ನಿಮ್ಮ ಮಗಳಿಗೆ ಮುಜುಗರ ಉಂಟಾಗದಂತೆ ಅವಳೊಂದಿಗೆ ಪಿರಿಯಡ್ಸ್ ಬಗ್ಗೆ ಮಾತಾಡಲು 6 ದಾರಿಗಳು

ಅವಳು ಇನ್ನೂ ಚಿಕ್ಕವಳಿದ್ದಾಗ, ನಿಮಗೆ “ಅದರ” ಬಗ್ಗೆ ಅವಳೊಂದಿಗೆ ಮಾತಾಡೋದಕ್ಕೆ ಇನ್ನೂ ಸಿಕ್ಕಾಪಟ್ಟೆ ಸಮಯ ಇದೆ ಎಂದು ಅನಿಸಬಹುದು. ನೀವು ಇನ್ನು ಅವಳಿಗೆ ಸರಿಯಾಗಿ ನಿದ್ದೆ ಮಾಡಿಸಲು, ತಿನಿಸಲು, ಬಟ್ಟೆ ಬದಲಾಯಿಸಲು ಕಷ್ಟ ಪಡುತ್ತಿರುವಾಗ, ಹೇಗೆ ಆದರೂ ನಿಮ್ಮ ತಲೆಯಲ್ಲಿ ಮೈ ನೆರೆಯುವಿಕೆಯ ಬಗ್ಗೆ ಯೋಚನೆ ಹೇಗೆ ಬಂದಿತು ಹೇಳಿ? ಆದರೆ, ಹೆಣ್ಣು ಮಕ್ಕಳು ನೋಡು ನೋಡುತ್ತಿದ್ದಂತೆ, ನಮಗೆ ತಿಳಿಯದೆ, ಬಹಳ ಬೇಗ ಬೆಳೆದು ಬಿಡುತ್ತಾರೆ. ನೀವು ಊಹಿಸಿದ್ದಕ್ಕಿಂತ ಬೇಗ ನಿಮ್ಮ ಮಗಳ ಜೊತೆ ಋತುಚಕ್ರ, ಋತುಸ್ರಾವದ ಬಗ್ಗೆ ಮಾತಾಡುವ ಸಮಯ ಬಂದು ಬಿಡುತ್ತದೆ. ಇಂತಹ ಸಂದರ್ಭವನ್ನ ನೀವು ಸಮರ್ಥವಾಗಿ ನಿಭಾಯಿಸಲು ನಮ್ಮಲ್ಲಿ ಕೆಲವು ಸಲಹೆಗಳಿವೆ ಓದಿ :

೧. ನಿಮ್ಮ ಕುಟುಂಬದ ಡಾಕ್ಟರ್ ಬಳಿಯ ಜನರಲ್ ಚೆಕ್-ಅಪ್ ಅಲ್ಲಿ ಮೊದಲ ಋತುಸ್ರಾವದ ವಿಷಯ ಇರಲಿ

ನೀವು ನಿಮ್ಮ ಮಕ್ಕಳ ಅರೋಗ್ಯಕ್ಕಾಗಿ ವೈದ್ಯಕೀಯ ಸಲಹೆ ಪಡೆಯಲು ನೀವು ಯಾವಾಗಲು ನಂಬಿರುವ ಒಂದು ವೈದ್ಯರೊಡನೆ ಜನರಲ್ ಚೆಕ್-ಅಪ್ ಮಾಡಿಸುತ್ತಿರುತ್ತೀರಾ. ನಿಮ್ಮ ಮಗಳ ಜೊತೆ ಋತುಸ್ರಾವದ ಬಗ್ಗೆ ಚರ್ಚೆ ಶುರು ಮಾಡಲು ವೈದ್ಯರು ಸಹಕಾರಿ ಆಗುತ್ತಾರೆ. ಸಹಜವಾಗಿ 11 ವರ್ಷ ಮೇಲ್ಪಟ್ಟ ಹುಡುಗಿಯರ ಪ್ರಕರಣಗಳಲ್ಲಿ ಮಕ್ಕಳ ತಜ್ಞರು ದೇಹದ ಬದಲಾವಣೆಗಳ ವಿಷಯದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ.

ಮಕ್ಕಳ ತಜ್ಞೆ ಕ್ಯಾಥರೀನ್ ಗ್ರಿಚೆನ್ ಹೇಳುವ ಪ್ರಕಾರ ಅವರು ಸಹಜವಾಗಿ  11 ವರ್ಷ ಮೇಲ್ಪಟ್ಟ ಹುಡುಗಿಯರೊಂದಿಗೆ ಮೊದಲ ಬಾರಿ ಋತುಚಕ್ರದ ಬಗ್ಗೆ ಪ್ರಸ್ತಾಪಿಸುತ್ತಾರೆ ಮತ್ತು ಸಹಜವಾಗಿ ಅವರ ಮೊದಲ ಪ್ರಶ್ನೆ “ಹುಡುಗಿಯರ ದೇಹದಲ್ಲಿ ಬದಲಾವಣೆ ಕಾಣಿಸಿಕೊಳ್ಳುವ ವಯಸ್ಸಿನಲ್ಲಿ ನೀನು ಇದ್ದೀಯ. ನಿನ್ನಲ್ಲೂ ಯಾವುದಾದರು ಬದಲಾವಣೆಗಳು ಆಗಿದೆಯಾ? ಆ ಬದಲಾವಣೆ ಬಗ್ಗೆ ನಿನಿಗೆ ಏನಾದರು ಪ್ರಶ್ನೆಗಳು ಇವೆಯೇ?” ಎಂಬುದಾಗಿರುತ್ತದೆ.

ನೀವು ಈ ಋತುಚಕ್ರದ ವಿಷಯವನ್ನ ಇತರೆ ಆರೋಗ್ಯದ ಬಗೆಗಿನ ವಿಷಯಗಳೊಂದಿಗೆ ಸೇರಿಸಿ ಮಾತನಾಡಿದರೆ, ಅದು ಮಕ್ಕಳಿಗೆ ಅದು ಕೂಡ ಒಂದು ಸಹಜ ವಿಷಯ ಹಾಗು ಅದರಲ್ಲಿ ಸಂಕೋಚ ಅಥವಾ ನಾಚಿಕೆ ಪಟ್ಟುಕೊಳ್ಳುವಂತದ್ದು ಏನು ಇಲ್ಲ ಎಂಬುದು ತಿಳಿದುಕೊಳ್ಳುತ್ತಾರೆ.

೨. ಅಗತ್ಯವಿರುವ ವಸ್ತುಗಳಿಗೆ ಜೊತೆಯಲ್ಲೇ ಮಗಳನ್ನ ಕರೆದೊಯ್ಯಿರಿ

ಪಿರಿಯಡ್ಸ್ ಎನ್ನುವುದು ಸಹಜ ಎಂದು ತೋರಿಸಲು ಇನ್ನೊಂದು ವಿಧಾನವಿದೆ. ನೀವು ಮುಂದಿನ ಬಾರಿ ಮೆಡಿಕಲ್ ಸ್ಟೋರಿಗೆ ಹೋಗಬೇಕಾದರೆ ನಿಮ್ಮ ಮಗಳನ್ನ ಜೊತೆಗೆ ಕರೆದೊಯ್ಯಿರಿ. ನಂತರ, ನಿಮಗೆ ಬೇಕಿರುವ ಅಗತ್ಯ ಸಾಮಗ್ರಿಗಳಾದ ಪ್ಯಾಡ್ಸ್ , ಟ್ಯಾಂಪಾನ್ಸ್ , ಮಾತ್ರೆಗಳು ಮತ್ತು ಇತರೆ ವಸ್ತುಗಳನ್ನ ಖರೀದಿಸಿ. ನೀವು ಇವುಗಳನ್ನ ಗಲ್ಲಾ ಪೆಟ್ಟಿಗೆ ಮುಂದೆ ಕೂತಿರುವವರ ಬಳಿ ತರಲು ಸಂಕೋಚ ಪಟ್ಟುಕೊಳ್ಳದೆ ಸಹಜವಾಗಿ ದುಡ್ಡು ಕೊಟ್ಟು ಖರೀದಿ ಮಾಡಿದರೆ, ಈ ವಸ್ತುಗಳು ಕೂಡ ಶ್ಯಾಂಪೂ ಅಥವಾ ಸೋಪ್ ಖರೀದಿಸಿದಷ್ಟೇ ಸಹಜ ಎನ್ನುವುದು ಮನವರಿಕೆ ಆಗುತ್ತದೆ.

೩. ಪ್ರಶ್ನೆಗಳನ್ನ ನೀವೇ ಮೊದಲು ಕೇಳಿ

ನೀವು ಒಂದೇ ಬಾರಿಗೆ ಋತುಚಕ್ರದ ಬಗ್ಗೆ ದೊಡ್ಡ ಉಪನ್ಯಾಸ ನೀಡುವ ಬದಲು, ಆಗಾಗ್ಗೆ ಚಿಕ್ಕದಾಗಿ ಚರ್ಚೆ ಮಾಡುವುದು ಒಳ್ಳೆಯದು. ಒಂದೇ ಬಾರಿಗೆ ಮಕ್ಕಳನ್ನ ಎಲ್ಲಾ ಮಾಹಿತಿಯೊಂದಿಗೆ ತಬ್ಬಿಬ್ಬು ಮಾಡಬೇಡಿ. ಎಲ್ಲದಕ್ಕಿಂತ ಮುಖ್ಯವಾಗಿ ಅವರು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಪ್ರಾಮಾಣಿಕವಾಗಿ ಉತ್ತರ ನೀಡಿ. ನೀವು ಅವರಲ್ಲಿ ಇದರ ಬಗೆಗಿನ ಪ್ರಶ್ನೆಗಳನ್ನ ಚರ್ಚಿಸಲು ಉತ್ತಮ ಅವಕಾಶ ಎಂದರೆ ಟಿವಿ ಅಲ್ಲಿ ಬರುವ ಸ್ಯಾನಿಟರಿ ಪ್ಯಾಡ್ಸ್ ಜಾಹೀರಾತುಗಳು. ನೀವು ಮತ್ತು ಮಗಳು ಟಿವಿ ನೋಡುವಾಗ ಈ ಜಾಹಿರಾತುಗಳು ಬಂದರೆ, ಅವುಗಳ ಬಗ್ಗೆ ನಿಮ್ಮ ಮಗಳಿಗೆ ಏನು ಗೊತ್ತು ಎಂಬುದು ನೀವೇ ಕೇಳಿ. ಅಲ್ಲದೆ, ಆಕೆ ತನ್ನ ಸ್ನೇಹಿತೆಯರು ಅಥವಾ ಇಂಟರ್ನೆಟ್ ಇಂದ ಏನಾದರು ತಪ್ಪು ಮಾಹಿತಿ ಗ್ರಹಿಸಿದ್ದರೆ, ಅವುಗಳನ್ನ ಸರಿಪಡಿಸಿ. ನಿಮ್ಮ ಮಗಳು ತನ್ನ ದೇಹವನ್ನು ಸರಿಯಾಗಿ ಅರ್ಥೈಸಿಕೊಳ್ಳುವಂತೆ ನೀವು ಮಾಡಿದರೆ, ಉಳಿದೆಲ್ಲಾ ವಿಷಯಗಳು ಚರ್ಚಿಸಲು ಸುಲಭವಾಗುತ್ತವೆ.

ಇಷ್ಟೇ ಅಲ್ಲದೆ, ತಜ್ಞೆ ಕ್ಯಾಥರೀನ್ ಹೇಳುವಂತೆ, ನೀವು ನಿಮ್ಮ ಮಕ್ಕಳಿಗೆ ಋತುಚಕ್ರದ ನೋವು, ಉಳುಕು, ರಕ್ತಸ್ರಾವ ಅಂತಹ ನಕಾರಾತ್ಮಕ ವಿಷಯಗಳ ಬಗ್ಗೆ ಮಾತ್ರವೇ ಹೇಳದೆ, ಸಕಾರಾತ್ಮಕ ವಿಷಯಗಳಾದ ಆಕೆ ಈಗ ಹೆಣ್ಣಾಗಿ ಪರಿವರ್ತನೆ ಆಗುತ್ತಿದ್ದಾಳೆ, ಅವಳು ಭವಿಷ್ಯದಲ್ಲಿ ಇದರಿಂದಲೇ ತಾಯಿ ಆಗುವುದು ಎಂಬ ವಿಷಯಗಳನ್ನೂ ಅವರಿಗೆ ತಿಳಿಸುವುದು ಬಹಳ ಮುಖ್ಯ.

೪. ಸೆಕ್ಸ್ ಮತ್ತು ಪಿರಿಯಡ್ಸ್ ಎರಡನ್ನೂ ಒಂದೇ ವಿಷಯ ಎಂದು ಭಾವಿಸಬೇಡಿ

ದೇಹದ ಬೆಳವಣಿಗೆ ಮತ್ತು ಮೈ ನೆರೆಯುವಿಕೆ ಎನ್ನುವುದು ಲೈಂಗಿಕತೆಗೆ ಬಹಳ ದೂರವಾದ ವಿಷಯ. ಬಹಳಷ್ಟು ಬಾರಿ ಪೋಷಕರು ಇವೆರೆಡು ವಿಷಯಗಳನ್ನ ಒಂದೇ ತಕ್ಕಡಿಯಲ್ಲಿ ತೂಗಿ, ಈ ವಿಷಯಗಳ ಬಗ್ಗೆ ಮಾತಾಡಲು ಮಕ್ಕಳು ಇನ್ನೂ ದೊಡ್ಡವರಾಗಿಲ್ಲ ಎಂದು ಸಂಕೋಚ ಪಟ್ಟುಕೊಂಡು ಸುಮ್ಮನಾಗಿ ಬಿಡುವರು. ಆದರೆ ಮಕ್ಕಳ ತಜ್ಞರ ಪ್ರಕಾರ ಬಹುತೇಕ ಹುಡುಗಿಯರಿಗೆ ಈ ಮೈ ನೆರೆಯುವಿಕೆಯ ಬದಲಾವಣೆಗಳು ಆಗಿ ಹೋಗುವವರೆಗೆ ಲೈಂಗಿಕತೆಯ ಬಗ್ಗೆ ಆಸಕ್ತಿಯೇ ಹೊಂದಿರುವುದಿಲ್ಲ ಮತ್ತು ಅದರ ಬಗ್ಗೆ ಹೆಚ್ಚಿನ ಮಾಹಿತಿಯು ಇರುವುದಿಲ್ಲ. ಹೀಗಾಗಿ ನೀವು ಋತುಚಕ್ರ, ಋತುಸ್ರಾವದ ಬಗ್ಗೆ ಮಾತಾಡಬೇಕು ಎಂದಾಗ ಸಂಕೋಚದಿಂದ ಹಿಂಜರಿಯಬೇಡಿ.

೫. ನಿಮ್ಮ ಮಗಳು ತಾನಾಗಿಯೇ ಕೂಡ ಕಲಿತುಕೊಳ್ಳಲು ಬಿಡಿ

ಕೆಲವು ಹುಡುಗಿಯರು ಈ ವಿಷಯದ ಬಗ್ಗೆ ತಾವೇ ತಿಳಿದುಕೊಳ್ಳಲು ಇಷ್ಟಪಡುತ್ತಾರೆ ಮತ್ತು ಹೀಗೆ ತಿಳಿದುಕೊಳ್ಳುವಾಗ ತಮ್ಮಲ್ಲಿ ಏನಾದರು ಪ್ರಶ್ನೆಗಳು ಉದ್ಭವಿಸಿದರೆ ಮಾತ್ರ ಅವುಗಳನ್ನ ಕೇಳುತ್ತಾರೆ. ಇದು ಪೋಷಕರು ಮತ್ತು ಮಗಳಿಗೆ, ಇಬ್ಬರಿಗೂ ಮುಜುಗರ ಉಂಟಾಗುವುದು ಕಡಿಮೆ ಮಾಡುತ್ತದೆ. ನೀವು ನಿಮ್ಮ ಮಗಳೊಂದಿಗೆ ಎಂತಹ ಮುಕ್ತ ಸಂಬಂಧ ಹೊಂದಿದ್ದರೂ, ಕೆಲವು ಹುಡುಗಿಯರಿಗೆ ಇದರ ಬಗ್ಗೆ ತಾವಾಗಿಯೇ ತಿಳಿಯುವುದು ಇಷ್ಟ ಆಗುತ್ತದೆ. ಹೀಗಾಗಿ ನೀವು ಮಾಡಬಹುದಾದ ಒಂದು ಕೆಲಸ ಎಂದರೆ, ಅದು ಪತ್ರಿಕೆಗಳಲ್ಲಿ ಇದರ ಬಗ್ಗೆ ಯಾವುದಾದರು ಲೇಖನಗಳು ಬಂದಿದ್ದರೆ, ಅವುಗಳನ್ನ ಆಕೆ ಓದುವಂತೆ ಮಾಡುವುದು ಮತ್ತು ಇಂಟರ್ನೆಟ್ ಮೂಲಕ ಇದರ ಮಾಹಿತಿ ಪಡೆಯುವಂತೆ ಆಕೆಗೆ ಪ್ರೋತ್ಸಾಹಿಸುವುದು. ಮನೆಯಲ್ಲಿ ಇಬ್ಬರು ಪೋಷಕರು ಯಾವಾಗಲು ಬ್ಯುಸಿ ಇದ್ದರೆ ಅಥವಾ ತಾಯಿ/ಮಗಳು ತುಂಬಾ ಸಂಕೋಚ ಹೊಂದಿರುವವರು ಆಗಿದ್ದರೆ, ಇದು ತುಂಬಾನೇ ಉಪಯುಕ್ತ.

೬. ಇತರರನ್ನು ಈ ಚರ್ಚೆಗೆ ಒಳಪಡಿಸಿಕೊಳ್ಳುವುದು

ಒಂದು ವೇಳೆ ತಾಯಿಯಾಗಿ ನೀವು ಬಹಳ ಕಾರ್ಯನಿರತರಾಗಿದ್ದಾರೆ ಅಥವಾ ನಿಮ್ಮ ಮಗಳು ಇನ್ನೊಬ್ಬರು ಯಾರಾದರೊಡನೆ ಹೆಚ್ಚು ಮುಕ್ತವಾಗಿ ಮಾತಾಡಲು ಇಷ್ಟಪಡುತ್ತಾಳೆ ಎಂದರೆ, ಆಕೆ ಯಾರೊಂದಿಗೆ ಹೆಚ್ಚಾಗಿ ಬೆರೆಯುತ್ತಾಳೆ ಎಂಬುದನ್ನ ಗುರುತಿಸುವುದು ಬಹಳ ಮುಖ್ಯ. ಅದು ಅಕ್ಕ, ಚಿಕ್ಕಮ್ಮ, ಅಜ್ಜಿ ಅಥವಾ ಇನ್ಯಾರಾದರೂ ಆಗಿರಬಹುದು. ಇದು ಡೈವೋರ್ಸ್ ಆಗಿರುವ ಕುಟುಂಬಗಳಲ್ಲಿ  ಕೇವಲ ತಂದೆ ಮಾತ್ರ ಹೊಂದಿರುವ ಮಕ್ಕಳು ಇರುವ ಕುಟುಂಬಗಳಲ್ಲಿ ತುಂಬಾ ಸಹಕಾರಿ.

Leave a Reply

%d bloggers like this: