ಸ್ವಂತ ಮಗುವನ್ನು ಮುದ್ದಿಸುವ ಬಯಕೆಯನ್ನು ಈಡೇರಿಸಿಕೊಳ್ಳಲು ಇವುಗಳನ್ನು ತ್ಯಜಿಸಿ

ಒಂದು ಮಗುವನ್ನು ಪಡೆಯಲು ತೀವ್ರವಾಗಿ ಪ್ರಯತ್ನಿಸುತ್ತಿದ್ದರೆ, ಕೇವಲ ನಿಮ್ಮ “ಪ್ರಯತ್ನಕ್ಕೂ” ಮೀರಿದ ಕೆಲವು ಕಾರ್ಯಗಳ ಬಗ್ಗೆ ನಿಗಾ ವಹಿಸಬೇಕಾಗುತ್ತದೆ. ಅದರಲ್ಲೂ ನಿಮ್ಮ ಜೀವನಚರ್ಯೆಯ ಕೆಲವು ಬದಲಾವಣೆಯೂ, ನಿಮ್ಮ ಪ್ರಯತ್ನಕ್ಕೂ ಮೀರಿದ ಫಲಿತಾಂಶಗಳನ್ನು ನೀಡುತ್ತದೆ. ಅದೇನೆಂದು ತಿಳಿಯೋಣ ಬನ್ನಿ.

೧.ಕೆಫಿನ್ ನ ಹೆಚ್ಚಾದ ಬಳಕೆ

“ಹೆಚ್ಚಾದ” ಎಂಬ ಶಬ್ದವನ್ನು ನೀವಿಲ್ಲಿ ಗಮನಿಸಬೇಕಾಗುತ್ತದೆ. ಕಾಫಿ ಕುಡಿಯುವ ನಿಮ್ಮ ಅಭ್ಯಾಸವನ್ನು ನಿಲ್ಲಿಸಿದರೆನೇ ಬಹಳ ಒಳ್ಳೆಯದು. ಆದರೆ ಕಾಫಿ ಕುಡಿಯದೇ ದಿನ ಪ್ರಾರಂಭಿಸಲು ಕಷ್ಟವಾಗುವುದಾದರೆ, ನಿಮ್ಮನ್ನು ನಾವೆಂದು ತಡೆಯುವುದಿಲ್ಲ. ಹೆಚ್ಚಾದ ಕಾಫಿಯ ಸೇವನೆಯು ನಿಮ್ಮ ಫಲವತ್ತತೆಯನ್ನು ನಾಶಪಡಿಸುತ್ತದೆ. ಎಂದರೆ, ನಿಮ್ಮ ಕಬ್ಬಿಣ ಸತ್ವವನ್ನು ಹೀರುವಂತಹ ಸಾಮರ್ಥ್ಯವನ್ನು ನಾಶಪಡಿಸಿ ನಿಮ್ಮನ್ನು ನಿರ್ಜಲೀಕರಣಕ್ಕೆ ಗುರಿಪಡಿಸುತ್ತದೆ.

೨.ಮದ್ಯ ಹಾಗೂ ತಂಬಾಕು ಸೇವನೆ

ಮದ್ಯದಾಸರಾದ ಸ್ತ್ರೀಯರು ಗರ್ಭಧರಿಸುವ ವರವನ್ನು ಕಳೆದುಕೊಳ್ಳುತ್ತಾರೆ. ಆದ ಕಾರಣ, ನಿಮ್ಮ ಮದ್ಯಪಾನವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಒಳ್ಳೆಯದು. ಆದರೂ, ನಿಮಗೆ ಮದ್ಯ ಸೇವನೆಯನ್ನು ನಿರಾಕರಿಸಲಾಗದಂತಹ ಸಂದರ್ಭ ಎದುರಾದರೆ ಕೇವಲ ಒಂದು ಅಥವಾ ಎರಡು ಗ್ಲಾಸುಗಳಿಗಷ್ಟೇ ಸೀಮಿತವಾಗಿರಿಸಿ.

ಧೂಮಪಾನ ಮಾಡುವ ಮಹಿಳೆಯರಿಗಿಂತ, ಧೂಮಪಾನ ಮಾಡದ ಮಹಿಳೆಯರು ಬೇಗನೆ ಗರ್ಭ ಧರಿಸುವರೆಂದು ಅಮೆರಿಕನ್ ಸೊಸೈಟಿ ಫಾರ್ ರಿಪ್ರೊಡಕ್ಟಿವ್ ಮೆಡಿಸನ್ ತಿಳಿಯಪಡಿಸಿದೆ. ಧೂಮಪಾನ ಮಾಡುವ ಪುರುಷರ ಬೀಜಗಳು(ಸ್ಪರ್ಮ್) ಕೂಡ ಬಹಳಷ್ಟು ಕಡಿಮೆ ಪ್ರಮಾಣದಲ್ಲಿರುತ್ತದೆ ಎಂದು ತಿಳಿದು ಬಂದಿದೆ. ನಿಮ್ಮ ಸಂಗಾತಿಗೆ ಧೂಮಪಾನದ ಅಭ್ಯಾಸವಿದ್ದರೆ ಬೇಗನೇ ಅದನ್ನು ಬಿಟ್ಟುಬಿಡಲು ಉಪದೇಶಿಸಿ.

೩.ಒತ್ತಡ

“ಇನ್ನೂ ಗರ್ಭಧರಿಸುತ್ತಿಲ್ಲವೇಕೆ ?” ಎಂಬ ಒತ್ತಡಕ್ಕೋ, ಸಂಕಟಕ್ಕೋ ಆಗಾಗ ಒಳಗಾಗುತ್ತಿದ್ದರೆ, ವಿಪರೀತ ಫಲ ಕಾಣುವುದು. ಜೀವನದ ಪರಿಸ್ಥಿತಿಗಳು ಒತ್ತಡವನ್ನು ತಂದೊಡ್ಡುತ್ತಿದ್ದರೆ- ಯೋಗ, ಥೆರಪಿ ಅಥವಾ ಧ್ಯಾನಗಳ ಪ್ರಯೋಜನ ಪಡೆಯಿರಿ. ಇವುಗಳು ನಿಮ್ಮ ಒತ್ತಡವನ್ನು ಕಡಿಮೆಗೊಳಿಸಿ, ನಿಮ್ಮ ಪ್ರತ್ಯುತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲೂ ಪೂರಕವಾಗಿ ಕೆಲಸ ಮಾಡುತ್ತದೆ.

೪.ಕೆಲವು ಆಹಾರ ಪದಾರ್ಥಗಳು

ಮರ್ಕ್ಯುರಿ ಹೆಚ್ಚಾಗಿರುವಂತಹ ಹಾಳಾದ ಮೀನುಗಳನ್ನು ಬಳಸದಿರುವುದೇ ಒಳ್ಳೆಯದು. ನಿಮ್ಮ ಶರೀರದಲ್ಲಿ ಹೆಚ್ಚಾಗಿ ಮರ್ಕ್ಯುರಿಯು ಸೇರ್ಪಡೆಯಾದರೆ, ಫೀಟಸ್ ನರ್ವಸ್ ಸಿಸ್ಟಮ್ಸ್ ಅನ್ನು ನಾಶಗೊಳಿಸುವುದು. ಪ್ರತ್ಯುತ್ಪಾದನೆಯ ಪ್ರವಾಹಕ್ಕೆ ಅಡ್ಡಿಪಡಿಸುವಂತಹ ಟ್ರಾನ್ಸ್ ಫ್ಯಾಟ್ ಅನ್ನು ಒಳಗೊಂಡಂತಹ ಪಾಪ್ಕಾನ್ ಮತ್ತು ಕರಿದ ಆಹಾರ ವಸ್ತುಗಳನ್ನು ಬಳಕೆ ಮಾಡದಿರುವುದು ಒಳ್ಳೆಯದು.

೫.ಲುಬ್ರಿಕೇಶನ್ ಗಳ ಬಳಕೆ

ಈ ವಿಷಯದ ಬಗ್ಗೆ ವಿಮರ್ಶಾತ್ಮಕವಾಗಿ ಚರ್ಚೆ ಇನ್ನೂ ನಡೆಯುತ್ತಿದೆ.

ಯೋನಿಗೆ ಸವರುವಂತಹ ಲ್ಯೂಬ್ರಿಕ್ಯಾಂಟ್ ಗಳು ಮೊಟ್ಟೆಗೆ (ಎಗ್ಗಿಗೆ) ಪ್ರವೇಶಿಸುವ ಬೀಜವನ್ನು ನಾಶಗೊಳಿಸುತ್ತದೆಯೆಂದೂ, ತನ್ಮೂಲಕ ಗರ್ಭಧಾರಣೆ ಸಾಧ್ಯವಿಲ್ಲವೆಂದೂ ಕೆಲವರ ಅಂಬೋಣ.ಕೆರ್ವಿಕಲ್ ಮ್ಯುಕಸ್ಸುಗಳ pH ಲೆವೆಲ್ ಗಳು ಬಳಸಿದ ಲ್ಯೂಬ್ರಿ ಕ್ಯಾಂಟ್ ಗಳ pHಗಳೊಂದಿಗೆ ಕಲಸುಮೇಲೋಗರವಾಗುವ ಕಾರಣ ಸಂಯೋಗಗೊಳ್ಳದೆ ಫೆರ್ಟಿಲೈಸೇಶನ್ ನಡೆಯದೇ ಹೋಗಬಹುದು.ಲುಬ್ರಿಕೆಂಟ್ಗಳ ದಪ್ಪ ಅಥವಾ ಸಾಂದ್ರತೆಯು ಬೀಜವನ್ನು(ಸ್ಪರ್ಮ್)ಒಳಗೆ ಪ್ರವೇಶಿಸದಂತೆ ತಡೆಯೊಡ್ಡಬಹುದು. ಆದ ಕಾರಣ ಕೃತಕ ಲೂಬ್ರಿಕೆಂಟ್ ಗಳಿಗೆ ಶರಣಾಗುವ ಮುನ್ನ ಪ್ರಣಯ ಕೇಳಿಯಲ್ಲಿ ತೊಡಗುವುದು ಒಳ್ಳೆಯದು.

Leave a Reply

%d bloggers like this: