ಸಿಸೇರಿಯನ್ ಬಳಿಕ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳಲು ವ್ಯಾಯಾಮಗಳು

ಸಿಸೇರಿಯನ್ ಬಳಿಕ ಶರೀರವು ಪುನಃ ಮೊದಲ ರೂಪಕ್ಕೆ ಮರಳಲು ಸ್ವಲ್ಪ ಸಮಯ ತಗುಲಬಹುದೆಂದು ನೀವು ತಿಳಿದಿರಬಹುದು. ನಂತರದ ಆರು ವಾರಗಳವರೆಗೆ ಇದರ ಬಗ್ಗೆ ತಲೆ ಕೆಡಿಸಿ ಕೊಳ್ಳದಿರುವಂತೆ ವೈದ್ಯರು ಸಲಹೆ ಮಾಡಿರುವರು. ನಿಮ್ಮ ಈ ಅವಧಿಗಳಲ್ಲಿ ಭಾರವನ್ನೆತ್ತಲು, ವ್ಯಾಯಾಮಗಳನ್ನು ಮಾಡಲು ಅಥವಾ ವಾಹನಗಳನ್ನು ಓಡಿಸಲು ಅನುಮತಿಯಿರದು.

ನೀವು ಇವುಗಳನ್ನೆಲ್ಲ ಅನುಸರಿಸುತ್ತಿದ್ದರೆ ಖಂಡಿತ ಒಳ್ಳೆಯದು.ಈ ಆಧುನಿಕ ಜಗತ್ತಿನಲ್ಲಿ ಸಿಸೇರಿಯನ್ ಹಾಸುಹೊಕ್ಕಾಗಿದೆ. ಹಾಗೆಂದು ಸಿಸೇರಿಯನ್ ಖಂಡಿತ ಸರಳ ಶಸ್ತ್ರ ಚಿಕಿತ್ಸೆಯಲ್ಲ. ನಿಮ್ಮ ಶರೀರದ ಕೊಬ್ಬು ಮತ್ತು ಚರ್ಮವನ್ನು ಭೇದಿಸಿ, ಕಿಬ್ಬೊಟ್ಟೆಯನ್ನು ಕೊಯ್ಯುವ ವೈದ್ಯರು ಅಲ್ಲಿರುವ ಬ್ಲಾಡರ್ ಹಾಗೂ ಇತರ ಅವಯವಗಳನ್ನು ಬಲವಾಗಿ ಸ್ಥಾನಪಲ್ಲಟಗೊಳಿಸಿದ ನಂತರ ಗರ್ಭಾಶಯವನ್ನು ಕೊಯ್ಯುತ್ತಾರೆ. ಈ ರೀತಿಯಲ್ಲಿ ಸೀಳಿದ ಭಾಗಗಳ ಮೂಲಕ ಮಗುವನ್ನು ಹೊರತೆಗೆಯಲಾಗುವುದು. ಬಹಳ ಸಂಕೀರ್ಣವಾದ ಶಸ್ತ್ರಕ್ರಿಯೆಗೆ ಒಳಗಾದ ಕಾರಣ ವೈದ್ಯರು ಹೇಳಿದಂತೆ ಕೆಲವು ತಿಂಗಳುಗಳ ಕಾಲ ನೀವು ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು.

ವೈದ್ಯರು ಶಿಫಾರಸು ಮಾಡಿದ ಆರು ತಿಂಗಳುಗಳ ಬಳಿಕ ವಿಶ್ರಾಂತಿಯ ನಂತರ ವ್ಯಾಯಾಮ ಮಾಡಲು ವೈದ್ಯರು ಸಲಹೆ ನೀಡಿದ್ದೇ ಆದರೆ, ನಿಮ್ಮಲ್ಲಿ ಯುವತ್ವವನ್ನು ಮೂಡಿಸಿ, ಬಲಿಷ್ಟರನ್ನಾಗಿಸುವಂತೆ ನಮ್ಮಲ್ಲಿ ಕೆಲವು ಸಲಹೆಗಳಿವೆ.

ಉಸಿರಾಟ ನಿಯಂತ್ರಣ

ಅಂಗಾತ ಮಲಗಿ ಕಾಲುಗಳನ್ನು ಅಗಲಿಸಿ. ಒಂದು ಕೈಯನ್ನು ನಿಮ್ಮ ಪಕ್ಕದಲ್ಲಿ ಹಾಗೂ ಇನ್ನೊಂದು ಕೈಯನ್ನು ಹೊಟ್ಟೆ ಮೇಲಿಟ್ಟು, ಆಳವಾಗಿ ಉಸಿರೆಳೆದುಕೊಳ್ಳಿ. ನೀವು ಉಸಿರಾಡುವಾಗ ನಿಮ್ಮ ಹೊಟ್ಟೆಯಲ್ಲಾಗುವ ಬದಲಾವಣೆಯನ್ನು ಗಮನಿಸಬೇಕು. ಮೂರು ಸೆಕೆಂಡುಗಳ ಕಾಲ ಹಾಗೆಯೇ ಉಸಿರನ್ನು ಹಿಡಿದಿಟ್ಟು, ನಂತರ ನಿಧಾನವಾಗಿ ಉಸಿರು ಬಿಡಿ. ಬೆನ್ನು ಹುರಿಯ ಭಾಗಕ್ಕೆ ಹೊಟ್ಟೆಯು ಬಾಗುವುದನ್ನು ಗಮನಿಸಬಹುದು.ಇದನ್ನು ಐದರಿಂದ ಹತ್ತು ಸಲ ಆವರ್ತಿಸಿ.ಈ ವ್ಯಾಯಾಮವನ್ನು ದಿನಕ್ಕೆ ಎರಡು ಸಲ ಮಾಡಿರಿ.

ಕೆಗೆಲ್ ವ್ಯಾಯಾಮ

ಪಾದವನ್ನು ನೆಲದ ಮೇಲೆ ಆರಾಮವಾಗಿಟ್ಟುಕೊಂಡು ಕುರ್ಚಿಯ ಮುಂಭಾಗದಲ್ಲಿ ಕುಳಿತುಕೊಳ್ಳಿ.ನಿಮ್ಮ ಬ್ಲ್ಯಾಡರ್ ಅನ್ನು ಅಧೀನದಲ್ಲಿಟ್ಟುಕೊಳ್ಳುವಂತೆ ಪೆಲ್ವಿಕ್ ಫ್ಲೋರ್ ಮಸಲ್ಸಗಳನ್ನು ಸಂಕುಚಿತಗೊಳಿಸಿ. ೫ ಸೆಕೆಂಡ್ಗಳ ನಂತರ ಉಸಿರನ್ನು ನಿಧಾನವಾಗಿ ಹೊರಕ್ಕೆ ದಬ್ಬಿ. ಇದೇ ರೀತಿಯಲ್ಲಿ ೮-೧೨ ಸಲ ಆವರ್ತಿಸಿ. ಮಾತ್ರವಲ್ಲದೆ ನೀವೊಂದು ಪಕ್ಕಕ್ಕೆ ಮಲಗಿದಾಗ ಅಥವಾ ನಿಂತಾಗಲೂ ಈ ವ್ಯಾಯಾಮವನ್ನು ಮಾಡಬಹುದು.ವ್ಯಾಯಾಮವು ಅವಧಿಯಲ್ಲಿ ಕ್ರಮಾನುಗತವಾಗಿ ಐದು ಸೆಕೆಂಡುಗಳಿಂದ ಎಂಟು ಸೆಕೆಂಡ್ ,ಹತ್ತು ಸೆಕೆಂಡ್, ಹದಿನೈದು ಸೆಕೆಂಡುಗಳಿಗೆ ವಿಸ್ತರಿಸಬಹುದು. 

ನಡೆಯುವಿಕೆ

ವಿಶ್ರಾಂತಿಯ ಬಳಿಕ ನಿಮ್ಮ ಸಾಮರ್ಥ್ಯವನ್ನು ಅರಿಯಲು ನಡುಗೆಯು ಬಹಳ ಸೂಕ್ತವಾದದ್ದು. ನಿಮ್ಮ ಸೌಕರ್ಯಕ್ಕೆ ತಕ್ಕಂತೆ ನೀವು ನಡುಗೆಯ ಸಮಯವನ್ನು ಹೆಚ್ಚಿಸಬಹುದು.

ಇನ್ನು ಸಲಹೆ ನೀಡಲಿರುವ ವ್ಯಾಯಾಮಗಳು ನೀವು ಸಂಪೂರ್ಣ ಬಲಿಷ್ಠರಾದ ಬಳಿಕವೇ ಮಾಡಬೇಕು. ಮೇಲೆ ಹೇಳಿದ ವ್ಯಾಯಾಮಗಳನ್ನು ಮಾಡಲು ಪ್ರಾರಂಭಿಸಿದ ಒಂದು ತಿಂಗಳ ಬಳಿಕವಷ್ಟೇ ಮಾಡಲು ಶುರು ಮಾಡಬೇಕು. ನೀವು ಈ ವ್ಯಾಯಾಮವನ್ನು ಮಾಡುವ ಮೊದಲು ಖಂಡಿತವಾಗಲೂ ವೈದ್ಯರ ಸಲಹೆ ಪಡೆದುಕೊಳ್ಳಬೇಕು.

ಗ್ಲುಟ್ ಬ್ರಿಡ್ಜ್

ಅಂಗಾತ ಮಲಗಿಕೊಳ್ಳಿ. ಕೈಗಳನ್ನು ಶರೀರದ ಎರಡೂ ಭಾಗಗಳಲ್ಲಿ ಪಾದವನ್ನು ನೆಲದ ಮೇಲಿರಿಸಿ, ಮೊಣಕಾಲನ್ನು ಬಾಗಿಸಿ ನಿಧಾನವಾಗಿ ಸೊಂಟವನ್ನು ಎತ್ತಿಕೊಳ್ಳಿ.ಎರಡು ಸೆಕೆಂಡುಗಳ ಕಾಲ ಅದೇ ಸ್ಥಿತಿಯಲ್ಲಿದ್ದು ನಂತರ ಪೂರ್ವಸ್ಥಿತಿಗೆ ಮರಳಿ ಬನ್ನಿ. ನಾಲ್ಕರಿಂದ ಎಂಟು ಸಲ ಆವರ್ತಿಸಿ.

೯೦ ಡಿಗ್ರಿ ಬಾಗಿದ ಸ್ಥಿತಿ

ಪಾದವನ್ನು ಅಗಲವಾಗಿಸಿ ನೇರವಾಗಿ ಸಟೆದು ನಿಂತುಕೊಳ್ಳಿ. ನಿಮ್ಮ ಶರೀರದ ಮೇಲ್ಭಾಗವು ನೆಲಕ್ಕೆ ಸಮಾಂತರವಾಗಿ ಮುಂದಕ್ಕೆ ಬಾಗಿ ನಿಂತುಕೊಳ್ಳಿ. ನಿಮಗೆ ಆಧಾರವಾಗುವಂತೆ ಯಾವುದಾದರೂ ಇಟ್ಟಿಗೆ ಅಥವಾ ಮರದ ತುಂಡನ್ನು ಬಳಸಿಕೊಳ್ಳಬಹುದು. ನಂತರ ಮೊದಲಿನ ಅದೇ ಸ್ಥಿತಿಗೆ ಮರಳಿ ಬನ್ನಿ.

ಕೋಬ್ರಾ

ಹೊಟ್ಟೆಯ ಮೇಲೆ ಮಲಗಿಕೊಳ್ಳಿ.ನೆಲದ ಮೇಲೆ ಊರಿಕೊಂಡ ಅಂಗೈಗಳ ಸಹಾಯದಿಂದ ನಿಮ್ಮ ಪಕ್ಕೆಲುಬುಗಳನ್ನು ಸಮಾಂತರವಾಗಿ, ವಿಧಾನವಾಗಿ ಶ್ವಾಸವನ್ನು ಒಳಗೆಳೆದುಕೊಂಡು ತಲೆಯನ್ನು ಮೇಲಕ್ಕೆತ್ತಿ .ನಿಧಾನವಾಗಿ ಉಸಿರನ್ನು ಹೊರಗೆ ಬಿಟ್ಟು ತಲೆಯನ್ನು ಕೆಳಕ್ಕೆ ಬಾಗಿಸಿ. ಇದೇ ರೀತಿಯಲ್ಲಿ ೪-೮ ಸಲ ಆವರ್ತಿಸಿ.

Leave a Reply

%d bloggers like this: