ಗರ್ಭಪಾತದ ನಂತರ ಮತ್ತೆ ಗರ್ಭಿಣಿ ಆಗುವುದು

ಗರ್ಭಪಾತದ ನಂತರ, ಗರ್ಭಧರಿಸಲು ಪ್ರಯತ್ನಿಸಿದರು ಗರ್ಭ ನಿಲ್ಲುವುದು ಸ್ವಲ್ಪ ಕಷ್ಟವಾಗಬಹುದು. ಮಗುವನ್ನು ಕಳೆದುಕೊಂಡ ನಂತರ, ತನ್ನ ಹೃದಯ ಭಾರವನ್ನು ಕಳೆದುಕೊಂಡು ಪುನಃ ಗರ್ಭವತಿ ಆಗಲು ಪ್ರಯತ್ನಿಸುವುದು ಸರಿಯಾದ ನಿರ್ಧಾರವೇ ಆದರೂ ನೀವು ಕೆಲವು ವಿಷಯಗಳನ್ನು ತಿಳಿದುಕೊಂಡಿರಬೇಕು. ಅದು ಏನೇ ಆದರೂ ನೀವು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಮತ್ತೆ ಸರಿ ಹೋಗುವವರೆಗೂ ಕಾಯುವುದು ತುಂಬಾ ಮುಖ್ಯ.

ಮತ್ತೊಮ್ಮೆ ಗರ್ಭಧರಿಸಲು ನಾನು ಯಾವಾಗ ಪ್ರಯತ್ನಿಸಬಹುದು?

ಪುನಃ ಗರ್ಭಿಣಿಯಾಗಲು ಪ್ರಯತ್ನಿಸುವುದಕ್ಕೆ ನಿರ್ದಿಷ್ಟವಾದ ಸಮಯ ಎಂಬುದು ಇಲ್ಲ, ಆದರೆ ವೈದ್ಯರು ಮತ್ತು ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಂಸ್ಥೆಗಳು ಕನಿಷ್ಠ ಪಕ್ಷ ಕೆಲವು ತಿಂಗಳು ಆದರೂ ಕಾಯುವುದು ಸೂಕ್ತ ಎಂದು ಹೇಳುತ್ತಾರೆ, ಏಕೆಂದರೆ ಆರೋಗ್ಯಕರ ಗರ್ಭ ನಿಲ್ಲಲು ಮತ್ತು ಮಹಿಳೆಯು ದೈಹಿಕವಾಗಿ ಶಕ್ತಳಾಗಿರಲು ಇದು ಸಹಾಯ ಆಗುತ್ತದೆ ಎಂಬ ಕಾರಣದಿಂದ. ಅವಳು ಗರ್ಭಧರಿಸಲು ಪ್ರಯತ್ನಿಸಿ, ಅವಳ ದೇಹ ಅದಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ ಎಂದರೆ ಪುನಃ ಅವಳು ಗರ್ಭಪಾತವನ್ನು ಎದುರಿಸುವ ಸಂಭವ ಹೆಚ್ಚಾಗಿರುತ್ತದೆ. ಗರ್ಭಕೋಶ ಮತ್ತೆ ಆರೋಗ್ಯವಾಗಿ ತನ್ನ ಕ್ರಿಯೆ ಮಾಡಲು ಕೆಲವು ಸಮಯವನ್ನು ತೆಗೆದುಕೊಳ್ಳುತ್ತದೆ.

ಗರ್ಭಪಾತದ ನಂತರ ಯಾವುದೇ ಪರೀಕ್ಷೆ ಅಥವಾ ಚಿಕಿತ್ಸೆಯನ್ನು ಮಾಡಿಸದೇ ಹಾಗೆ ಇದ್ದರೆ(ಏನು ತೊಂದರೆ ಇಲ್ಲದಿದ್ದ ಸಮಯದಲ್ಲಿ), ತಾನು ಮುಟ್ಟು ನಿಂತ ಎರಡರಿಂದ ಮೂರನೇ ತಿಂಗಳ ನಂತರ ಗರ್ಭಧರಿಸಲು ಪ್ರಯತ್ನಿಸಬಹುದು ಎಂದು ವೈದ್ಯರು ಹೇಳುತ್ತಾರೆ.

ಮತ್ತೆ ಗರ್ಭಪಾತ ಆಗುವ ಸಾಧ್ಯತೆ ಇದೆಯೇ?

ಗರ್ಭಪಾತ ಅನುಭವಿಸಿದ ದಂಪತಿಗಳು ಮತ್ತೆ ಗರ್ಭಪಾತ ಆಗಬಹುದು ಎಂಬ ಆತಂಕವನ್ನು ಹೊಂದಿದ್ದು, ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಶೇಕಡಾ ೮೫ರಷ್ಟು ಮಹಿಳೆಯರು ಮೊದಲ ಬಾರಿಗೆ ಗರ್ಭಪಾತವಾಗಿದ್ದರು ತಮ್ಮ ಮುಂದಿನ ಗರ್ಭಾವಸ್ಥೆಯನ್ನು ಆರೋಗ್ಯವಾಗಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹಾಗೆಯೆ, ಎರಡು ಅಥವಾ ಮೂರು ಬಾರಿ ಗರ್ಭಪಾತ ಅನುಭವಿಸಿರುವ ಮಹಿಳೆಯರಲ್ಲಿ ಶೇಕಡಾ ೭೫ರಷ್ಟು ಮಹಿಳೆಯರು ಯಶಸ್ವಿಯಾಗಿ ತಮ್ಮ ಗರ್ಭವಾಸ್ಥೆಯನ್ನು ಅನುಭವಿಸಿ, ಆರೋಗ್ಯಕರ ಮಗುವನ್ನು ಪಡೆದಿದ್ದಾರೆ.

ಪುನಃ ಗರ್ಭಿಣಿಯಾಗಲು ನಾನು ಯಾವ ಸಂದರ್ಭದಲ್ಲಿ ತಜ್ಞರನ್ನು ಭೇಟಿ ಮಾಡಬೇಕು?

ವೈದ್ಯರು ನಿಮಗೆ ಕೆಲವು ಸಂದರ್ಭಗಳಲ್ಲಿ ತಜ್ಞರನ್ನು ಭೇಟಿ ಮಾಡಲು ತಿಳಿಸುವರು. ಅದು ನಿಮ್ಮ ಜೆನೆಟಿಕ್, ತಾಯಿಯ-ಭ್ರೂಣ ಎಲ್ಲವನ್ನು ಗಮನಿಸಿ ತಿಳಿಸುವರು. ಕೆಳಗಿನ ಸಮಯದಲ್ಲಿ ನೀವು ತಜ್ಞರನ್ನು ಭೇಟಿ ಮಾಡುವುದು ಒಳ್ಳೆಯದು,

೧.ಒಂದು ವೇಳೆ ನೀವು ಎರಡಕ್ಕಿಂತ ಹೆಚ್ಚು ಬಾರಿ ಗರ್ಭಪಾತವನ್ನು ಅನುಭವಿಸಿದ್ದರೆ

೨.ನಿಮಗೆ ೩೫ಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ

೩.ನಿಮಗೆ ಕಾಯಿಲೆ ಇದ್ದು, ಅದು ಗರ್ಭದ ಮೇಲೆ ಪರಿಣಾಮ ಬಿರುವುದಾದರೆ

೪.ಬಂಜೆತನದ ಸಮಸ್ಯೆ ಇದ್ದರೆ

ಪುನಃ ಯಾವಾಗ ಪ್ರಯತ್ನಿಸಬೇಕು ಎಂಬುದನ್ನು ನಾವು ಹೇಗೆ ನಿರ್ಧರಿಸಬಹುದು?

ಪುನಃ ಯಾವಾಗ ಪ್ರಯತ್ನಿಸಬೇಕು ಎಂಬುದು ನೀವು ಮಾತನಾಡಿ ತೀರ್ಮಾನಿಸಬೇಕಾದ ವಿಷಯ. ಈ ಗರ್ಭಾವಸ್ಥೆಯು ನಿಮ್ಮ ಹಳೆಯ ಗರ್ಭಪಾತದ ನೆನಪನ್ನು ಮರೆಸುವಲ್ಲಿ ಸಹಾಯವಾಗುತ್ತದೆ. ಗರ್ಭಪಾತದ ಸಮಯದಲ್ಲಿ ಅಥವಾ ಗರ್ಭಾವಸ್ಥೆಯಲ್ಲಿ ವೈದ್ಯಕೀಯ ಸಂಕೀರ್ಣ ತೊಡಕುಗಳನ್ನು ಎದುರಿಸಿದ್ದರೆ, ನೀವು ವೈದ್ಯರ ಬಳಿ ಮೊದಲು ಚರ್ಚೆ ಮಾಡುವುದು ಉತ್ತಮ.

Leave a Reply

%d bloggers like this: