ಅಲೋ ವೆರಾ (ಲೋಳೆಸರ) ಬಳಸಿ ಖರ್ಚಿಲ್ಲದೆಯೇ ಸ್ಟ್ರೆಚ್ ಮಾರ್ಕ್ಸ್ ತೊಲಗಿಸಿ ಈ 3 ವಿಧಾನಗಳಿಂದ !

ಗರ್ಭಾವಸ್ಥೆಯ ನಂತರ, ಮಹಿಳೆಯರಿಗೆ ಕಾಡುವ ತ್ವಚೆಯ ಸಮಸ್ಯೆ ಎಂದರೆ ಸ್ಟ್ರೆಚ್ ಮಾರ್ಕ್ಸ್, ಬೇರೆ ಸಮಸ್ಯೆಗಳು ಕಾಲ ಕ್ರಮೇಣ ಮಾಯವಾಗುತ್ತವೆ ಅಥವಾ ಗುಣವಾಗುತ್ತದೆ. ಆದರೆ ಸ್ಟ್ರೆಚ್ ಮಾರ್ಕ್ಸ್ ಹಾಗೆ ಉಳಿದುಕೊಳ್ಳುತ್ತದೆ, ಅದರ ನಿವಾರಣೆಗೆಂದು ಮಹಿಳೆಯರು ಹಲವು ರಾಸಾಯನಿಕಯುಕ್ತ ಕ್ರೀಮ್ ಮತ್ತು ಲೋಷನ್ ಗಳನ್ನು ಉಪಯೋಗಿಸಿದರು ಪ್ರಯೋಜನವಾಗುವುದಿಲ್ಲ. ಇದರಿಂದ ಅಡ್ಡಪರಿಣಾಮ ಆಗುವ ಸಾಧ್ಯತೆಗಳಿವೆ, ಆದರೆ ತ್ವಚೆಯ ಸಮಸ್ಯೆ ನಿರ್ಮೂಲನೆಗೆ ಹೆಸರುವಾಸಿಯಾಗಿರುವ ಲೋಗಸರ ನಿಮ್ಮ ಸ್ಟ್ರೆಚ್ ಮಾರ್ಕ್ಸ್ ಅನ್ನು ಯಾವುದೇ ಅಡ್ಡಪರಿಣಾಮವಿಲ್ಲದೆ ತೆಗೆದುಹಾಕುತ್ತದೆ. ಅದರ ಉಪಯೋಗವನ್ನು ನೀವು ಪಡೆದುಕೊಳ್ಳಿ.

೧.ಲೋಗಸರ

ಉಪಯೋಗಿಸುವುದು ಹೇಗೆ?

೧.ಲೋಗಸರದ ಎಲೆ ಇಂದ ಅದರಲ್ಲಿರುವ ಲೋಳೆಯನ್ನು ತೆಗೆದುಕೊಳ್ಳಿ.

೨. ಲೋಳೆಯನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಿ, ಒಂದು ಅಥವಾ ೨ ನಿಮಿಷ ಮಸಾಜ್ ಮಾಡಿ.

೩.ಲೋಗಸರದ ಲೋಳೆಯನ್ನು ನೀರಿನಲ್ಲಿ ನೀರಿನ ಜೊತೆಗೆ ಅಥವಾ ಬೇರೆ ವಸ್ತುವಿನ ಜೊತೆ ಸೇರಿಸ ಬೇಡಿ.

೪.ಇದನ್ನು ಕೆಲವು ನಿಮಿಷದ ನಂತರ ತೊಳೆದುಕೊಳ್ಳಬೇಕೆಂದು ಇಲ್ಲ, ಅದನ್ನು ಹಾಗೆಯೆ ಬಿಡಿ.

೫.ದಿನಕ್ಕೆ ೨ ಬಾರಿ ಇದನ್ನು ಮಾಡಿ.

ಕೆಲವು ವಾರಗಳಲ್ಲಿ ನೀವು ಬದಲಾವಣೆಯನ್ನು ಕಾಣಬಹುದು.

೨.ಲೋಗಸರದ ಜೊತೆಗೆ ನಿಂಬೆರಸ

ಬೇಕಾಗಿರುವುದು

೧.ಎರಡು ಚಮಚ ಲೋಗಸರ

೨.ಒಂದು ಚಮಚ ನಿಂಬೆರಸ

ಉಪಯೋಗಿಸುವುದು

೧.ಮೇಲಿನ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಿ.

೨.ಅದು ಅಲ್ಲಿ ಹಾಗೆಯೆ ಒಣಗಲಿ.

೩.ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

೪.ಪ್ರತಿ ದಿನ ಇದನ್ನು ಮಾಡಿ.

೩.ಲೋಗಸರ ಜೊತೆಗೆ ಹರಳೆಣ್ಣೆ

ಬೇಕಾಗಿರುವುದು

೧.ಎರಡು ಚಮಚ ಲೋಗಸರ

೨.ಒಂದು ಚಮಚ ಹರಳೆಣ್ಣೆ

ಉಪಯೋಗಿಸುವುದು

೧.ಎರಡನ್ನು ಮಿಶ್ರಣ ಮಾಡಿ, ಸ್ವಲ್ಪ ಉಗುರು ಬೆಚ್ಚಗೆ ಮಾಡಿಕೊಳ್ಳಿ.

೨.ಈ ಉಗುರು ಬೆಚ್ಚಗಿನ ಮಿಶ್ರಣದಿಂದ ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗವನ್ನು ಎರಡರಿಂದ ಮೂರು ನಿಮಿಷ ಮಸಾಜ್ ಮಾಡಿ.

೩.೩೦ ನಿಮಿಷಗಳ ನಂತರ ತೊಳೆಯಿರಿ.

೪.ಉತ್ತಮ ಫಲಿತಾಂಶಕ್ಕಾಗಿ ಇದನ್ನು ಪ್ರತಿದಿನ ಮಾಡುವುದು ಒಳ್ಳೆಯದು.

೪.ಲೋಗಸರದ ಜೊತೆಗೆ ಜೇನುತುಪ್ಪ

ಬೇಕಾಗಿರುವುದು

೧.ಎರಡು ಚಮಚ ಲೋಗಸರದ ಲೋಳೆ

೨.ಒಂದು ಚಮಚ ಬಾದಾಮಿ ಎಣ್ಣೆ

೩.ಒಂದು ಚಮಚ ಜೇನುತುಪ್ಪ

ಉಪಯೋಗಿಸುವುದು

೧.ಲೋಗಸರದ ಲೋಳೆ, ಬಾದಾಮಿ ಎಣ್ಣೆ ಮತ್ತು ಜೇನುತುಪ್ಪ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ.

೨.ಇದನ್ನು ಕಲೆ ಇರುವ ಜಾಗಕ್ಕೆ ಹಚ್ಚಿರಿ.

೩.೩೦ ನಿಮಿಷಗಳ ಕಾಲ ಹಾಗೆ ಬಿಡಿ.

೪.ಉಗುರು ಬೆಚ್ಚಗಿನ ನೀರಿನಿಂದ ಇದನ್ನು ತೊಳೆಯಿರಿ.

೫.ವಾರಕ್ಕೆ ೩-೪ ಬಾರಿ ಇದನ್ನು ಮಾಡಿ.

೨-೩ ವಾರಗಳಲ್ಲಿ ಉತ್ತಮ ಫಲಿತಾಂಶವನ್ನು ನೀವು ಕಾಣಬಹುದು.

Leave a Reply

%d bloggers like this: