ಹೆರಿಗೆಗೆ ಮುನ್ನ ನೀವು ಇವುಗಳನ್ನು ತಿಳಿದಿರಲೇ ಬೇಕು

ಯಾವಾಗ ಬೇಕಾದಾಗ ಎತ್ತಿ, ಎದೆಗಪ್ಪಿ, ಕೈಗೆತ್ತಿಕೊಂಡು, ಮುದ್ದಾಡುವಂತಹ ಪುಟ್ಟ ಕಂದಮ್ಮನ ಬಗೆಗೆ ನೀವು ಬಹಳಷ್ಟು ಹಗಲುಗನಸನ್ನು ಕಂಡಿರಬಹುದು. ಆದರೆ ಮಾಡಬೇಕಾದ ಎಲ್ಲಾ ಕಾರ್ಯಗಳ ಬಗ್ಗೆಯೂ ಪೂರ್ವ ಸಿದ್ಧತೆ ಮಾಡಿಕೊಂಡಿದ್ದರೆ, ಮಗುವಿನ ಆಗಮನದ ನಂತರವೂ ಸ್ವರ್ಗದಲ್ಲಿ ವಾಸಿಸುವಂತಹ ಅನುಭವವನ್ನು ಪಡೆಯಬಹುದು.

ನಿಮ್ಮ ಆಹಾರ

ಪ್ರಸವದ ನಂತರದ ಮೊದಲ ಕೆಲವು ತಿಂಗಳುಗಳಲ್ಲಿ ನಿಮ್ಮ ಮಗುವಿನ ಸೇವೆಯಲ್ಲಿ ನಿರತರಾಗಬೇಕಾದುದರಿಂದ, ನಿಮ್ಮ ಹೊಟ್ಟೆಯ ಬಗ್ಗೆ ಶ್ರದ್ಧೆ ವಹಿಸಲು ನಿಮಗೆ ಸಮಯ ಸಾಲದಾಗಬಹುದು.ಇದು ನೀವು ಕೂಡ ಪುನಶ್ಚೇತನ ಪಡೆದುಕೊಳ್ಳಬೇಕಾದ ಕಾಲ. ಇಂತಹ ಸಂದಿಗ್ಧ ಪರಿಸ್ಥಿತಿಗಳಿಂದ ನಿಮ್ಮನ್ನು ಕಾಯ್ದುಕೊಳ್ಳಲು, ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದಂತಹ ಪಾಸ್ತಾ, ಲಾಸಾಗ್ನೇ ಅಥವಾ ಗಂಟೆಗಟ್ಟಲೆಗಳ ಕಾಲ ಅಡುಗೆ ಕೋಣೆಯಲ್ಲೇ ಸೀಮಿತವಾಗದಿರುವಂತೆ, ನಿಮಿಷಗಳಲ್ಲೇ ತಯಾರಿಸಬಹುದಾದಂತಹ ಆಹಾರಗಳನ್ನು ಸೇವಿಸಿರಿ.

ಮಗುವಿನ ಅಗತ್ಯಗಳ ಪೂರೈಕೆ

ನಿಮ್ಮ ಅಗತ್ಯಗಳು ನೆರವೇರಿಸಿದ ಬಳಿಕ ನಿಮ್ಮ ಪ್ರೀತಿಯ ಅತಿಥಿಯ ಅಗತ್ಯಗಳನ್ನೂ ಪೂರೈಸಬೇಕು. ಮಗುವಿನ ಡಯಾಪರ್ ಇಲ್ಲವೆಂದು ತಿಳಿದು ಮಧ್ಯರಾತ್ರಿಯಲ್ಲಿ ಅಂಗಡಿಗೆ ಹೋಗಿ ತರಲಾಗದು. ಮಗುವನ್ನು ಗಂಟೆಗಟ್ಟಲೆ ಮನೆಯಲ್ಲಿ ಬಿಟ್ಟು ಸಾಮಾನುಗಳನ್ನು ತರಲು ಆಗದು. ಆದ ಕಾರಣ ಮಗುವಿಗೆ ಅಗತ್ಯವಾದ ಡಯಾಪರ್, ನ್ಯಾಪ್ಕಿನ್, ತೊಟ್ಟಿಲು, ಟಿಶ್ಯೂ ಪೇಪರ್ ,ಹಾಲು ಕುಡಿಸುವ ಬಾಟಲಿಗಳು, ಮಗುವಿನ ಸೋಪು- ಇವೇ ಮುಂತಾದ ದಿನನಿತ್ಯದ ಬಳಕೆಯ ಸಾಮಾನುಗಳನ್ನು ಅಗತ್ಯಕ್ಕಿಂತ ಹೆಚ್ಚು ಖರೀದಿಸಿಡುವುದು ತುರ್ತು ಪರಿಸ್ಥಿತಿಗಳಲ್ಲಿ ನಿಮಗೆ ಸಹಾಯವಾಗುವುದು.

ನೆಂಟರಿಷ್ಟರನ್ನು ಸ್ವಲ್ಪ ಮಟ್ಟಿಗೆ ದೂರವಿಡಿ ಮಗುವನ್ನು ನೋಡಲು ನೆಂಟರಿಷ್ಟರ ದಂಡೇ ನೆರೆಯುತ್ತದೆ. ಅವರನ್ನು ಅಷ್ಟು ಪ್ರೋತ್ಸಾಹಿಸದಿರುವುದು ನಿಮ್ಮ ಮಗುವಿನೊಂದಿಗೆ ಆರೋಗ್ಯಕರವಾದ ಸಮಯ ಕಳೆಯಲು ನೆರವಾಗುತ್ತದೆ. ನಿಮ್ಮ ಜೀವನದ ಅತ್ಯಂತ ಸಂತೋಷದಾಯಕವಾದ ಕ್ಷಣಗಳನ್ನು ಬರುವ ಆಪ್ತರ ಜೊತೆ ಕಳೆದುಕೊಳ್ಳುವಿರೇಕೆ ?

ಅಗತ್ಯದ ಸಹಾಯವನ್ನು ಕೇಳಿ ಪಡೆಯಿರಿ

ಮಗುವನ್ನು ನೀವು ಪ್ರಸವಿಸಿದ್ದೀರಿ ಎಂಬ ಒಂದು ಕಾರಣಕ್ಕಾಗಿ, ನೀವೇ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದೇನಿಲ್ಲ.

ಒಂಭತ್ತು ತಿಂಗಳು ನೀವು ಮಗುವನ್ನು ಸಲಹಿದ್ದೀರಿ. ಇದೀಗ ನಿಮ್ಮ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕಾದ ಸಮಯ. ಮಗುವನ್ನು ನೋಡಿಕೊಳ್ಳಲು ನಿಮ್ಮ ಸಂಗಾತಿಯ ನೆರವನ್ನು ಕೋರಲು ಇರುಸು ಮುರುಸು ಪಡಬೇಕಾದ್ದಿಲ್ಲ. ಮಗುವಿನ ಕಾರ್ಯಗಳಿಂದಾಗಿ ಶಾರೀರಿಕ ಹಾಗು ಮಾನಸಿಕವಾಗಿ ದುರ್ಬಲವಾಗಿರುವುದಕ್ಕಿಂತ, ಪತಿಯೊಂದಿಗಿನ ಸ್ನೇಹದ ಸಹಾಯಹಸ್ತ ಸ್ವೀಕರಿಸುವುದು ಒಳ್ಳೆಯದಲ್ಲವೇ ? ಇಲ್ಲವಾದರೆ, ನಿಮ್ಮ ತಂದೆ ತಾಯಿಗಳ ಸಹಕಾರವನ್ನು ಕೋರಬಹುದು.

ಸರಿಯಾದ ಉಡುಪುಗಳು

೬ ತಿಂಗಳು ಪ್ರಾಯವಾಗುವವರೆಗೆ, ಮಗುವಿಗೆ ತನ್ನ ಶರೀರೋಷ್ಣವನ್ನು ಕಾಯ್ದುಕೊಳ್ಳಲು ಸಾಧ್ಯವಾಗದು.ಆದ ಕಾರಣ, ಋತುಮಾನ ಹಾಗೂ ಹವಾಗುಣ ಅನುಗುಣವಾಗಿ ಬಟ್ಟೆ ಧರಿಸಿಕೊಳ್ಳುವುದು ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

Leave a Reply

%d bloggers like this: