ಮಗುವಿನೊಂದಿಗೆ ಪ್ರಯಾಣಿಸುವಾಗ ಪಾಲಿಸಬೇಕಾದ ಮುಂಜಾಗರೂಕತೆಗಳು

ಮಗುವಿನೊಂದಿಗೆ ಪ್ರಯಾಣಿಸುವುದಕ್ಕಿಂತ ತಲೆನೋವಿನ ವಿಷಯ ಇನ್ನೊಂದಿಲ್ಲ. ಅದರಲ್ಲೂ ಕೈಗೂಸಾಗಿದ್ದರೆ, ನಿಮ್ಮ ಪ್ರಯಾಣವು ನರಕಯಾತನೆಯಾಗುವುದು. ಆಗಸದಲ್ಲಿ ಹಾರಾಡುವಾಗಿನ ವಾತಾವರಣದ ಒತ್ತಡದ ಬದಲಾವಣೆ ಮಾತ್ರವಲ್ಲದೇ, ಮುಚ್ಚಿದ ಕೋಣೆಯಲ್ಲಿ ಉಸಿರುಗಟ್ಟಿದಂತಾಗುವುದರಿಂದಲೂ, ಮಗುವು ಜತೆಯಲ್ಲಿರುವವರಿಗೂ ಕಸಿವಿಸಿಯನ್ನೀಯುವುದು. ಪ್ರಯಾಣವು ಜೀವನದ ಅವಿಭಾಜ್ಯ ಅಂಗ. ಮಾತ್ರವಲ್ಲದೆ ಯಾವುದೇ ಸಭಾ ಸಮಾರಂಭಗಳಲ್ಲಿ ಮಕ್ಕಳಿಲ್ಲದೆ ಹಾಜರಾಗುವುದೂ ಸಂತೊಷ ನೀಡದು.

ಮಕ್ಕಳೊಂದಿಗಿನ ನಿಮ್ಮ ಪ್ರಯಾಣವು ಸುಖಕರ ಹಾಗೂ ಸಮಾಧಾನದ ಅನುಭವವನ್ನಾಗಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ.
೧.ಒಂದು ಜತೆ ಎಕ್ಸ್ ಟ್ರಾ ಬಟ್ಟೆಗಳನ್ನು ಜೋಡಿಸಿಟ್ಟುಕೊಳ್ಳಿ

ನಿಮ್ಮ ಲಗೇಜುಗಳಲ್ಲಿ ಮಕ್ಕಳಿಗಾಗಿ ಎಷ್ಟು ಜತೆ ಬಟ್ಟೆಗಳನ್ನುಟ್ಟುಕೊಂಡಿದ್ದರೂ, ಹ್ಯಾಂಡ್ ಬಾಗಿನಲ್ಲಿ ಕೂಡ ಒಂದೆರಡು ಜತೆ ಬಟ್ಟೆಗಳನ್ನು ಜೋಡಿಸಿಟ್ಟುಕೊಳ್ಳಿ. ಮಗುವಿನ ಬಟ್ಟೆ ಬದಲಾಯಿಸಬೇಕಾದ ಸಂದರ್ಭ ಯಾವಾಗ ಬರಬಹುದೆಂದು ಪ್ರವಚಿಸಲು ಅಸಾಧ್ಯ. ಹಾರಾಟವು ಮೊದಲ ಅನುಭವವಾದ ಕಾರಣ ಮಗುವು ಶಾಂತಚಿತ್ತವಾಗಿರುವುದು ಸ್ವಲ್ಪ ಕಷ್ಟವಾಗಿರಬಹುದು.

೨.ಅಗತ್ಯ ಬೀಳುವಷ್ಟು ಕುರುಕುಲು ತಿಂಡಿಗಳನ್ನು ಖರೀದಿಸಿರಿ

ವಾತಾವರಣವು ಒತ್ತಡದ ವ್ಯತ್ಯಾಸಕ್ಕೊಳಗಾದಾಗ, ಶರೀರದ ದವಡೆಯ ಚಲನೆಯು ಶರೀರದ ಆಂತರಿಕ ಮತ್ತು ಬಾಹ್ಯ ಒತ್ತಡಗಳ ವ್ಯತ್ಯಾಸವನ್ನು ಸಮತೋಲನಗೊಳಿಸುತ್ತದೆ. ಮಗುವಿನ ದವಡೆ ಅಥವಾ ಬಾಯಿಯನ್ನು ಚಾಲನೆಗೊಳಿಸಲು ಮಗುವಿಗೆ ಕುರುಕಲು ತಿಂಡಿಗಳನ್ನು ನೀಡುವುದು ಒಳ್ಳೆಯದು. ಇದು ಮಗುವಿಗೆ ಮಾತ್ರವಲ್ಲ ನಿಮಗೂ ಅನ್ವಯಿಸುತ್ತದೆ.

೩.ಸಾಧ್ಯವಾದಷ್ಟು ತಡರಾತ್ರಿಗಳಲ್ಲೇ ಪ್ರಯಾಣಿಸಿ

ಹಗಲು ಹೊತ್ತಿನಲ್ಲಿ ಎಚ್ಚರವಾಗಿರುವ ಮಗುವು ಚಟುವಟಿಕೆಯಿಂದ ಕೂಡಿರುತ್ತದೆ. ಒಂದೇ ಜಾಗದಲ್ಲಿ ಕುಳಿತುಕೊಳ್ಳಲು ಇರುಸು ಮುರುಸಾಗುವ ಮಕ್ಕಳು ಅಳಲು ಪ್ರಾರಂಭಿಸುವರು. ಆದ ಕಾರಣ ನಿಮಗೂ ಹಾಗೂ ಇತರ ಪ್ರಯಾಣಿಕರಿಗೆ ತೊಂದರೆಯಾಗದಂತೆ, ರಾತ್ರಿಯ ಸಮಯ ಪ್ರಯಾಣಿಸಿದರೆ ನೀವು ಹಾಗೂ ಮಗುವು ಪ್ರಯಾಣವನ್ನು ಆನಂದಿಸಬಹುದು.

೪.ಅಗತ್ಯವಾದ ಔಷಧಿಗಳನ್ನು ಸಂಗ್ರಹಿಸಿಟ್ಟುಕೊಳ್ಳಿ

ಪ್ರಯಾಣದ ವೇಳೆಗಳಲ್ಲಿ ಮಗುವು ತನ್ನ ತುಂಟತನದಿಂದ ಗಾಯ ಮಾಡಿಕೊಳ್ಳುವುದು ಸಹಜ. ಅಥವಾ ಇನ್ನಾವುದೋ ಕಾರಣಗಳಿಂದ ಅಸೌಖ್ಯಕ್ಕೊಳಗಾಗಬಹುದು. ಆದ ಕಾರಣ ಅಗತ್ಯಕ್ಕೆ ಅನುಗುಣವಾಗಿ ಔಷಧಗಳನ್ನು ಸಂಗ್ರಹಿಸಿಟ್ಟರೆ, ಅನ್ಯರ ಸಹಾಯವಿಲ್ಲದೆ ಪರಿಸ್ಥಿತಿಯನ್ನು ನಿಭಾಯಿಸಬಹುದು.

೫.ಮಗುವನ್ನೆತ್ತಿಕೊಂಡು ಆಗಾಗ ನಡೆಯುತ್ತಿರಿ

ಒಂದೇ ಜಾಗದಲ್ಲಿ ದೀರ್ಘ ಕಾಲಗಳವರೆಗೆ ಕುಳಿತುಕೊಳ್ಳಲು ಮಕ್ಕಳಿಂದ ಸಾಧ್ಯವಿಲ್ಲ. ಹಿರಿಯರಿಗೂ ದೀರ್ಘ ಪ್ರಯಾಣ ಬೇಸರವೆನಿಸುವಾಗ, ಚಿಲುಮೆ ಬುಗ್ಗೆ ಪುಟಾಣಿಗಳ ಪಾಡೇನಾಗಿರುವುದೋ?  ಪ್ರಯಾಣದ ಆಲಸ್ಯದಿಂದ ಪಾರಾಗಲು ಮಗುವನ್ನೆತ್ತಿ ಅತ್ತಿತ್ತ ನಡೆಯುವುದು ನಿಮಗೂ ವ್ಯಾಯಾಮ ನೀಡುವುದು. ಇದು ಮಗುವು ಅನುಭವಿಸುವ ಒತ್ತಡ ವ್ಯತ್ಯಾಸಗಳ ನಿವಾರಣೆಗೂ ಸಹಾಯವಾಗುವುದು.

Leave a Reply

%d bloggers like this: