ಹಲವು ಕಾರಣಗಳಿಂದ ಸಾಮಾನ್ಯ ಹೆರಿಗೆ ಮೂಲಕ ಮಗುವಿಗೆ ಜನ್ಮ ನೀಡುವುದು ಉತ್ತಮವಾಗಿದೆ. ಇದರಿಂದ ಮಗುವಿಗೂ ಕೂಡ ಕೆಲವು ಲಾಭಗಳಿವೆ. ಮಗುವು ನಿಮ್ಮೊಡನೆ ಬೇಗನೆ ಬಾಂದವ್ಯ ಹೊಂದಲು, ಜನ್ಮ ನೀಡಿದ ತಕ್ಷಣ ಎದೆಹಾಲು ನೀಡಲು ಮುಂತಾದ ಕಾರಣಗಳಿಂದ ಸಾಮಾನ್ಯ ಹೆರಿಗೆ ಮೂಲಕ ಜನ್ಮ ನೀಡುವುದು ಒಳ್ಳೆಯದು. ಸಾಮಾನ್ಯ ಹೆರಿಗೆಯನ್ನು ನೀವು ಬಯಸಿದರೆ ಇವುಗಳನ್ನು ಗಮನದಲ್ಲಿ ಇರಿಸಿಕೊಂಡಿರಿ.
೧.ದೇಹ ಚಲನೆ ಮಾಡಿ
ಹೌದು, ಹೆರಿಗೆಯು ಅಷ್ಟು ಸುಲಭದ ಕೆಲಸವಲ್ಲ, ನೀವು ಜನ್ಮ ನೀಡುವಾಗ ನಿಮ್ಮ ದೇಹದ ಪ್ರತಿ ಭಾಗವು ಆಯಾಸವನ್ನು ಅನುಭವಿಸಿದಂತೆ ಭಾಸವಾಗುತ್ತದೆ. ಈ ಆಯಾಸವನ್ನು ನಿವಾರಿಸಿಕೊಳ್ಳಲು ನೀವು ಹೆಚ್ಚು ವಿಶ್ರಾಂತಿ ಪಡೆಯಬೇಕು. ಆದರೆ ನೀವು ಸಾಮಾನ್ಯ ಹೆರಿಗೆಯನ್ನು ಬಯಸಿದರೆ, ನೀವು ಇರುವ ಸ್ಥಳದಲ್ಲೇ ಸ್ವಲ್ಪ ದೂರ ನಡೆದಾಡುವುದು ತುಂಬಾ ಸಹಾಯ ಆಗುತ್ತದೆ. ನಿಮ್ಮ ಪೆಲ್ವಿಕ್ ಭಾಗದ ಸ್ನಾಯುಗಳು ಗಟ್ಟಿಯಾಗುವಂತೆ ವ್ಯಾಯಾಮಗಳನ್ನು ಮಾಡಿ.
೨.ಒತ್ತಡ ಮುಕ್ತವಾಗಿರಿ
ಗರ್ಭಾವಸ್ಥೆಯಲ್ಲಿ ಒತ್ತಡ ಅನುಭವಿಸುವುದು ಸಾಮಾನ್ಯ. ಆದರೆ ಸಾಧ್ಯವಾದಷ್ಟು ಆರಾಮವಾಗಿ ನೆಮ್ಮದಿ ಇಂದ ಇರಲು ಪ್ರಯತ್ನಿಸಿ, ಒತ್ತಡ ನಿಮ್ಮ ಹೆರಿಗೆಯನ್ನು ಒಂದು ಕೆಟ್ಟ ಕನಸಾಗಿ ಮಾಡಬಹುದು, ಯಾವುದರ ಬಗ್ಗೆಯೂ ಹೆಚ್ಚು ತಲೆ ಕೆಡಿಸಿಕೊಳ್ಳದೆ, ಆರಾಮವಾಗಿ ಇರಿ.
ಧ್ಯಾನ ಮಾಡುವುದು, ಮಧುರ ಸಂಗೀತ ಕೇಳುವುದು, ನಿಮ್ಮ ಸಂಗಾತಿ ಜೊತೆ ಖುಷಿಯ ಕಾಲ ಕಳೆಯುವುದು, ನಿಮ್ಮ ಮನೆಯಲ್ಲಿ ಅಥವಾ ನೆರೆಹೊರೆಯಲ್ಲಿ ಇರುವ ಪುಟ್ಟ ಮಕ್ಕಳೊಡನೆ ಆಡುವುದರಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.
೩.ಸರಿಯಾದ ಆಹಾರ ಕ್ರಮ
ನೀವು ಸೇವಿಸುವ ಆಹಾರ ನಿಮ್ಮ ಗರ್ಭಾವಸ್ಥೆಯಲ್ಲಿ, ಪ್ರಮುಖ ಪಾತ್ರ ವಹಿಸುತ್ತದೆ, ಅದು ಮಗುವಿನ ಜನನದ ಮೇಲು ಪರಿಣಾಮ ಬೀರುತ್ತದೆ. ಆರೋಗ್ಯ ತಾಯಿ ಆಗಿದ್ದರೆ, ಅರೋಗ್ಯ ಮಗುವನ್ನು ಪಡೆಯಬಹುದು.
ಈ ಸಮಯದಲ್ಲಿ ನಿಮ್ಮ ಆಹಾರ ಕ್ರಮ ಹೆಚ್ಚು ಹಣ್ಣುಗಳು, ಹಸಿರು ತರಕಾರಿಗಳು, ಸೊಪ್ಪುಗಳಿಂದ ಕೂಡಿರುವುದು ತುಂಬಾ ಮುಖ್ಯ.
೪.ನೀರನ್ನು ನಿಮ್ಮ ಸ್ನೇಹಿತೆಯನ್ನಾಗಿ ಮಾಡಿಕೊಳ್ಳಿ
ನೀರು ಪ್ರತಿಯೊಬ್ಬರ ಜೀವನಕ್ಕೂ ಅಮೂಲ್ಯವಾದದ್ದು, ನೀವು ಸಾಮಾನ್ಯ ಸಮಯದಲ್ಲಿ ಸರಿಯಾದ ದೇಹಕ್ಕೆ ಅವಶ್ಯವಿರುವ ನೀರನ್ನು ಸೇವಿಸಬೇಕು, ಗರ್ಭಾವಸ್ಥೆಯಲ್ಲಿ ಹೆಚ್ಚು ನೀರು ಸೇವಿಸುವುದು ತುಂಬಾ ಮುಖ್ಯವಾಗಿದ್ದು, ವೈದ್ಯರು ನಿಮಗೆ ಇದನ್ನು ಸಲಹೆ ಮಾಡುತ್ತಾರೆ. ನೀವು ಹೆಚ್ಚು ನೀರನ್ನು ಕುಡಿದರೆ ನಿಮ್ಮ ಹೆರಿಗೆ ಸುಲಭವಾಗಿ ಸಾಮಾನ್ಯವಾಗಿ ಆಗಲು ಸಹಾಯ ಆಗುವುದರ ಜೊತೆಗೆ ನಿಮಗೆ ಹೆಚ್ಚು ಆಯಾಸವಾಗುವುದಿಲ್ಲ.
ನಿಮ್ಮ ದೇಹವನ್ನು ಹೆಚ್ಚು ನೀರಿನಾಂಶದಿಂದ ಕೂಡಿರುವಂತೆ ನೋಡಿಕೊಳ್ಳಿ. ನೀವು ಹಣ್ಣಿನ ರಸಗಳನ್ನು ಸೇವಿಸುವುದು, ಕಷಾಯ ಮತ್ತು ಆರೋಗ್ಯಕರ ಮನೆಯಲ್ಲಿ ತಯಾರಿಸಿದ ಹಣ್ಣಿನ ಜ್ಯೂಸ್ ಗಳನ್ನು ಸೇವಿಸುವುದು ದೇಹವನ್ನು ನೀರಿನಾಂಶದಿಂದ ಇಡಲು ಮತ್ತೊಂದು ಮಾರ್ಗವಾಗಿದೆ.
ಹೆಚ್ಚು ಸಮಯ ನಿಂತುಕೊಂಡಿರುವುದನ್ನು ತಪ್ಪಿಸಿ, ಅಂದರೆ ಹೆಚ್ಚು ಸಮಯ ನಿಂತುಕೊಂಡಿರಬೇಡಿ, ಹೆಚ್ಚು ಸಮಯ ನಿಂತುಕ್ಕೊಂಡಿರುವುದು ಆಗುವು ಗುರುತ್ವಾಕರ್ಷಣೆಗೆ ಒಳಗಾಗಿ ಜನ್ಮ ಸ್ಥಿತಿಯನ್ನು ಪಡೆದುಕೊಳ್ಳಬಹುದು.