ಒಂದೇ ತಿಂಗಳಲ್ಲಿ ಎರಡು ಬಾರಿ ಋತುಮತಿಯಾಗುವುದು ಸಹಜವೇ?

ಹುಡುಗಿಯು ಪ್ರಾಯಕ್ಕೆ ಅಥವಾ ಪ್ರೌಢಾವಸ್ಥೆಗೆ ಬಂದ ನಂತರ ಋತುಚಕ್ರವನ್ನು ಅನುಭವಿಸುವುದು ಸಾಮಾನ್ಯ, ಇದನ್ನು ಎಲ್ಲಾ ಹುಡುಗಿಯರು ತಮ್ಮ ಪ್ರೌಢಾವಸ್ಥೆಯ ನಂತರ ಅನುಭವಿಸುವರು. ಸಾಮಾನ್ಯವಾಗಿ ಋತುಸ್ರಾವ ಎರಡು ದಿನದಿಂದ ೭ ದಿನಗಳಲ್ಲಿ ಕೊನೆಗೊಳ್ಳುತ್ತದೆ. ಸಹಜವಾಗಿ ಋತುಚಕ್ರವು ಪ್ರತಿ ೨೮ ರಿಂದ ೩೦ ದಿನಗಳ ಅಂತರದಲ್ಲಿ ಸಂಭವಿಸುತ್ತದೆ. ೨೧ ರಿಂದ ೩೫ ದಿನಗಳ ಅಂತರದಲ್ಲಿ ಒಂದು ಬಾರಿ ಋತುಚಕ್ರ ಸಂಭವಿಸಿದರೆ ಅದನ್ನು ಸಾಮಾನ್ಯ ಋತುಚಕ್ರ ಎಂದು ಹೇಳಬಹುದು.

ಅನಿಯಮಿತ ಋತುಚಕ್ರ ಎಂದರೆ ಏನು?

ಋತುಚಕ್ರವನ್ನು ಅನಿಯಮಿತ ಎಂದು ಹೇಳುವುದು, ಯಾವಾಗ ಅದು ಸಾಮಾನ್ಯ ಋತುಚಕ್ರದಿಂದ ವಿಚ್ಚೇದಿಸಲ್ಪಡುತ್ತದೆ ಅಥವಾ ಸಾಮಾನ್ಯ ಋತುಚಕ್ರ ಸಂಭವಿಸದೇ ಇರುವುದನ್ನು ಅನಿಯಮಿತ ಋತುಚಕ್ರ ಎನ್ನಬಹುದು. ಅವುಗಳು,

೧.ಪ್ರತಿ ಎರಡು ವಾರಗಳಿಗೊಮ್ಮೆ ಋತುಚಕ್ರ ಆಗುವುದು

೨.ಋತುಸ್ರಾವ ನಿಲ್ಲಲು ೧೦ದಿನಗಳು ಅಥವಾ ಅದಕ್ಕೂ ಹೆಚ್ಚು ದಿನಗಳನ್ನು ತೆಗೆದುಕೊಂಡರೆ

೩.ಒಂದು ತಿಂಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಋತುಮತಿಯಾದರೆ

೪.ಯಾವುದೇ ನಿರ್ದಿಷ್ಟ ಕಾರಣಗಳು ಇಲ್ಲದಿದ್ದರೂ, ೩೫ ದಿನಗಳು ಕಳೆದರು ಋತುಮತಿ ಆಗದಿರುವುದು

ಒಂದೇ ತಿಂಗಳಲ್ಲಿ ಎರಡು ಬಾರಿ ಋತುಮತಿ ಆಗಲು ಸಾಧ್ಯವೇ?

ಹೌದು. ಮೇಲೆ ಹೇಳಿರುವಂತೆ, ಸಾಮಾನ್ಯವಾಗಿ ಋತುಚಕ್ರವು ೨೪ ರಿಂದ ೩೫ ದಿನಗಳಲ್ಲಿ ಆಗುತ್ತದೆ. ಆದ್ದರಿಂದ ೨೪ ದಿನಗಳಿಗೊಮ್ಮೆ ಋತುಮತಿ ಆಗುವ ಮಹಿಳೆಯು ತಿಂಗಳಲ್ಲಿ ಎರಡು ಬಾರಿ ಋತುಮತಿ ಆಗುವಳು. ಅದು ಅವಳ ಹಿಂದಿನ ಋತುಚಕ್ರ ತಿಂಗಳ ಮೊದಲೆರಡು ದಿನ ಆಗಿದ್ದರೆ. ಹಲವು ಮಹಿಳೆಯರು ವರ್ಷಕ್ಕೆ ೧೩ ಬಾರಿ ಋತುಮತಿ ಆಗುವರು, ಇದರ ಪ್ರಕಾರ ಕನಿಷ್ಠ ಒಂದು ತಿಂಗಳಲ್ಲಿ ಅವಳು ಎರಡು ಬಾರಿ ಋತುಮತಿ ಆಗಿರುವಳು.

ಇದರ ಬಗ್ಗೆ ನೀವು ಯಾವಾಗ ಎಚ್ಚರವಹಿಸಬೇಕು?

೨೪ ದಿನಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಋತುಮತಿಯಾಗುತ್ತಿರುವಿರಿ ಎಂದರೆ, ಎರಡು ವಾರಗಳಿಗೊಮ್ಮೆ ನೀವು ಋತುಚಕ್ರವನ್ನು ಅನುಭವಿಸುತ್ತಿರುವಿರಿ ಎಂದರ್ಥ. ಇಂತಹ ಸಂದರ್ಭಗಳಲ್ಲಿ ನೀವು ಸ್ವಲ್ಪ ಎಚ್ಚರಿಕೆವಹಿಸುವುದು ಉತ್ತಮ. ವೈದ್ಯಕೀಯ ಸಲಹೆ ಅಥವಾ ಸಹಾಯ ಪಡೆಯುವುದು ತುಂಬಾ ಒಳ್ಳೆಯದು, ಏಕೆಂದರೆ ಅಧಿಕ ರಕ್ತಸ್ರಾವ ಆಗುವುದರಿಂದ ರಕ್ತಹೀನತೆ ಕಾಡಬಹುದು. ಇದರ ಜೊತೆಗೆ ನಿಮ್ಮ ದೇಹದಲ್ಲಿ ಕೆಲವು ವೈದ್ಯಕೀಯ ಅಥವಾ ಹಾರ್ಮೋನುಗಳು ಬದಲಾಗುತ್ತಿರಬಹುದು, ಇದು ತಕ್ಷಣದ ವೈದ್ಯಕೀಯ ಚಿಕೆತ್ಸೆಯಿಂದ ಪರಿಹರಿಸಬಹುದು. ಆದ್ದರಿಂದ ಇದನ್ನು ನಿರ್ಲಕ್ಷಿಸದಿರುವುದು ಒಳ್ಳೆಯದು. ನೀವು ನಿರಂತರವಾಗಿ ಎರಡು ತಿಂಗಳು ಎರಡ್ ಎರಡು ಬಾರಿ ಋತುಮತಿ ಆಗಿದ್ದು, ಈ ಸಮಯದಲ್ಲಿ ಹೆಚ್ಚು ರಕ್ತಸ್ರಾವ ಮತ್ತು ನೋವಿನಿಂದ ಕೂಡಿದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಸೆಳೆತ ಮುಂತಾದವುಗಳನ್ನು ಕಂಡರೂ ವೈದ್ಯರ ಬಳಿ ಮುಕ್ತವಾಗಿ ಚರ್ಚಿಸಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಇದರ ಬಗ್ಗೆ ಮಾತನಾಡಲು ಯಾವುದೇ ಮುಜುಗರ ಪಟ್ಟುಕೊಳ್ಳದಿರಿ. ಸರಿಯಾದ ಚಿಕಿತ್ಸೆ ಪಡೆದು ಆರೋಗ್ಯವಾಗಿರಿ.

Leave a Reply

%d bloggers like this: