ನಿಮ್ಮ ಮಗುವಿನ ಡೈಪರ್ ಅನ್ನು ಅಪ್ಪ ಬದಲಿಸುವಾಗ ಏನಾಗುತ್ತದೆ ಎಂದು ಕಣ್ಣಾರೆ ನೋಡಿ!

ತಂದೆ ಮತ್ತು ಮಗುವಿಗಿಂತ ಬೇರೆ ಮೋಜಿನ ಜೋಡಿಯನ್ನು ನೀವು ನೋಡಲು ಕಷ್ಟಸಾಧ್ಯವಾಗಬಹುದು. ಅವರ ಬಾಂಧವ್ಯವನ್ನು ನೋಡಲು ಮುದ್ದಾಗಿ ಕಾಣುವುದು. ತಾಯಿಯಂತೆ ತನ್ನ ಮಗುವನ್ನು ಮೊದಲ ಬಾರಿಗೆ ಎತ್ತಿಕೊಂಡ ಕ್ಷಣ ತಂದೆಯು ಕೂಡ ಭಯದ ಕಾಳಜಿಯ ಪ್ರೀತಿಯ ಅನುಭವವನ್ನು ಅನುಭವಿಸುವರು. ತನ್ನ ಮಗುವನ್ನು ಮೊದಲ ಬಾರಿಗೆ ತನ್ನ ತೋಳುಗಳಲ್ಲಿ ಬಂದಿಸಿಕೊಂಡ ಆ ಕ್ಷಣವನ್ನು ತಂದೆಯು ಕೂಡ ಎಂದು ಮರೆಯುವುದಿಲ್ಲ, ಆ ಕ್ಷಣ ಅವನು ಅನುಭವಿಸಿದ ಭಾವನೆಯನ್ನು ಪದಗಳಿಂದ ಹೇಳಲು ಸಾಧ್ಯವಿಲ್ಲ, ಅದನ್ನು ಅನಿಭವಿಸಿಯೇ ನೋಡಬೇಕು.

ಮಗುವಿನ ಆರೈಕೆಯ ವಿಷಯಕ್ಕೆ ಬಂದರೆ ನಮ್ಮೆಲ್ಲರ ಗಮನಕ್ಕೆ ಮೊದಲು ಬರುವುದು ತಾಯಿ ಮಾತ್ರ. ಮುದ್ದಾದ ಹಸುಗೂಸಿನ ಪಾಲನೆ ಪೋಷಣೆ ವಿಷಯಕ್ಕೆ ಬಂದರೆ ನಮ್ಮ ಚಿತ್ತ ತಾಯಿಯತ್ತ. ಮಗುವನ್ನು ಶುಚಿಗೊಳಿಸುವ ವಿಚಾರಕ್ಕೆ ಬಂದರೆ ಹಲವು ಸಂಗತಿಗಳನ್ನು ನಾವು ತಲೆಯಲ್ಲಿ ಇಟ್ಟುಕೊಳ್ಳಬೇಕು. ಮಗುವನ್ನು ಮತ್ತು ಮಗುವಿನ ಸುತ್ತಮುತ್ತ ಪ್ರದೇಶವನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಅಷ್ಟು ಮುಖ್ಯವಾದ ವಿಚಾರ, ನೈರ್ಮಲ್ಯತೆ ಕಾಪಾಡುವುದು ತುಂಬಾ ಪ್ರಮುಖ ವಿಚಾರ.  ಮಗುವನ್ನು ಅಶುಚಿಯಾಗಿ ಅಥವಾ ಅಶುಚಿಯಾಗಿರುವ ಪ್ರದೇಶದಲ್ಲಿ ಇರಿಸಿರುವುದು ಮಗುವಿನ ಸೂಕ್ಹ್ಮ ತ್ವಚೆ ಬೇಗನೆ ಬ್ಯಾಕ್ಟೀರಿಯಾ, ವೈರಸ್ ನಂತಹ ಕ್ರಿಮಿಗಳ ದಾಳಿಗೆ ಸಿಲುಕಿ ಬೇಗನೆ ರೋಗಕ್ಕೆ ಗುರಿಯಾಗುವುದು.

ಸಾಮಾನ್ಯವಾಗಿ ಮಗುವನ್ನು ಶುಚಿಯಾಗಿರುಸುವುದು ಮತ್ತು ಮಗುವಿಗೆ ಸ್ನಾನ ಮಾಡಿಸುವುದು ಇವುಗಳೆನ್ನಲ್ಲ ತಾಯಿಯು ಅಚ್ಚುಕಟ್ಟಾಗಿ ಮಾಡುತ್ತಾಳೆ. ಆದರೆ ಒಮ್ಮೆ ಯೋಚಿಸಿ ಅದೇ ಕೆಲಸವನ್ನು ತಂದೆ ಮಾಡುವಾಗ ಏನೆಲ್ಲಾ ಆಗಬಹುದು.

ಇದು ನೋಡಲು ತಮಾಷೆ ಆಗಿ ಕಾಣಿಸುವುದು ಅಲ್ಲವೇ, ಅವರ ಡ್ರಾಮಾ ನೋಡಿ ನೀವು ಖುಷಿ ಪಡಿ. ಮಗುವಿನ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವ ತಾಯಿಯಂದಿರಿಗೆ ನಮ್ಮ ನಮನ.

Leave a Reply

%d bloggers like this: