ಗರ್ಭಾವಸ್ಥೆಯಲ್ಲಿ ಸಾಮಾನ್ಯ ತ್ವಚೆ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರ

ಗರ್ಭಾವಸ್ಥೆಯಲ್ಲಿ ಹಲವು ತೊಂದರೆಗಳು ಅಥವಾ ತೊಡಕುಗಳು ಎದುರಾಗುವುದು ಸಾಮಾನ್ಯ ಎಂದು ನಿಮಗೂ ತಿಳಿದಿದೆ, ಇದಕ್ಕೆ ದೇಹದಲ್ಲಾಗುವ ಬದಲಾವಣೆ ಮತ್ತು ಹಾರ್ಮೋನುಗಳ ಬದಲಾವಣೆ ಕಾರಣ ಇರಬಹುದು. ಇದರಲ್ಲಿ ತ್ವಚೆಯ ಸಮಸ್ಯೆ ಕೂಡ ತುಂಬಾ ಸಾಮಾನ್ಯವಾಗಿದೆ.

ತ್ವಚೆಯ ಸಮಸ್ಯೆ ಏಕೆ ಆಗುತ್ತದೆ?

ನೀವು ಗರ್ಭಿಣಿ ಆಗಿದ್ದಾಗ, ನಿಮ್ಮ ದೇಹದಲ್ಲಿ ಹಲವು ರಾಸಾಯನಿಕ ಮತ್ತು ಜೈವಿಕ ಬದಲಾವಣೆಗಳು ಆಗುತ್ತದೆ, ಇವುಗಳು ನಿಮ್ಮ ತ್ವಚೆಯ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಸೋಂಕು ಕೂಡ ನಿಮ್ಮ ತ್ವಚೆಗೆ ಹಾನಿ ಉಂಟು ಮಾಡಬಹುದು. ನೀವು ಈ ಸಮಯದಲ್ಲಿ ಬಳಸುವ ಸೌಂದರ್ಯ ವರ್ಧಕಗಳ ಬಗ್ಗೆ ಎಚ್ಚರವಹಿಸುವುದು ಉತ್ತಮ.

ಗರ್ಭಾವಸ್ಥೆಯಲ್ಲಿ ಸಾಮಾನ್ಯವಾದ ಕೆಲವು ತ್ವಚೆಯ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರವನ್ನು ಇಲ್ಲಿ ಕಾಣಬಹುದು

೧.ಮೊಡವೆ

ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸುವ ಸಮಸ್ಯೆ ಎಂದರೆ, ಮೊಡವೆ, ಅದರಲ್ಲೂ ಮೊದಲನೇ ತ್ರೈಮಾಸಿಕದಲ್ಲಿ ಇದು ಸಾಮಾನ್ಯವಾಗಿ ಮಹಿಳೆಯರಿಗೆ ತಲೆನೋವಾಗಿ ಕಾಡುತ್ತದೆ. ಅಧಿಕ ಮಟ್ಟದ ಹಾರ್ಮೋನುಗಳು, ಅದರಲ್ಲೂ ವಿಶೇಷವಾಗಿ ಆಂಡ್ರೋಜೆನ್ಸ್, ಸೆಬಮ್ ಅನ್ನು ಹೆಚ್ಚು ಉತ್ಪಾದಿಸುವಂತೆ ಪ್ರೇರೇಪಿಸುತ್ತದೆ. ಈ ಸೆಬಮ್ ನಿರ್ಜಿವ ಚರ್ಮವನ್ನು ಹೊಂದಿದ್ದು, ಕಪ್ಪು ರಂಧ್ರವನ್ನು ಹೊಂದಿದೆ ಮತ್ತು ಇದು ಬ್ಯಾಕ್ಟೀರಿಯಾ ಬೆಳೆಯಲು ನೆರವಾಗುತ್ತದೆ.

ತಡೆಯುವುದು

ಸ್ವಚ್ಛ ಮಾಡುವುದು, ತೇವಾಂಶದಿಂದ ಇರುವಂತೆ ನೋಡಿಕೊಳ್ಳುವುದು ಮೊಡವೆಯನ್ನು ಕಡಿಮೆ ಮಾಡಲು ಇರುವ ಮಂತ್ರವಾಗಿದೆ.

ಫೇಸ್ ವಾಶ್ ಅಥವಾ ಮೃದುವಾದ ಸೋಪಿನಿಂದ ಮುಖವನ್ನು ತೊಳೆಯಿರಿ.

ಮೊಡವೆಯನ್ನು ಜಿಗುಟ ಬೇಡಿ ಅಥವಾ ಉಜ್ಜಬೇಡಿ ಅಥವಾ ಅದನ್ನು ಮುಟ್ಟದೆ ಇರುವುದು ಒಳ್ಳೆಯದು.

ಪರಿಹಾರ

೧.ಪುದಿನ ಸೊಪ್ಪಿನ ರಸವನ್ನು ಪೇಸ್ಟ್ ತರಹ ಮಾಡಿ, ಮುಖಕ್ಕೆ ಹಚ್ಚಿರಿ. ೨೦ ನಿಮಿಷಗಳ ಬಳಿಕ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

೨.ವೈದ್ಯರು ಸಲಹೆ ನೀಡಿದ ಜೆಲ್ ಅನ್ನು ಬಳಸಿ.

೨.ಶಾಖ ರಾಷೆಸ್

ಇದು ಬಟ್ಟೆ ಮತ್ತು ಚರ್ಮದ ಅತಿಯಾದ ಘರ್ಷಣೆ ಇಂದ ಉಂಟಾಗಬಹುದು ಅಥವಾ ಒದ್ದೆ ಬಟ್ಟೆಯನ್ನು ಹಾಕಿಕೊಂಡಿರುವುದರಿಂದ ಇದು ಆಗಬಹುದು. ಇದು ಕಿರಿಕಿರಿ ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಇದು ಸಾಮಾನ್ಯವಾಗಿ ಮೊಲೆ ತೊಟ್ಟು, ತೊಡೆ ಮತ್ತು ಯೋನಿಯ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ತಡೆಗಟ್ಟುವುದು

ಬಿಸಿ ನೀರಿನ ಸ್ನಾನ ಮಾಡಿ.

ಸುಗಂಧ ದ್ರವ್ಯ, ಲೋಷನ್ ಮತ್ತು ಕಠಿಣ ಸೋಪುಗಳ ಬಳಕೆಯನ್ನು ನಿಲ್ಲಿಸಿ.

ನಿಮ್ಮ ದೇಹಕ್ಕೆ ಸೂಕ್ತವಾದ ಹತ್ತಿ ಬಟ್ಟೆಯನ್ನು ಧರಿಸಿ. ಬಟ್ಟೆಯು ಒದ್ದೆಯಾಗದಂತೆ ನೋಡಿಕೊಳ್ಳಿ.

ಪರಿಹಾರ

ಸೋಂಕಿತ ಜಾಗಕ್ಕೆ ತಣ್ಣನೆಯ ಅನುಭವವನ್ನು ನೀಡಿ.

ಕ್ಯಾಲಮೈನ್ ಲೋಷನ್ ಅನ್ನು ಉಪಯೋಗಿಸಿ.

ವೈದ್ಯರ ಸಲಹೆ ಪಡೆಯಿರಿ.

೩.ತುರಿಕೆ/ಕಡಿತ

ಗರ್ಭಾವಸ್ಥೆಯಲ್ಲಿ ತುರಿಕೆ ಸಾಮಾನ್ಯ. ಇದು ಸಾಮಾನ್ಯವಾಗಿ ಹಸ್ತ ಮತ್ತು ಪಾದಗಳಲ್ಲಿ ಕಂಡು ಬರುತ್ತದೆ. ಇದಕ್ಕೆ ನಿಮ್ಮ ರಕ್ತದಲ್ಲಿರುವ ಕೊಲೆಸ್ಟಾಸಿಸ್ ಎಂಬ ಪಿತ್ತರಸ ಕಾರಣ.

ಪರಿಹಾರ

ವಿಟಮಿನ್ ಎ ಮತ್ತು ಡಿ ಇರುವ ಆಹಾರಗಳನ್ನು ಹೆಚ್ಚು ಸೇವಿಸಿ.

ಹೆಚ್ಚು ನೀರನ್ನು ಕುಡಿಯಿರಿ.

ಬೀಟ್ರೂಟ್ ಅನ್ನು ಸೇವಿಸಿ.

ಲೋಗಸರವನ್ನು ಉಪಯೋಗಿಸಿ.

೪.ಮೆಲಾಸ್ಮಾ

ಇದನ್ನು ಸಾಮಾನ್ಯವಾಗಿ ಗರ್ಭಾವಸ್ಥೆಯ ಮುಖವಾಡ ಎಂದು ಕರೆಯುವರು. ಇದು ಸಾಮಾನ್ಯವಾಗಿ ಮುಖದ ಮೇಲೆ ಅದರಲ್ಲೂ ಹಣೆ, ಕೆನ್ನೆ ಮತ್ತು ಗಲ್ಲದ ಭಾಗದಲ್ಲಿ ಕಪ್ಪು ಬಣ್ಣದಲ್ಲಿ ಕಾಣಿಸುತ್ತದೆ.

ತಡೆಗಟ್ಟುವುದು

ಮಧ್ಯಾಹ್ನದ ಬಿಸಿಲಿನಲ್ಲಿ ನಿಂತುಕೊಳ್ಳಬೇಡಿ.

ಅಗತ್ಯವಿರುವ ನೀರು ಸೇವಿಸಿ.

ಪರಿಹಾರ

ಹರಿಶಿಣ ಮತ್ತು ಕೊಬ್ಬರಿ ಎಣ್ಣೆಯ ಪೇಸ್ಟ್ ಅನ್ನು ಹಚ್ಚಿರಿ. ೧೦ ನಿಮಿಷದ ನಂತರ ಬೆಚ್ಚಗಿನ ನೀರಲ್ಲಿ ತೊಳೆದುಕೊಳ್ಳಿ.

ಗಿಡಮೂಲಿಕೆ ಬಳಸಿಕೊಂಡು ನಿರ್ಜಿವ ಚರ್ಮವನ್ನು ಪದರ ಪದರವಾಗಿ ತೆಗೆದುಹಾಕಿ.

Leave a Reply

%d bloggers like this: