ಜನಿಸಲಿರುವ ಮಗುವಿನೊಂದಿಗೆ ಬಾಂಧವ್ಯ ಬೆಸೆದುಕೊಳ್ಳುವುದು

ಗರ್ಭಕಾಲದ ಪ್ರತಿಯೊಂದು ನಿಮಿಷವೂ ಆಹ್ಲಾದಕರ. ಈ ಅವಧಿಯಲ್ಲಿ ಮಾತೃ ವಾತ್ಸಲ್ಯ ಸುರಿಸುವ ಹಾರ್ಮೋನುಗಳು ಸ್ರವಿಸಲ್ಪಡುವುದರಿಂದ ನಿಮ್ಮಲ್ಲಿ ಮಾತೃತ್ವದ ಭಾವನೆ ಹೆಪ್ಪುಗಟ್ಟುತ್ತದೆ. ನಿಮ್ಮ ಹಾಗೂ ನಿಮ್ಮ ಉದರದೊಳಗಿರುವ ಮಗುವಿನ ಬಾಂಧವ್ಯವನ್ನು ಸುಮಧುರಗೊಳಿಸುವುದು ಹೇಗೆಂದು ತಿಳಿದುಕೊಳ್ಳೋಣ.

೧.ಮಾತು

ನಿಮ್ಮ ಮಗುವಿನೊಂದಿಗೆ ಸಂಪರ್ಕದಲ್ಲಿರುವ ಅತ್ಯುತ್ತಮ ಮಾರ್ಗವೆಂದರೆ ಮಗುವಿನೊಂದಿಗೆ ಮಾತನಾಡುವುದೇ ಆಗಿದೆ. ಮೊದಲ ಮೂರು ತಿಂಗಳುಗಳ ತರುವಾಯ ಮಗುವು ಶಬ್ದಗಳನ್ನು ಗುರುತಿಸಲು ತೊಡಗುವುದು ಹಾಗೂ ಅರ್ಥವನ್ನು ಗ್ರಹಿಸಿಕೊಂಡು ಪ್ರತಿಕಿೃಯಿಸಲು ತೊಡಗುವುದು ಹಾಗೆ ಮಗುವು ಜನಿಸುವ ಮುನ್ನವೇ ಮಗುವಿನೊಂದಿಗೆ ಮಾತನಾಡಿ, ಮಗುವಿನೊಂದಿಗೆ ಸಂಪರ್ಕದಲ್ಲಿರಬಹುದು. ಹಾಗೆಯೇ ಕೆಲವೊಂದು ಸಂಗತಿಗಳನ್ನು ಕಲಿಸಿಕೊಡಲೂ ಬಹುದು.

೨.ಸಂಗೀತ

ಶಾಂತ ಸುಂದರ ಹಾಗೂ ಮನಸ್ಸಿಗೆ ತಂಪನ್ನೀಯುವ ಸಂಗೀತವನ್ನು ಆಸ್ವಾದಿಸದವರು ವಿರಳ.ಮಗುವಿಗಾಗಿ ಹಾಡನ್ನು ಹಾಡುವುದರಿಂದ ಅಥವಾ ಸಂಗೀತವನ್ನು ಆಲಿಸುವುದರಿಂದ ಅದನ್ನು ಕೇಳಿ ಉದರದಲ್ಲಿ ಬೆಳೆದ ಮಗುವು ಪ್ರಸವಾನಂತರವೂ ಅದೇ ಹಾಡನ್ನು ಆಸ್ವಾದಿಸುವುದನ್ನು ಕಾಣಬಹುದು. ರಚ್ಚೆಹಿಡಿದು ಅಳುತ್ತಿರುವ ಮಗುವನ್ನು ಸಮಾಧಾನ ಪಡಿಸಲು, ಅದು ಭ್ರೂಣಾವಸ್ಥೆಯಲ್ಲಿದ್ದಾಗ ಆಲಿಸಿದ ಸಂಗೀತವನ್ನು ಪುನಃ ಕೇಳಿಸಿದರೆ ಮಗು ಸಾಂತ್ವನಗೊಳ್ಳುವುದು.

೩.ದೃಶ್ಯೀಕರಣ (ವಿಶುವಲೈಸೇಶನ್)

ನಿಮ್ಮ ಮನವನ್ನುವುದು ಅದ್ಭುತ ಮಾಂತ್ರಿಕ. ನೀವೇನನ್ನು ಕಲ್ಪಿಸುವಿರೋ, ಅದನ್ನೇ ಪಡೆಯಬಹುದು. ಆದ ಕಾರಣ ಮಗುವನ್ನು ಲಾಲಿಸಿ, ಪಾಲಿಸಿ, ಎತ್ತಿ ಮುದ್ದಾಡುವಂತಹ ಕಲ್ಪನೆ ಮಾಡಿದರೆ, ಅದನ್ನು ಅನುಭವಿಸುವ ಅನುಭೂತಿ ಪಡೆದರೆ, ನಿಮ್ಮ ನಿಜ ಜೀವನದಲ್ಲೂ ಅದೇ ಸಂದರ್ಭಗಳನ್ನು ಆಸ್ವಾದಿಸಬಹುದು. ಎಂದರೆ ಮನಸ್ಸಿಗೆ ಎಂದು ಸಕಾರಾತ್ಮಕ ಶಕ್ತಿಗಳನ್ನು ನೀಡಿರಿ. ಅದು ನಿಮ್ಮ ಮಗುವಿನ ಬೆಳವಣಿಗೆ ಹಾಗೂ ವ್ಯಕ್ತಿತ್ವದಲ್ಲೂ ಎಲ್ಲವೂ ಗಮನೀಯ ಪಾತ್ರ ವಹಿಸುತ್ತದೆ.

೪.ವೈದ್ಯರ ಭೇಟಿಯ ಬಗೆಗಿನ ವಿವರಣೆ

ಪ್ರತಿ ತಿಂಗಳು ವೈದ್ಯರಲ್ಲಿ ತಪಾಸಣೆಗೆ ಹೋಗುವಾಗ ಭ್ರೂಣದ ಬೆಳವಣಿಗೆಯ ಚಿತ್ರಣವನ್ನು ನಿಮ್ಮ ಮಗುವಿಗೆ ನೀಡಿರಿ.ಸ್ಕ್ಯಾನ್ ಮಾಡಿದಾಗ ನೀವು ನೋಡಿದ ಮಗುವಿನ ಶರೀರದ ರಚನೆಯನ್ನೂ, ನಿಮ್ಮ ಮಗುವನ್ನು ನೋಡಲು, ಅದನ್ನು ಎತ್ತಿ ಮುದ್ದಾಡಲು ನೀವು ಎಷ್ಟು ಕಾತುರರಾಗಿದ್ದೀರೆಂದೂ ಮಗುವಿನೊಂದಿಗೆ ಹಂಚಿಕೊಳ್ಳಿ.

೫.ಸ್ಪರ್ಶ

ಸ್ಪರ್ಶದ ಮಹತ್ವವೇನೆಂದು ನಾವೆಲ್ಲರೂ ಅರಿತಿದ್ದೇವೆ. ಸಾವಿರ ಮಾತುಗಳು ಅರುಹುವ ಭಾವನೆಗಳನ್ನು ಕೇವಲ ಒಂದು ಸ್ಪರ್ಶ ತಿಳಿಸುತ್ತದೆ. ನಿಮ್ಮ ಹೊಟ್ಟೆಯ ಮೇಲೆ ಕೈಯಾಡಿಸಿ ಮಗುವನ್ನು ಸ್ಪರ್ಶಿಸಲು ಪ್ರಯತ್ನಿಸಿ. ಭಾವನಾತ್ಮಕವಾಗಿ ಮಗುವು ನಿಮ್ಮ ಸ್ಪರ್ಶಕ್ಕೆ ಸ್ಪಂದಿಸುವುದನ್ನು ಗಮನಿಸಬಹುದು.

Leave a Reply

%d bloggers like this: