ನಿಮ್ಮ ಭ್ರೂಣಕ್ಕೆ ಒದಗಬಹುದಾದ ಅಪಾಯಗಳೇನು ?

ಭ್ರೂಣವು ೨೦ವಾರಗಳ ನಂತರ ಮರಣಿಸಿದರೆ ಅದಕ್ಕೆ ಗರ್ಭಪಾತವನ್ನುತ್ತಾರೆ. ಸರಾಸರಿ ಎಲ್ಲಾ ೫೦%ಗರ್ಭಿಣಿಯರು ಗರ್ಭಪಾತಕ್ಕೊಳಗಾಗುತ್ತಾರೆ. ನಂತರದ ಪ್ರತಿ ೮೦% ಗರ್ಭಿಣಿಯರು ೩ ತಿಂಗಳುಗಳಲ್ಲಿ ಗರ್ಭಪಾತವನ್ನು ಅನುಭವಿಸುತ್ತಾರೆ.

ಗರ್ಭಿಣಿಯರಾದ ೨೦ ವಾರಗಳ ಬಳಿಕ ಗರ್ಭಪಾತವಾಗುವ ಸಾಧ್ಯತೆ ತುಂಬಾ ಕಡಿಮೆಯಾಗುವುದು ಅಥವಾ ವಿರಳವಾಗಿರುವುದು.

ಗರ್ಭಪಾತದ ಲಕ್ಷಣಗಳು

(೧) ರಕ್ತಸ್ರಾವ

(೨) ಕೆಳಹೊಟ್ಟೆಯ ಬಲವಾದ ನೋವು

(೩)ಜ್ವರ

(೪) ಹೊಟ್ಟೆಯ ಸುತ್ತಲೂ ಬಲವಾದ ನೋವು (೫)ನಿಶ್ಯಕ್ತಿ

(೫) ಸೊಂಟನೋವು

ಇವುಗಳಲ್ಲಿ ಯಾವುದಾದರೂ ಲಕ್ಷಣಗಳನ್ನು ಅನುಭವಿಸಿದ್ದಲ್ಲಿ, ತಕ್ಷಣವೇ ಪ್ರಸೂತಿ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಿ.

ಗರ್ಭಪಾತವಾಗುವುದು ಹೇಗೆ ?

ಗರ್ಭಪಾತವು ಕೇವಲ ಮಗುವಿನ ಜೆನೆಟಿಕ್ ನ್ಯೂನತೆಗಳಿಂದ ಉಂಟಾಗುತ್ತದೆ ಹೊರತು, ಖಂಡಿತ ತಾಯಿಯಿಂದಲ್ಲ. ಆದರೂ, ಗರ್ಭಪಾತ ಸಂಭವಿಸಬಹುದಾದ ಕೆಲವೊಂದು ಕಾರಣಗಳನ್ನು ತಿಳಿಯೋಣ ಬನ್ನಿ.

(೧) ಸೋಂಕು

(೨)ಸಕ್ಕರೆ ಕಾಯಿಲೆ (ಡಯಾಬಿಟಿಸ್) ಅಥವಾ ತಾಯಿಯು ಅನುಭವಿಸುವ ಥೈರಾಯ್ಡ್ ತೊಂದರೆ.

(೩) ಹಾರ್ಮೋನುಗಳ ಏರುಪೇರು ರೋಗ ಪ್ರತಿರೋಧಕ ಶಕ್ತಿಯ ಕೊರತೆ

(೪)ತಾಯಿಯೂ ಅನುಭವಿಸುವ ಶಾರೀರಿಕ ಅಸ್ವಸ್ಥತೆಗಳು

(೫)ಗರ್ಭಕೋಶದ ಅನಾರೋಗ್ಯಗಳು

ಕೆಳಗೆ ನೀಡಿದ ಸಂದರ್ಭಗಳಲ್ಲಿ ಗರ್ಭಪಾತ ಉಂಟಾಗುವ ಸಾಧ್ಯತೆ ಬಹಳ ಹೆಚ್ಚಾಗಿರುವುದು.

(೧) ತಾಯಿಯು ಸಕ್ಕರೆ ಕಾಯಿಲೆ ಅಥವಾ ಥೈರಾಯ್ಡ್ ತೊಂದರೆಯಿಂದ ಬಳಲುತ್ತಿದ್ದರೆ

(೨)ತಾಯಿಗೆ ಮೊದಲೇ ಮೂರು ಬಾರಿ ಗರ್ಭಪಾತವಾಗಿದ್ದರೆ

ಪೂರ್ಣಪ್ರಮಾಣದಲ್ಲಿ ಬೆಳೆಯದ ಗರ್ಭಕಂಠ

ಬಲಹೀನವಾದ ಗರ್ಭ ಕಂಠವು ಭ್ರೂಣವನ್ನು ಸರಿಯಾದ ಸ್ಥಾನದಲ್ಲಿಟ್ಟುಕೊಳ್ಳಲು ಸಹಕರಿಸದು. ಇದರಿಂದ ಎರಡನೆಯ ತ್ರೈಮಾಸಿಕದಲ್ಲಿ ಗರ್ಭಪಾತವಾಗುತ್ತದೆ.ಸಾಧಾರಣವಾಗಿ ತಾಯಿಗೆ ಗರ್ಭಾಶಯದ ಕೆಳಭಾಗದಲ್ಲಿ ಅನುಭವಿಸಲ್ಪಡುವ ಭಾರದೊಂದಿಗೆ ಮಗುವಿನ ಶರೀರವು ಯೋನಿ ಮಾರ್ಗದ ಕಡೆಗೆ ಚಲಿಸಲು ಪ್ರಾರಂಭಿಸುತ್ತದೆ. ಭ್ರೂಣದೊಂದಿಗೆ ಕರುಳ ಬಳ್ಳಿ ಮತ್ತು ಸ್ವಲ್ಪ ಪ್ರಮಾಣದಲ್ಲಿ ರಕ್ತವೂ ಯೋನಿಯ ಮೂಲಕ ಸ್ರವಿಸಲ್ಪಡುತ್ತದೆ.

ಗರ್ಭಪಾತದ ಬಗ್ಗೆ ಸರಿಯಾದ ಮಾಹಿತಿ ತಿಳಿದಿರುವುದು ಬಹಳ ಅಗತ್ಯ ನಿಮ್ಮ ಗರ್ಭ ಕಾಲವು ಸಂತೋಷ ಹಾಗೂ ಆರೋಗ್ಯ ಪೂರ್ಣವಾಗಿ ಇರಲಿ ಎಂದು ಹಾರೈಸುತ್ತಿದ್ದೇನೆ.

ಇದನ್ನು ಇತರರೊಂದಿಗೆ ಹಂಚಿಕೊಳ್ಳಲು ಮರೆಯದಿರಿ.

Leave a Reply

%d bloggers like this: