ಹೇರ್ ಕಟ್ ಮಾಡಿಸಲು ಕರೆದೊಯ್ದರೆ ನಿಮ್ಮ ಮಗು ಅಳುವುದೇ? ಇಲ್ಲಿವೆ ನೋಡಿ 5 ಚಾಣಾಕ್ಷ ಸಲಹೆಗಳು

ತಾಯಿಯನ್ನು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಪರೀಕ್ಷೆಗೊಳಪಡಿಸುವ ಹಲವಾರು ಸಂದರ್ಭಗಳು ಎದುರಾಗುತ್ತವೆ. ಕೆಲವೊಮ್ಮೆ ಮಕ್ಕಳು ಎದುರಿಸಬೇಕಾದ ಪರೀಕ್ಷೆಗಳು, ಮಕ್ಕಳಿಗಿಂತ ತಾಯಿಯರಿಗೆ ಸಂಕಟ ಪರವಾಗಿ ಭವಿಸುವುದು. ಆದರೆ ತಾಯಿಯರು ಇದನ್ನು ಎದುರಿಸಲು ತಮ್ಮನ್ನು ತಾವು ಸಿದ್ಧವಾಗಿಟ್ಟುಕೊಂಡಲ್ಲಿ, ಯಾವುದೇ ಸಂದರ್ಭವನ್ನೂ ನಿರಾತಂಕವಾಗಿ ಎದುರಿಸಬಹುದು.ಮಗುವಿನ

ಮೊದಲ ಕೇಶ ಮುಂಡನ ಭಾರತದಾದ್ಯಂತ ಅತ್ಯಂತ ಪವಿತ್ರವಾಗಿ ಆಚರಿಸಲ್ಪಡುವ ವಿವಿಧ ವಿಧಿಗಳಲ್ಲೊಂದು.ಕುಟುಂಬದ ಪ್ರತಿ ಸದಸ್ಯರು ಉತ್ಸವದ ಸಂಭ್ರಮದಲ್ಲಿರುವಾಗ, ತಾಯಿಯ ಮನಸ್ಸು ಮಾತ್ರ ಚಡಪಡಿಸುತ್ತಿರುತ್ತದೆ. ಮಗುವಿಗೆ ಏನಾದರೂ ಅಪಾಯವಾಗಬಹುದೋ ಎಂದು ವ್ಯಾಕುಲಗೊಳ್ಳುತ್ತಿರುತ್ತದೆ.

ತಾಯಿಯರೇ, ಆರಾಮವಾಗಿರಿ. ನಿಮ್ಮ ಮನೋಭಾವವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ನಿಮ್ಮನ್ನು ಸಮಾಧಾನ ಚಿತ್ತರನ್ನಾಗಿಸಿ ನಿರಾತಂಕವಾಗಿರಿಸುವಂತೆ ನಮ್ಮಲ್ಲಿ ಕೆಲವು ಸಲಹೆಗಳಿವೆ.

(೧) ಕುರುಕು ತಿಂಡಿಗಳನ್ನು ಸಂಗ್ರಹಿಸಿಡಿ

ಮಗುವಿಗೆ ಆಗಾಗ ಹಸಿಯಬಹುದು. ಮನೆಯಿಂದ ಹೊರಗಿಳಿದ ಮೇಲೆ ಬೇಕೆಂದಾಗ, ಬೇಕಾದ ತಿನಿಸುಗಳನ್ನು ಮಗುವಿಗೆ ನೀಡಲು ಸಾಧ್ಯವಾಗದು. ಆದಕಾರಣ, ಕೇಶ ಮುಂಡನಕ್ಕೆಂದು ಮನೆಯಿಂದ ಹೊರಡುವಾಗ ಕೆಲವು ಕುರುಕಲು ತಂಡಗಳನ್ನು ಜೊತೆಯಲ್ಲಿಟ್ಟುಕೊಳ್ಳಿ.ಮಕ್ಕಳ ಗಮನವೂ ಕೈಯಲ್ಲಿರುವ ತಿಂಡಿಗಳಲ್ಲಿವುದರಿಂದ ಕ್ಷೌರಿಕನು ನಿರಾತಂಕವಾಗಿ ತನ್ನ ಕಾಯಕವನ್ನು ಮುಂದುವರೆಸುವನು. 

(೨) ಮಗುವಿನ ನೆಚ್ಚಿನ ಆಟಿಕೆಗಳನ್ನು ಆಟವಾಡಲು ನೀಡಿರಿ 

ತುಂಬಾ ಸಮಯಗಳವರೆಗೆ ಮಗುವನ್ನು ಒಂದೇ ಕಡೆಯಲ್ಲಿ ಸುಮ್ಮನೆ ಕುಳಿತುಕೊಳ್ಳಿಸಲು ಖಂಡಿತ ಸಾಧ್ಯವಾಗದು.ಮಕ್ಕಳಿಗೆ ಬಹಳ ಬೇಗನೆ ಬೇಸರ ಮೂಡುವುದು ಆದಕಾರಣ ಕೇಶ ವಿನ್ಯಾಸವೂ ನಡೆಯುತ್ತಿರುವಾಗ, ಮಕ್ಕಳನ್ನು ವ್ಯಸ್ತವಾಗಿರಿಸಲು ಅವರ ನೆಚ್ಚಿನ ಆಟಿಕೆಗಳನ್ನು ನೀಡಿ ಅದರೊಂದಿಗೆ ಆಟವಾಡಿಸುವುದರಿಂದ ಗಮನವು ಆಟಿಕೆಯಲ್ಲಿದ್ದು, ಕೇಶ ವಿನ್ಯಾಸಕರಿಗೆ ಹೆಚ್ಚಿನ ತ್ರಾಸವಾಗದು.

(೩) ಬದಲಾಯಿಸಲೊಂದು ಜತೆ ಬಟ್ಟೆ

ಕೇಶ ಮುಂಡನ ಮಾಡಿದ ಬಳಿಕ ಮನೆ ತಲುಪಲು ಎಷ್ಟು ತಡವಾಗುತ್ತದೆ ಎಂದು ಯಾರು ಬಲ್ಲರು…? ಅದರಲ್ಲೂ ಪುಟ್ಟ ಮಕ್ಕಳಿಗೆ ಕೇಶಮುಂಡನ ಮಾಡಿಸಿದ ಬಳಿಕ ಚಿಕ್ಕ ಪುಟ್ಟ ಪುಟ್ಟ ಕೂದಲುಗಳು ಬಟ್ಟೆಯೊಳಗೆ ಸೇರಿಕೊಳ್ಳುವುದು ಸಹಜ. ಇದು ಮಕ್ಕಳಿಗೆ ತುರಿಕೆಯನ್ನುಂಟುಮಾಡುವುದರಿಂದ, ಕಿರಿಕಿರಿಗೊಂಡ ಮಕ್ಕಳು ಅಳಲು ಪ್ರಾರಂಭಿಸಿದರು ಕೇಶವಿನ್ಯಾಸ ಮಾಡಿಸಿಕೊಂಡ ಬಳಿಕ ಬಟ್ಟೆ ಬದಲಾಯಿಸಲು ಸಹಕಾರವಾಗುವಂತೆ ಬಟ್ಟೆಯೊಂದನ್ನು ಜತೆಯಲ್ಲಿಟ್ಟುಕೊಳ್ಳುವುದರಿಂದ, ಇಂತಹ ಕಸಿವಿಸಿಗಳ ವಾತಾವರಣವನ್ನು ತಪ್ಪಿಸಬಹುದು.

(೪)ಬಲಪ್ರಯೋಗ ಮಾಡದಿರಿ.

ಮಿಸುಕಾಡುತ್ತಿರುವ ಮಗುವನ್ನು ಬಲಪ್ರಯೋಗಿಸಿ ಅಥವಾ ಗದರಿಸಿ ಕದಲದಂತೆ ಕುಳಿತುಕೊಳ್ಳಿಸುವ ಪ್ರಯತ್ನ ಮಾಡುವ ತಪ್ಪನ್ನು ಹಲವು ತಾಯಿಯರು ಮಾಡುತ್ತಾರೆ.ಇದರಿಂದ ಅಸಮಾಧಾನಗೊಂಡ ಮಕ್ಕಳಿಂದ ನಿರೀಕ್ಷಿತ ಫಲ ದೊರೆಯದೇ ಪರಿಸ್ಥಿತಿಯು ಹದಗೆಡುವುದು. 

(೫) ಜತೆಯಲ್ಲಿ ಇನ್ನೊಬ್ಬರನ್ನೂ ಕರೆದೊಯ್ಯಿರಿ

ನಿಮ್ಮೊಬ್ಬರಿಂದ ಮಾತ್ರ ಮಕ್ಕಳನ್ನು ಸಂಭಾಳಿಸಲು ಸಾಧ್ಯವಿಲ್ಲ. ಮಕ್ಕಳು ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದರೂ, ಇನ್ನೊಬ್ಬರ ಸಾನ್ನಿಧ್ಯವನ್ನು ಬಯಸುತ್ತಿದ್ದಾರೆನ್ನುವುದು ರಹಸ್ಯವಾಗಿ ಉಳಿದಿಲ್ಲ. ಆದ ಕಾರಣ ಮಕ್ಕಳನ್ನು ಕೇಶ ವಿನ್ಯಾಸಕಾರನಲ್ಲಿ ಕರೆದೊಯ್ಯುವಾಗ, ಅವರ ತಂದೆಯನ್ನು ಅಥವಾ ಹಿರಿಯ ಮಕ್ಕಳನ್ನು ಜತೆಯಲ್ಲಿ ಕರೆದೊಯ್ಯಿರಿ.ಅದರಲ್ಲೂ ಜತೆಯಲ್ಲಿ ಬರುವ ವ್ಯಕ್ತಿ ಹೇರ್ ಕಟ್ಟಿಂಗ್ ಮಾಡಿಸಿಕೊಂಡರೆ ಮಗುವೂ ಆರಾಮವಾಗಿರುವುದು. ಜತೆಯಲ್ಲಿ ಬರುವ ವ್ಯಕ್ತಿಯೂ ಮಗುವು ಚಟುವಟಿಕೆಯಿಂದಿರಲು ಸಹಾಯವಾಗುವರು.

Leave a Reply

%d bloggers like this: