ಮಗುವಿನ ಅರಿವಿನ ಕೌಶಲ್ಯಗಳನ್ನು ವೃದ್ಧಿಪಡಿಸಲಿರುವ 6 ವಿಧಾನಗಳು

ನಮ್ಮ ಮೆದುಳು ಗ್ರಹಿಸುವ ಆಲೋಚನಾ ಶಕ್ತಿ, ವಾಕ್ಚಾತುರ್ಯ, ಮನನ ಮಾಡುವ ಚತುರತೆ, ಓದಿದ್ದನ್ನು ಅರ್ಥಮಾಡಿಕೊಳ್ಳುವ ತಿಳುವಳಿಕೆ, ಕಾರಣ ಕಂಡುಕೊಳ್ಳುವಿಕೆ ಮತ್ತು ಗಮನವೀಯುವ ಸಾಮರ್ಥ್ಯವನ್ನು ಒಟ್ಟಾಗಿ ಕಾಗ್ನಿಟಿವ್ ಸ್ಕಿಲ್ (ಅರಿವಿನ ಕೌಶಲ್ಯ) ಎಂದು ಕರೆಯುವರು. ಮಕ್ಕಳು ಬೆಳೆಯುತ್ತಿರುವಂತೆಲ್ಲಾ ಅವರ ಕಾಗ್ನೆಟಿವ್ ಸ್ಕಿಲ್ ಕೂಡ ಅಭಿವೃದ್ಧಿ ಪಡುತ್ತಿರಬೇಕು.ಮಗುವಿನ ಬೆಳವಣಿಗೆಯ ಪ್ರಮುಖ ಘಟ್ಟಗಳಲ್ಲಿ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆ ಮಹತ್ತರ ಪಾತ್ರ ವಹಿಸುತ್ತದೆ. ಮಗುವಿನ ಕೊಗ್ನೇಟಿವ್ ಸ್ಕಿಲ್ಗಳನ್ನು ಅಭಿವೃದ್ಧಿಪಡಿಸಲು ಹಲವಾರು ವಿಧಾನಗಳಿವೆ. ಅವುಗಳಲ್ಲಿ ಕೆಲವನ್ನು ಕೆಳಗೆ ನೀಡಲಾಗಿದೆ.

೧.ಶಬ್ದವನ್ನು ಗ್ರಹಿಸಲಿ

ಶ್ರವಣ ಶಕ್ತಿಯನ್ನು ಮಗುವಿನಲ್ಲಿ ಅಳವಡಿಸಿಕೊಳ್ಳಬೇಕು. ಇದು ಮಗುವು ಹೊಸ ಭಾಷೆ ಹಾಗೂ ಸನ್ನಿವೇಶಗಳನ್ನು ಕಲಿಯಲು, ಅರ್ಥಮಾಡಿಕೊಳ್ಳಲು ಸಹಾಯಿಸುತ್ತದೆ.ಮಗುವು ವಿವಿಧ ರೀತಿಯ ಶಬ್ದಗಳನ್ನು ಗುರುತಿಸುವಲ್ಲಿ ಮಾತ್ರವಲ್ಲ ವಿವಿಧ ರೀತಿಯ ಶಬ್ದಗಳು ಹೇಗೆ ಉತ್ಪಾದಿಸಲ್ಪಡುತ್ತವೆ ಎನ್ನುವುದನ್ನೂ ತಿಳಿಸಿ ಹೇಳಬೇಕು.ವಸ್ತುಗಳನ್ನು ಎತ್ತಿ ಒಗೆಯುವುದು, ಬಡಿಯುವುದು,ಆಟಿಕೆಗಳನ್ನು ಬಿಸಾಡುವುದು ಮೊದಲಾದ ಕ್ರಿಯೆಗಳಿಂದ ಮಗುವಿನ ಕಾಗ್ನಿಟಿವ್ ಸ್ಕಿಲ್ ಅಥವಾ ಅರಿವಿನ ಕೌಶಲ್ಯಗಳು ಬೆಳೆಯುತ್ತದೆ. 

ಸಂವೇದನಾ ಸಾಮರ್ಥ್ಯವನ್ನು ಉತ್ತೇಜಿಸಿರಿ ಇತರ ಸಂವೇದಿಗಳಾದ ಸ್ಪರ್ಶ, ಗ್ರಹಿಕೆ, ನೋಟ ಇಂತಹ ಸಂವೇದಿಗಳೂ ವಿಕಸಿಸಲ್ಪಡಬೇಕು. ಮಗುವು ನಿಮ್ಮ ಬೆಡ್ ಶೀಟ್, ಗೋಡೆ ಅಥವಾ ಕಾರ್ಡ್ಗಳಲ್ಲಿರುವ ವಿವಿಧ ರೀತಿಯ ಚಿತ್ತಾರಗಳನ್ನು ಹಾಗೂ ನಮೂನೆಗಳನ್ನು ಗುರುತಿಸಿಕೊಳ್ಳಲು ಸಹಾಯ ಮಾಡುವುದರಿಂದ ಇಂದ್ರಿಯಗಳ ಸಾಮರ್ಥ್ಯವನ್ನು ಚುರುಕುಗೊಳಿಸಬಹುದು. ಇದರಿಂದ ಮಕ್ಕಳಿಗೆ ರೇಖಾಗಣಿತ ಹಾಗೂ ಮಿರರ್ ಇಮೇಜ್ ನ ಬಗ್ಗೆ ತಿಳಿದುಕೊಳ್ಳಲು ಸುಲಭವಾಗುತ್ತದೆ. ಉದ್ಯಾನಗಳಲ್ಲಿ ಅರಳಿದ ವಿವಿಧ ರೀತಿಯ ಪುಷ್ಪಗಳ ವಾಸನೆಗಳನ್ನು ಆಘ್ರಾಣಿಸುವಂತೆ ಮಾಡುವುದರಿಂದಲೂ ವಾಸನೇಂದ್ರಿಯಗಳನ್ನು ಉತ್ತೇಜಿಸಬಹುದು.

೩.ಸರಿಯಾದ ಆಟಿಕೆಗಳ ಆಯ್ಕೆ

ಆಟಿಕೆಗಳ ಆಯ್ಕೆಯಂತೂ ಬಹಳ ತಲೆನೋವೆನ್ನಿಸುವುದು. ಖರೀದಿಸಬೇಕೇ ? ಬೇಡವೇ? ಎಂಬ ಸಂದೇಹಕ್ಕೊಳಗಾಗುವುದೂ ಸಹಜ. ಮಕ್ಕಳ ಕಾಗ್ನೆಟಿವ್ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಆಟಿಕೆಗಳಿಗೂ ಪ್ರಧಾನ ಪಾತ್ರವಿದೆ.

ರಾಟಲ್ ಅಥವಾ ಬುಡಬುಡಿಕೆಗಳು, ಬ್ಲಾಕ್ ಅಥವಾ ಕಟ್ಟಡದ ಕಂತೆಗಳು, ಬಾಲ್ ಡ್ರಾಪ್ಸ್, ಬೇಬಿ ಜೈಮ್ಸ್ ಮತ್ತು ಶೇಪ್ ಸಾರ್ಟ್ ಗಳಂತಹ ಆಟಿಕೆಗಳು ಮಕ್ಕಳ ಚಲನೆ ಹಾಗೂ ನರವ್ಯೂಹಗಳ ಪರಸ್ಪರ ಸಹಕಾರ ಹಾಗೂ ಸಂವೇದನೆಗೆ ಕಾರಣವಾಗುತ್ತದೆ. ಆಟಿಕೆಗಳು ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗಿಲ್ಲ.ಆದ ಕಾರಣ ಆಟಿಕೆಗಳನ್ನು ಜಾಣತನದಿಂದ ಆಯ್ಕೆ ಮಾಡಿರಿ.

೪.ಚಲನೆಗಳ ಕಾರಣ ಮತ್ತು ಪರಿಣಾಮಗಳ ಪರಸ್ಪರ ಸಂಬಂಧದ ಬಗ್ಗೆ ತಿಳಿಸಿರಿ

ಪ್ರತಿಯೊಂದು ಕ್ರಿಯೆಗೂ ಅದಕ್ಕೆ ಸಮಾನವಾದ ಹಾಗೂ ವಿರುದ್ಧವಾದ ಪ್ರತಿಕ್ರಿಯೆಗಳಿರುತ್ತದೆ. ಕಥೆಗಳ ಅಥವಾ ಆಟಗಳ ರೂಪದಲ್ಲಿ ಬ್ಲಾಕುಗಳನ್ನು ಉಪಯೋಗಿಸಿ ಎಲ್ಲಾ ಚಲನೆಗಳ ಅಥವಾ ಕ್ರಿಯೆಗಳ ಕಾರಣ ಮತ್ತು ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಯಪಡಿಸಬೇಕು. ಎಂದರೆ ಬ್ಲಾಕುಗಳಿಂದ ಕಟ್ಟಲಾದ ಕಟ್ಟಡಗಳನ್ನು ಉರುಳಿಸಿದರೆ, ಕಟ್ಟಡಗಳು ಬಿದ್ದು ನೆಲಸಮವಾಗುವುದನ್ನು ಕಾಣಿಸಿಕೊಡಬಹುದು. ಹೊಯಿಗೆಗಳು ಕೈಬೆರಳುಗಳ ನಡುವಿನಿಂದ ಕೂಡ ಜಾರಿಕೊಳ್ಳುವಷ್ಟು ನುಣುಪಾಗಿದೆ ಎಂದು ಪ್ರಯೋಗಗಳ ಮೂಲಕ ತೋರಿಸಿ ಕೊಡಬಹುದು. ಬ್ಯಾಟರಿ ಚಾಲಿತ ವಸ್ತುಗಳು ಬ್ಯಾಟರಿಯ ಬಳಕೆಯಿಂದ ಹೇಗೆ ಅತ್ತಿತ್ತ ಓಡಾಡಿಕೊಳ್ಳುವುದೆಂದು ಕಾಣಿಸಿ ಕೊಡಬಹುದು.

೫.ಟ್ರೆಶರ್ ಹಂಟ್ ನಂತಹ ಪತ್ತೇದಾರಿ ಆಟಗಳು

ಮಕ್ಕಳ ಜನ್ಮದಿನವನ್ನು ಸ್ವಲ್ಪ ಕಳೆಕಟ್ಟುವಂತೆ ಆಚರಿಸಿ. ಮಕ್ಕಳ ಉಡುಗೊರೆಗಳನ್ನು ಅವರಿಗೆ ನೇರವಾಗಿ ನೀಡದೆ, ಅಡಗಿಸಿಟ್ಟಲ್ಲಿಂದ ಹುಡುಕಿ ಕಂಡುಹಿಡಿಯಲು ಹೇಳಿ. ಟ್ರೆಶರ್ ಹಂಟ್ ಗಳಂತಹ ಆಟಗಳಿಂದ, ಮಗುವಿನ ಕ್ರಿಯಾತ್ಮಕತೆ ಬೆಳೆದು ಉತ್ಸಾಹದ ಚಿಲುಮೆಯಾಗಿ ಮನೆಯಲ್ಲಿ ಓಡಾಡಿಕೊಂಡಿರುವರು. ಮಾಡುತ್ತದೆ ತನ್ನ ಪರಿಶ್ರಮದಿಂದ ಗಳಿಸಿಕೊಂಡ ಉಡುಗೊರೆಗಳು ಮಗುವಿಗೆ ಸಂತೋಷವನ್ನು ನೀಡುವುದರ ಜತೆಗೆ ಮಗುವಿನ ಕಾಗ್ನಿಟಿವ್ ಸ್ಕಿಲ್ಗಳನ್ನು ಹೆಚ್ಚಿಸಲು ಸಹಕರಿಸುತ್ತದೆ.

೬.ಮಗುವಲ್ಲಿ ಮಾತನಾಡಿ, ಕತೆ ಹೇಳಿ

ಕೇವಲ ಒಂದು ವಾರಗಳಷ್ಟೇ ಪ್ರಾಯವಾದ ಮಗುವಿನಲ್ಲಿ ಕೂಡ ಮಾತನಾಡಬೇಕು. ಮಗುವಲ್ಲಿ ಮಾತನಾಡುವಾಗ ನಾವು ಬಳಸುವ ಶಬ್ದಗಳಿಂದ ಮಗುವು ತನ್ನ ಇಹಲೋಕದ ಬಗ್ಗೆ ತಿಳಿಯಲು ಪ್ರಯತ್ನಿಸುತ್ತದೆ. ಮಗುವಿಗೆ ಚಿತ್ರ ತೋರಿಸಿ ಕಥೆಗಳನ್ನು ಓದಿಸುವುದರಿಂದಲೂ ಚಿತ್ರಾತ್ಮಕ ಅಥವಾ ದೃಶ್ಯಾತ್ಮಕ ನೆನಪನ್ನು ಉತ್ತೇಜಿಸುತ್ತದೆ.

Leave a Reply

%d bloggers like this: