ಈ 6 ಪ್ರಶ್ನೆಗಳನ್ನ ಪ್ರತಿಯೋರ್ವ ಗರ್ಭಿಣಿಯೂ ವೈದ್ಯರಲ್ಲಿ ಕೇಳಲೇಬೇಕು

ನಿಮಗಿದು ಮೊದಲ ಪ್ರಸವವಾಗಿರಬಹುದು ಅಥವಾ ನೀವು ಅನುಭವಸ್ಥರಾಗಿರಬಹುದು. ಆದರೂ ಪ್ರತಿಯೊಂದು ಪ್ರಸವ ವಿಭಿನ್ನ ಹಾಗೂ ವ್ಯತ್ಯಸ್ತ. ಯಾವುದೇ ಮಾಸ ಪತ್ರಿಕೆಗಳನ್ನು ಕೊಂಡು ಓದುವುದರೊಂದಲೋ, ಗೆಳತಿಯರ ಅಥವಾ ಅನುಭವಸ್ಥರ ಸಲಹೆಗಳೂ ತಜ್ಞರ ಉಪದೇಶಕ್ಕೆ ಸಮವಾಗಲಾರದು.

ನಿಮ್ಮ ಪ್ರಸೂತಿ ತಜ್ಞರಲ್ಲಿ ಕೇಳಿ ತಿಳಿದುಕೊಳ್ಳಲೇಬೇಕಾದ ಆರು ಪ್ರಶ್ನೆಗಳು.

೧.ನಾನು ಯಾವ ರೀತಿಯ ವ್ಯಾಯಾಮಗಳನ್ನು ಮಾಡಬೇಕು ?

ಗರ್ಭಿಣಿಯು ಆರೋಗ್ಯವಾಗಿರಬೇಕಾದದ್ದು ಭ್ರೂಣದ ಬೆಳವಣಿಗೆಗೆ ಅತ್ಯಗತ್ಯ. ಗರ್ಭಿಣಿಯರ ಮಾನಸಿಕ ಹಾಗೂ ಶಾರೀರಿಕ ಆರೋಗ್ಯಕ್ಕಾಗಿ ಯೋಗ, ಈಜು ಹಾಗೂ ಪ್ರಸವ ಪೂರ್ವ ವ್ಯಾಯಾಮಗಳನ್ನು ಶಿಫಾರಸು ಮಾಡಲಾಗಿದೆ. ಹಾಗೆಂದ ಮಾತ್ರಕ್ಕೆ ಯಾವುದೂ ಅತಿಯಾಗಬಾರದು. ವ್ಯಾಯಾಮವು ಆರೋಗ್ಯವನ್ನು ಕಾಪಾಡುವುದಲ್ಲದೆ, ಗರ್ಭಿಣಿಯರಲ್ಲಿ ಕಂಡು ಬರುವ ಕೈಕಾಲುಗಳ ಸೆಳೆತವನ್ನು ಕಡಿಮೆಗೊಳಿಸುತ್ತದೆ. ಆದರೆ ಯಾವುದೇ ರೀತಿಯ ವ್ಯಾಯಾಮದಲ್ಲೂ ತೊಡಗಿಸಿಕೊಳ್ಳುವುದಕ್ಕೆ ಮುನ್ನ ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ

೨.ನಾನು ವರ್ಜಿಸಬೇಕಾದ ಆಹಾರಗಳು ಯಾವುವು ?

ಗರ್ಭಾವಸ್ಥೆಯಲ್ಲಿ ಸ್ವಲ್ಪ ಎಚ್ಚರಿಕೆಯಿಂದಿರುವುದು ಒಳಿತು. ಯಾವುದೇ ಆಹಾರಾಭ್ಯಾಸಗಳೂ ಕೆಟ್ಟದ್ದಲ್ಲ. ಆದರೂ ಕಾರಣಾಂತರಗಳಿಂದ ಕೆಲವು ಆಹಾರಗಳನ್ನು ವ್ಯರ್ಜಿಸಲು ವೈದ್ಯರು ಸಲಹೆ ನೀಡುವರು.ಸಾಮಾನ್ಯವಾಗಿ ಸರಿಯಾಗಿ ಬೇಯಿಸದ ಮಾಂಸಾಹಾರಗಳು, ಜಂಕ್ ಫುಡ್, ಬೇಯಿಸದ ಮೀನು ಹಾಗೂ ಮೊಟ್ಟೆಗಳನ್ನು ಗರ್ಭಿಣಿಯರು ಸೇವಿಸದಿರುವುದು ಉತ್ತಮ. ಗೆಸ್ಟೇಷನಲ್ ಡಯಾಬಿಟಿಸ್ ನಿಂದ ಬಳಲುತ್ತಿದ್ದರೆ, ಆಹಾರದ ಬಗ್ಗೆ ಇನ್ನು ಹೆಚ್ಚಿನ ನಿಗಾ ವಹಿಸಿ ಸಕ್ಕರೆಯ ಮಟ್ಟವನ್ನು ಕಾಯ್ದುಕೊಳ್ಳುವುದು ಒಳ್ಳೆಯದು.

೩.ಶಾರೀರಿಕ ಸಂಬಂಧ ಸಾಧ್ಯವೇ ?

ಈ ಪ್ರಶ್ನೆಯನ್ನಂತೂ ಖಂಡಿತವಾಗಿಯೂ ಕೇಳಲೇಬೇಕು. ಗರ್ಭ ಕಾಲದಲ್ಲಿನ ಸಂಭೋಗ ಪೂರ್ಣ ಪ್ರಮಾಣದಲ್ಲಿ ಸುರಕ್ಷಿತವಾದದ್ದು ಹಾಗೂ ಸ್ವಾಭಾವಿಕ. ನಂತರದ ಮೂರು ತಿಂಗಳುಗಳಲ್ಲಿ ಹಾರ್ಮೋನ್ಗಳ ಸ್ರವಿಕೆಯಿಂದಾಗಿ ಸಂಭೋಗಿಸಲು ಮನಸ್ಸು ಹಾತೊರೆಯುವುದು. ಆದರೆ ಕೆಲವೊಂದು ಸನ್ನಿವೇಶಗಳಲ್ಲಿ ಪ್ರಸವ ಕಾಲದ ಸಂಭೋಗದಿಂದ ಪೂರ್ವ ಪ್ರಸವ ಅಥವಾ ಅಬಾರ್ಶನ್ ಆದ ದಾಖಲೆಯೂ ಇದೆ. ( ಆದರೆ ಇದಂತೂ ಅತ್ಯಪೂರ್ವವಾದದ್ದು) ಆದ ಕಾರಣ ಯಾವುದೇ ನಾಚಿಕೆ ಸಂಕೋಚಕ್ಕೊಳಪಡೆದೇ, ವಿವರವಾಗಿ ಗರ್ಭಕಾಲದ ಸಂಭೋಗಿಸುವ ರೀತಿಗಳನ್ನು ಕೇಳಿ ತಿಳಿದುಕೊಳ್ಳಿರಿ.

೪.ಗರ್ಭ ಕಾಲದಲ್ಲಿ ಚುಚ್ಚುಮದ್ದಿನ ಅಗತ್ಯವಿದೆಯೇ ?

ಗರ್ಭಿಣಿಯರಿಗಾಗಿ ಮಾತ್ರ ಸೀಮಿತವಾಗಿರುವ ಎರಡು ಚುಚ್ಚುಮದ್ದುಗಳಿವೆ. ಮೊದಲ ಅಥವಾ ಎರಡನೇ ತಿಂಗಳುಗಳಲ್ಲಿ ನೀಡಲಾಗುವ ಫ್ಲೂ ವಾಕ್ಸಿನ್ ಅಥವಾ ಇನ್ಫ್ಲುಯೆನ್ಜಾ. ಮತ್ತು ಎರಡನೇ ತ್ರೈಮಾಸಿಕದಲ್ಲಿ ನೀಡಲಾಗುವ Tdap ಚುಚ್ಚುಮದ್ದು.ಇದನ್ನು ವೂಫಿಂಗ್ ಕಫ್ ಗೆ ಎದುರಾಗಿ ಹೋರಾಡಲು ನೀಡಲಾಗುತ್ತದೆ. ವೈದ್ಯರು ಯಾವೆಲ್ಲಾ ಚುಚ್ಚುಮದ್ದುಗಳನ್ನು ಗರ್ಭ ಕಾಲದಲ್ಲಿ ನೀಡಬೇಕೆಂದು ಸವಿವರವಾಗಿ ತಿಳಿಸುವರು.

೫.ಹೆರಿಗೆ ನೋವನ್ನು ತಡೆದುಕೊಳ್ಳಲಿರುವ ವಿಧಾನಗಳು

ಹೆರಿಗೆ ನೋವಿನಷ್ಟು ಬೇರೆ ಯಾವುದೇ ಬೇನೆ ಈ ಲೋಕದಲ್ಲಿಲ್ಲ. ಆದರೆ ಹೆರಿಗೆ ನೋವನ್ನು ನಿಭಾಯಿಸಲಿರುವ ಕೆಲವು ವಿಧಾನಗಳ ಬಗ್ಗೆ ತಿಳಿದುಕೊಳ್ಳುವುದು ಇಂತಹ ಮಹತ್ತರ ಗಳಿಗೆಗಳಲ್ಲಿ ವರದಾನವಾಗುತ್ತದೆ. ಸೊಂಟದ ಭಾಗಕ್ಕೆ ಎಪಿಡೇರಿಯೆಲ್ ಅರಿವಳಿಕೆಯನ್ನು ನೀಡಿ ನೋವನ್ನು ಗ್ರಹಿಸದಂತೆ ಮಾಡುವ ವಿಧಾನಗಳು ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆಯೇ ಎಂದು ತಿಳಿದುಕೊಳ್ಳಬೇಕು. ಪ್ರತಿಯೊಂದು ಆಸ್ಪತ್ರೆಗಳಲ್ಲೂ ನೋವನ್ನು ಶಮನಗೊಳಿಸುವ ವಿಧಾನಗಳು ಬೇರೆ ಬೇರೆಯಾಗಿರುವುದರಿಂದ ನೀವು ಯಾವ ರೀತಿಯ ಚಿಕಿತ್ಸೆಗೊಳಗಾಗಿರುವಿರೆಂದು ಅರಿತುಕೊಂಡಿರಬೇಕು. ಮಾತ್ರವಲ್ಲದೆ, ಪ್ರಸವ ಸಮಯದಲ್ಲಿ ನಿಮ್ಮ ಸನಿಹದಲ್ಲಿರುವವರು ಯಾರು ಹಾಗೂ ನಿಮ್ಮ ಭ್ರೂಣವನ್ನು ಹೊರಗೆ ತೆಗೆಯುವವರು ಯಾರು? ನಿಮಗೂ ನಿಮ್ಮ ಮಗುವಿಗೂ ಯಾವ ಸುರಕ್ಷಾ ಕ್ರಮಗಳನ್ನು ನೀಡಲಾಗುವುದು ಎಂದು ತಿಳಿದುಕೊಳ್ಳಬಹುದು.

೬.ನನಗೆ ಸಿಸೇರಿಯನ್ ಆಗುವ ಸಾಧ್ಯತೆ ಇದೆಯೇ?

ಸಿಸೇರಿಯನ್ ಎನ್ನುವುದು ಸರಳವಾದ ಒಂದು ಆಪರೇಷನ್. ಆದರೂ ಇದರಿಂದ ಉಂಟಾಗುವ ಪರಿಣಾಮಗಳು ಮಾತ್ರ ಅತ್ಯಂತ ಸಂಕೀರ್ಣವಾದದ್ದು. ಆದ ಕಾರಣ ಗರ್ಭಿಣಿಯರು ಸಿಸೇರಿಯನ್ ಅನ್ನು ದೂರವಿರಿಸುವಂತೆ, ಯಾವೆಲ್ಲ ಮಾರ್ಗಗಳನ್ನು ಸ್ವೀಕರಿಸಬಹುದೋ, ಅವುಗಳನ್ನೆಲ್ಲ ಪಾಲಿಸುವುದು ಒಳ್ಳೆಯದು.

ನಿಮ್ಮ ಸಿಸೇರಿಯನ್ ಸಾಧ್ಯತೆ ಎಷ್ಟು ಪ್ರಮಾಣದಲ್ಲಿದೆ ಎಂದು ತಜ್ಞರಲ್ಲಿ ಕೇಳಿ ತಿಳಿದುಕೊಳ್ಳಬಹುದು.

ಗ್ಯಾಸ್ಟೇಷನಲ್ ಡಯಾಬಿಟಿಸ್, ಅತಿ ತೂಕ ಅಥವಾ ಮೂವತ್ತುಕ್ಕೂ ಮೀರಿದ ವಯಸ್ಸಾಗಿದ್ದರೆ ಕೆಲವೊಮ್ಮೆ ಸಿಸೇರಿಯನ್ ಬೇಕಾಗಬಹುದು.

Leave a Reply

%d bloggers like this: