ಈ ಹೆರಿಗೆಯ ಚಿತ್ರಗಳನ್ನ ನೋಡಿದರೆ, 21ನೇ ಶತಮಾನದಲ್ಲಿ ಜನಿಸಿರುವುದಕ್ಕೆ ನಿಟ್ಟುಸಿರು ಬಿಡುತ್ತೀರಾ!

ಮಗುವಿಗೆ ಜನ್ಮ ನೀಡುವುದು ಒಂದು ಪುಣ್ಯದ ಕೆಲಸ. ಏಕೆಂದರೆ ಹೆಣ್ಣಿಗೆ ಮಾತ್ರ ಲಭಿಸಿರುವ ಈ ಶಕ್ತಿ ಇಂದ ನೀವು ಭೂಮಿಗೆ ಇನ್ನೊಂದು ಜೀವವನ್ನು ತರುತ್ತೀರಾ. ತಂತ್ರಜ್ಞಾನವು ಇಷ್ಟೊಂದು ಬದಲಾವಣೆ ಹೊಂದು, ದಿನದಿಂದ ದಿನಕ್ಕೆ ಹೊಸ ಹೊಸ ಅನ್ವೇಷಣೆಗಳು ಆಗುತ್ತಿದ್ದರೂ, ಮಗುವಿಗೆ ಜನ್ಮ ನೀಡುವ ಪ್ರಕ್ರಿಯೆ ನೋವಿನಿಂದ ಮುಕ್ತವಾಗಿಲ್ಲ. 21ನೇ ಶತಮಾನದ ವೈದ್ಯಕೀಯ ಅಭ್ಯಾಸಗಳು, ತಂತ್ರಜ್ಞಾನವು ಇಷ್ಟೊಂದು ಮುಂದುವರೆದಿದ್ದರು, ಹೆರಿಗೆ ಪ್ರಕ್ರಿಯೆಯು ಈಗಲೂ ಹೆಂಗಸರಿಗೆ ದುಃಸ್ವಪ್ನ.

ಹೀಗಿರುವಾಗ ಇನ್ನೂ ನೀವು ಹಿಂದಿನ ಕಾಲದಲ್ಲಿ ಹೆರಿಗೆ ಪ್ರಕ್ರಿಯೆ ಹೇಗೆ ಇತ್ತು ಎಂದು ತೋರಿಸುವ ಭಾವಚಿತ್ರಗಳನ್ನ ನೋಡಿದರೆ, ನೀವು ಈ ಶತಮಾನದಲ್ಲಿ ಬಾಳುತ್ತಿರುವುದಕ್ಕೆ ನಿಮ್ಮನ್ನ ನೀವು ಪುಣ್ಯವಂತರು ಎಂದು ಅಂದುಕೊಳ್ಳುತ್ತೀರಾ.

ಹಿಂದಿನ ಕಾಲದಲ್ಲಿ ಗರ್ಭಿಣಿಯರಿಗೆ ನೋವು ನಿವಾರಕ ಔಷಧಿ ನೀಡುತ್ತಿದ್ದ ವಿಧಾನ ಇದು!

ಆಗಿನ ಕಾಲದ ಹೆರಿಗೆ ಕೋಣೆ ಹೇಗಿತ್ತು ನೋಡಿ..ಹೆಚ್ಚಿನ ಉಪಕರಣಗಳೇ ಇಲ್ಲ..ಜೊತೆಗೆ  ಲಾಡ್ಜ್ ಅಲ್ಲಿ ಇರುವಂತಹ ಗೋಡೆ ಪೋಸ್ಟರ್ !

ಮಲಗಿಸಿರುವುದೇ ಸ್ಟ್ರೆಚೆರ್ ಮೇಲೆ , ಅದರೊಂದಿಗೆ ಈ ವೈದ್ಯನು ಏನು ಮಾಡುತ್ತಿದ್ದಾನೆ ಎಂಬುದು ಕೂಡ ತಿಳಿಯುತ್ತಿಲ್ಲ!

ಅಂತೂ ಮಗುವನ್ನು ಹೊರತೆಗೆದರು, ಆದರೆ ಕೈಗೆ ಒಂದು ಗ್ಲೋವ್ ಕೂಡ ಇಲ್ಲ.. ಅದರೊಂದಿಗೆ ಆಕೆಯನ್ನ ಮಲಗಿಸಿರುವ ಭಂಗಿ, ಯಾವುದಕ್ಕೆ ಹೆಚ್ಚು ಆತಂಕ ಪಡಬೇಕೋ ಗೊತ್ತಾಗುತ್ತಿಲ್ಲ !

ಒಂದು ವೇಳೆ ನಿಮಗೆ ಏನಾದರು ಸಿಸೇರಿಯನ್ ಆಗುವ ಸಾಧ್ಯತೆ ಇದ್ದು, ನೀವು ಈ ಚಿತ್ರವನ್ನ ನೋಡಿದರೆ, ಈ ಕಾಲದಲ್ಲಿ ಜನಿಸಿರುವುದಕ್ಕೆ ನಿಟ್ಟುಸಿರು ಬಿಡುತ್ತೀರಾ !

ಇದರ ಬಗ್ಗೆ ಏನು ಹೇಳಬೇಕು ಎಂಬುದೇ ನನಗೆ ತಿಳಿಯುತ್ತಿಲ್ಲ ! ಮೂಕವಿಸ್ಮಿತ ಆಗಿದ್ದೇನೆ !

ಆ ಹಾಸಿಗೆ ಮೇಲೆ ಹೆಂಗಸು ನೋವಿನಿಂದ ಕಿರುಚುತ್ತಿದ್ದಾಳೆ.. ಇಲ್ಲಿ ವೈದ್ಯ (?) ಕೈಯಲ್ಲಿ ಯಾವುದೋ ನೀರಿನ ಜಗ್ ಹಿಡಿದುಕೊಂಡು ಯಾವುದೇ ಭಾವನೆಗಳೇ ಇಲ್ಲದಂತೆ ನಿಂತಿದ್ದಾನೆ….ಏನಾಗುತ್ತಿದೆ ಇಲ್ಲಿ?

ಆಕೆಯ ನೋವು ಮುಗಿಲು ಮುಟ್ಟಿದೆ , ಆಕೆ ಚೀರುತ್ತಿದ್ದಾಳೆ … ಆದರೆ ಆಕೆಯ ಪಕ್ಕ ನಿಂತಿರುವ, ಮುಖದಲ್ಲಿ ಯಾವುದೇ ಭಾವನೆಯೇ ಇಲ್ಲದ ಗಂಡಸನ್ನು ನೋಡುತ್ತಿದ್ದರೆ ಒಂಥರಾ ಆತಂಕ ಆಗುತ್ತಿದೆ !

ಎಂತದ್ದೆಲ್ಲಾ ಹೆರಿಗೆ ಬಗ್ಗೆ ಕೇಳಿರುತ್ತೀವಿ , ನೋಡಿರುತ್ತೀವಿ…ಆದರೆ ಊರಿನ ಪಂಚಾಯ್ತಿ  ಕಟ್ಟೆಯ ಮೇಲೆ ಹೆರಿಗೆಯನ್ನ ಸಾರ್ವಜನಿಕ ಪ್ರದರ್ಶನಕ್ಕೆ ಇಟ್ಟಿರುವುದನ್ನು ನಾವು ಬಹುಷಃ ಎಲ್ಲಿಯೂ ನೋಡಿರುವುದಿಲ್ಲ!

Leave a Reply

%d bloggers like this: