ನೀವು ಆ ಜಾಗದಲ್ಲಿ ವದ್ದೆ ಆಗಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ 7 ಕಾರಣಗಳು

ನಮ್ಮ ಜನನಾಂಗವು ಒಂದು ನಿಗೂಢ ವಸ್ತು, ಇದೇ ಕಾರಣಕ್ಕೆ ಅದು ವಿಶೇಷ. ಆದರೆ ಇದು ಕೆಲವೊಮ್ಮೆ ನಮ್ಮನ್ನು ಹತಾಶರನ್ನಾಗಿಯೂ ಮಾಡಬಹುದು. ನೀವು ಪ್ರೀತಿಸುವ ವ್ಯಕ್ತಿ ಇಂದಲೇ ಲೈಂಗಿಕ ಪ್ರಚೋದನೆ ಹೊಂದಿ, ಒಳ್ಳೆಯ ಸಮಯ ಕಳೆಯಬೇಕು ಎಂದುಕೊಂಡರೂ, ಆ ಅಂಗವು ವದ್ದೆ ಆಗದೆ ಇರುವುದು ನಮಗೆ ಇರಿಸುಮುರಿಸು ಉಂಟು ಮಾಡುತ್ತದೆ. ಹೀಗೆ ವದ್ದೆ ಆಗದೆ ನಯವಾಗಿ ಇರದಿದ್ದರೆ, ಸಂಭೋಗ ಕಾರ್ಯವು ಬಹಳ ನೋವು ಉಂಟು ಮಾಡಬಹುದು. ಹೀಗಾಗಿ ನಾನು ಇದರ ಬಗ್ಗೆ ಹೆಚ್ಚು ತಿಳಿಯಲು ಲೈಂಗಿಕ ತಜ್ಞರ ಬಳಿ ಚರ್ಚಿಸಿದಾಗ, ಇದಕ್ಕೆ ಕಾರಣಗಳು ಹಲವಾರು ಇರಬಹುದು ಎಂಬುದು ಅವರು ತಿಳಿಸಿದರು. ಹಾಗಿದ್ದರೆ, ಬನ್ನಿ ಆ ಕಾರಣಗಳು ಯಾವು ಎಂದು ನಾನು ನಿಮಗೆ ತಿಳಿಸುತ್ತೇನೆ :

೧. ನಿಮ್ಮ ಹಾರ್ಮೋನ್ಸ್ ಏರುಪೇರು

ಯೋನಿಯು ವದ್ದೆ ಆಗದೆ ಶುಷ್ಕತೆ ಇಂದ ಕೂಡಿರುವುದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ಎಂದರೆ ಅದು ಈಸ್ಟ್ರೋಜೆನ್ (ಮದಜನಕ) ಹಾರ್ಮೋನ್ ಅಲ್ಲಿನ ಇಳಿಕೆ. ಇದು ಸಹಜವಾಗಿ ಹೆರಿಗೆಯ ನಂತರ, ಎದೆಹಾಲು ಉಣಿಸುವ ಕಾಲದಲ್ಲಿ ಇಳಿಕೆ ಕಾಣುತ್ತದೆ. ಇದಲ್ಲದೆ ಋತುಬಂಧ, ಕಿಮೊತೆರಪಿ ಅಂತಹ ಚಿಕಿತ್ಸೆ ಪಡೆಯುವಾಗ ಅಥವಾ ಶ್ರೋಣಿಯ ರೇಡಿಯೇಶನ್ ಇಂದಲೂ ಈ ಈಸ್ಟ್ರೋಜೆನ್ ಗತಿಯಲ್ಲಿ ಇಳಿಕೆ ಆಗಬಹದು. ಒಂದು ವೇಳೆ ನಿಮಗೆ ಇದು ಯಾವುದು ಆಗಿಲ್ಲವೆಂದರೆ, ಶುಷ್ಕತೆಗೆ ಕಾರಣ ಬೇರೆ ಇರಬಹುದು.

೨. ನೀವು ನಿಮ್ಮ ದೇಹದೊಂದಿಗೆ ಕನೆಕ್ಟ್ ಆಗಿಲ್ಲ

ಲೈಂಗಿಕ ತಜ್ಞರ ಪ್ರಕಾರ ನೀವು ಆ ಕ್ಷಣದಲ್ಲಿ ಬೆರೆತು, ಮಗ್ನರಾಗದೆ ಕೇವಲ ಲೈಂಗಿಕ ಚಲನೆಗಳನ್ನ ಮಾತ್ರ ಮಾಡುವುದು ಕೂಡ ಆ ಭಾಗವು ವದ್ದೆ ಆಗದೆ ಇರುವುದಕ್ಕೆ ಕಾರಣ ಆಗಿರಬಹುದು. ನೀವು ಆ ಕ್ಷಣದಲ್ಲಿ ಮುಳುಗದೇ ಇದ್ದರೆ, ನೀವು ಸರಿಯಾದ ಲೈಂಗಿಕ ಪ್ರಚೋದನೆ ಹೊಂದುವುದಿಲ್ಲ. ನೀವು ಸರಿಯಾದ ಲೈಂಗಿಕ ಪ್ರಚೋದನೆ ಹೊಂದಲಿಲ್ಲ ಎಂದರೆ, ಆ ಭಾಗದಲ್ಲಿ ದ್ರವ್ಯ ಹರಿಯುವುದೆ ಇಲ್ಲ.

೩. ನೀವು ಸೇವಿಸುವ ಔಷಧಿಗಳ ಅಡ್ಡಪರಿಣಾಮ

ಅಲರ್ಜಿಗೆ ತೆಗೆದುಕೊಳ್ಳುವ ಔಷಧಿ, ಹಿಸ್ಟಾಮೈನ್ ಒಳಗೊಂಡಿರುವ ಶೀತದ ಔಷಧಿಗಳು ಮತ್ತು ಅಸ್ತಮಾಗೆ ನೀಡುವ ಕೆಲವೊಂದು ಔಷಧಿಗಳು ಯೋನಿಯನ್ನು ಒಣ ಒಣವಾಗಿ ಇಡುತ್ತವೆ. ಒಂದು ವೇಳೆ ಕಾರಣ ಇದೇ ಆಗಿದ್ದರೆ, ನೀವು ಇತರೆ ನೈಸರ್ಗಿಕ ಪರಿಹಾರಗಳ ಕಡೆ ಮುಖ ಮಾಡಬಹುದು ಅಥವಾ ನಿಮ್ಮ ವೈದ್ಯರ ಬಳಿ ಪರ್ಯಾಯ ಔಷದಧಿಗಳ ಬಗ್ಗೆ ಕೇಳಬಹುದು.

೪. ನಿಮಗೆ ಸೆಕ್ಸ್ ಬಗ್ಗೆ ಮುಜುಗರ ಅಥವಾ ಪಾಪಪ್ರಜ್ಞೆ ಇರಬಹುದು

ತಜ್ಞರ ಪ್ರಕಾರ ನೀವು ಒಂದು ವೇಳೆ ಲೈಂಗಿಕ ಕ್ರಿಯೆಯ ಬಗ್ಗೆ ಅಸಹ್ಯ ಭಾವನೆ ಅಥವಾ ಪಾಪಪ್ರಜ್ಞೆ ಹೊಂದಿದ್ದರೆ ನೀವು ಆ ಜಾಗದಲ್ಲಿ ವದ್ದೆ ಆಗುವುದು ಕಷ್ಟ. ಈ ಭಾವನೆ ನಿಮಗೆ ಚಿಕ್ಕಂದಿನಿಂದ ಬಂದಿರಬಹುದು ಅಥವಾ ವಯಸ್ಕರರು ಆದಮೇಲೆಯೂ ಬಂದಿರಬಹುದು, ಆದರೆ ಇದನ್ನು ತೊಲಗಿಸುವುದರ ಬಗ್ಗೆ ನೀವು ಯೋಚಿಸಬೇಕು. ಸೆಕ್ಸ್ ಬಗ್ಗೆ ನಿಮ್ಮಲ್ಲಿ ಯಾವುದಾದರೂ ಆಧಾರರಹಿತ ನಕಾರಾತ್ಮಕ ಭಾವನೆಗಳು ಇದ್ದರೆ, ಅವುಗಳನ್ನ ತರ್ಕಬದ್ಧ ಭಾವನೆಗಳಾಗಿ ಬದಲಾಯಿಸಿಕೊಳ್ಳಲು ನೀವು ಪ್ರಯತ್ನಿಸಬೇಕು ಎನ್ನುತ್ತಾರೆ ಲೈಂಗಿಕ ತಜ್ಞರು. ಯಾವಾಗ ಸೆಕ್ಸ್ ಬಗ್ಗೆ ನಿಮ್ಮ ಯೋಚನೆಗಳು ಮತ್ತು ನಂಬಿಕೆಗಳು ಆರೋಗ್ಯಕರವಾಗಿ ಮತ್ತು ಸ್ವೀಕರಿಸುವಂತವು ಆಗಿರುತ್ತವೆಯೋ, ಆಗ ನಿಮ್ಮ ದೇಹವು ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ.

೫. ಪತಿಯೊಂದಿಗಿನ ಅನುಬಂಧ

ಕೆಲವು ಬಾರಿ ಯೋನಿಯ ಶುಷ್ಕತೆಯು ಕಡಿಮೆ ಲೈಂಗಿಕ ಆಸಕ್ತಿಯಿಂದ ಅಥವಾ ನಿಮಗೆ ನಿಮ್ಮ ಪತಿಯೊಂದಿಗೆ ಇರುವ ಸಮಸ್ಯೆಗಳಿಂದ ಕೂಡ ಆಗಬಹುದು. ಒಂದು ವೇಳೆ ಮಂಚದ ಮೇಲೆ ನಿಮಗೆ ಬೇಕಿರುವುದನ್ನ ಅವರು ನೀಡದೆ ಇದ್ದರೆ ಅಥವಾ ಅವರು ಮಾಡುತ್ತಿರುವುದು ನಿಮಗೆ ಹಿತ ನೀಡದೆ ಇದ್ದರೆ, ಆ ಭಾಗವು ಆಗಿರಬೇಕಷ್ಟು ವದ್ದೆ ಆಗುವುದಿಲ್ಲ. ಹೀಗಾಗಿ ಇಂತದ್ದು ಏನಾದರು ಇದ್ದರೆ, ಅದನ್ನು ಪತಿಯೊಂದಿಗೆ ಮಾತನಾಡುವ ಮೂಲಕ ಬಗೆಹರಿಸಿಕೊಳ್ಳಿ.

೬. ನೀವು ಬಳಸುವ ಸೋಪು

ಕೆಲವು ಹೆಂಗಸರಿಗೆ ಸೋಪು, ಡಿಟರ್ಜೆಂಟ್, ಹೇರ್ ಡೈ, ಪೆರ್ಫ್ಯೂಮ್ ಅಲ್ಲಿರುವ ರಾಸಾಯನಿಕ ವಸ್ತುಗಳಿಂದ ಅಲರ್ಜಿ ಉಂಟಾಗುತ್ತದೆ. ಇವುಗಳು ನಿಮ್ಮ ಒಳಉಡುಪು, ಟವೆಲ್ ಮೇಲೆಯೂ ಮೆತ್ತಿಕೊಂಡಿರುತ್ತವೆ. ಇವುಗಳು ಶುಷ್ಕತೆ ಮತ್ತು ಇರಿಸುಮುರಿಸು ಉಂಟು ಮಾಡಬಹುದು.

೭. ಒತ್ತಡ

ಬಹಳಷ್ಟು ಒತ್ತಡ, ಅದು ದೈಹಿಕ ಆದರೂ ಇರಲಿ ಅಥವಾ ಮಾನಸಿಕ ಆದರೂ ಇರಲಿ, ನಿಮ್ಮ ಮೇಲಿದ್ದರೆ ನಿಮಗೆ ಪ್ರಚೋದನೆ ಹೊಂದಲು ಮತ್ತು ಆ ಕ್ಷಣದಲ್ಲಿ ಮಗ್ನರಾಗಲು ತುಂಬಾ ಕಷ್ಟ ಆಗುತ್ತದೆ. ಒಂದು ವೇಳೆ ನೀವೇ ಪ್ರಚೋದನೆ ಹೊಂದಲು ಇಷ್ಟು ಕಷ್ಟ ಪಡುತ್ತಿದ್ದರೆ, ಯೋನಿಯು ವದ್ದೆ ಆಗುವುದಿಲ್ಲ. ಹೀಗಾಗಿ ನಿಮ್ಮ ಮೇಲೆ ಒತ್ತಡ ಇದ್ದರೆ, ನಿಮ್ಮ ಮನಸ್ಸಿಗೆ ಶಾಂತಿ ಮತ್ತು ಮುದ ನೀಡುವಂತ ಚಟುವಟಿಕೆಗಳ ಕಡೆ ಗಮನ ಹರಿಸಬೇಕು.

Leave a Reply

%d bloggers like this: