ಸಿಸೇರಿಯನ್ ಬಳಿಕ ಮೊದಲ ಮುಟ್ಟು(ಪಿರಿಯಡ್) : ಯಾವಾಗ ಆಗುತ್ತದೆ ಮತ್ತು ಅದು ಹೇಗಿರುತ್ತದೆ?

ಗರ್ಭಾವಸ್ಥೆಯಲ್ಲಿ ಮಹಿಳೆಯರು ತಮ್ಮ ಋತುಚಕ್ರದಿಂದ ದೂರವಿರುತ್ತಾರೆ. ಅದು ಗರ್ಭಾವಸ್ಥೆಯ ೯ ತಿಂಗಳು ಮತ್ತು ಮುಂದಿನ ಕೆಲವು ತಿಂಗಳು. ಆದರೆ ಅದು ಖಂಡಿತವಾಗಿ ಹೆರಿಗೆಯ ನಂತರ ಬಂದೆ ಬರುತ್ತದೆ. ಅದು ಸಾಮಾನ್ಯ ಹೆರಿಗೆ ಆಗಿರಲಿ ಅಥವಾ ಸಿಸೇರಿಯನ್ ಹೆರಿಗೆ ಆಗಿರಲಿ ಪುನಃ ಋತುಚಕ್ರವನ್ನು ನೀವು ಅನುಭವಿಸುವಿರಿ. ಅದು ಮತ್ತೆ ಯಾವಾಗ ಆಗುತ್ತದೆ?, ಇದು ನೀವು ಎದೆಹಾಲುಣಿಸುವ ಮತ್ತು ಕೆಲವು ಬೇರೆ ವಿಷಯಗಳ ಮೇಲೆ ಅವಲಂಬಿತವಾಗಿದೆ.

ಸಿಸೇರಿಯನ್ ನಂತರ ನಿಮ್ಮ ಮೊದಲ ಪಿರಿಯೆಡ್ ಯಾವಾಗ?

ಹೆರಿಗೆ ನಂತರ ನೀವು ಮುಟ್ಟಾಗುವುದು, ನೀವು ಎದೆಹಾಲುಣಿಸುವ ಮತ್ತು ನಿಮ್ಮ ಹಾರ್ಮೋನುಗಳು ಮತ್ತೆ ತಮ್ಮ ಸಾಮಾನ್ಯ ಸ್ಥಿತಿಗೆ ಬರುವುದರ ಮೇಲೆ ಅವಲಂಭಿತವಾಗಿದೆ.

ನೀವು ಎದೆಹಾಲು ಕುಡಿಸುತ್ತಿದ್ದರೆ, ಪ್ರೊಲಾಕ್ಟಿನ್ ಎಂಬ ಹಾರ್ಮೋನು ಎಂದು ಕಡಿಮೆಯಾಗುವುದಿಲ್ಲ, ಮತ್ತು ಈ ಸಮಯದಲ್ಲಿ ನೀವು ಮೊಟ್ಟೆಯನ್ನು ಉತ್ಪತ್ತಿ ಮಾಡಲು ಆಗುವುದಿಲ್ಲ, ಅಂದರೆ, ನೀವು ಋತುಚಕ್ರವನ್ನು ಅನುಭವಿಸುವುದಿಲ್ಲ.

ನೀವು ಅತಿ ಹೆಚ್ಚಾಗಿ ಎದೆಹಾಲುಣಿಸುತ್ತಿದ್ದರೆ, ಪ್ರೊಲಾಕ್ಟಿನ್ ಎಂಬ ಹಾರ್ಮೋನಿನ ಮಟ್ಟ ಜಾಸ್ತಿ ಆಗಿ, ನೀವು ಅಂಡೋತ್ಪತ್ತಿ ಮಾಡಲು ಸಾಧ್ಯವಾಗುವುದಿಲ್ಲ, ಅದು ಕನಿಷ್ಠ ೬ ತಿಂಗಳು, ಇದು ಬುಕ್ ಮ್ಯಾಟರ್ನಲ್ ನರ್ಸಿಂಗ್ ಕೇರ್ ಪ್ರಕಾರ.

ನೀವು ಎದೆಹಾಲನ್ನು ನೀಡುತ್ತಿಲ್ಲವಾದರೆ, ಹೆರಿಗೆಯಾದ ೬ ರಿಂದ ೮ ವಾರಗಳ ನಂತರ ನಿಮ್ಮ ಮೊದಲ ಋತುಚಕ್ರವನ್ನು ಅನುಭವಿಸಬಹುದು.

ನೆನಪಿನಲ್ಲಿಟ್ಟುಕೊಳ್ಳಿ,

೧.ನೀವು ಎದೆಹಾಲುಣಿಸುವುದನ್ನು ನಿಲ್ಲಿಸುವ ವರೆಗೂ ನಿಮ್ಮ ಪಿರಿಯಡ್ ಅನ್ನು ಅನುಭವಿಸದೇ ಇರಬಹುದು. ಆದರೆ ಕೆಲವು ಮಹಿಳೆಯರು ಎದೆಹಾಲುಣಿಸುತ್ತಿದ್ದರು, ಕೆಲವು ತಿಂಗಳು ನಂತರ ಅವರ ಋತುಚಕ್ರವನ್ನು ಮರಳಿ ಪಡೆಯುತ್ತಾರೆ.

೨.ನೀವು ನಿಮ್ಮ ಮಗುವನ್ನು ಕಡಿಮೆ ಪೋಷಣೆ ಮಾಡಿದಷ್ಟು ನೀವು ಬೇಗನೆ ಋತುಚಕ್ರವನ್ನು ಮರಳಿ ಪಡೆಯುವಿರಿ. ಅಂದರೆ, ನಿಮ್ಮ ಮಗು ರಾತ್ರಿ ಎದೆ ಹಾಲು ಕುಡಿಯದೆ ಮಲುಗಲು ಪ್ರಾರಂಭಿಸಿದರೆ ಅಥವಾ ಬಾಟಲಿ ಹಾಲನ್ನು ನೀಡಿದರೆ, ನೀವು ಬೇಗನೆ ನಿಮ್ಮ ಪಿರಿಯಡ್ ಅನ್ನು ಮರಳಿ ಪಡೆಯಬಹುದು.

೩.ಎದೆಹಾಲುಣಿಸುವುದು ಜನನ ನಿಯಂತ್ರಣ ಮಾಡುತ್ತದೆ ಎಂದು ಖಚಿತವಾಗಿ ಅಥವಾ ನಿಖರವಾಗಿ ಹೇಳಲಾಗುವುದಿಲ್ಲ. ನೀವು ನಿಮ್ಮ ಹೆರಿಗೆಯ ನಂತರ ಮೊದಲ ಪಿರಿಯಡ್ ಅನ್ನು ಮರಳಿ ಪಡೆಯುದರ ಮೊದಲೇ ಗರ್ಭಿಣಿಯಾಗಬಹುದು.

ಕೆಲವು ಅಂಶಗಳು ನಿಮ್ಮ ಹೆರಿಗೆಯ ನಂತರ ಮೊದಲ ಪಿರಿಯಡ್ ಮೇಲೆ ಪರಿಣಾಮವನ್ನು ಬೀರಬಹುದು, ಅವುಗಳೆಂದರೆ,

೧.ಒತ್ತಡ

೨.ತೂಕ ಪಡೆಯುವುದು ಅಥವಾ ಕಳೆದುಕೊಳ್ಳುವುದು

೩.ಬಳಲಿಕೆ

೪.ಥೈರಾಯಿಡ್ ಅಸ್ವಸ್ಥೆತೆ

೫.ಅನಿಯಮಿತ ದೈಹಿಕ ಚಟುವಟಿಕೆ

ನೆನೆಪಿರಲಿ, ಸಿಸೇರಿಯನ್ ಹೆರಿಗೆ ನೀವು ನಿಮ್ಮ ಪಿರಿಯಡ್ ಅನ್ನು ಮರಳಿ ಪಡೆಯುದರಲ್ಲಿ ಏನು ವ್ಯತ್ಯಾಸ ಕಾಣಿಸುವುದಿಲ್ಲ, ಆದರೆ ನೀವು ಸ್ರವಿಸುವ ವಿಧಾನವು ಭಿನ್ನವಾಗಿರುತ್ತದೆ.

ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?

ನಿಮ್ಮ ಪಿರಿಯಡ್ ಕೆಲವು ತಿಂಗಳು ಕಳೆದರು ಸಾಮಾನ್ಯ ರೀತಿಯಲ್ಲಿ ಆಗದಿದ್ದರೆ, ಮತ್ತು ಕೆಲವು ಅಸಾಮಾನ್ಯ ಬದಲಾವಣೆಗಳನ್ನು ನೀವು ಗಮನಿಸಿದರೆ, ನೀವು ವೈದ್ಯರನ್ನು ಭೇಟಿಯಾಗಬೇಕು.

Leave a Reply

%d bloggers like this: