ಎಷ್ಟು ತೂಕದ ಮಗುವಿಗೆ ಎಷ್ಟು ಎದೆಹಾಲು ಉಣಿಸಬೇಕು? ಸಂಪೂರ್ಣ ಮಾಹಿತಿ!

ನಿಮ್ಮ ನವಜಾತ ಶಿಶುವಿಗೆ ಬೇಕಿರುವುದು ನಿಮ್ಮ ಎದೆಹಾಲು ಮಾತ್ರ. ನಿಮ್ಮ ಶಿಶುವಿನ ಸಂಪೂರ್ಣ ಪೋಷಣೆಗಾಗಿ ನೀವು ಶಿಶುವಿಗೆ ಅಗತ್ಯವಿರುವ ಎದೆಹಾಲನ್ನು ನೀಡುತ್ತಿರುವೆವು ಎಂದು ಖಚಿತಪಡಿಸಿಕೊಳ್ಳಿ. ಪ್ರತಿದಿನ ನೀವು ನಿಮ್ಮ ಮಗುವಿನ ಅವಶ್ಯಕ್ಕೆ ಪೂರಕವಾಗಿ ಎದೆಹಾಲನ್ನು ಉಣಿಸಿ. ಆದರೆ ಮಗುವಿಗೆ ಎಷ್ಟು ಹಾಲು ಬೇಕು ಎಂದು ನಮಗೆ ಹೇಗೆ ತಿಳಿಯುತ್ತದೆ? ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ನಿಮ್ಮ ಈ ಪ್ರಶ್ನೆಗೆ ಈ ಲೇಖನವು ಸಹಾಯ ಮಾಡುತ್ತದೆ.

ಅಧ್ಯಯನದ ಪ್ರಕಾರ ಆಗ ತಾನೇ ಜನಿಸಿದ ಶಿಶುವಿಗೆ ಮೊದಲ ದಿನದಲ್ಲಿ ಅಂದರೆ ೨೪ ಗಂಟೆಯಲ್ಲಿ ೮ರಿಂದ ೧೨ ಸಲ ಎದೆಹಾಲನ್ನು ಉಣಿಸಬೇಕು. ಸರಾಸರಿ ದಿನಕ್ಕೆ ಶಿಶುಗಳು ೭೫೦ ಎಂ.ಎಲ್ ನಷ್ಟು ಹಾಲನ್ನು ಕುಡಿಯುತ್ತಾರೆ. ನಿಮ್ಮ ಮಗುವಿಗೆ ದಿನಕ್ಕೆ ೯ ಬಾರಿ ಹಾಲುಣಿಸುವಿರಿ ಎಂದರೆ ಪ್ರತಿ ಸಲ ಎದೆಹಾಲುಣಿಸುವಾಗ ನಿಮ್ಮ ಮಗುವು ೮೪ ಎಂ.ಎಲ್. ನಷ್ಟು  ಹಾಲನ್ನು ಕುಡಿಯುತ್ತದೆ ಎಂದು ತಿಳಿಯಬಹುದು.

ಸ್ವಲ್ಪ ದಿನಗಳ ನಂತರ ಮಗುವು ಹೆಚ್ಚು ಹಾಲನ್ನು ಕುಡಿಯಲು ಪ್ರಾರಂಭಿಸುತ್ತದೆ. ನಂತರ ೬ ತಿಂಗಳವರೆಗೆ ಅಷ್ಟೇ ಹಾಲನ್ನು ಕುಡಿಯಬಹುದು ಅಥವಾ ಸ್ವಲ್ಪ ಹೆಚ್ಚು ಕುಡಿಯಬಹುದು. ಆದರೆ ಪ್ರಮುಖವಾಗಿ ನೀವು ನಿಮ್ಮ ಮಗು ಕುಡಿಯುವ ಹಾಲನ್ನು ಬೇರೆ ಮಗುವು ಕುಡಿಯುವ ಹಾಲಿನ ಪ್ರಮಾಣದಲ್ಲಿ ಹೋಲಿಕೆ ಮಾಡಬೇಡಿ. ನಿಮ್ಮ ಮಗುವು ಆರೋಗ್ಯವಾಗಿ ತನ್ನ ಚಟುವಟಿಕೆಗಳನ್ನು ಮಾಡಿಕೊಂಡು ಖುಷಿಯಾಗಿ ಇದೆ ಎಂದರೆ ತನ್ನ ಅವಶ್ಯಕತೆಗೆ ಬೇಕಾದಷ್ಟು ಹಾಲನ್ನು ಸೇವಿಸುತ್ತಿದೆ ಎಂದರ್ಥ.

ನಿಮ್ಮ ಮಗುವಿನ ತೂಕಕ್ಕೆ ಅನುಗುಣವಾಗಿ ಅವನಿಗೆ/ಅವಳಿಗೆ ಅಗತ್ಯವಿರುವ ಹಾಲು

ಶಿಶುವಿನ ತೂಕ(kg)

ಅಗತ್ಯವಿರುವ ಎದೆಹಾಲು(ml)

2 kg

313 ml

2.5 kg

391 ml

3 kg

469 ml

3.5 kg

548 ml

4 kg

626 ml

4.5 kg

704 ml

5 kg

782 ml

5.5 kg

861 ml

6 kg

939 ml

6.5 kg

1000 ml

ನೆನಪಿರಲಿ ಮೇಲಿನ ಕೋಷ್ಟಕದಲ್ಲಿ ನೀಡಿರುವುದು ಮಗುವಿಗೆ ಅಗತ್ಯವಿರುವ ಕನಿಷ್ಠ ಎದೆಹಾಲಿನ ಪ್ರಮಾಣ ಮಗುವು ಅದಕ್ಕಿಂತ ಹೆಚ್ಚು ಹಾಲನ್ನು ಕುಡಿಯಬಹುದು. ಕೆಲವು ಮಕ್ಕಳು ಕಡಿಮೆ ಹಾಲನ್ನು ಕುಡಿಯಬಹುದು, ನಿಮ್ಮ ಮಗುವಿಗೆ ಅಗತ್ಯವಿರುವಷ್ಟು ಹಾಲನ್ನು ನೀವು ನೀಡುತ್ತಿರುವಿರಿ ಎಂದು ಸರಿಯಾಗಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ. ನಿಮ್ಮ ಮಗುವು ಆರೋಗ್ಯವಾಗಿ ಖುಷಿಯಾಗಿರುವುದು ತುಂಬಾ ಮುಖ್ಯ.

Leave a Reply

%d bloggers like this: