ಗರ್ಭಧಾರಣೆಯ ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡುವುದು ಹೇಗೆ : ವೈದ್ಯರ ವೈಜ್ಞಾನಿಕ ಸಲಹೆಗಳು

ನಾನು ಗರ್ಭಿಣಿ ಆಗಿದ್ದೇನೆ ಎಂದು ತಿಳಿದೊಡನೆ ನನ್ನ ಸಂತಸ ಮುಗಿಲು ಮುಟ್ಟಿತು. ಆದರೆ, ನನಗೆ ನನ್ನ ದೇಹದ ಬಗ್ಗೆ ಕೆಲವು ಆತಂಕಗಳು ಕೂಡ ಹುಟ್ಟಿಕೊಂಡವು. ಅವುಗಳಲ್ಲಿ ಮುಖ್ಯವಾದದ್ದು : ಸ್ಟ್ರೆಚ್ ಮಾರ್ಕ್ಸ್.

ಡಾ ।। ಅಲಿಸ್ಸಾ ಪದ್ಮನಾಭನ್ ಪ್ರಕಾರ 90% ಹೆಂಗಸರಲ್ಲಿ ಗರ್ಭಧಾರಣೆ ವೇಳೆ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತವೆ. ಕೆಲವು ಹೆಂಗಸರಲ್ಲಿ ಕೇವಲ ಹೊಟ್ಟೆಯ ಕೆಳಭಾಗದಲ್ಲಿ ಈ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಂಡರೆ, ಇನ್ನೂ ಕೆಲವು ಹೆಂಗಸರಲ್ಲಿ ಒಂಬತ್ತು ತಿಂಗಳು ತುಂಬುವಷ್ಟರಲ್ಲಿ ಹೊಟ್ಟೆಯ ಎಲ್ಲಾ ಭಾಗಗಳಲ್ಲೂ ಈ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತವೆ ಎಂದು ಹೇಳುತ್ತಾರೆ ಅಲಿಸ್ಸಾ.

ಸ್ಟ್ರೆಚ್ ಮಾರ್ಕ್ಸ್ ಉಂಟಾಗಲು ಕಾರಣಗಳು :

ಶರವೇಗದ ತೂಕ ಹೆಚ್ಚಳ

ತುಂಬಾ ಕಡಿಮೆ ಸಮಯದಲ್ಲಿ ಬಹಳಷ್ಟು ತೂಕ ಹೆಚ್ಚಿಸಿಕೊಳ್ಳುವುದೇ ಸ್ಟ್ರೆಚ್ ಮಾರ್ಕುಗಳಿಗೆ ನೇರ ಕಾರಣ. ಇದಕ್ಕಿರುವ ಒಂದು ವಿವರಣೆ ಎಂದರೆ ಅದು ಚರ್ಮವು ಸ್ವಲ್ಪ ಸಮಯದಲ್ಲೇ ಬಹಳಷ್ಟು ಹಿಗ್ಗಿದರೆ, ಅದನ್ನು ಹಿಡಿದಿಟ್ಟುಕೊಂಡಿರುವ ಮೇಲಿನ ಪದರವು (ಡೇರ್ಮಿಸ್) ಬಿರುಕುಬಿಟ್ಟುಕೊಳ್ಳುತ್ತದೆ. ಇದು ಸ್ಟ್ರೆಚ್ ಮಾರ್ಕುಗಳಿಗೆ ಕಾರಣ ಆಗಬಹುದು.

ಹಾರ್ಮೋನ್ಸ್

ನೀವು ಪ್ರೌಢಾವಸ್ಥೆಗೆ ಬಂದಾಗ ನಿಮಗೆ ಸ್ಟ್ರೆಚ್ ಮಾರ್ಕುಗಳು ಉಂಟಾಗಿದ್ದು, ನೀವು ಮುಂದೆ ಯಾವಾಗಲಾದರೂ ತೂಕ ಹೆಚ್ಚಿಸಿಕೊಂಡು ದಪ್ಪ ಆದ ಸಮಯಗಳಲ್ಲಿ ಈ ಮಾರ್ಕುಗಳು ಆಗಿಲ್ಲ ಎಂದರೆ ಅದಕ್ಕೆ ಕಾರಣ ತೂಕ ಅಲ್ಲ, ಬದಲಿಗೆ ಹಾರ್ಮೋನ್ಸ್ ಆಗಿರುತ್ತವೆ. ಗರ್ಭಧಾರಣೆಯ ಸಮಯದಲ್ಲಿಯೂ ಬಹಳಷ್ಟು ಹಾರ್ಮೋನ್ಸ್ ಬದಲಾವಣೆ ಇಂದ ಇವುಗಳು ಪುನಃ ಕಾಣಿಸಿಕೊಳ್ಳಬಹುದು.

ತಳಿಶಾಸ್ತ್ರ (ಜೆನೆಟಿಕ್ಸ್)

ಕೆಲವು ಅದೃಷ್ಟವಂತ ಹೆಂಗಸರಿಗೆ ಈ ಮಾರ್ಕುಗಳು ಉಂಟಾಗುವುದೇ ಇಲ್ಲ. ಅದು ತೂಕದಲ್ಲಿ ಬದಲಾವಣೆ ಆದರೂ ಇರಲಿ ಅಥವಾ ಹಾರ್ಮೋನ್ಸ್ ಬದಲಾವಣೆ ಆದರೂ ಇರಲಿ. ಇಷ್ಟೇ ಅಲ್ಲದೆ, ಏಕೆ ಕೆಲವರಿಗೆ ಆಳವಾದ ಸ್ಟ್ರೆಚ್ ಮಾರ್ಕುಗಳು ಆಗುತ್ತವೆ ಮತ್ತು ಇನ್ನು ಕೆಲವರಿಗೆ ಏಕೆ ಕೇವಲ ಒಂದು ಗೆರೆ ಎಳೆದಂತ ಸ್ಟ್ರೆಚ್ ಮಾರ್ಕುಗಳು ಆಗುತ್ತವೆ ಎಂಬುದನ್ನ ಕೂಡ ತಳಿಶಾಸ್ತ್ರ ವಿವರಿಸಬಹುದು.

ನೀವು ಏನು ಮಾಡಬಹುದು

ಬಾದಾಮಿ ಎಣ್ಣೆಯಂತಹ ಮೃದುವಾದ ಆರ್ದ್ರಕಾರಿಗಳನ್ನ (ಮೊಯಿಶ್ಚರೈಸರ್) ಉಪಯೋಗಿಸಿ

ನೀವು ಒಳ್ಳೆಯ ತಳಿಶಾಸ್ತ್ರ ಪಡೆದುಕೊಂಡಿರುವ “ಅದೃಷ್ಟವಂತೆ” ಆಗಿರಲಿಲ್ಲವೆಂದರೆ, ನಿಮಗೆ ಇಲ್ಲೊಂದು ಸ್ವಾಗತಾರ್ಹ ಸುದ್ದಿ ಇದೆ. ಚರ್ಮವನ್ನು ಯಾವಾಗಲು ತೇವಾಂಶದಿಂದ ಕೂಡಿರುವಂತೆ ಮತ್ತು ಮೃದುತ್ವ ಕಾಪಾಡಿಕೊಳ್ಳುವಂತೆ ನೋಡಿಕೊಂಡರೆ ತುಂಬಾನೇ ಸಹಾಯ ಆಗುತ್ತದೆ. ಇದಲ್ಲದೆ, ಮಾರುಕಟ್ಟೆಯಲ್ಲಿ ಹಲವಾರು ಉತ್ಪನ್ನಗಳು ಸ್ಟ್ರೆಚ್ ಮಾರ್ಕುಗಳನ್ನ ತೊಲಗಿಸುತ್ತೇವೆ ಎಂದು ಹೇಳಿದರೂ, ಕೇವಲ ಕೆಲವೊಂದು ಮಾತ್ರ ಪರಿಣಾಮಕಾರಿ ಆಗಿವೆ.

ವೈದ್ಯರಾದ ಗೋಲಾಸ್ ಅವರು ಹೇಳುವ ಪ್ರಕಾರ ನೀವು ನೈಸರ್ಗಿಕವಾದ ಬಾದಾಮಿ ತೈಲ ಬಳಸುವುದು ಒಳ್ಳೆಯದು. ಇದು ಸುಗಂಧಭರಿತವಾಗಿ ಇರುತ್ತದೆ ಹಾಗು ತ್ವಚೆಯು ಇದನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. ಅದಲ್ಲದೆ, ಈ ಬಾದಾಮಿ ತೈಲದಲ್ಲಿ ಗರ್ಭಧಾರಣೆ ವೇಳೆ ನೀವು ದೂರ ಇರಿಸಬೇಕಾದ ರಾಸಾಯನಿಕಗಳನ್ನ ಒಳಗೊಂಡಿರುವುದಿಲ್ಲ.

ಆರೋಗ್ಯಕರ ತೂಕ ಗಳಿಕೆ ಬಗ್ಗೆ ನಿಮ್ಮ ವೈದ್ಯರ ಬಳಿ ಮಾತನಾಡಿ

ನೀವು ಬೆಳೆಯುತ್ತಿರುವ ನಿಮ್ಮ ಮಗುವಿಗೆ ಬೇಕಿರುವ ಸಪೋರ್ಟ್ ನೀಡಲು ಹೆಚ್ಚುವರಿ ತೂಕ ಬೇಕಾಗುತ್ತದೆ, ಆದರೆ ನಿಧಾನ ಗತಿಯ, ಸ್ಥಿರವಾದ ಹೆಚ್ಚಳವು ನಿಮ್ಮ ತ್ವಚೆಗೆ ಹೊಂದಿಕೊಳ್ಳಲು ಸಮಯ ನೀಡುತ್ತದೆ. ನೀವು ನಿಮ್ಮ ವೈದ್ಯರೊಂದಿಗೆ ಮಾತನಾಡಿ ನೀವು ಪ್ರತಿ ವಾರ ಎಷ್ಟು ತೂಕ ಹೆಚ್ಚಿಸಿಕೊಳ್ಳಬೇಕು ಎಂಬುದನ್ನ ಕೇಳಿಕೊಳ್ಳಿ (ಸಹಜವಾಗಿ ನೀವು ಒಂದು ವಾರಕ್ಕೆ 450 ಗ್ರಾಂ ಹೆಚ್ಚಗಾಗಿಸಿಕೊಳ್ಳಬೇಕು). ಆದರೆ ನೀವು ಆರೋಗ್ಯಕರವಾಗಿ ಇರುವಷ್ಟು ಸಮಯ, ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.

ಅವುಗಳನ್ನ ಒಪ್ಪಿಕೊಳ್ಳಿ

ಈ ಸ್ಟ್ರೆಚ್ ಮಾರ್ಕುಗಳು ನಿಮಗೆ ನೀವು ಒಂದು ಜೀವ ಸೃಷ್ಟಿಸಬಲ್ಲ ಶಕ್ತಿ ಹೊಂದಿದ್ದೀರಾ ಎಂದು ನೆನಪಿಸುವ ಒಂದು ಅಂಶ. ಅವುಗಳನ್ನ ಗರ್ವದಿಂದ ಧರಿಸಿ. ಇಷ್ಟೇ ಅಲ್ಲದೆ, ಮಗುವಾದ ಸ್ವಲ್ಪ ಸಮಯದ ನಂತರ ನೀವು ಇವುಗಳನ್ನು ಮತ್ತೆ ನೋಡುವ ಸಾಧ್ಯತೆಗಳೇ ಕಡಿಮೆ ಇರುತ್ತದೆ. ಬಹುತೇಕ ಸ್ಟ್ರೆಚ್ ಮಾರ್ಕುಗಳು ಕಾಲಕ್ರಮೇಣ ಮಾಸಿ ಹೋಗುತ್ತವೆ ಎಂದು ಹೇಳುತ್ತಾರೆ ಡಾ  ।। ಗೋಲಾಸ್. ಅವು ಮೊದಲು ಗಾಢ ಪರ್ಪಲ್ ಬಣ್ಣ ಹೊಂದಿರುತ್ತವೆ, ಆದರೆ ಕಾಲಕ್ರಮೇಣ ಅವುಗಳ ಬಣ್ಣ ತಿಳಿ ಆಗುತ್ತಾ ಹೋಗುತ್ತದೆ. ಕೊನೆಯಲ್ಲಿ ಅವು ಕೇವಲ ನಿಮ್ಮ ಚರ್ಮದ ಮೇಲಿನ ಬಣ್ಣವಿಲ್ಲದ ಜಿಗ್ ಜ್ಯಾಗ್ ಸುಕ್ಕುಗಳು ಆಗಿರುತ್ತವೆ ಅಷ್ಟೇ.

ಗೋಲಾಸ್ ಅವರು ಈ ಸ್ಟ್ರೆಚ್ ಮಾರ್ಕುಗಳ ಗಾಢ ಕೆಂಪು ಬಣ್ಣವನ್ನ ಕ್ಷೀಣಿಸಲು ಲೇಸರ್ ಥೆರಪಿ ಹಾಗು ಕೆಲವೊಂದು ವೈದ್ಯರು ಸೂಚಿತ ಕ್ರೀಮ್ ಗಳಿಂದ ಅವುಗಳ ಆಕಾರವನ್ನ ಚೆಂದಗೊಳಿಸಬಹುದು ಎಂದು ತಿಳಿಸುತ್ತಾರೆ. ಅದೇನೇ ಇರಲಿ, ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ಇರುತ್ತದೆ, ಹೀಗಾಗಿ ಅವುಗಳನ್ನ ಜಾಸ್ತಿ ತಲೆಗೆ ಹಾಕಿಕೊಳ್ಳದೆ ನಿಮ್ಮ ಸಾಧನೆಯನ್ನ ಆನಂದಿಸಿ.

Leave a Reply

%d bloggers like this: