ನಿಮ್ಮ ಉದರದೊಳಗೆ ಕವಲೊಡೆದ ಭ್ರೂಣವು ಮಗುವಾಗಿ ಬೆಳೆಯುವವರೆಗಿನ ವರದಿ

ಗರ್ಭಧಾರಣೆಯ ಸಮಯವು ಅನಂತ ಸಂತೋಷ ,ಸಡಗರ,ಸಂಭ್ರಮ,ಕಾತರ ಮತ್ತು ಶಾರೀರಿಕ ಹಾಗೂ ಮಾನಸಿಕ ಅಸಮತೋಲನಗಳನ್ನು ನೀಡುತ್ತದೆ.ನಿಮ್ಮ ಬಾಹ್ಯ ರೂಪದಲ್ಲಿ ಗೋಚರಣೀಯ ಬದಲಾವಣೆಗಳಾಗುತ್ತಿರುವಾಗ, ಆಂತರಿಕವಾಗಿ ನಿಮ್ಮ ಒಡಲೊಳಗೆ ಒಂದು ಹೊಸ ಜೀವ ಮಿಡಿಯುತ್ತಿರುತ್ತದೆ. ಇಂತಹ ಹೊಸ ಬದಲಾವಣೆಗೆ ಶರೀರವು ಸಿದ್ಧಗೊಳ್ಳುತ್ತಿರುವಾಗ ಮನಸ್ಸು ಹಲವಾರು ಚಿಂತನೆಗಳನ್ನು ಮಂಥಿಸುತ್ತಿರುತ್ತದೆ.

ನಿಶ್ಚಿಂತೆಯಾಗಿರಿ. ಗಾಬರಿ ಪಡಬೇಕಾದ ನಿಮ್ಮ ಮಾನಸಿಕ ತುಮುಲಗಳನ್ನು ಗ್ರಹಿಸಿಕೊಂಡು ಪ್ರತಿ ವಾರಗಳಲ್ಲಿ ಭ್ರೂಣವು ಹೇಗೆ ಬೆಳೆಯುವುದನ್ನುವುದರ ಬಗ್ಗೆ ಸಮಗ್ರ ವಿವರಣೆಯನ್ನು ನೀಡಿದ್ದೇವೆ.

೧ನೇ ವಾರಗಳು

ಏಕಕೋಶ ಝೈಗೋಟುಗಳು ವಿಭಜಿಸಲ್ಪಟ್ಟು, ಹಲವಾರು ಜೀವಕೋಶಗಳಾಗಿ ಬೆಳೆಯುವ ಕಾಲವಿದು. ಈ ಸಮಯಗಳಲ್ಲೂ ಕೆಲವೊಮ್ಮೆ ಅಂಡೋತ್ಪತ್ತಿಯೂ ನಡೆಯುತ್ತಿರುತ್ತದೆ. 

೨ನೇ ವಾರಗಳು

ಝೈಗೋಟುಗಳು ಪುನಃ ವಿಭಜನೆಗೊಳಗಾಗಿ, ಶರೀರದ ಕೆಳ ಭಾಗವನ್ನು ಶರೀರದ ಇತರ ಭಾಗಗಳಿಂದ ಬೇರ್ಪಡಿಸುವಂತಹ ಎಂಬ್ರಿಯೋನಿಕ್ ಡಿಸ್ಕುಗಳು ರೂಪುಗೊಳ್ಳುತ್ತವೆ. 

೩ ನೇ ವಾರಗಳು

ಬೆನ್ನುಹುರಿ ಮತ್ತು ನರ ಕೊಳವೆಗಳು ಬೆಳೆಯಲು ಆರಂಭಿಸುತ್ತದೆ. ಇದನ್ನು ಗ್ಯಾಸ್ಟ್ರುಲೇಷನ್ ಎಂದು ಕರೆಯುತ್ತೇವೆ. ಈಗ ನಿಮ್ಮ ಮಗುವು ಚಿಕ್ಕ ಮಾಂಸ ಕೋಶಗಳಂತೆ ಗೋಚರಿಸುವುದು. 

೪ ನೇ ವಾರಗಳು

ನರಕ ಕೊಳವೆಗಳು ಮುಚ್ಚಲ್ಪಟ್ಟು, ಹೃದಯ ಬಡಿಯಲು ಆರಂಭಿಸುತ್ತದೆ. ಬಾಲ ಮತ್ತು ಕಿವಿರುಗಳಂತಹ ರಚನೆಯೊಂದಿಗೆ, ಕೈ ತೋಳುಗಳು ವಿಕಸಿಸಲ್ಪಡುವುದು.

೫ ನೇ ವಾರಗಳು

ಕಣ್ಣಿನ ಭಾಗಗಳಾದ ರೇಟಿನ ಮತ್ತು ಕಣ್ಣಿನ ಕುಹರಗಳು, ಲೆಗ್ ಬಟ್ಸುಗಳು ಮತ್ತು ತಲೆಯೊಳಗೆ ಮೆದುಳು ಕೂಡ ಬೆಳೆಯಲು ತೊಡಗುವುದು. 

೬ ಮತ್ತು ೭ ನೇ ವಾರಗಳು

ಜಾಲೀಯ ಕೈ ಕಾಲುಗಳು ಬೆಳೆಯಲು ಪ್ರಾರಂಭಿಸುತ್ತದೆ.ಎಲುಬುಗಳು ಶಕ್ತಿಯುತವಾಗಲು ತೊಡಗುತ್ತದೆ. ಹಿಂಭಾಗವೂ ನೆಟ್ಟಗಾಗಲು ಪ್ರಾರಂಭಿಸುತ್ತದೆ ಹಾಗೂ ಕಿವಿ ಮತ್ತು ಬಾಲಗಳು ಮಾಯವಾಗುತ್ತದೆ.

೭,೮ ಮತ್ತು ೧೦ನೇ ವಾರಗಳು

ಕೈ ಕಾಲುಗಳ ಬೆರಳುಗಳು ಪರಸ್ಪರ ಬೇರ್ಪಡುತ್ತವೆ ಹಾಗೂ ಎಲುಬುಗಳು ಇನ್ನೂ ಬಲಯುತವಾಗ ತೊಡಗುತ್ತದೆ. ಕಣ್ಣಿನ ರೆಪ್ಪೆಗಳು ಬೆಳೆದು, ಮೆದುಳಿನ ಗಾತ್ರವೂ ದೊಡ್ಡದಾಗುತ್ತದೆ. 

೧೧ ಮತ್ತು ೧೨ನೇ ವಾರಗಳು

ಪೂರ್ಣ ಪ್ರಮಾಣದಲ್ಲಿ ರೂಪುಗೊಂಡ ಕುತ್ತಿಗೆಗಳು ಗೋಚರಿಸಲ್ಪಡುತ್ತದೆ. ಜನನಾಂಗಗಳು ಸಂಪೂರ್ಣವಾಗಿ ಬೆಳೆದಿರುತ್ತದೆ ಇದರೊಂದಿಗೆ ಸಕ್ಕಿಂಗ್ ರಿಫ್ಲೆಕ್ಸ್ ನಡೆಯಲು ತೊಡಗುತ್ತದೆ.

ಶರೀರದ ಪ್ರಧಾನ ಅವಯವಗಳ ಬೆಳವಣಿಗೆ ಬಗ್ಗೆ ಮಾತ್ರ ಇಲ್ಲಿ ಚಿತ್ರಿಸಲಾಗಿದೆ. ತಿಂಗಳುಗಳು ಉರುಳುತ್ತಿರುವಂತೆ ರಕ್ತ ಕಣಗಳು, ಸಿರ ಹಾಗೂ ಧಮನಿಗಳಂತಹ ಸಂಕೀರ್ಣ ಭಾಗಗಳೂ ಬೆಳೆಯಲ್ಪಡುತ್ತದೆ.

೯ ತಿಂಗಳು ಕಳೆಯುವಷ್ಟರಲ್ಲಿ ನೀವು ಬಯಸಿದ ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆ ಗೊಂಡ ಮಗುವು ಬಾಹ್ಯ ಪ್ರಪಂಚಕ್ಕೆ ಪಾದಾರ್ಪಣೆ ಮಾಡುತ್ತದೆ.

Leave a Reply

%d bloggers like this: