ನಿಮ್ಮ ಮನೆಯಲ್ಲೇ ಇರುವ ಪದಾರ್ಥಗಳಿಂದ ಸುಲಭವಾಗಿ ತಯಾರಿಸಿ ರುಚಿಯಾದ “ಕೊಬ್ಬರಿ ಬರ್ಫಿ”

ಹಬ್ಬ ಅಥವಾ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಎಲ್ಲರು ಹಬ್ಬದ ವಿಶೇಷ ಅಡುಗೆ ಮಾಡುವುದು ಸಹಜ. ವಾರಾಂತ್ಯಗಳಲ್ಲಿ ಮಕ್ಕಳು ಕೆಲಸಕ್ಕೆ ಹೋಗುವವರು ಮನೆಯಲ್ಲಿಯೇ ಇರುವರು, ಅವರು ಮನೆಯಲ್ಲಿ ಇರುವಾಗ ನಿಮ್ಮಲ್ಲಿ ಕೇಳುವುದು ಒಂದೇ ಪ್ರಶ್ನೆ ಎಲ್ಲಾರು ಮನೆಯಲ್ಲಿ ಇರುವೆವು ಏನಾದರು ಸಿಹಿಯನ್ನು ಮಾಡಿ ಎಂದು. ನಂತರ ಬೇರೆ ಹೊಸತು ಏನಾದರು ಪ್ರಯತ್ನಿಸು ಎಂದು ಹೇಳುವರು. ಅದಕ್ಕಾಗಿ ನಿಮ್ಮ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಸುಲಭವಾಗಿ ಬೇಗನೆ ತಯಾರಿಸಬಹುದಾದ ಕೊಬ್ಬರಿ ಬರ್ಫಿ ಮಾಡುವ ವಿಧಾನವನ್ನು ನಿಮಗಾಗಿ ತಂದಿರುವೆವು.

ಬೇಕಾಗಿರುವ ಸಾಮಗ್ರಿಗಳು
೧.ಕೊಬ್ಬರಿ ತುರಿ – ಎರಡು ಬಟ್ಟಲು

೨.ತುಪ್ಪ – ೩ ಚಮಚ

೩.ಗೊಡಂಭಿ – ೭ ರಿಂದ ೮

೪.ಒಣದ್ರಾಕ್ಷಿ – ೧೦

೫.ಸಕ್ಕರೆ – (೧)ಒಂದು ಬಟ್ಟಲು

೬.ಹಾಲು – ೨ ಚಮಚ

೭.ಏಲಕ್ಕಿ ಪುಡಿ – ಚಿಟಕಿ ಅಥವಾ ಸ್ವಲ್ಪ

೮.ವೆನಿಲ್ಲಾ ಎಸ್ಸೆನ್ಸ್ – ಅರ್ಧ ಚಮಚ

೯.ಕೇಸರಿ ಎಳೆಗಳು – ಸ್ವಲ್ಪ

ತಯಾರಿಸುವುದು

೧.ಕೊಬ್ಬರಿಯನ್ನು ಸಣ್ಣಗೆ ತುರಿದುಕೊಳ್ಳಿ.

೨.ಒಂದು ಪಾತ್ರೆಯನ್ನು ಬಿಸಿ ಆಗಲು ಹೊಲೆ ಮೇಲೆ ಇಡಿ.

೩.ಅದಕ್ಕೆ ತುಪ್ಪ ಹಾಕಿ ಬಿಸಿ ಆಗಲು ಬಿಡಿ.

೪.ಕಂದು ಬಣ್ಣ ಬರುವವರೆಗೆ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಉರಿದುಕೊಳ್ಳಿ.

೫.ಇದನ್ನು ಪಕ್ಕದಲ್ಲಿರಿಸಿ.

೬.ಕೊಬ್ಬರಿ ತುರಿಯನ್ನು ಕಡಿಮೆ ಉರಿಯಲ್ಲಿ ಉರಿದುಕೊಳ್ಳಿ.

೭.ಕೊಬ್ಬರಿಯು ಸುವಾಸನೆ ಅಥವಾ ಘಮಘಮ ವಾಸನೆ ಬರುವ ವರೆಗೂ ಉರಿಯಿರಿ.

೮.ಈ ಪಾತ್ರೆಯನ್ನು ಕೆಳಗಿಳಿಸಿ, ಬೇರೆ ಪಾತ್ರೆಯಲ್ಲಿ ನೀರು ಕಾಯಲು ಇಡಿ.

೯.ಇದಕ್ಕೆ ನೀರು ಸೇರಿಸಿ, ಸಕ್ಕರೆ ಪಾಕ ತಯಾರಿಸಿಕೊಳ್ಳಿ.

೧೦.ಇದಕ್ಕೆ ಹಾಲನ್ನು ಸೇರಿಸಿ ಚೆನ್ನಾಗಿ ತಿರುಗಿಸುತ್ತಿರಿ.

೧೧.ಇದನ್ನು ಉರಿದುಕೊಂಡಿರುವ ಕೊಬ್ಬರಿ ತುರಿಗೆ ಸೇರಿಸಿ.

೧೨.ಮಾಧ್ಯಮ ಉರಿಯಲ್ಲಿ ನಿರಂತರವಾಗಿ ಕದಡುತ್ತಿರಿ ಅಥವಾ ತಿರುಗಿಸುತ್ತಿರಿ.

೧೩.ಇದಕ್ಕೆ ಏಲಕ್ಕಿ ಪುಡಿ, ವೆನಿಲ್ಲಾ ಎಸ್ಸೆನ್ಸ್ ಅನ್ನು ಸೇರಿಸಿ, ತಿರುಗಿಸುತ್ತಿರುವುದನ್ನು ನಿಲ್ಲಿಸ ಬೇಡಿ.

೧೪.ಈಗ ಇದಕ್ಕೆ ಉರಿದುಕೊಂಡ ಗೋಡಂಬಿ ಮತ್ತು ದ್ರಾಕ್ಷಿಯನ್ನು ಸೇರಿಸಿ.

೧೫.ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗು(ಮಂದ) ತಿರುಗಿಸುತ್ತಿರಿ.

೧೬.ಉರಿಯನ್ನು ಕೆಡಿಸಿ, ಈ ಮಿಶ್ರಣವನ್ನು ತುಪ್ಪ ಸವರಿದ ಒಂದು ತಟ್ಟೆಗೆ ಹಾಕಿ.

೧೭.ಒಂದು ಸಮಕ್ಕೆ ಮಾಡಿ, ಅದರ ಮೇಲೆ ಕೇಸರಿ ಎಳೆಗಳನ್ನು ಉದುರಿಸಿ.

೧೮.ಅದು ಬಿಸಿ ಇರುವಾಗಲೇ ಬರ್ಫಿ ಆಕಾರಕ್ಕೆ ಅಥವಾ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ.

ನಿಮ್ಮ ಕೈ ರುಚಿಯಲ್ಲೇ ಸವಿಯಾದ ಕೊಬ್ಬರಿಯನ್ನು ಬರ್ಫಿಯನ್ನು ನೀವು ತಯಾರಿಸಿರುವಿರಿ. ಇದರ ಮೇಲೆ ದ್ರಾಕ್ಷಿ ಮತ್ತು ಗೋಡಂಬಿಯನ್ನು ಇಟ್ಟು ಅಲಂಕರಿಸಬಹುದು.

Leave a Reply

%d bloggers like this: