ದೀಪಾವಳಿ ಎಲ್ಲೆಲ್ಲಿ ಹೇಗೆ ಮತ್ತು ಏಕೆ ಆಚರಿಸುತ್ತಾರೆ?

ಎಲ್ಲರಿಗು ದೀಪಾವಳಿಯ ಶುಭಾಶಯಗಳು, ಅಣತೆ ಬೆಳಗುವಂತೆ ನಿಮ್ಮ ಮನೆ ಮನಸ್ಸು ಖುಷಿಯಿಂದ ಬೆಳಗುತ್ತಿರಲಿ. ಭಾರತ ಮಾತ್ರವಲ್ಲದೆ ಈ ಹಬ್ಬವನ್ನು ಹಲವು ಕಡೆ ಆಚರಿಸಲಾಗುವುದು, ಆದರೆ ತುಂಬಾ ಸಂಭ್ರಮದಿಂದ ಭಾರತದಲ್ಲಿ ಆಚರಿಸಲಾಗುವುದು. ಬನ್ನಿ ವಿವಿಧತೆಯಲ್ಲಿ ಏಕತೆ ಇರುವ ನಮ್ಮ ಭಾರತದ ವಿವಿಧ ಪ್ರದೇಶಗಳಲ್ಲಿ ಈ ಹಬ್ಬವನ್ನು ಏಕೆ ಆಚರಿಸುತ್ತಾರೆ ಎಂಬುದನ್ನು ತ್ವರಿತವಾಗಿ ತಿಳಿಯೋಣ.

ಈ ಹಬ್ಬದ ವಿಶೇಷತೆ ಎಂದರೆ, ದೀಪಗಳಿಂದ ಅದರಲ್ಲೂ ಮಣ್ಣಿನ ಅಣತೆಗಳಿಂದ ಮನೆಯನ್ನು ಅಲಂಕರಿಸಿ ಬೆಳಗುವುದು, ಅದನ್ನು ನೋಡುವುದೇ ಒಂದು ಚಂದ. ಮನೆಯೊಳಗೇ ಮತ್ತು ಹೊರಗೆ ದೀಪಗಳಿಂದ ಅಲಂಕರಿಸುವದನ್ನು ನೋಡುವುದೇ ಖುಷಿ, ಇದು ನಿಮಗೆ ಗೊತ್ತಿಲ್ಲದೇ ನಿಮ್ಮಲ್ಲಿ ಧನಾತ್ಮಕ ಚಿಂತನೆಯನ್ನು ಮೂಡಿಸುತ್ತದೆ.

ಮೊದಲಿಗೆ ಈ ಹಬ್ಬದ ಅರ್ಥ ಏನೆಂದರೆ, ಕತ್ತಲಿನಿಂದ ಬೆಳಕಿನೆಡೆಗೆ, ಅಂದರೆ, ನಿಮ್ಮ ಮನಸ್ಸಿನ ಬೆಳಕು ನಿಮ್ಮ ಜೀವನದ ಕತ್ತಲನ್ನು ಶಾಶ್ವತವಾಗಿ ದೂರ ಮಾಡಬಹುದು ಎಂದರ್ಥ. ಕತ್ತಲಿದೆ ಇದೆ ಎಂದು ಸುಮ್ಮನೆ ಇದ್ದರೆ ನೀವು ಕತ್ತಲಿನಲ್ಲೇ ಮಾಯವಾಗುತ್ತೀರಿ, ಅಣತೆಯು ಬೆಳಗಿದಂತೆ, ನಿಮ್ಮ ಜೀವನವನ್ನು ನೀವು ಪ್ರಕಾಶಿಸಿಕೊಳ್ಳಿ ಎಂಬ ಅಂಶವನ್ನು ಈ ಹಬ್ಬ ಸಾರುತ್ತದೆ.

ಭಾರತದ ಎಲ್ಲ ಹಬ್ಬವು ಕೂಡ ನಿಮ್ಮಲ್ಲಿ ಧನಾತ್ಮಕ ಚಿಂತನೆಯನ್ನು ಮೂಡಿಸುತ್ತದೆ, ಆದರೆ ಈ ಹಬ್ಬ ನಿಮ್ಮ ಮನಸ್ಸಲ್ಲಿ, ಶಾಂತಿ, ಉತ್ಸಾಹ ಮತ್ತು ಮನೋಧೈರ್ಯವನ್ನು ಹೆಚ್ಚಿಸುತ್ತದೆ. ಮನಃಶಾಸ್ತ್ರದ ಪ್ರಕಾರ ಮಾನವನ ಮನಸ್ಸು ಶಾಂತಿ ಮತ್ತು ನೆಮ್ಮದಿ ಇಂದ ಕೂಡಿದ್ದರೆ, ಅವನು ಧನಾತ್ಮಕವಾಗಿ ಚಿಂತಿಸಲು ಪ್ರಾರಂಭಿಸುತ್ತಾನೆ, ಅವನು ಧನಾತ್ಮಕವಾಗಿ ಚಿಂತಿಸಲು ಪ್ರಾರಂಭಿಸಿದರೆ, ಅವನು ತನ್ನ ಎಲ್ಲಾ ಕಷ್ಟಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಸುಲಭವಾಗುತ್ತದೆ, ಮತ್ತು ನೆಮ್ಮದಿ ಸಿಗುತ್ತದೆ, ಮನುಷ್ಯನಿಗೆ ಮುಖ್ಯವಾಗಿ ಬೇಕಿರುವುದು ನೆಮ್ಮದಿಯೇ ಅಲ್ಲವೇ. ರಾತ್ರಿಯಲ್ಲಿ ಮನೆಯ ಒಳಗೆ ಮತ್ತು ಹೊರಗೆ ಅಣತೆಯಲ್ಲಿನ ಆ ಸುಂದರ ಬೆಳಕು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.

ಈ ಹಬ್ಬವನ್ನು ಹಿಂದೂಗಳು, ಜೈನರು, ಬೌದ್ಧರು, ಮತ್ತು ಸಿಖ್ಖರು ಕೂಡ ಆಚರಿಸುತ್ತಾರೆ.

ದಕ್ಷಿಣ ಭಾರತದಲ್ಲಿ, ಕೃಷ್ಣನು ರಾಕ್ಷಸ ನರಕಾಸುರನನ್ನು ಸಂಹರಿಸಿ, ತನ್ನ ಎಲ್ಲಾ ಪ್ರಜೆಗಳ ಮುಖದಲ್ಲಿ ನಗುವನ್ನು ಮೂಡಿಸಿ, ವಿಜಯಪತಾಕೆ ಹಾರಿಸಿ, ರಾಕ್ಷಸನಿಂದ ತನ್ನ ಎಲ್ಲಾ ಭಕ್ತರನ್ನು ಕಾಪಾಡಿದ ಸಲುವಾಗಿ ಸಂಭ್ರಮಿಸುವರು.

ಉತ್ತರ ಭಾರತದಲ್ಲಿ ಈ ಹಬ್ಬವನ್ನು, ರಾಮನು ರಾವಣನ ಸಂಹಾರ ಮಾಡಿ ಅಯೋಧ್ಯೆಗೆ ಮರಳಿದ ಸಂಭ್ರಮಕ್ಕಾಗಿ ವಿಜಯದ ಸಂಕೇತವಾಗಿ ಅಣತೆಯನ್ನು ಹಚ್ಚಿ ಆಚರಿಸುತ್ತಾರೆ.

ಪಶ್ಚಿಮ ಭಾರತದಲ್ಲಿ, ವಿಷ್ಣುವು, ರಾಕ್ಷಸ ಚಕ್ರವರ್ತಿ ಬಲಿಯನ್ನು ಪಾತಾಳ ಲೋಕವನ್ನು ಆಳಲು ಕಳುಹಿಸಿದ ಸಂಕೇತವಾಗಿ ಆಚರಿಸಲಾಗುವುದು.

Leave a Reply

%d bloggers like this: