ನೀವು ಯಾವ ರೀತಿಯ ವ್ಯಕ್ತಿತ್ವದ ವ್ಯಕ್ತಿ ಎಂದು ನಿಮ್ಮ ಪಾದ ತಿಳಿಸುತ್ತದೆ!

ನಿಮ್ಮ ಮುಖ ಮತ್ತು ಹಸ್ತವನ್ನು ನೋಡಿ ನಿಮ್ಮ ಬಗ್ಗೆ ಹೇಳುತ್ತಿದ್ದ ಕಾಲ ನಿಮಗೆ ಗೊತ್ತು. ಆದರೆ, ನಿಮ್ಮ ಪಾದಗಳ ಆಕಾರವೂ ಸಹ ನಿಮ್ಮ ವ್ಯಕ್ತಿತ್ವದ ಬಗ್ಗೆ ರೋಮಾಂಚನಕಾರಿ ವಿಷಯಗಳನ್ನು ಬಹಿರಂಗಪಡಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು ಇದು ಸತ್ಯ. ಆಕಾರ, ಗಾತ್ರ ಮತ್ತು ನಿಮ್ಮ ಪಾದಗಳ ಸ್ಥಾನವು ನಿಮ್ಮ ಬಗ್ಗೆ ಬಹಳಷ್ಟು ವಿಷಯಗಳನ್ನು ಬಹಿರಂಗಪಡಿಸುತ್ತದೆ.

೧.ಸಮ ಪಾದ

ಒಬ್ಬ ಮನುಷ್ಯನ ಪಾದದ ಎಲ್ಲಾ ಬೆರಳುಗಳು ಬಹುಮಟ್ಟಿಗೆ ಒಂದೇ ಸಮನಾಗಿ ಇದ್ದರೆ, ಅಂತವರನ್ನು ಸಮ ಪಾದ ಇದೆ ಎನ್ನಬಹುದು. ಈ ರೀತಿಯ ಪಾದಗಳನ್ನು ಹೊಂದಿರುವವರು ತುಂಬಾ ಎಚ್ಚರಿಕೆಯಿಂದ ಇರುವರು ಎಂದು ಪರಿಗಣಿಸಲಾಗುತ್ತದೆ. ಮತ್ತು ಅವರು ಎಂತಹ ಸಂದರ್ಭದಲ್ಲೂ ಶಾಂತವಾಗಿ ಇರುತ್ತಾರೆ. ಮತ್ತು ಅವರು ವಿಶ್ವಾಸಾರ್ಹ ಎಂದು ನಂಬಬಹುದಾದ ವ್ಯಕ್ತಿಯಾಗಿರುತ್ತಾರೆ.

೨.ಬಾಗಿದ ಬೆರಳು ಪಾದ

ಈ ರೀತಿ ಪಾದವುಳ್ಳವರು, ಅವರ ಎರಡನೇ ಬೆರಳು ಮೊದಲನೇ ಬೆರಳಿಗಿಂತ ಉದ್ದವಿರುತ್ತದೆ, ಅವರು ಬೇರೆಯವರನ್ನು ಪ್ರೇರೇಪಿಸುವ ಗುಣವನ್ನು ಹೊಂದಿದ್ದು, ವಿಷಯಗಳ ಮೇಲೆ ತುಂಬಾ ಉತ್ಸುಕರಾಗಿರುತ್ತಾರೆ. ಈ ರೀತಿ ಪಾದ ಇರುವವರು ನಾಯಕತ್ವ ಗುಣವನ್ನು ಹೊಂದಿರುತ್ತಾರೆ. ಇವರು ಸೃಷ್ಟಿಶೀಲರಾಗಿದ್ದು,ಸವಾಲು ಮತ್ತು ಸಾಹಸಕಾರ್ಯಗಳನ್ನು ಮುಕ್ತವಾಗಿ ಸ್ವೀಕರಿಸುತ್ತಾರೆ.

೩.ಕೆಳಮುಖ ಪಾದ

ಈ ರೀತಿ ಪಾದವುಳ್ಳವರು, ಹೆಚ್ಚು ಸಾಮಾಜಿಕಗಳಲ್ಲಿ ಮತ್ತು ಹೊರಗಿನ ಪ್ರಪಂಚವನ್ನು ನೋಡಲು ಬಯಸುವರು. ಅವರ ಮುಖದಲ್ಲಿ ಕಾಂತಿಯು ಪ್ರಜ್ವಲಿಸಿತ್ತಿರುತ್ತದೆ. ಅವರು ಸ್ನೇಹವನ್ನು ಬೇಗನೆ ಒಪ್ಪಿಕೊಳ್ಳುತ್ತಾರೆ, ಅವರ ಜೀವನವನ್ನು ಸಮತೋಲನದಿಂದ ಇರುವಂತೆ ನೋಡಿಕೊಳ್ಳುತ್ತಾರೆ. ಮತ್ತು ಅವರು ಒಳ್ಳೆ ಕೇಳುಗರಾಗಿರುತ್ತಾರೆ.

೪.ಇಳಿಜಾರು ಪಾದ

ಈ ರೀತಿ ಪಾದವುಳ್ಳವರು, ಮೊದಲನೇ ಬೆರಳು ಎಲ್ಲಾ ಬೆರಳಿಗಿಂತ ದೊಡ್ಡದಾಗಿದ್ದು, ಉಳಿದ ಬೆರಳು ಒಂದಕ್ಕಿಂತ ಒಂದು ಕ್ರಮವಾಗಿ ಚಿಕ್ಕದಾಗ ಬರುತ್ತವೆ. ಇವರು ಖಾಸಗಿತನವನ್ನು ಇಷ್ಟಪಡುತ್ತಾರೆ. ಇವರು ಗುಟ್ಟನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದಿಲ್ಲ, ಮತ್ತು ತಮ್ಮ ಎಲ್ಲಾ ವಿಷಯವನ್ನು ತಮ್ಮ ಆಪ್ತರ ಜೊತೆಯೂ ಮಾತನಾಡುವುದಿಲ್ಲ.

೫.ಚಿಕ್ಕದಾದ ಕಿರುಬೆರಳು

ಈ ರೀತಿ ಪಾದವುಳ್ಳವರು, ಬಂಡರಾಗಿದ್ದು, ಕೆಲಸವನ್ನು ಅವರು ಹೇಳಿದ ದಾರಿಯಲ್ಲೇ ಮಾಡಲು ಬಯಸುತ್ತಾರೆ. ಅವರು ಹೇಳಿದಂತೆ ನಡೆಯಬೇಕು ಎಂದು ಅವರು ಇಚ್ಛಿಸುತ್ತಾರೆ.

೬.ಬಾಗಿದ ಮಧ್ಯದ ಬೆರಳು

ಈ ರೀತಿ ವ್ಯಕ್ತಿಗಳು, ಯಾವುದೇ ಒಂದು ಕೆಲಸವನ್ನು ಮಾಡುವ ಮೊದಲು ಅವರು ಅದರ ಬಗ್ಗೆ ಯೋಚಿಸುತ್ತಾರೆ, ಆದರೆ ಬೇರೆಯವರ ಜೊತೆ ಚರ್ಚಿಸುವುದಿಲ್ಲ. ಅವರು ಉತ್ತಮವಾಗಿ ಸಂಘಟಿತರಾಗಿದ್ದಾರೆ ಮತ್ತು ತಮ್ಮ ಮೇಲೆ ತಾವು ಉತ್ತಮ ನಿಯಂತ್ರಣ ಹೊಂದಿರುತ್ತಾರೆ.

೭.ಅಂಟಿಕೊಂಡ ಕಿರುಬೆರಳು

ಅಂಟಿಕೊಂಡ ಕಿರುಬೆರಳು ಇರುವ ವ್ಯಕ್ತಿಗಳು, ತಮ್ಮ ಕ್ರಮಗಳಿಗೆ ಬದ್ಧರಾಗಿರುತ್ತಾರೆ, ಮತ್ತು ಅದರ ಬಗ್ಗೆ ಅವರು ತುಂಬಾ ಗಂಭೀರವಾಗಿರುತ್ತಾರೆ. ಅವರು ಅದನ್ನು ಬಿಟ್ಟು ಬೇರೆ ಕ್ರಮಗಳನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ, ಮತ್ತು ಅವರು ತುಂಬಾ ನಿಷ್ಠಾವಂತ ವ್ಯಕ್ತಿಗಳಾಗಿರುತ್ತಾರೆ.

೮.ಬೇರ್ಪಡಿಸಬಹುದಾದ ಕಿರುಬೆರಳು

ತಮ್ಮ ಪಾದದ ಕಿರುಬೆರಳನ್ನು ತಾವಾಗಿಯೇ ಕೈಯ ಸಹಾಯ ಇಲ್ಲದೆ, ಆಡಿಸಲು ಸಾದ್ಯವಾದರೆ ಅವರು ಅವರ ಜೀವನದಲ್ಲಿ ಬದಲಾವಣೆಯನ್ನು ಬಯಸುವರು. ಅವರು ಬೇಗನೆ ಬೇಸರಗೊಳ್ಳುತ್ತಾರೆ, ಮತ್ತು ಈ ರೀತಿ ಮನಸ್ಥಿತಿ ಅವರಲ್ಲಿ ಅತೃಪ್ತಿ ಅಥವಾ ಸಂತೋಷವಿಲ್ಲದಂತೆ ಮಾಡುತ್ತದೆ.

೯.ಎರಡನೇ ಮತ್ತು ಮದ್ಯದ ಬೆರಳಿನ ನಡುವೆ ಅಂತರವಿದ್ದರೆ

ಈ ರೀತಿ ಪಾದ ಇದ್ದರೆ, ನೀವು ಅಷ್ಟು ಸುಲಭವಾಗಿ ಭಾವನಾತ್ಮಕಗೊಳ್ಳುವುದಿಲ್ಲ, ಅಥವಾ ಅಷ್ಟು ಸುಲಭವಾಗಿ ಬೇಗನೆ ಭಾವುಕರಾಗುವುದಿಲ್ಲ.

೧೦.ನೇರವಾದ ಎರಡನೇ ಬೆರಳು

ಈ ರೀತಿ ಪಾದ ಇರುವವರು, ತಮ್ಮನ್ನು ತಾವು ವ್ಯಕ್ತಪಡಿಸುಕೊಳ್ಳಲು ಇಚ್ಛಿಸುತ್ತಾರೆ. ಅವರು ಬೇರೆ ಜನರ ಮೇಲೆ ಬೇಗನೆ ಪ್ರಭಾವಿತರಾಗುತ್ತಾರೆ. ಅವರು ಖುಷಿಯಾಗಿದ್ದಾರೆ, ಅವರ ಸುತ್ತಲಿನ ಸ್ಥಳವನ್ನು ಖುಷಿಯಾಗಿರಿಸಲು ಪ್ರಯತ್ನಿಸುವರು. ಆದರೆ ಅವರು ಬೇಸರವಾಗಿದ್ದರೆ, ಅವರನ್ನು ಒಬ್ಬಂಟಿಯಾಗಿ ಬಿಡುವುದು ಒಳ್ಳೆಯದು.

Leave a Reply

%d bloggers like this: