ನಿಮ್ಮ ಮಗು ಮುಂದೆ ನೋಡಲು ಹೇಗಾಗುತ್ತದೆ ಎಂಬುದನ್ನ ಅವರ ರಾಶಿ ತಿಳಿಸುತ್ತದೆ ಹೀಗೆ!

ಮಗುವು ವರ್ಷದ ಯಾವ ಸಮಯದಲ್ಲಿ ಜನಿಸಿತು ಎಂಬುವುದು ಅವರಲ್ಲಿ ಯಾವ ಅಂಶಗಳು ಇರುತ್ತವೆ ಎಂಬುದರ ಒಂದು ಕಿರುನೋಟ ನೀಡುತ್ತವೆ. ಈ ರಾಶಿ ಭವಿಷ್ಯ ಎಲ್ಲಾ ಯಾವಾಗಲೂ ನಿಖರವಾಗಿ ಇರಬೇಕೆಂದಿಲ್ಲ. ಇದು ಕೆಲವೊಂದು ವಿಷಯಗಳಲ್ಲಿ ಸತ್ಯ ಆಗಬಹುದು, ಮುಖ್ಯವಾಗಿ ಮಕ್ಕಳಲ್ಲಿ. ನಿಮ್ಮ ಮಗುವಿನ ರಾಶಿಯ ಪ್ರಕಾರ ಅವರ ಅತ್ಯುತ್ತಮ ಅಂಶ ಯಾವುದು ಮತ್ತು ಉತ್ತಮವಲ್ಲದ ಅಂಶ ಯಾವುದು ಎಂಬುದು ಇಲ್ಲಿದೆ ಓದಿ :

೧. ಮೇಷ

ಈ ರಾಶಿಯು ಅಗ್ನಿಯ ಸಂಕೇತವಾಗಿದ್ದು, ಈ ರಾಶಿಯವರು ಛಲವಂತರು ಮತ್ತು ತೋಚಿದ್ದು ಮಾಡುವವರು ಆಗಿರುತ್ತಾರೆ. ನಿಮ್ಮ ಮಗುವಿನ ಮುಖದ ಆಕಾರವು, ಮುಖದ ಅಂಚುಗಳು ಅಚ್ಚುಕಟ್ಟಾಗಿ, ಕೆತ್ತಿದಂತೆ ಇರುತ್ತವೆ. ಆದರೆ ನಿಮ್ಮ ಮಗುವಿನ ತುಟಿಗಳು, ಹುಬ್ಬುಗಳು, ಮೂಗು, ಗಲ್ಲ ಎಲ್ಲವು ಅದರ ಪುಟ್ಟ ಮುಖದ ಮೇಲೆ ಬಹಳ ದೊಡ್ಡದಾಗಿ ಕಾಣುತ್ತವೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ, ನಿಮ್ಮ ಮಗು ದೊಡ್ಡದಾಗುತ್ತಾ ಅವುಗಳು ನಿಮ್ಮ ಮಗುವಿನ ಮುಖಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತವೆ.

೨. ವೃಷಭ

ಭೂಮಿಯ ಸಂಕೇತವಾದ ಈ ರಾಶಿಯಲ್ಲಿ ಜನಿಸಿದ ಮಕ್ಕಳು ಆಕರ್ಷಣೀಯವಾದ, ಎಲ್ಲರನ್ನೂ ಮನಸೂರೆಗೊಳಿಸುವ ದೊಡ್ಡ ಕಣ್ಣುಗಳನ್ನು ಹೊಂದಿರುತ್ತಾರೆ. ಆದರೆ ಈ ರಾಶಿಯವರು ದಪ್ಪ, ದೃಢ, ಹಗಲವಾದ ಮೈಕಟ್ಟನ್ನು ಹೊಂದಿದ್ದು, ಇವರಿಗೆ ವಸ್ತ್ರ ಹಾಕಿಸುವುದು ಕಷ್ಟ ಅನಿಸಬಹುದು.

೩. ಮಿಥುನ

ನಿಮ್ಮ ಮಗುವು ದೃಢವಾಗಿ ಮತ್ತು ಎತ್ತರವಾಗಿ ಬೆಳೆಯುತ್ತದೆ. ಮಗು ಗಂಡಿರಲಿ ಅಥವಾ ಹೆಣ್ಣಿರಲಿ, ಒಳ್ಳೆಯ ಎತ್ತರ ಯಾವಾಗಲೂ ಉಪಯುಕ್ತ. ಇದರೊಂದಿಗೆ ನಿಮ್ಮ ಮಗುವಿನಲ್ಲಿ ಕಾಣಬಹುದಾದ ಇನ್ನೊಂದು ವಿಷಯ ಎಂದರೆ ಅದು ಉದ್ದವಾದ, ದೊಡ್ಡ ಹಣೆ.

೪. ಕಟಕ

ನೀರಿನ ಸಂಕೇತವಾದ ಕಟಕ ರಾಶಿಯಲ್ಲಿ ಜನಿಸಿದ ಮಕ್ಕಳಿಗೆ ಬಹಳ ಸುಂದರವಾದ ಎತ್ತರದ ಕೆನ್ನೆಯ ಮೂಳೆಗಳು (ಕಣ್ಣಿನ ಕೆಳಗಿನ ಮೂಳೆಗಳು). ಆದರೆ, ನಿಮ್ಮ ಮಗುವಿನಲ್ಲಿ ಇರುವ ಉತ್ತಮವಲ್ಲದ ವಿಷಯ ಎಂದರೆ ಅದು ನಿಮ್ಮ ಮಗುವು ಕೂದಲು ಸರಾಗವಾಗಿ ಬೆಳೆಯುವಂತಹ ತಲೆಯನ್ನು ಹೊಂದಿರುವುದಿಲ್ಲ. ಹೀಗಾಗಿ ಕೂದಲು ತುಂಬಾ ತೆಳುವಾಗಿ ಇರುತ್ತದೆ.

೫. ಸಿಂಹ

ಅಗ್ನಿಯ ಸಂಕೇತವಾದ ಈ ರಾಶಿಯಲ್ಲಿ ಜನಿಸಿದ ಮಕ್ಕಳಿಗೆ ದಪ್ಪನೆಯ, ಸಧೃಡ, ಹೊಳೆಯುವ ಸುಂದರವಾದ ಕೇಶರಾಶಿ ಸಿಗುತ್ತದೆ. ಆದರೆ ನಿಮ್ಮ ಮಗುವಿನಲ್ಲಿ ಕಾಣಿಸಿಕೊಳ್ಳುವ ಒಂದು ಉತ್ತಮವಲ್ಲದ ವಿಷಯ ಎಂದರೆ ಅದು ಅವರ ದೊಡ್ಡ ಮೂಗು.

೬. ಕನ್ಯಾ

ಕನ್ಯಾ ರಾಶಿಯಲ್ಲಿ ಜನಿಸಿದ ಮಕ್ಕಳು ಸಹಜವಾಗಿ ಬಹಳ ನಿಷ್ಠೆ ಮತ್ತು ಶ್ರಮದಿಂದ ಕೆಲಸ ಮಾಡುವವರಾಗಿರುತ್ತಾರೆ. ಇವರ ಉತ್ತಮವಾದ ಅಂಶ ಎಂದರೆ ಅದು ಇವರು ತಮ್ಮ ಯವ್ವನವನ್ನ ಬೇಗನೆ ಕಳೆದುಕೊಳ್ಳದೆ ಇರುವುದು. ಇವರಿಗೆ ವಯಸ್ಸಾದಂತೆ ಕಾಣುವುದಿಲ್ಲ. ಹೀಗಾಗಿ ಕನ್ಯಾ ರಾಶಿಯ ಮಕ್ಕಳು ತಮ್ಮ ವಯಸ್ಸಿನ ಇತರ ಮಕ್ಕಳಿಗಿಂತ ಚಿಕ್ಕವರಂತೆ ಕಾಣುತ್ತಾರೆ. ಆದರೆ ಉತ್ತಮವಲ್ಲದ ಒಂದು ವಿಷಯ ಎಂದರೆ, ಇವರಲ್ಲಿ ಎದ್ದು ಕಾಣುವಂತಹ ಯಾವ ಲಕ್ಷಣಗಳು ಇರುವುದಿಲ್ಲ.

೭. ತುಲಾ

ತುಲಾ ರಾಶಿಯಲ್ಲಿ ಜನಿಸಿದ ಮಕ್ಕಳ ದಯಾಳುಗಳು, ಸಾಮಾಜಿಕ ಮತ್ತು ರಾಜತಾಂತ್ರಿಕ ಗುಣಗಳು ಉಳ್ಳವರು ಆಗಿರುತ್ತಾರೆ. ಇವರ ಅತ್ಯುತ್ತಮವಾದ ಅಂಶ ಎಂದರೆ ಅದು ಅಚ್ಚುಕಟ್ಟಾದ ಆಕಾರದಲ್ಲಿರುವ ಇವರ ತುಟಿಗಳು. ಇವರಲ್ಲಿ ಕಾಣಿಸುವ ಉತ್ತಮವಲ್ಲದ ಒಂದು ಅಂಶ ಎಂದರೆ ಅದು ಅವರು ಬೆಳೆಯುತ್ತಾ ತಮ್ಮ ತೂಕದ ಮೇಲೆ ಸರಿಯಾಗಿ ನಿಗಾ ಇಡದೆ ಇರುವುದು.

೮. ವೃಶ್ಚಿಕ

ನೀರಿನ ಸಂಕೇತವಾದ ಈ ರಾಶಿಯಲ್ಲಿ ಜನಿಸಿದ ಮಕ್ಕಳಿಗೆ ತೀಕ್ಷ್ಣವಾದ ಕಣ್ಣುಗಳು ಇದ್ದು, ಎಲ್ಲರನ್ನೂ ಇವು ಇವರೆಡೆಗೆ ಸೆಳೆಯುತ್ತವೆ. ಅದು ಕಣ್ಣುಗಳ ಬಣ್ಣ ಅಥವಾ ಆಕಾರದ ಮಾತಲ್ಲ, ಕೇವಲ ಅವರ ದೃಷ್ಟಿಯ ತೀವ್ರತೆ. ಉತ್ತಮವಲ್ಲದ ಒಂದು ವಿಷಯ ಎಂದರೆ ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಪುರುಷ ರೀತಿಯ ಬಲವಾದ, ದೃಢವಾದ ದೇಹ ಮತ್ತು ಮುಖದ ಮೇಲೆ ತೀಕ್ಷ್ಣವಾದ ದವಡೆ ಗೆರೆ ಹೊಂದಿರುತ್ತಾರೆ.

೯. ಧನಸ್ಸು

ಈ ರಾಶಿಯಲ್ಲಿ ಜನಿಸಿದ ಮಕ್ಕಳು ಸಹಜವಾಗಿ ಅವರ ವಯಸ್ಸಿಗೆ ಇರಬೇಕಿರುವುದಕ್ಕಿಂತ ಹೆಚ್ಚಿನ ಎತ್ತರ ಹೊಂದಿರುತ್ತಾರೆ. ಉತ್ತಮವಲ್ಲದ ಒಂದು ವಿಷಯ ಎಂದರೆ ಅದು ಇವರು ಬೆಳೆಯುತ್ತಾ ತಮ್ಮ ಆಹಾರ ಪದ್ದತಿಯ ಬಗ್ಗೆ ಗಮನ ಕೊಡದೆ ಇರುವುದು. ಹೀಗಾಗಿ ಅವರು ಧಡೂತಿ ದೇಹ ಹೊಂದದಂತೆ ನೋಡಿಕೊಳ್ಳಬೇಕು.

೧೦. ಮಕರ

ನಿಮ್ಮ ಮಗುವು ಮಕರ ರಾಶಿಯಲ್ಲಿ ಜನಿಸಿದ್ದು ಗಂಡು ಮಗು ಆಗಿದ್ದರೆ ಅವರು ಮುಂದೆ ಒಳ್ಳೆಯ, ಸದೃಢ ಮೈಕಟ್ಟು ಹೊಂದುತ್ತಾರೆ ಮತ್ತು ಹೆಣ್ಣು ಮಗು ಆಗಿದ್ದರೆ, ಅವರು ಒಳ್ಳೆಯ ಆಕಾರ ಕಾಯ್ದುಕೊಳ್ಳುತ್ತಾರೆ. ಈ ರಾಶಿಯ ಮಕ್ಕಳ ಒಂದು ಉತ್ತಮವಲ್ಲದ ವಿಷಯ ಎಂದರೆ ಇವರಿಗೆ ಒಂದು ತುಂಬಾ ಒಳ್ಳೆಯ ಹಲ್ಲುಗಳು ಇರುತ್ತವೆ ಇಲ್ಲವಾದಲ್ಲಿ ತುಂಬಾ ವಕ್ರವಾದ ಹಲ್ಲುಗಳು ಇರುತ್ತವೆ. ಹೀಗಾಗಿ ನೀವು ಕ್ಲಿಪ್, ಹಲ್ಲು ತೆಗೆಯುವಿಕೆಗೆ ಹಣ ಖರ್ಚು ಮಾಡಬೇಕಾಗಬಹುದು.

೧೧. ಕುಂಭ

ಕುಂಭ ರಾಶಿಯ ಮಕ್ಕಳು ನೈಸರ್ಗಿಕವಾಗಿಯೇ ಕ್ರೀಡಾಪಟುವಿನ ರೀತಿಯ ಅಚ್ಚುಕಟ್ಟಾದ ಮೈಕಟು ಹೊಂದಿರುತ್ತಾರೆ ಮತ್ತು ಉದ್ದನೆಯ ಕಾಲುಗಳನ್ನ ಹೊಂದಿರುತ್ತಾರೆ. ಉತ್ತಮವಲ್ಲದ ಒಂದು ವಿಷಯ ಎಂದರೆ ಅದು ಇವರಿಗೆ ತುಂಬಾ ದಪ್ಪನೆಯ ಕಟ್ಟು ಇದ್ದು, ಇದು ಹುಡುಗಿಯರಲ್ಲಿ ಪುರುಷ ಗುಣದಂತೆ ಕಾಣಿಸುತ್ತದೆ ಮತ್ತು ಹುಡುಗರಲ್ಲಿ ಎದ್ದು ಕಾಣುವಂತದ್ದು ಆಗಿರುತ್ತದೆ.

೧೨. ಮೀನಾ

ನೀರಿನ ಸಂಕೇತವಾದ ಈ ರಾಶಿಯಲ್ಲಿ ಜನಿಸಿದ ಮಕ್ಕಳಿಗೆ ಸಿಕ್ಕಿರುವ ಒಂದು ಉಡುಗೊರೆ ಎಂದರೆ ಅದು ಅವರ ಅದ್ಭುತವಾದ ನಗು. ಅವರ ನಗು ಎಲ್ಲರ ಮನವನ್ನು ಸೋಲಿಸುವುದು. ಉತ್ತಮವಲ್ಲದ ಒಂದು ವಿಷಯ ಎಂದರೆ ಅದು, ನಿಮ್ಮ ಮಗು ಮುದ್ದಾದ, ಎಳೆ ಮುಖದೊಂದಿಗೆ ಜನಿಸಿದರು, ಅವರು ಬೆಳೆಯುತ್ತಾ ಅವರ ವಯಸ್ಸಿನ ಮಕ್ಕಳಿಗಿಂತ ಸ್ವಲ್ಪ ಹೆಚ್ಚಿನ ವಯಸ್ಸಿನವರಂತೆ ಕಾಣುವರು.

Leave a Reply

%d bloggers like this: