ವಿಕ್ಸ್ ವೆಪೋರಬ್ ಇಂದ ನಿಮ್ಮ ಸ್ಟ್ರೆಚ್ ಮಾರ್ಕುಗಳನ್ನ ಹೀಗೆ ತೊಲಗಿಸಿ !

ಶರೀರದ ಸ್ಟ್ರೆಚ್ ಮಾರ್ಕುಗಳು ಕೆಲವೊಮ್ಮೆ ಕಿರಿಕಿರಿ ಎನ್ನಿಸುತ್ತದೆ. ಮಿನಿಸ್ಕರ್ಟುಗಳನ್ನು ಧರಿಸಲು ಬಯಸುವಾಗಲೂ ಕಾಲುಗಳಲ್ಲಿರುವ ಸ್ಟ್ರೆಚ್ ಮಾರ್ಕುಗಳು ಅವುಗಳನ್ನು ಧರಿಸುವ ನಮ್ಮ ಬಯಕೆಗೆ ತಣ್ಣೀರೆರಚುತ್ತದೆ. ಸರಾಸರಿ ಜನರು ಈ ಸ್ಕೆಚ್ ಮಾರ್ಕುಗಳಿಂದ ಮಾನಸಿಕ ಕಿರಿಕಿರಿಯನ್ನು ಅನುಭವಿಸುತ್ತಾರೆ. ಕೇವಲ ಸ್ತ್ರೀಯರು ಮಾತ್ರವಲ್ಲ, ಪುರುಷರೂ ಸ್ಟ್ರೆಚ್ ಮಾರ್ಕ್ ಗಳಿಂದ ಪೀಡಿತರಾಗಿದ್ದಾರೆ.

ಶರೀರ ತೂಕದ ಹೆಚ್ಚಳ, ಹಾರ್ಮೋನುಗಳ ಬದಲಾವಣೆ, ಗರ್ಭಧಾರಣೆ ಮಾತ್ರವಲ್ಲ ಪ್ರೌಢಾವಸ್ಥೆಯ ಹಂತವೂ ಸ್ಟ್ರೆಚ್ ಮಾರ್ಕುಗಳಿಗೆ ಕಾರಣವಾಗುತ್ತದೆ.

ತುಂಬಾ ಕೊಬ್ಬಿನ ಅಂಶಗಳು ಸಂಗ್ರಹವಾಗುವಂತಹ ಕೆಳ ಹೊಟ್ಟೆ, ಕೈ ತೋಳು, ಸ್ತನಗಳ ಭಾಗ, ತೊಡೆ, ಹಿಂಭಾಗ ಹಾಗೂ ನಿತಂಬಗಳಲ್ಲಿ ಹೆಚ್ಚಾಗಿ ಸ್ಟ್ರೆಚ್ ಮಾರ್ಕುಗಳು ಕಂಡು ಬರುತ್ತವೆ. ಸ್ಟ್ರೆಚ್ ಮಾರ್ಕುಗಳು ಕಾಣಿಸಿಕೊಳ್ಳಲಿರುವ ಕಾರಣಗಳೇನೇ ಇರಲಿ ಅವುಗಳಿಂದ ಮುಕ್ತಿಯಂತೂ ಬೇಕಲ್ಲ.

ಡಾಕ್ಟರ್ ಗಳ ಸಲಹೆಯಂತೆ ನೀಡಿದ ಮುಲಾಮುಗಳನ್ನು ವರ್ಷಾನುಗಟ್ಟಲೆ ಉಪಯೋಗಿಸಿದರೂ, ಏನೂ ಪರಿಣಾಮ ಕಾಣಿಸಿಕೊಳ್ಳದಿರಬಹುದು. ಹಠಮಾರಿಯಾದ ಈ ಕಲೆಗಳನ್ನು ಹೋಗಲಾಡಿಸಲು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬರುವಷ್ಟು ನೀವು ಸುಸ್ತಾಗಿರಬಹುದು.

ಸ್ಟ್ರೆಚ್ಮಾರ್ಕುಗಳ ಬಗ್ಗೆ ತಲೆಕೆಡಿಸಿಕೊಳ್ಳದರಾಗಿದ್ದರೆ, ನೀವು ಅದರ ಬಗ್ಗೆ ಚಿಂತಿತರಾಗಬೇಕಾದ್ದಿಲ್ಲ. ಯಾಕೆಂದರೆ ಸ್ಟ್ರೆಚ್ ಮಾರ್ಕ್ ಗಳು ಆರೋಗ್ಯಕ್ಕೆ ಏನೂ ಅಡ್ಡಪರಿಣಾಮ ಬೀಳುವುದಿಲ್ಲ. ಮಾತ್ರವಲ್ಲ ಪ್ರಸವದ ಫಲವಾಗಿ ರೂಪುಗೊಂಡ ಈ ಸ್ಟ್ರೆಚ್ ಮಾರ್ಕುಗಳು “ ಹುಲಿ ಪಟ್ಟೆ” ಎಂದೂ ಗುರುತಿಸಲ್ಪಡುತ್ತದೆ.

ಡಾಕ್ಟರಿಂದ ನಿರ್ದೇಶಿಸಲ್ಪಡುವ , ಅಂಗಡಿಗಳಲ್ಲಿ ದೊರೆಯುವ ಮುಲಾಮುಗಳ ಬಗ್ಗೆ ಒಂದೆರಡು ಕ್ಷಣ ಮರೆತುಬಿಡೋಣ. ಮನೆ ಮದ್ದಿನ ಬಗ್ಗೆ ಚರ್ಚಿಸೋಣ. ಅವುಗಳು ಎಷ್ಟರ ಮಟ್ಟಿಗೆ ಫಲಪ್ರದವಾಗಿದೆಯೆಂದೂ ತಿಳಿಯೋಣ.

ಫಲಿತಾಂಶ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವುದು ಉದಾಹರಣೆಗೆ ವಿಟಾಮಿನ್- ಇ ನಿಮಗೆ ಉತ್ತಮ ಫಲಿತಾಂಶ ದೊರೆತಿದ್ದರೆ, ಇನ್ನೊಬ್ಬ ವ್ಯಕ್ತಿಗೆ ಫಲಿತಾಂಶ ಲಭಿಸಬೇಕೆಂದಿಲ್ಲ.

ಸದಾಕಾಲ ನಿಮ್ಮೊಂದಿಗಿರುವ ನಿಮ್ಮ ಉತ್ತಮ ಗೆಳೆಯನನ್ನು ಮರೆತಿರೇ ? ನೆಗಡಿ, ಶೀತ,ತಲೆನೋವಿನಿಂದ ಪರಿಹಾರ ನೀಡುವ ನಿಮ್ಮ ವಿಕ್ಸ್ ವೇಪೋರಬ್ ನಿಮ್ಮ ಸ್ಟ್ರೆಚ್ ಮಾರ್ಕುಗಳನ್ನು ನಿವಾರಿಸುವುದೆಂದರೆ ನಂಬಲು ಸಾಧ್ಯವೇ…?? ಬಳಸಿದ, ಪ್ರಯೋಗಿಸಿ ನೋಡಿದ ಎಲ್ಲಾ ವ್ಯಕ್ತಿಗಳು ವಿಕ್ಸಿನ ಬಳಕೆಯಿಂದ ಸ್ಟ್ರೆಚ್ ಮಾರ್ಕ್ ನಿವಾರಣೆಯಾಗಿದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.

ನೀವು ಒಂದು ಸಲ ಪ್ರಯತ್ನಿಸಿ ನೋಡುವುದರಲ್ಲಿ ತಪ್ಪೇನಿದೆ ? ಇದರಿಂದ ನಿಮ್ಮ ಸ್ಟ್ರೆಚ್ ಮಾರ್ಕ್ ಇನ್ನು ಉಲ್ಬಣವಾಗಲಿಕ್ಕಿಲ್ಲವಲ್ಲ…!!

ಮೇಲೆ ಕಾಣಿಸಿದ ವಿಡಿಯೋ ವಿಕ್ಸ್ ವೇಪೋರಬ್ ಅನ್ನು ಹೇಗೆ ಬಳಸುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ.

ಬೇಕಾದ ಸಾಮಗ್ರಿಗಳು

ವಿಕ್ಸ್ ವೇಪೊರಬ್, ಸುತ್ತಿಕೊಳ್ಳಲು ಪ್ಲಾಸ್ಟಿಕ್ ಕ್ಲಿಂಗ್ ರಾಪ್ ಮತ್ತು ಅಲೋವೆರಾ ಜೆಲ್( ತಾಜಾ ಆದರೆ ಉತ್ತಮ ) ಅಗತ್ಯವಿದ್ದ ಭಾಗಗಳಲ್ಲಿ ವಿಕ್ಸ್ ವೇಪೋರಬ್ ಅನ್ನು ಹಚ್ಚಿದ ಬಳಿಕ ಕ್ಲಿಂಗ್ ಫಿಲ್ಮ್ ನಿಂದ ಸುತ್ತಿಕೊಳ್ಳಿ. ಸುಮಾರು ಮೂರು ಅಥವಾ ನಾಲ್ಕು ಗಂಟೆಗಳ ಕಾಲ ಅಥವಾ ಇಡೀ ರಾತ್ರಿ ಹಚ್ಚಿಕೊಳ್ಳಿ. ಬೆಳಿಗ್ಗೆ ತಾಜಾ ಅಲೋವೆರಾ ಜೆಲ್ ಅನ್ನು ಅದರ ಮೇಲೆ ಲೇಪಿಸಿರಿ.

ವಿಕ್ಸ್ ವೆಪೊರಬ್, ನೀಲಗಿರಿ ಎಣ್ಣೆ,ವಿನೆಗರ್ ಟರ್ಪೆಂಟೈನ್ ಆಯಿಲ್ ಮತ್ತು ಕರ್ಪೂರವನ್ನು ಒಳಗೊಂಡಿದೆ. ಈ ತೈಲಗಳು ಬಿಗಿದುಕೊಂಡಿರುವ ಕಠಿಣ ಕಲೆಗಳನ್ನು ಶಮನಗೊಳಿಸಿ, ಕಲೆಗಳನ್ನು ಹೋಗಲಾಡಿಸುತ್ತದೆ.

ಸತತವಾಗಿ ಒಂದು ತಿಂಗಳ ಕಾಲ ಈ ರೀತಿ ಮಾಡುವುದರಿಂದ ನಂಬಲಾರ್ಹ ಬದಲಾವಣೆಗಳಿಗೆ ನೀವು ಸಾಕ್ಷಿಯಾಗುವಿರಿ.

ಆದರೆ ಕಲೆಗಳ ವಯಸ್ಸಿಗನುಗುಣವಾಗಿ ಶಮನಗೊಳ್ಳುವ ಅವಧಿಯೂ ಬದಲಾಗುತ್ತದೆ. ಹೊಸ ಕಲೆಗಳಾದರೆ, ಬಹಳ ಬೇಗನೆ ಮಾಯವಾಗುವುದು.

ಮಹಿಳೆಯರೇ… ಹಾಗಾದರೆ ಇನ್ನೇಕೆ ತಡ ? ಈಗಲೇ ಇದರ ಪ್ರಯೋಗವನ್ನು ಮಾಡಿ ಅದ್ಭುತ ಫಲವನ್ನು ಅನುಭವಿಸಿ..!!

Leave a Reply

%d bloggers like this: