ವಿವಿಧ ಗುಣಗಳಿರುವ ಗಂಡಂದಿರು : ನಿಮ್ಮವರ ಗುಣ ಇವುಗಳಲ್ಲಿ ಯಾವುದು?

ಪತ್ನಿಗೆ ತನ್ನ ಪತಿಯನ್ನು ಹೊಗಳಿದಷ್ಟೂ ಸಾಕಾಗದು. ಕೆಲವರು ತಮ್ಮ ಗಂಡನ ಗುಣಗಾನ ಮಾಡಿದರೆ, ಮತ್ತೆ ಕೆಲವರಿಗೆ ತಮ್ಮ ಗಂಡನನ್ನು ಮೂದಲಿಸುವಷ್ಟು ಪ್ರಿಯ ಕೆಲಸ ಇನ್ನೊಂದಿಲ್ಲ. ಗಂಡಸರನ್ನು ಮಹಿಳೆಯರ ಅಭಿಪ್ರಾಯದ ಮೇರೆಗೆ ಕೆಲವು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ನಿಮ್ಮವರು ಇವರಲ್ಲಿ ಯಾವ ಗುಂಪಿಗೆ ಸೇರುತ್ತಾರೆಂದು ಪರೀಕ್ಷಿಸಿರಿ.

ಮಗುವಿಗಿಂತಾ ಕಡೆ

ಕೆಲವು ಗಂಡಸರು ಮದುವೆಯ ನಂತರವೂ ತಮ್ಮ ಮಕ್ಕಳಾಟ ಬಿಟ್ಟಿರುವುದಿಲ್ಲ. ತಾವು ದಿನ ನಿತ್ಯ ತೊಡುವ ಬಟ್ಟೆಬರೆಗಳಿಂದ, ಹಿಡಿದು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದಲ್ಲೂ ತಮ್ಮ ಜೀವನ ಸಂಗಾತಿಯ ಅಭಿಪ್ರಾಯವನ್ನು ಬಯಸುವವರು. ಕೆಲವು ಗಂಡಸರು ಸ್ವಾಭಾವಿಕವಾಗಿ ಹೆಂಡತಿಯ ಮುದ್ದು ಮಾಡುವಿಕೆಯನ್ನು ಬಯಸಿದರೆ, ಮತ್ತೆ ಕೆಲವರು ನಿರ್ಬಂಧಕ್ಕೊಳಗಾಗಿ ಈ ರೀತಿ ವರ್ತಿಸುವರು.

ವೃತ್ತಿಯೇ ದೇವರು

ಬಹುತೇಕ ಎಲ್ಲ ಮಹಿಳೆಯರು ನೀಡುವ ದೂರು ಇದೊಂದೇ. ಗಂಡಸರು ತಮ್ಮ ಕಾಯಕವನ್ನೇ ಬಹಳವಾಗಿ ಮುಂದಿಟ್ಟು ಕೊಂಡಿರುತ್ತಾರೆ. ಹೆಂಡತಿಗೆ ಏನಿದ್ದರೂ ನಂತರದ ಸ್ಥಾನ ಸ್ವಂತ ಮನೆಗೆ ಅತಿಥಿಗಳ ಆಗುವ ಸಂದರ್ಭವೂ ಇಲ್ಲವೆಂದಲ್ಲ. ಬೆಳ್ಳಂಬೆಳಿಗ್ಗೆ ಮನೆ ಬಿಟ್ಟರೆ ಮನೆ ಸೇರುವುದು ತಡರಾತ್ರಿಗೆ. ಇದು ಎಲ್ಲಾ ಮಹಿಳೆಯರಲ್ಲಿ ಕಡೆಗಣಿಸಿದ ಭಾವನೆ ಬೆಳೆಸಿಕೊಳ್ಳುವುದಕ್ಕೆ ಕಾರಣವಾಗಿ,ಮನೆಯೇ ಮೂರನೇ ಮಹಾ ಯುದ್ಧದ ರಣಭೂಮಿಯಾಗುವುದು.

ಕ್ರೀಡಾ ಸ್ನೇಹಿ

‘ಶಾಪಿಂಗ್’ ಎಂದರೆ ಮಹಿಳೆಯರಿಗೆ ಎಷ್ಟು ಅಚ್ಚುಮೆಚ್ಚೋ, ಪುರುಷರಿಗೆ ಕ್ರೀಡೆ ಎಂದರೆ ಅದೇ ಪ್ರೀತಿ. ಗಂಡಸರಿಗಂತೂ ಕ್ರೀಡೆಯಲ್ಲೇರ್ಪಡದ ಜೀವನವನ್ನು ಸಂಕಲ್ಪಿಸಲೂ ಅಸಾಧ್ಯ.ಕ್ರಿಕೆಟ್ ಹಾಕಿ ಫುಟ್ಬಾಲ್ ಯಾವುದೇ ಕ್ರೀಡೆಯಾಗಲಿ ಪುರುಷರಿಗೆ ಅವುಗಳನ್ನು ಬಿಟ್ಟು ಬೇರೆ ಲೋಕವಿಲ್ಲ. ಎಷ್ಟೇ ಆಯಾಸದಿಂದ ಬಳಲಿದ್ದರೂ ತಡರಾತ್ರಿಯವರೆಗೂ ನಿದ್ರೆಗೆಟ್ಟು ಕ್ರಿಕೆಟ್ ಅಥವಾ ಫುಟ್ಬಾಲ್ ಪಂದ್ಯವನ್ನು ನೋಡದೇ ಬಿಡುವವರಲ್ಲ. ಗಂಡ ಹೆಂಡತಿಯ ನಡುವಿನ ಹಾಗೂ ಅದಕ್ಕೂ ಕೆಲವೊಮ್ಮೆ ಇದು ಕಾರಣವಾಗುತ್ತದೆ.

ಬೇಜವಾಬ್ದಾರಿ ಮನುಷ್ಯ

ಕೆಲವು ಗಂಡಸರಿಗೆ ಸಾಮಾನುಗಳನ್ನು ಒಪ್ಪವಾಗಿ ಒರಣವಾಗಿಟ್ಟು ಕೊಳ್ಳುವುದೇನೆಂದೇ ತಿಳಿಯದು.ಅದರಲ್ಲೂ,ಸ್ನಾನ ಮಾಡಿದ ನಂತರದ ಬಾತ್ ಟವೆಲ್, ಅದರ ಬಗ್ಗೆ ಹೇಳುವುದೇ ಬೇಡ ಕೇಳಿದರೆ ಮತ್ತೆ ಮಾಡುವುದಿಲ್ಲವೆಂದು ಸಮಾಧಾನಪಡಿಸುವರಾದರೂ ನಾಳಿನ ಕಾರ್ಯಕ್ರಮ ಮತ್ತೆ ಯಥಾಪ್ರಕಾರ. ಇಂತಹ ಗಂಡಸರನ್ನು ಕೇವಲ ಒಂದು ದಿನ ಅಡುಗೆ ಕೋಣೆಗೆ ಕಳುಹಿಸಿದರೆ, ಮುಂದಿನ ಆರು ತಿಂಗಳ ಕಾಲ ನಿಮಗೆ ನಡು ಬಗ್ಗಿಸಲಾಗದಷ್ಟು ಕೆಲಸದ ಹೊರೆ ಕಾದಿರುತ್ತದೆ. ಮೆಣಸಿನ ಹುಡಿ, ಉಪ್ಪಿನ ಡಬ್ಬ ಎಲ್ಲ ಸ್ಥಾನ ಪಲ್ಲಟವಾಗಿ, “ಇವರನ್ನು ಯಾಕೆ ಅಡುಗೆ ಮನೆಗೆ ಕಳುಹಿಸಿದೆ”- ಎಂದು ನೀವೇ ತಲೆ ಚಚ್ಚಿಕೊಳ್ಳುವಂತಾಗುತ್ತದೆ. ಎಷ್ಟೊಂದು ಹಂಗಿಸಿದರೂ, ಬೈದರೂ, ಜಗಳವಾಡಿದರೂ ‘ಮತ್ತೆ ನಾಯಿ ಬಾಲ ಡೊಂಕು’ ಎಂಬ ಪರಿಸ್ಥಿತಿಯು ನಿರ್ಮಾಣವಾಗಿರುತ್ತದೆ.

ಏಕಾಂತವಾಸಿ

ಕೆಲವು ಗಂಡಸರು ತಮ್ಮದೇ ಲೋಕದಲ್ಲಿ ಒಬ್ಬಂಟಿಯಾಗಿ ವಿಹರಿಸುತ್ತಿರುತ್ತಾರೆ. ಸಾಮಾಜಿಕ ಸಮ್ಮೇಳನ, ಜಾತ್ರೆ ,ಪಾರ್ಟಿ ಎಂದು ನೀವು ತುದಿಗಾಲಲ್ಲಿ ಹಾರುತ್ತಿರುವಾಗ, ಅದರಿಂದ ಹೇಗೆ ತಪ್ಪಿಸಿಕೊಳ್ಳುವುದು ಹೇಗೆಂದು ನೆವ ಹುಡುಕುತ್ತಿರುತ್ತಾರೆ. ನಿಮ್ಮ ನಿರ್ಬಂಧಕ್ಕೆ ಕಟ್ಟು ಬೇಸತ್ತು, ಪಾರ್ಟಿಗೆ ಹಾಜರಾದರೂ, ಈ ಗಲಭೆ ಗದ್ದಲ ಗಲಾಟೆಗಳಿಂದ ದೂರವಾಗಿ, ಯಾವುದಾದರೊಂದು ಮೂಲೆಯಲ್ಲಿ ತಮ್ಮ ಪಾಡಿಗೆ ತಾವಿರುತ್ತಾರೆ.

ನಳನನ್ನೂ ಸೋಲಿಸುವ ಬಾಣಸಿಗ

ಯಾವುದೇ ಹೆಂಡತಿಯೂ ತನ್ನ ಗಂಡನ ಬಗ್ಗೆ ಹೆಮ್ಮೆ ಪಡುವಂತಹ ಅನುಗ್ರಹವೇ- ಗಂಡನಿಗೆ ಲಭ್ಯವಾಗಿರುವ ‘ಪಾಕದ ಕಲೆ’. ಪುರುಷನು, ತನಗೆ ಅನುಗ್ರಹವಾಗಿರುವ ಈ ಅನುಗ್ರಹದಿಂದ ಇತರ ಗಂಡಸರು ಹೊಟ್ಟೆಕಿಚ್ಚು ಪಡುವಂತೆ, ತಮ್ಮ ಹೆಂಡತಿಯನ್ನು ಸಂತೋಷವಾಗಿಟ್ಟುಕೊಳ್ಳುವಲ್ಲಿ ಬಳಸುತ್ತಾರೆ.ಮುನಿದ ಪತ್ನಿಯನ್ನು ಒಲಿಸಿಕೊಳ್ಳಲಾಗಲೀ, ಯಾವುದೇ ಡೇಟ್ ಅಥವಾ ಇನ್ಯಾವುದೇ ಸಂದರ್ಭಗಳಲ್ಲಿ ಈ ಮಾಂತ್ರಿಕನ ಕೈಚಳಕವು ಮೋಡಿ ಮಾಡದೇ ಬಿಡದು.

ಹಾಸ್ಯ ಚಕ್ರವರ್ತಿ

ನಗೆ ಚಟಾಕಿಯನ್ನು ಹಾರಿಸುವ ಕಲೆಯು ಕೇವಲ ಕೆಲವು ಗಂಡಸರಿಗೆ ಮಾತ್ರ ಸೀಮಿತ. ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಕಲೆಯೂ ಸಿದ್ಧಿಸಿರುವ ಗಂಡನೊಂದಿಗಿನ ಜೀವನವು ದಿನವೂ ನಿಮ್ಮನ್ನು ನಗೆಗಡಲಲ್ಲಿ ತೇಲಿಸುವುದು.

ವಾಸ್ತವಿಕ ವಾದಿಗಳು

ಕಥೆ ಕಾದಂಬರಿಗಳಲ್ಲಿ ಇರುವಂತಹ ನಾಯಕನನ್ನು ಕೇವಲ ಕಲ್ಪನಾ ಲೋಕದಲ್ಲಿ ಮಾತ್ರ ಸಂಧಿಸಲು ಸಾಧ್ಯ. ಅಂತಹ ನಾಯಕನು ಭೂಮಿಯಲ್ಲಿ ಇಲ್ಲವೇ ಇಲ್ಲ. ಯಾವುದಾದರೊಂದು ರೀತಿಯ ಲೋಪವಿರದ ಮನುಷ್ಯನು ಭೂಲೋಕದಲ್ಲಿರಲು ಸಾಧ್ಯವೇ ?

ನಿಮ್ಮನ್ನು ರೊಚ್ಚಿಗೇಳಿಸುವ, ಕೆಣಕುವ, ಕಣ್ಣೀರು ತರಿಸುವ ಅದೇ ಗಂಡನೇ, ನಿಮ್ಮ ನಗುವಿಗೂ ನಿಮ್ಮ ಸಂತೋಷಕ್ಕೂ ಕಾರಣಕರ್ತನಲ್ಲವೇ ! ಸ್ವಲ್ಪ ಮಾತ್ರಕ್ಕೇ ಸಹಕರಿಸಿದರೆ, ಲೋಪ ದೋಷಗಳಿರುವ ಅದೇ ನಿಮ್ಮ ಗಂಡನೂ ಸಕಲ ಕಲಾ ಬಲ್ಲವನಾಗಿ ನಿಮ್ಮ ಕನಸಿನ ನಾಯಕನಾಗಿ ಪರಿವರ್ತನೆಗೊಳ್ಳುವನು.

Leave a Reply

%d bloggers like this: