ಪ್ರತಿದಿನ ಹಸ್ತಮೈಥುನ ಮಾಡಿದರೆ ಏನೆಲ್ಲಾ ಆಗುತ್ತದೆ ಗೊತ್ತಾ?

ಕೇವಲ 25% ಅಷ್ಟು ಹೆಂಗಸರು ಮಾತ್ರ ಸಂಭೋಗದಿಂದ ಲೈಂಗಿಕ ಪರಾಕಾಷ್ಠೆ ಹೊಂದುತ್ತಾರೆ. ಏಕೆ? ಕಾರಣಗಳು ಹಲವು. ಉದಾಹರಣೆಗೆ ಒತ್ತಡ, ಶುಷ್ಕತೆ, ಅಥವಾ ಮಾನಸಿಕ ಅನ್ಯೋನ್ಯತೆಯ ಕೊರತೆ ಮತ್ತು ಇನ್ನು ಅನೇಕ ಇರಬಹುದು. ಆದರೆ ಬಹುತೇಕ ಬಾರಿ, ಅದಕ್ಕೆ ಕಾರಣ, ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಬಹಳಷ್ಟು ಭಂಗಿಗಳು ಚಂದ್ರನಾಡಿ (ಕ್ಲಿಟೋರಿಸ್) ಪ್ರಚೋದನೆ ನೀಡದೆ ಇರುವುದು. ವಾಸ್ತವದಲ್ಲಿ, ಲೈಂಗಿಕ ಕ್ರಿಯೆಯಲ್ಲಿ ಪ್ರಚೋದನೆಗೆ ಒಳಗಾಗಲೇ ಬೇಕಿರುವ ಒಂದು ಭಾಗ ಎಂದರೆ ಅದು ಚಂದ್ರನಾಡಿ.

ಇದಕ್ಕೆ ಪರಿಹಾರ? ಹಸ್ತಮೈಥುನ. ನಿಮ್ಮ ದೇಹದ ಬಗ್ಗೆ ತಿಳಿದುಕೊಳ್ಳಿ ಮತ್ತು ನಿಮಗೆ ಯಾವುದು ಹೆಚ್ಚು ಹಿತ ನೀಡುತ್ತದೆ ಎಂಬುದನ್ನು ನೀವೇ ಅರಿತುಕೊಳ್ಳಿ. ನಿಮಗೆ ಒಮ್ಮೆ ಇದು ತಿಳಿದ ಮೇಲೆ, ಅದನ್ನು ನಿಮ್ಮ ಪತಿಯೊಂದಿಗೆ ಹಂಚಿಕೊಳ್ಳಬಹುದು. ಇದು ನಿಮ್ಮಿಬ್ಬರಿಗೂ ಒಳ್ಳೆಯದು. ಲೈಂಗಿಕ ಕ್ರಿಯೆಯು ಹಿಂದೆಂದಿಗಿಂತಲೂ ಮಜವೆನಿಸುತ್ತದೆ.

ಈ ಹಸ್ತಮೈಥುನವು ನಿಮ್ಮ ಆ ಭಾಗದ ಸೂಕ್ಷ್ಮತೆಯನ್ನು ಹೆಚ್ಚಿಸಿ, ನಿಮ್ಮ ಲೈಂಗಿಕ ಪರಾಕಾಷ್ಠೆಯನ್ನು ಇನ್ನೂ ಹೆಚ್ಚು ಸುಖಭರಿತ ಮಾಡುತ್ತದೆ. ಹಾಗಿದ್ದರೆ, ಹಸ್ತಮೈಥುನವು ಒಳ್ಳೆಯದು ಎಂದು ತಿಳಿಯಿತು. ಆದರೆ, ಪ್ರತಿದಿನವೂ ಹಸ್ತಮೈಥುನ ಮಾಡಿಕೊಂಡರೆ ಏನಾಗುತ್ತದೆ? ಅದಕ್ಕೆ ಉತ್ತರ ಇಲ್ಲಿದೆ ನೋಡಿ.

೧. ನೀವು ಇನ್ನೂ ಚೆನ್ನಾಗಿ ನಿದ್ರೆ ಮಾಡುತ್ತೀರಾ

ಪ್ರತಿದಿನದ ಹಸ್ತಮೈಥುನವು ನಿಮ್ಮ ಕೇಂದ್ರ ನರಮಂಡಲವನ್ನು ಶಾಂತಗೊಳಿಸಿ ನಿಮ್ಮ ಮೇಲಿನ ಒತ್ತಡವನ್ನ, ಟೆನ್ಶನ್ ಅನ್ನು ಕಡಿಮೆ ಮಾಡುತ್ತದೆ. ಇದೇ ಕಾರಣಕ್ಕೆ ನಿಮ್ಮ ಪತಿಯು ನಿಮ್ಮೊಂದಿಗೆ ಸಂಭೋಗ ನಡೆಸಿದೊಡನೆ ನಿದ್ರೆಗೆ ಜಾರಿದರೆ ಸಿಟ್ಟಾಗಬೇಡಿ, ಅದು ಅವರು ಒಳ್ಳೆಯ ಲೈಂಗಿಕ ಪರಾಕಾಷ್ಠೆ ಹೊಂದಿ ಶಾಂತವಾಗಿ ನಿದ್ರೆಗೆ ಜಾರುವುದು.

ಗಂಡಸರಲ್ಲಿ ಈ ಪ್ರಕ್ರಿಯೆ ತುಂಬಾ ಬೇಗನೆ ಆಗುತ್ತದೆ. ಅವರು ಲೈಂಗಿಕ ಪರಾಕಾಷ್ಠೆ ಹೊಂದಿದ ಕ್ಷಣವೇ ಅವರ ರಕ್ತದೊತ್ತಡ ಇಳಿದು ಅವರು ಅಚಲತೆಯ ನೆಮ್ಮದಿ ಅನುಭವಿಸುವರು. ಆದರೆ ಹೆಂಗಸರಲ್ಲಿ ಇದು ಸ್ವಲ್ಪ ನಿಧಾನವಾಗಿ ಆದರೂ, ಪರಿಣಾಮದ ತೀವ್ರತೆ ಅಷ್ಟೇ ಇರುತ್ತದೆ.

೨. ನೀವು ಇನ್ನಷ್ಟೂ ಖುಷಿಯಾಗಿರುತ್ತೀರಾ

ನೀವು ಒರ್ಗ್ಯಾಸಮ್ ಅಂದರೆ ಲೈಂಗಿಕ ಪರಾಕಾಷ್ಠೆ ಹೊಂದಿದೊಡನೆ ಖುಷಿ ಇಂದ ತುಂಬಿರುತ್ತೀರಾ. ಅದು ಗೊತ್ತಿರುವ ವಿಷಯ. ಆದರೆ ವಾಸ್ತವದಲ್ಲಿ, ಪ್ರತಿದಿನ ಹಸ್ತಮೈಥುನ ಮಾಡುವುದರಿಂದ ನೀವು ನಿಮ್ಮ ದೈನಂದಿನ ಜೀವನದಲ್ಲೂ ಹೆಚ್ಚು ಖುಷಿಯಾಗಿ ಇರುತ್ತೀರಾ.

ಜೀವನವು ಮತ್ತಷ್ಟು ಖುಷಿಯಾಗಲು ಕಾರಣ ಎಂದರೆ, ಸೆಕ್ಸ್ ಇಂದ ಉತ್ಪತ್ತಿ ಆಗುವ ಆಕ್ಸಿಟೋಸಿನ್ ಹಾರ್ಮೋನ್ ಬಿಡುಗಡೆ ಮಾಡುವ ಎಂಡೋರ್ಫಿನ್ ಗಳು. ಒರ್ಗ್ಯಾಸಮ್ ಹೊಂದುವುದರಿಂದ ಸಿಗುವ ಈ ನೈಸರ್ಗಿಕ ಅಫೀಮು ಆದ ಎಂಡೋರ್ಫಿನ್ ಕಾರಣ, ಒರ್ಗ್ಯಾಸಮ್ ಒಂದು ಪರಿಣಾಮಕಾರಿ ನೋವು ನಿವಾರಕ ಆಗುತ್ತದೆ. ಇದರಿಂದ ನಿಮ್ಮ ನೋವಿನ ಸಹಿಷ್ಣುತೆ ಹೆಚ್ಚುತ್ತದೆ.

ಇಷ್ಟೇ ಅಲ್ಲದೆ, ನಿಯಮಿತ ಹಸ್ತಮೈಥುನವು ನಿಮ್ಮ ಆತ್ಮವಿಶ್ವಾಸ ಮತ್ತು ಆತ್ಮಗೌರವ ಹೆಚ್ಚಿಸುತ್ತದೆ.

೩. ನಿಮ್ಮ ಲೈಂಗಿಕಾಸಕ್ತಿ ಮುಗಿಲು ಮುಟ್ಟುತ್ತದೆ

ನಿಮಗೆ ಈಗ ಸೆಕ್ಸ್ ಮೇಲೆ ಆಸಕ್ತಿ ಕಡಿಮೆ ಆಗಿದ್ದರೆ, ಅದಕ್ಕೆ ಒಳ್ಳೆಯ ಪರಿಹಾರ ಎಂದರೆ ಅದು ಹಸ್ತಮೈಥುನ. ನೀವು ಕೇವಲು ಅದು ಎಷ್ಟು ಹಿತಕರ ಎನ್ನುವುದನ್ನು ಮಾತ್ರ ತಿಳಿಯದೆ, ನಿಮ್ಮ ದೇಹವು ಒಳ್ಳೆಯ ಪ್ರಚೋದನೆಗೆ ಎಷ್ಟು ಚೆನ್ನಾಗಿ ಸ್ಪಂದಿಸುತ್ತದೆ ಎಂಬುದನ್ನ ಪುನಃ ಕಂಡುಕೊಳ್ಳುತ್ತೀರಾ. ಇದು ನಿಮಗೆ ಸೆಕ್ಸ್ ಇನ್ನಷ್ಟು ಬೇಕು, ಇನ್ನಷ್ಟು ಬೇಕು ಎನಿಸುವಂತೆ ಮಾಡುತ್ತದೆ.

ನೀವು ಹೆಚ್ಚು ಸೆಕ್ಸ್ ಅಲ್ಲಿ ತೊಡಗಿದಷ್ಟು (ಅದು ಹಸ್ತಮೈಥುನವು ಆಗಿರಬಹುದು), ಹೆಚ್ಚೆಚ್ಚು ಸೆಕ್ಸ್ ಬೇಕು ಎನಿಸುವುದು. ಹಸ್ತಮೈಥುನವು ನಿಮ್ಮ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಉತ್ಪತ್ತಿಯನ್ನು ಮತ್ತು ಎಂದೋರ್ಫಿನ್ ಉತ್ಪತ್ತಿಯನ್ನೂ ಹೆಚ್ಚಿಸುತ್ತದೆ. ಇವುಗಳು ನಿಮ್ಮ ದೇಹ ಮತ್ತು ಮನಸ್ಸು ಎರಡನ್ನೂ ತಿಳಿಯಾಗಿಸುತ್ತದೆ.

೪. ನಿಮ್ಮ ಶ್ರೋಣಿ, ಸೊಂಟದ ಸ್ನಾಯುಗಳು ಶಕ್ತಿಶಾಲಿ ಆಗುತ್ತವೆ

ಯೋನಿಯ ಮತ್ತು ಶ್ರೋಣಿಯ ಸ್ನಾಯುಗಳನ್ನ ಶಕ್ತಿಶಾಲಿಯಾಗಿ ಮಾಡುವುದು ಬಹಳಾನೇ ಮುಖ್ಯ. ಭವಿಷ್ಯದಲ್ಲಿ ನಿಮಗೆ ಮೂತ್ರನಾಳದ ಅರೋಗ್ಯ ಕಾಪಾಡಿಕೊಳ್ಳಬೇಕು ಮತ್ತು ಅದರ ಮೇಲಿನ ನಿಯಂತ್ರಣ ಕಳೆದುಕೊಳ್ಳಬಾರದು ಎಂದರೆ ಎಂದರೆ, ನೀವು ಈ ಸ್ನಾಯುಗಳನ್ನ ಗಟ್ಟಿಯಾಗಿಸಿಕೊಳ್ಳಬೇಕು.

೫. ಇನ್ನು ಮುಂದೆ ಅನಾರೋಗ್ಯದ ದಿನಗಳು ಕಡಿಮೆ ಆಗುತ್ತವೆ

ಹೌದು ಹೆಚ್ಚು ಸೆಕ್ಸ್ ಎಂದರೆ, ಕಡಿಮೆ ಅನಾರೋಗ್ಯ ಎಂದರ್ಥ. ಅದಕ್ಕೆ ಕಾರಣ ಏನು ಎಂದರೆ ಒರ್ಗ್ಯಾಸಮ್ ಅಥವಾ ಲೈಂಗಿಕ ಪರಾಕಾಷ್ಠೆ ಹೊಂದುವಾಗ ನಿಮ್ಮ ದೇಹದಲ್ಲಿ ಬಿಡುಗಡೆಯಾಗುವ ಡಿ.ಹೆಚ್.ಈ.ಏ ಎಂಬ ರಾಸಾಯನಿಕ. ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ (ಇಮ್ಮ್ಯೂನಿಟಿ ಸಿಸ್ಟಮ್) ಅನ್ನು ಇನ್ನಷ್ಟು ಬಲಿಷ್ಠ ಮಾಡುತ್ತದೆ. ಅಲ್ಲದೆ, ಮೂಳೆಗಳ ಬೆಳವಣಿಗೆ, ತ್ವಚೆಯ ಅರೋಗ್ಯ, ಸ್ನಾಯು ರಿಪೈರಿ ಅಲ್ಲೂ ಇದು ಸಹಾಯ ಮಾಡುತ್ತದೆ.

ಇಷ್ಟೇ ಅಲ್ಲದೆ, ಇದು ನಿಮಗೆ ಹೃದಯ ರೋಗಗಳನ್ನ ದೂರವಿಡುತ್ತದೆ.

Leave a Reply

%d bloggers like this: