90 ದಿನಗಳಲ್ಲೇ ನಿಮ್ಮ ಅಂಡಾಣು ಗುಣಮಟ್ಟ ಮತ್ತು ಫಲವತ್ತತೆ ಹೆಚ್ಚಿಸಿಕೊಳ್ಳಲು ಸೂತ್ರಗಳು

ಒಂದು ಕಾಲದಲ್ಲಿ ಹೆಣ್ಣಿನ ಅಂಡಾಶಯದ ಅಂಡಾಣುಗಳ ಗುಣಮಟ್ಟ ಕೇವಲ ಆಕೆಯ ವಯಸ್ಸಿನ ಮೇಲೆ ಆಧಾರಿತ ಆಗಿರುತ್ತದೆ ಎಂದು ಭಾವಿಸಿದ್ದೆವು. 30ರ ಗಡಿ ದಾಟಿದ ನಂತರ ಹೆಣ್ಣಿನ ಅಂಡಾಣುವಿನ ಗುಣಮಟ್ಟ ಕ್ಷೀಣಿಸುತ್ತದೆ ಹಾಗು ಇದನ್ನು ತಡೆಯಲು ಸಾಧ್ಯವಿಲ್ಲ ಎಂದೇ ತಿಳಿದಿದ್ದೆವು. ಆದರೆ ಇದು ಸುಳ್ಳು ಎಂದು ಈಗ ನಮಗೆ ತಿಳಿದುಬಂದಿದೆ.

ಅಂಡಾಣುವಿನ ಗುಣಮಟ್ಟವು ಹಾರ್ಮೋನ್ ತುಲನೆ, ಆಹಾರಪದ್ಧತಿ, ಒತ್ತಡ, ಉತ್ಕರ್ಷಣ ನಿರೋಧಕಗಳ (ಆಂಟಿಆಕ್ಸಿಡಾಂಟ್) ಶಕ್ತಿ ಮತ್ತು ಸುತ್ತಮುತ್ತಲಿನ ಪರಿಸರವು ಮೇಲೆಯೂ ಆಧಾರಿತ ಆಗಿರುತ್ತದೆ ಎಂಬುದು ನಮಗೆ ಈಗ ತಿಳಿದಿದೆ. ಈ ಅಂಡಾಣುಗಳ ಗುಣಮಟ್ಟ ಹೆಚ್ಚಿಸಲು ಬಹಳಷ್ಟು ದಾರಿಗಳಿವೆ. ಆದರೆ ಇವುಗಳ ಗುಣಮಟ್ಟ ಹೆಚ್ಚಿಸಲಿಕ್ಕೆ 90 ದಿನಗಳು ಬೇಕಾಗುತ್ತದೆ. ಏಕೆಂದರೆ, ಒಂದು ಅಂಡಾಣು ಅಂಡೋತ್ಪತ್ತಿಗೆ ಸಿದ್ಧವಾಗಲು 90 ದಿನಗಳು ಬೇಕಾಗುತ್ತದೆ. ಈ ಸಮಯದಲ್ಲೇ ಅಂಡಾಣುಗಳು ರಾಸಾಯನಿಕ ಅಂಶಗಳು, ಹಾರ್ಮೋನಲ್ ಅಂಶಗಳು, ಪಾರಿಸರಿಕ ಮತ್ತು ಆಹಾರಾಂಶಗಳ ಪ್ರಭಾವಕ್ಕೆ ಒಳಗಾಗುವುದು.

ಹೀಗಾಗಿ ಈ ಸಮಯದಲ್ಲೇ ನಾವು ಹೊಟ್ಟೆ ಮತ್ತು ಅದರ ಕೆಳಭಾಗದಲ್ಲಿ ಸೂಕ್ತ ಪ್ರಮಾಣದ ರಕ್ತದ ಮತ್ತು ಉತ್ಕರ್ಷಣ ನಿರೋಧಕಗಳ  ಹರಿವು, ಸರಿಯಾದ ಹಾರ್ಮೋನ್ ತುಲನೆ ಇರುವಂತೆ ಮಾಡಬೇಕು. ಮಾನಸಿಕ ಹಾಗು ದೈಹಿಕ ಒತ್ತಡ ನಿಯಂತ್ರಣದಲ್ಲಿ ಇಡಬೇಕು ಮತ್ತು ಉತ್ತಮ ಆಹಾರ ಸೇವಿಸಬೇಕು.

ನಿಮ್ಮ ಅಂಡಾಣುವಿನ ಗುಣಮಟ್ಟ ಮತ್ತು ನಿಮ್ಮ ಫಲವತ್ತತೆಯನ್ನ 90 ದಿನಗಳಲ್ಲಿ ಹೆಚ್ಚಿಸಿಕೊಳ್ಳುವುದಕ್ಕೆ, ನೀವು ಈ ಕೆಳಗಿನ ಸಲಹೆಗಳನ್ನ ಪಾಲಿಸಬೇಕು :

೧. ಧೂಮಪಾನ, ಕೀಟನಾಶಕ, ಮದ್ಯ, ಸಕ್ಕರೆ, ಸಂಸ್ಕರಿಸಿದ ತಿನಿಸುಗಳಿಂದ ದೂರವಿರಿ.

೨. ನಿಮಗೆ ಯಾವುದಾದರು ತಿನಿಸು ಅಲರ್ಜಿ ಎಂದರೆ, ಅದನ್ನ ಸೇವಿಸಬೇಡಿ.

೩. ಆರೋಗ್ಯಕರ ಕೊಬ್ಬು ಆದ ತೆಂಗಿನ ಎಣ್ಣೆ, ಆಲಿವ್ ಎಣ್ಣೆ, ಬಾದಾಮಿ, ಅವಕ್ಯಾಡೊ ಜಾಸ್ತಿ ಇರುವಂತ ಆಹಾರ ಸೇವಿಸಿ.

೪. ಸ್ವಲ್ಪ ಮಟ್ಟಿನ ವ್ಯಾಯಾಮ ಮಾಡಿ ರಕ್ತ ಸಂಚಾರ ವೃದ್ಧಿಸಿಕೊಳ್ಳಿ.

೫. ಮಸಾಜ್ ಮಾಡಿಸಿಕೊಳ್ಳಿ , ಮುಖ್ಯವಾಗಿ ಉದರದ ಭಾಗಕ್ಕೆ.

೬. ತುಂಬಾ ನೀರು ಕುಡಿಯಿರಿ.

೭. ನಿಮ್ಮ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೋಜೆನ್ ಹಾರ್ಮೋನುಗಳು ಸರಿಯಾದ ಮತ್ತು ಸಮನಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಿ. ನೀವು ಇದನ್ನು ಹತ್ತಿರದ ಡೈಗನೊಸಿಸ್ ಸೆಂಟರ್ ಅಲ್ಲಿ ನಿಮ್ಮ ಮೂತ್ರ ಪರೀಕ್ಷೆ ಮಾಡಿಸುವ ಮೂಲಕ ತಿಳಿಯಬಹುದು.

೮. ನಿಮ್ಮ FSH (ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್) ಪ್ರಮಾಣ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಿ.

೯. ದೈಹಿಕ ಮತ್ತು ಮಾನಸಿಕ ಒತ್ತಡವನ್ನ ಕಡಿಮೆ ಮಾಡಿಕೊಳ್ಳಿ

೧೦. ಉತ್ಕರ್ಷಣ ನಿರೋಧಕಗಳಾದ ಎಲ್-ಅರ್ಜಿನೈನ್, ಮಯೋ-ಇನೊಸಿಟೋಲ್ , ಪೋಷಕಾಂಶಗಳು ಆದ ವಿಟಮಿನ್ A, C, E ಮತ್ತು ಖನಿಜಗಳಾದ ಸೆಲೆನಿಯಮ್ ಮತ್ತು ಜಿಂಕ್ ಅನ್ನು ಸೇವಿಸಿ ನಿಮ್ಮ ಅಂಡಾಣುವಿನ ಗುಣಮಟ್ಟ ಹೆಚ್ಚಿಸಿಕೊಳ್ಳಿ

Leave a Reply

%d bloggers like this: