ಪಟಾಕಿ ಇಂದ ಸುಟ್ಟಾಗ ಈ ಪ್ರಥಮ ಚಿಕಿತ್ಸೆಗಳನ್ನು ನೀಡಿ – ಅಪಾಯವನ್ನು ತಪ್ಪಿಸಿ

ದೀಪಾವಳಿ ಎಂದರೆ ಮನೆಯಲ್ಲಿ ಸಂಭ್ರಮ ಸಡಗರ ಎಲ್ಲವು ಇರುತ್ತದೆ. ಅಂತೆಯೇ ನಿಮ್ಮ ಮನೆಯಲ್ಲಿ ಮಗು ಇದೆ ಎಂದರೆ ನಿಮ್ಮ ಮಗುವು ಖಂಡಿತ ನಿಮ್ಮನ್ನು ಪಟಾಕಿಗಳನ್ನು ತರಲು ಹೇಳಿರುತ್ತದೆ. ಈ ದೀಪಾವಳಿಯನ್ನು ಆದಷ್ಟು ಪರಿಸರ ಸ್ನೇಹಿಯಾಗಿ ಮಾಡಿ, ಪಟಾಕಿ ಒಡೆಯುವಾಗ ನಿಮ್ಮ ಮಗುವಿನ ಜೊತೆ ಇದ್ದು, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ. ಈ ಲೇಖನದ ಉದ್ದೇಶ ಪಟಾಕಿ ಸಿಡಿದು ಅದರಿಂದ ಅಪಾಯವಾದೊಡನೆ ಏನು ಮಾಡಬೇಕೆಂದು ತಲೆಕೆಡಿಸಿಕೊಂಡು ಓಡಾಡುವ ಬದಲು ಇಲ್ಲಿ ನೀಡಿರುವ ಕೆಲವು ಪ್ರಥಮ ಚಿಕಿತ್ಸೆಯನ್ನು ನೀಡಿ, ಹೆಚ್ಚಿನ ಅಪಾಯಗಳಿಂದ ರಕ್ಷಿಸಿ, ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿ.

ನಿಮ್ಮ ಮಕ್ಕಳು ಪಟಾಕಿ ಒಡೆಯುವಾಗ ಅಥವಾ ರಸ್ತೆಯಲ್ಲಿ ನಡೆಯುವಾಗ ಬೇರೆಯವರು ಪಟಾಕಿ ಸಿಡಿಸಿ ಅದರಿಂದ ಅಪಾಯವಾದರೂ ಅದು ತೊಂದರೆಯೇ ಆ ಸಮಯದಲ್ಲಿ ನೀವು ಮಾಡಬೇಕಾದದ್ದು, ಪ್ರಥಮ ಚಿಕಿತ್ಸೆ. ಅದನ್ನು ನೀವು ಹೇಗೆ ಮಾಡಬಹುದೆಂದು ಇಲ್ಲಿ ತಿಳಿದುಕೊಳ್ಳಿ.

೧.ಸುಟ್ಟ ಜಾಗವನ್ನು ತಂಪಾಗಿಸಿ ಇದರಿಂದ ನೋವು ಕಡಿಮೆಯಾಗುತ್ತದೆ. ಸುಟ್ಟ ಜಾಗದ ಮೇಲೆ ನೀರನ್ನು ೧೦ ರಿಂದ ೧೫ ನಿಮಿಷಗಳ ಕಾಲ ಸುರಿಯಿರಿ, ತಂಪಾಗಲೆಂದು ಮಂಜುಗಡ್ಡೆಯನ್ನು ಮಡಗಬೇಡಿ, ಅಥವಾ ಒಂದು ಶುದ್ಧ ಬಟ್ಟೆಯನ್ನು ಪೂರ್ತಿ ತೇವ ಮಾಡಿ ಸುಟ್ಟ ಜಾಗಕ್ಕೆ ಸುತ್ತಿರಿ.

೨.ಸುಟ್ಟ ಜಾಗದ ಮೇಲಿರುವ ಬಿಗಿಯಾದ ಅಥವಾ ಸುರುಳಿಗಳನ್ನು ಅಥವಾ ಬೇರೆ ವಸ್ತುಗಳನ್ನು ತೆಗೆಯಿರಿ. ಇದನ್ನು ತಕ್ಷಣವೇ ಮಾಡಿ, ಸುಟ್ಟ ಜಾಗ ಊದಿಕೊಳ್ಳುವುದರ ಅಥವಾ ನೀರಾಡುವ ಮೊದಲು ಇದನ್ನು ಮಾಡಿ.

೩.ಸಣ್ಣ ಗುಳ್ಳೆಗಳನ್ನು ಒಡೆಯಬೇಡಿ(ನಿಮ್ಮ ಉಗುರಿನಷ್ಟು ದಪ್ಪ ಇರುವ ಗುಳ್ಳೆಗಳನ್ನು). ಒಂದು ವೇಳೆ ಗುಳ್ಳೆಗಳು ಒಡೆದರೆ ಕೂಡಲೇ ಮೃದುವಾದ ಸೋಪಿನಿಂದ ನೀರನ್ನು ಉಪಯೋಗಿಸಿ ಆ ಜಾಗವನ್ನು ತೊಳೆಯಿರಿ. ಆಂಟಿಬಯೋಟಿಕ್ ಕ್ರೀಮ್ ಅನ್ನು ಹಚ್ಚಿರಿ.

೪.ಲೋಗಸರದ ಲೋಳೆಯನ್ನು ಹಚ್ಚಿರಿ. ಇದು ಕೆಲವೊಮ್ಮೆ ಪರಿಹಾರ ನೀಡುತ್ತದೆ.

೫.ಸುಟ್ಟ ಜಾಗ ಕೆಂಪಾಗಬಹುದು, ಊದಿಕೊಳ್ಳಬಹುದು ಮತ್ತು ನೋವನ್ನು ನೀಡುತ್ತದೆ. ಇದರ ಜೊತೆಗೆ ಸಣ್ಣ ಸಣ್ಣ ಗುಳ್ಳೆಗಳು ಕೂಡ ಬರಬಹುದು, ಇದನ್ನು ಕಡಿಮೆ ಮಟ್ಟದ ಬೆಂಕಿ ಅಪಾಯ ಎಂದು ಪರಿಗಣಿಸಬಹದು. ವ್ಯಕ್ತಿಯನ್ನು ಅಥವಾ ಮಗುವನ್ನು ಆ ಜಾಗದಿಂದ ಬೇರೆಡೆಗೆ ಕರೆತಂದು, ಮೇಲಿನ ಪ್ರಥಮ ಚಿಕಿತ್ಸೆಯನ್ನು ಮಾಡಿ, ನಂತರದ ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಬಳಿ ಹೋಗಿ.

ಹೆಚ್ಚು ಅಪಾಯದ ಬೆಂಕಿ ಅಪಾಯವಿದ್ದರೆ, ವ್ಯಕ್ತಿಯನ್ನು ಆ ಸ್ಥಳದಿಂದ ಅವರನ್ನು ಕೂಡಲೇ ಬೇರೆ ಕಡೆಗೆ ಕರೆತಂದು, ಹೆಚ್ಚಿನ ಅಪಾಯಗಳನ್ನು ತಪ್ಪಿಸಿ.

ಆ ವ್ಯಕ್ತಿಯ ಬಳಿ ಸ್ಪೋಟಿಸುವಂತಹ ವಸ್ತುಗಳು ಇಲ್ಲ ಎಂದು ಖಚಿತ ಪಡಿಸಿಕೊಳ್ಳಿ. ಚರ್ಮಕ್ಕೆ ಅಂಟಿಕೊಂಡಿರುವ ಬಟ್ಟೆಯನ್ನು ಕೀಳಲು ಪ್ರಯತ್ನಿಸಬೇಡಿ.

ಅವರು ಉಸಿರಾಟವನ್ನು ಗಮನಿಸಿ. ಮತ್ತು ಅವರ ಚಲನೆಯನ್ನು ಗಮನಿಸಿ.

ಬೆಲ್ಟ್, ಒಡವೆಗಳು ಮತ್ತಿತ್ತರ ಅವರ ದೇಹದ ಮೇಲಿನ ವಸ್ತುಗಳನ್ನು ತೆಗೆಯಿರಿ.

ಸುಟ್ಟಿರುವ ಜಾಗವನ್ನು ಒಂದು ಶುದ್ಧ ಹತ್ತಿ ಬಟ್ಟೆಯಿಂದ ಅಥವಾ ಶುದ್ಧ ಬಟ್ಟೆಯಿಂದ ಸುತ್ತಿ. ಬ್ಯಾಂಡೇಜ್ ಇದ್ದರೆ ಉತ್ತಮ. ನಂತರ ಅವರನ್ನು ತಕ್ಷಣವೇ ವೈದ್ಯರ ಬಳಿ ಕರೆದ್ಯೋಯಿರಿ.

Leave a Reply

%d bloggers like this: