ಗರ್ಭದೊಳಗಿನ ಮಗುವಿನ ಚಲನವಲನದಿಂದ ಮಗುವು ಗಂಡೋ ಅಥವಾ ಹೆಣ್ಣೋ ಎಂದು ತಿಳಿಯಿರಿ

ನೀವು ಗರ್ಭಿಣಿಯಾಗಿರುವಾಗ, ನಿಮ್ಮ ಉದರದೊಳಗೆ ಇರುವುದು ಗಂಡೋ ಅಥವಾ ಹೆಣ್ಣು ಮಗುವೋ ಎಂಬ ಕುತೂಹಲ ಇರುವುದು ಸಹಜ. ಅದು ನೀವು ಲಿಂಗ ಭೇದ ಮಾಡದಿದ್ದರೂ ಸಹ ಮಗು ಯಾವುದು ಎಂಬುದನ್ನು ತಿಳಿದುಕೊಳ್ಳಲು ಕುತೂಹಲ ಸಾಮಾನ್ಯ. ನಿಮ್ಮ ಅಜ್ಜಿ ಅಥವಾ ನಮ್ಮ ಹಿರಿಯರು ನಿಮ್ಮ ಗರ್ಭಾವಸ್ಥೆಯ ಕೆಲವು ಲಕ್ಷಣಗಳನ್ನು ಗಮನಿಸಿ ನೀವು ಗಂಡು ಮಗುವಿನ ಅಥವಾ ಹೆಣ್ಣು ಮಗುವಿನ ತಾಯಿ ಆಗುವಿರಿ ಎಂದು ಹೇಳುವರು. ಇದು ವೈಜ್ಞಾನಿಕವಾಗಿ ಸಾಭೀತು ಆಗಿಲ್ಲ ಆದರೂ, ಇದು ವೈಜ್ಞಾನಿಕ ಹಿನ್ನಲೆಯನ್ನು ಉಪಯೋಗಿಸಿ ಕಂಡುಹಿಡಿಯುವ ಮಾರ್ಗವಾಗಿದೆ.

ಮಗುವು ತನ್ನ ಚಲನೆಯನ್ನು ಬೇಗನೆ ಶುರು ಮಾಡಿದರೆ

ನಿಮ್ಮ ಮಗು ತನ್ನ ಚಲನವನ್ನು ಬೇಗನೆ ಶುರು ಮಾಡಿದರೆ, ಅದು ಗಂಡು ಮಗು. ಸಾಮಾನ್ಯವಾಗಿ ನೀವು ಮಗುವಿನ ಚಲನೆಯನ್ನು ನಿಮ್ಮ ೨೦ನೇ ವಾರದ ಗರ್ಭಾವಸ್ಥೆಯಲ್ಲಿ ಅನುಭವಿಸುವಿರಿ. ಆದರೆ ಕೆಲವು ತಾಯಿಯಂದಿರು ಈ ಚಲನೆಯನ್ನು ಇದಕ್ಕೂ ಮುಂಚಿತವಾಗಿಯೇ ಅನುಭವಿಸುತ್ತಾರೆ, ಅಂದರೆ, ತಮ್ಮ ೧೬ನೇ ವಾರದ ಗರ್ಭಾವಸ್ಥೆಯಲ್ಲೇ ಮಗುವಿನ ಚಲನೆಯನ್ನು ಅನುಭವಿಸುತ್ತಾರೆ. ನೀವು ಇದೆ ರೀತಿ ಆರಂಭಿಕ ಚಲನೆಯನ್ನು ಅನುಭವಿಸುತ್ತಿರುವಿರಿ ಎಂದರೆ ನೀವು ಗಂಡು ಮಗುವನ್ನು ಹೊಂದಿರುವಿರಿ ಎಂದರ್ಥ.

ಮಗುವು ಹೆಚ್ಚು ಸಕ್ರಿಯವಾಗಿದ್ದರೆ

ಹೆಣ್ಣು ಮಗುವಾಗಿರಬಹುದು. ಹೆಣ್ಣು ಭ್ರೂಣ ಗಂಡು ಭ್ರೂಣಕ್ಕಿಂತ ಶಕ್ತಿಶಾಲಿಯಾಗಿರುತ್ತದೆ. ಇದನ್ನು ವಿಜ್ಞಾನವು ಒಪ್ಪುತ್ತದೆ. ಹೆಣ್ಣಿನಲ್ಲಿರುವ XX ಕ್ರೋಮೋಜೋಮ್ ಹೆಣ್ಣು ಭ್ರೂಣ ಹೆಚ್ಚು ಸ್ಥಿರವಾಗಿರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ೩೦ ನಿಮಿಷದಲ್ಲಿ ೩ ಭ್ರೂಣ ಚಲನೆಗಳು ಸಾಮಾನ್ಯವಾಗಿದೆ. ಆದರೆ ನೀವು ಅದಕ್ಕಿಂತ ಹೆಚ್ಚು ಚಲನೆಯನ್ನು ಅನುಭವಿಸಿದರೆ ನೀವು ಹೆಣ್ಣು ಮಗುವನ್ನು ಹೊಂದಿರುವಿರಿ ಎಂದು ತಿಳಿದುಕೊಳ್ಳಬಹುದು.

ಮಗುವಿನ ಒದೆತಗಳು

ಮಗುವು ನಿಮ್ಮ ಉದರದೊಳಗೆ ಮಾಡುವ ಚಲನೆಗಳು ಮತ್ತು ಒದೆತಗಳು ಎರಡಕ್ಕೂ ವ್ಯತ್ಯಾಸವಿದೆ. ನೀವು ಹೆಚ್ಚು ಒದೆತಗಳನ್ನು ಅನುಭವಿಸಿದರೆ ನಿಮ್ಮ ಮಗುವು ಗಂಡು ಎಂದು ನೀವು ತಿಳಿದುಕೊಳ್ಳಬಹುದು. ಹೆಣ್ಣು ಮಗುವು ಒದೆತಗಳಿಗಿಂತ ಹೆಚ್ಚು ಚಲನವಲನಗಳನ್ನು ಗರ್ಭದೊಳಗೆ ಮಾಡುತ್ತದೆ.

ಇವುಗಳು ಅಷ್ಟು ನಿಖರವಾಗಿಲ್ಲದಿದ್ದರು, ತಮಾಷೆಗಾಗಿ ಇದನ್ನು ನೀವು ಗರ್ಭಿಣಿ ಮಹಿಳೆಯರ ಜೊತೆ ಅನುಭವಿಸಬಹುದು. ಇದು ಹಲವು ಬಾರಿ ನಿಜವಾಗಿದೆ, ಇದನ್ನು ನಿಮ್ಮ ಸುತ್ತಮುತ್ತಲಿನ ಗರ್ಭಿಣಿಯರಲ್ಲಿ ಕೇಳಿ ಅವರ ಉದರದೊಳಗಿನ ಮಗುವನ್ನು ನೀವೇ ಹೇಳಿ ಅವರನ್ನು ಆಶ್ಚರ್ಯಪಡುವಂತೆ ಮಾಡಿ.

Leave a Reply

%d bloggers like this: