅವರಿಗೆ ನಿದ್ದೆ ಬರುವುದಿಲ್ಲ

ಅರ್ಧ ಬೆಡ್ ಗಿಂತ ಹೆಚ್ಚಿನ ಜಾಗ ನೀವೇ ತೆಗೆದುಕೊಳ್ಳುವುದಕ್ಕೆ ಅವರು ಎಷ್ಟೊಂದು ಒಗ್ಗಿಕೊಂಡಿರುತ್ತಾರೆ ಎಂದರೆ, ನೀವಿಲ್ಲದೆ ಅಲ್ಲಿ ಏನೋ ಸರಿ ಇಲ್ಲ ಅಂತ ಅವರಿಗೆ ಅನಿಸುತ್ತದೆ. ದಿನದ ಅಂತ್ಯದಲ್ಲಿ ಅವರಿಗೆ ಬೇಕಿರುವುದು ನಿಮ್ಮ ಬೆಚ್ಚಗಿನ ಇರುವಿಕೆ ಮತ್ತು ನಿಮ್ಮ ನಗುವೇ ಹೊರತು ಬೇರೇನಲ್ಲ. ಈ ಕಾರಣಕ್ಕೆ ನಿಮ್ಮ ಪತಿ ಮಲಗಲೆಂದು ರೂಮಿಗೆ ಹೋಗಿ, ನೀವಿನ್ನು ಹಾಲಿನಲ್ಲಿ ನಿಮ್ಮ ನೆಚ್ಚಿನ ಸೀರಿಯಲ್ ನೋಡುತ್ತಾ ಕುಳಿತಿದ್ದರೆ, “ಮಲಗೋಣ ಬಾ” ಅಂತ ಪದೇ ಪದೇ ಕೂಗೋದು.

೬. ನಿಮ್ಮ ಬಗ್ಗೆ ತುಂಬಾ ಚಿಂತಿಸುತ್ತಾರೆ

ನೀವು ಏನಾದರು ಖರೀದಿ ಮಾಡಬೇಕು ಅಂತ ಮಾರ್ಕೆಟ್ಟಿಗೋ ಅಥವಾ ಮಾಲ್ ಗೆ ಹೋದರೂ ಕೂಡ, ನಿಮ್ಮ ಪತಿಗೆ ನೀವು ಮನೆಗೆ ವಾಪಾಸ್ ಮರಳುವವರೆಗೆ ನೆಮ್ಮದಿ ಇರುವುದಿಲ್ಲ. “ಅವಳು ಹೋಗಿ 2 ಗಂಟೆಗಳು ಆಯಿತು, ಇನ್ನೂ ಯಾಕೆ ಬಂದಿಲ್ಲ ಅವ್ಳು?” ಎನ್ನುವ ಯೋಚನೆಯೇ ಅವರ ತಲೆಯನ್ನೆಲ್ಲಾ ಆವರಿಸಿರುತ್ತದೆ. ನೀವು ಯಾವುದಾದರು ಕೆಲಸ ಮಾಡಬೇಕು ಎಂದು ಹೇಳಿದರೆ, ಅವರ ಬಾಯಿಂದ ಬರುವ ಮೊದಲ ಮಾತೆ “ಹುಷಾರಾಗಿರು” ಎಂದು. ನೀವು ಯಾವಾಗಲು ಅವರ ಮನಸ್ಸು ಮತ್ತು ಮೆದುಳನ್ನ ಅವರಿಸಿಕೊಂಡೆ ಇರುತ್ತೀರಾ. ಅವರು ನಿಮ್ಮನ್ನು ಬಿಟ್ಟು ಇರಲಾರರು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇರೆ ಏನು ಬೇಕು?

Leave a Reply

%d bloggers like this: