ಎರಡನೇ ಹೆರಿಗೆಯಲ್ಲಿ ತಡೆಯಬಹುದಾದ ಎಡವಟ್ಟುಗಳು

ಎಷ್ಟೇ ತೊಂದರೆಗಳನ್ನು ಅನುಭವಿಸಿದರೂ ಮಕ್ಕಳಿಂದ ಲಭಿಸುವ ಸಂತೋಷಕ್ಕಂತೂ ಮಿತಿಯಿರದು. ಎರಡನೇ ಮಗುವನ್ನು ಬಯಸಲು ಕೆಲವೊಮ್ಮೆ ಇದೂ ಒಂದು ಕಾರಣವಾಗಿರಬಹುದು. ಮೊದಲ ಗರ್ಭಧಾರಣೆಯ ಸಮಯದಲ್ಲಿ ಅನುಭವಿಸಿದ ಅದೇ ಅನುಭವಗಳನ್ನು ಮೆಲುಕು ಹಾಕುವಿಕೆ, ಈ ಸಮಯದಲ್ಲಿ ನಡೆಯುತ್ತದೆ.ಮಗುವಿಗೆ ಜನ್ಮ ನೀಡುವ ಮೊದಲು ನೀವಿಬ್ಬರೂ ಆ ಅತಿಥಿಯ ಆಗಮನಕ್ಕೆ ತಯಾರಾಗಿದ್ದೀರೇ ಎಂದು ತಿಳಿದುಕೊಳ್ಳಬೇಕು. ಅದಕ್ಕೂ ಮುನ್ನ ಆ ಮಗುವಿಗೆ ಅನುಯೊಜ್ಯವಾದ ವಾತಾವರಣ ನಿರ್ಮಾಣವಾಗಬೇಕು. ಎಲ್ಲದಕ್ಕಿಂತಲೂ ಹೆಚ್ಚಾಗಿ ನಿಮ್ಮ ಮಗುವು ತನ್ನ ತನ್ನ ತಂದೆ ತಾಯಂದಿರ ಮಮತೆಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆಯೇ ಎಂದೂ ಅರಿಯಬೇಕು.

ಎರಡನೇ ಪ್ರಸವ ಕಾಲದಲ್ಲಿ ತಾಯಿಯಂದಿರು ಮಾಡುವ ಎಡವಟ್ಟುಗಳು, ಹಾಗೂ ಅವುಗಳಿಂದ ಪಾರಾಗುವ ವಿಧಾನಗಳ ಬಗ್ಗೆ ಚರ್ಚಿಸೋಣ ಬನ್ನಿ.

ಮೊದಲ ಮಗುವಿಗೆ ಪ್ರವಾಹದೊಂದಿಗೆ ಈಜುವಂತಹ ತಯಾರಿ ನೀಡದಿರುವುದು

ಮಗುವಿಗೆ ನಿಮ್ಮ ಉದರದೊಳಗಿರುವ ಪುಟ್ಟ ಕಂದನ ಬಗೆಗಿನ ಸಂಪೂರ್ಣ ಮಾಹಿತಿ ತಿಳಿಸಿ ತಾನು ಹೊರ ಪ್ರಪಂಚವನ್ನು ಕಂಡಂತೆಯೇ ಭ್ರೂಣವೂ ಬೆಳೆದು ದೊಡ್ಡದಾಗುವುದೆಂದು ತಿಳಿ ಹೇಳಿ. ತಿಂಗಳ ತಪಾಸಣೆಯ ವೇಳೆ ಜೊತೆಯಲ್ಲಿ ಹಿರಿಯಣ್ಣನನ್ನೂ ಕರೆದೊಯ್ಯಿರಿ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಅನ್ನು ತೋರಿಸಿರಿ.ಉದರದೊಳಗಿನ ಮಗುವಿನ ಎದೆಬಡಿತವನ್ನು ಕೇಳಿಸಿರಿ. ಇದರಿಂದ ತನ್ನ ಸಹೋದರರೊಂದಿಗೆ ಸೌಹಾರ್ದ ಬೆಳೆಸಬಹುದು. ಜನಿಸಲಿರುವ ಮಗುವಿಗೆ ಹೆಸರಿಡುವುದರ ಆಯ್ಕೆ, ಶಾಪಿಂಗ್ ಹಾಗೂ ಮಗುವಿಗೆ ಕರೆಯುವ ಹೆಸರು ಇವೇ ಮೊದಲಾದ ವಿಷಯಗಳನ್ನು ಚರ್ಚಿಸುವುದರಿಂದ “ತಾನು ಅಂಗೀಕರಿಸಲ್ಪಡುತ್ತಿದ್ದೇನೆ” ಎಂಬ ಭಾವನೆ ಹಾಗೂ ಜನಿಸಲಿರುವ ಮಗುವಿನೊಂದಿಗೆ ಮಮತೆಯ ಬಾಂಧವ್ಯವನ್ನೂ ಬೆಳೆಸಬಹುದು.

ಅಗತ್ಯವಾದ ಗಮನ ನೀಡದಿರುವಿಕೆ

ಮೊದಲ ಮಗುವನ್ನು ಬೆಳೆಸಿದ ಅನುಭವವು ಎರಡನೇ ಮಗುವನ್ನು ಪರಿಪಾಲಿಸಲು ಸಹಾಯವಾಗಬಹುದು ಎಂದು ನೀವು ತಿಳಿದುಕೊಂಡಿರಬಹುದು.ಆದರೆ ಇದು ಕೇವಲ ಅರ್ಧ ಸತ್ಯ ನಿಮಗೆ ಅನುಭವವಿಲ್ಲದ ಕೆಲವೊಂದು ಸಂದರ್ಭಗಳನ್ನು ಹೇಗೆ ನಿಭಾಯಿಸು ವುದೆಂದು ನಿಮಗೆ ತಿಳಿದಿದೆಯೇ..? ಎರಡನೇ ಮಗುವಿನ ಲಾಲನೆ, ಪಾಲನೆ,ತಿಂಡಿ ತೀರ್ಥ ಮಾತ್ರವಲ್ಲ ಮೊದಲ ಮಗುವಿನ ಬಗ್ಗೆಯೂ ಅದೇ ಆಸ್ಥೆಯಿರಬೇಕು. ತನ್ನೊಂದಿಗೆ ಮೊದಲಿನಂತೆ ತಂದೆತಾಯಿಗಳು ಬೆರೆಯುತ್ತಿಲ್ಲವೆಂಬ ಭಾವನೆ ಬೆಳೆಯುವಂತಾಗಬಾರದು. ನಿಮ್ಮ ಸಂಗಾತಿಯೊಂದಿಗಿನ ಸಹಕಾರದಿಂದ ಯಾವುದೇ ರೀತಿಯ ಮನೋವೇದನೆ ಮಗುವಿಗೆ ನೀಡದಂತೆ ನೀವಿಬ್ಬರೂ ಜತೆಯಾಗಿ ಮಗುವನ್ನು ಬೆಳೆಸಬಹುದು.

ಪೂರ್ಣ ಪ್ರಮಾಣದಲ್ಲಿ ತಯಾರಾಗಿದ್ದರೆ ಮಾತ್ರ ಉದ್ಯೋಗವನ್ನು ಮುಂದುವರಿಸಿ

ಮೆಟರ್ನಿಟಿ ಲೀವ್ ಗೆ ಅಪೇಕ್ಷಿಸಿದಾಗ ಎರಡು ಮೂರು ತಿಂಗಳುಗಳಲ್ಲೇ ಪುನಃ ಕೆಲಸಕ್ಕೆ ಹಾಜರಾಗಬಹುದೆಂಬ ಭಾವನೆ ನಿಮ್ಮ ಇದ್ದಿರಬಹುದು. ಮೊದಲ ಪ್ರಸವದ ವೇಳೆಯಲ್ಲಿ ಅದು ಸಾಕಾಗಿರಲೂ ಬಹುದು.ಆದರೆ ಎರಡನೇ ಮಗುವಿನ ವಿಷಯಕ್ಕೆ ಬಂದಾಗ, ನೀವು ಕಾಲ ಹೇಗೆ ಸರಿಯಿತೆಂದು ಅಂದಾಜಿಸುವುದಕ್ಕಿಂತ ಮುನ್ನವೇ ಸಮಯವೂ ಸರಿದು ಹೋಗಿರುತ್ತದೆ. ಮನೆಯನ್ನು ಒಪ್ಪ ಓರಣವಾಗಿರಿಸುವಿಕೆ, ಶಾಪಿಂಗ್, ಮಕ್ಕಳ ತಿಂಡಿ ತಿನಸುಗಳ ಜಂಜಾಟದಲ್ಲಿ ಈ ಅವಧಿಯು ಬಹಳ ಕಡಿಮೆ ಎನಿಸುವುದು. ತನ್ನ ಕಿರಿಯ ಸಹೋದರಿಗೆ ಬಾಟಲೀ ಹಾಲನ್ನು ಕುಡಿಸುವುದು ಹೇಗೆ ? ಇವೇ ಮುಂತಾದ ಚಿಕ್ಕ ಚಿಕ್ಕ ಕಾರ್ಯಗಳನ್ನು ತಿಳಿಸಿ ಹೇಳಿದರೆ, ನೀವು ನಿಮ್ಮ ಕೆಲಸಗಳಲ್ಲಿ ಸ್ವಲ್ಪ ನಿರಾತಂಕವಾಗಿರಬಹುದು. 

ಬಟ್ಟೆ ಬರೆಗಳನ್ನು ಜಾಣತನದಿಂದ ಆಯ್ದುಕೊಳ್ಳಿ

ಮೊದಲ ಪ್ರಸವದ ಸಮಯದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಸಾಮಾನುಗಳನ್ನು ಮನೆಯಲ್ಲಿ ತಂದು ಗುಡ್ಡೆ ಹಾಕಿರಬಹುದು. ಆದರೆ ಈ ಬಾರಿ ಅಗತ್ಯದ ವಸ್ತುಗಳನ್ನು ಪಟ್ಟಿ ಮಾಡಿ, ಅವುಗಳನ್ನು ಮಾತ್ರ ಖರೀದಿಸಿ. ಈ ಬಾರಿ ಮಗುವಿಗಾಗಿ ಬಟ್ಟೆ ಬರೆಗಳನ್ನು ಖರೀದಿಸುವುದಕ್ಕಿಂತ,ಅವರ ಹಿರಿ ಅಣ್ಣನ /ಅಕ್ಕನ ಉಡುಪುಗಳನ್ನೇ ತೊಡಿಸಬಹುದು. ಅತ್ಯಗತ್ಯವಾದ ಡಯಾಪರ್ ಮತ್ತು ಮಗುವಿನ ಸಾಬೂನುಗಳನ್ನು ಖರೀದಿಸುವಾಗ, ನಿಮ್ಮ ಮನೆಯಲ್ಲಿ ‘ಎಷ್ಟು ಸಾಬೂನುಗಳಿವೆ’?’ ಎಂದೂ ಅಂದಾಜಿಸ ಬೇಕಾಗುವುದು. ಮೊದಲ ಮಗುವಿಗಾಗಿ, ಉಭಯ ಲಿಂಗಿಗಳು ಧರಿಸಬಹುದಾದ ಬಟ್ಟೆಗಳನ್ನು ಖರೀದಿಸುವುದರಿಂದ, ಅದನ್ನು ಎರಡನೇ ಮಗುವಿಗೆ ಕೂಡ ಬಳಸಬಹುದು.

ಸಾಕಷ್ಟು ಸಹಾಯ ಹಸ್ತಗಳಿವೆಯೇ ?

ಮನೆಯಲ್ಲಿ ಇಬ್ಬರು ಪುಟ್ಟ ಮಕ್ಕಳಿದ್ದಾರೆಂದ ಮೇಲೆ ಕೆಲಸಕ್ಕೇನು ಬರವೇ…? ಅಡುಗೆ ಮನೆಯ ಉಸ್ತುವಾರಿಗಳ ನಡುವೆ ಮಕ್ಕಳನ್ನೂ ಸಂಭಾಳಿಸಲು ನಿಮ್ಮೊಬ್ಬರಿಂದಲೇ ಸಾಧ್ಯವಾಗುತ್ತಿಲ್ಲವೆಂದೆನಿಸಿದರೆ, ಯಾವುದೇ ಹಿಂಜರಿಕೆ ಇಲ್ಲದೆ ಮನೆಯವರ ನೆರವು ಕೋರಬಹುದು. ಇಲ್ಲವಾದರೆ,ಮನೆಗೆಲಸಕ್ಕಾಗಿ ಯಾರನ್ನಾದರೂ ಇರಿಸಿಕೊಳ್ಳಬಹುದು. ನೀವು ಅಥವಾ ನಿಮ್ಮ ಪತಿಯು ನಿಮ್ಮ ಬಹುತೇಕ ಸಮಯವನ್ನು ಮಗುವಿಗಾಗಿ ಮೀಸಲಾಗಿಡಬೇಕು.

ನಿಮ್ಮಿಂದ ತೀರಾ ಅಸಾಧ್ಯವೆನ್ನುವಂತಹ ಸಂದರ್ಭಗಳಲ್ಲಿ ಮಾತ್ರ, ಮತ್ತೊಬ್ಬರಲ್ಲಿ ನಿಮ್ಮ ಮಗುವನ್ನು ನೋಡಿಕೊಳ್ಳಲು ಹೇಳಬಹುದು.

Leave a Reply

%d bloggers like this: