ಗರ್ಭಧರಿಸಲು ಸೂಕ್ತ ವಯಸ್ಸು ಯಾವುದು?

ಗರ್ಭಿಣಿಯಾಗುವುದು ನಿಮ್ಮ ಜೀವನದಲ್ಲಿ ಅತ್ಯಂತ ಸಂತೋಷದ ವಿಷಯವೇ ಸರಿ, ಆದರೆ ಅದರ ಜೊತೆಗೆ ನಿಮ್ಮ ಹೆಗಲಿನ ಮೇಲೆ ಜೀವನದ ಉದ್ದಕ್ಕೂ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿಯನ್ನು ನೀವು ಪಡೆಯುವಿರಿ. ಆದ್ದರಿಂದ, ನೀವು ಅದನ್ನು ಕೈಗೊಳ್ಳುವ ಮೊದಲು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿರುವುದು ಉತ್ತಮ.

ಇತ್ತೀಚಿಗೆ ಮಹಿಳೆಯರು ಕೂಡ ಕೆಲಸಕ್ಕೆ ತೆರಳುವರು, ಅಲ್ಲಿನ ಒತ್ತಡ, ಆಧುನಿಕ ಜೀವನ ಶೈಲಿ ಮುಂತಾದವುಗಳಿಂದ ಮತ್ತು ತಮ್ಮ ಜೀವನದಲ್ಲಿ ಒಂದು ಸರಿಯಾದ ನೆಲೆಯನ್ನು ಕಂಡುಕೊಳ್ಳುವವರೆಗೂ ಮಗು ಬೇಡ ಎಂದು ಹೇಳುವ ಹಲವಾರು ಮಹಿಳೆಯರು ಇದ್ದಾರೆ. ನಿಮ್ಮ ಯೋಚನೆ ತಪ್ಪಲ್ಲ, ಆದರೆ ಬೇರೆ ಬೇರೆ ವಯಸ್ಸಿನಲ್ಲಿ ಮಗು ಪಡೆಯುದರಿಂದ ಆಗುವ ಪ್ರಯೋಜನಗಳು ಮತ್ತು ತೊಂದರೆಗಳನ್ನು ಇಲ್ಲಿ ನೀಡಲಾಗಿದೆ, ಇದರಿಂದ ನಿಮ್ಮ ಜೀವನಕ್ಕೆ ಅನುಗುಣವಾಗಿ ನೀವೇ ಮಗು ಪಡೆಯುವ ಸಮಯವನ್ನು ನಿರ್ಧರಿಸಿಕೊಳ್ಳಬಹುದು.

ಮಗು ಪಡೆಯಲು ಉತ್ತಮ ವಯಸ್ಸು ಯಾವುದು?

ವೈದ್ಯಕೀಯ ಜರ್ನಲ್ ಅಬ್ಸ್ಟೆಟ್ರಿಶಿಯನ್ ಮತ್ತು ಸ್ತ್ರೀರೋಗತಜ್ಞ ಸಂಸ್ಥೆಯು ರಾಯಲ್ ಕಾಲೇಜ್ ಆಫ್ ಅಬ್ಸಸ್ಟ್ರೀಶಿಯನ್ಸ್ ಮತ್ತು ಗೈನೆಕೊಲೊಜಿಸ್ಟ್ ನಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಗರ್ಭಧರಿಸಲು ಅತ್ಯಂತ ಸುರಕ್ಷಿತ ವಯಸ್ಸು ೨೦ – ೩೩. ವೈದ್ಯಕೀಯ ತಜ್ಞರು ಹೇಳುವ ಕೆಲವೊಂದು ಸತ್ಯ ಸಂಗತಿಗಳು ಕೆಳಕಂಡಂತಿವೆ

೧.ಮಹಿಳೆಯು ತನ್ನ ೩೫ನೇ ವಯಸ್ಸಿನ ನಂತರ ಗರ್ಭಧರಿಸಲು ಚಿಂತಿಸಿದರೆ, ಪೂರ್ವ ಎಕ್ಲಾಂಪ್ಸಿಯ, ಗರ್ಭಪಾತ, ಅಪಸ್ಥಾನೀಯ ಗರ್ಭದಾರಣೆಯಂತಹ ಕಠಿಣ ತೊಡಕುಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.

೨.ಮೊಟ್ಟೆಯ ಫಲವತ್ತತೆ ೩೦ನೇ ವಯಸ್ಸಿನ ನಂತರ ಕ್ಷೀಣಿಸಲ್ಪಡುತ್ತದೆ. ಇದು ಗರ್ಭ ನಿಲ್ಲಲು ಕಷ್ಟವಾಗುವಂತೆ ಮಾಡುತ್ತದೆ.

೩.ಒಂದು ವೇಳೆ ನೀವು ಎರಡು ಅಥವಾ ಹೆಚ್ಚು ಮಗುವನ್ನು ಪಡೆಯಲು ಬಯಸುವುದಾದರೆ, ನೀವು ಮೊದಲ ಮಗುವನ್ನು ೨೦-೨೩ರ ವಯಸ್ಸಿನಲ್ಲಿ ಪಡೆದು ನಂತರದ ಮಗುವಿಗೆ ೨೬ರ ನಂತರ ಪ್ರಯತ್ನಿಸುವುದು ಉತ್ತಮ ಮಾರ್ಗವಾಗಿದೆ.

ವಿವಿಧ ವಯಸ್ಸಿನಲ್ಲಿ ಗರ್ಭಾವಸ್ಥೆ

ಗರ್ಭಧರಿಸಲು ಸೂಕ್ತ ವಯಸ್ಸನ್ನು ತಿಳಿದುಕೊಳ್ಳಲು, ಫಲವತ್ತತೆ ಋತುಚಕ್ರ, ಭಾವನಾತ್ಮಕ ಪರಿಪಕ್ವತೆ, ವೃತ್ತಿ ಸ್ಥಿರತೆ, ಕುಟುಂಬದ ದೃಷ್ಟಿಕೋನ, ಹಣಕಾಸು ವ್ಯವಸ್ಥೆ ಇತರಹದ ಮುಂತಾದ ಅಂಶಗಳನ್ನು ಪರಿಗಣಿಸಿ.

ನಿಮ್ಮ ಜೀವನಕ್ಕೆ ಸಂಬಂಧಿಸಿದಂತೆ ಗರ್ಭಿಣಿಯಾಗಲು ಇಲ್ಲಿ ನೀಡಿರುವ ಕೆಲವು ಅಂಶಗಳನ್ನು ಪರಿಗಣಿಸಿ ನೀವೇ ಸೂಕ್ತ ವಯಸ್ಸನ್ನು ತೀರ್ಮಾನಮಾಡಿಕೊಳ್ಳಿ!

೧.೨೦ ರಿಂದ ೨೪ ವರ್ಷಗಳ ನಡುವಿನ ವಯಸ್ಸು ಮಹಿಳೆಯರಿಗೆ ಹೆಚ್ಚು ಫಲವತ್ತಾದ ಅವಧಿಯಾಗಿದೆ. ಮತ್ತು ಕೆಲವು ಮಹಿಳೆಯರು ಗರ್ಭಧಾರಣೆಯ ಜವಾಬ್ದಾರಿಯನ್ನು ನಿರ್ವಹಿಸಲು ಭಾವನಾತ್ಮಕ ಸನ್ನದ್ಧತೆ ಹೊಂದಿರುವುದಿಲ್ಲ.

೨.ಒಂದು ವೇಳೆ ಮಹಿಳೆಯು ಆರೋಗ್ಯಕರ ಜೀವನ ಶೈಲಿಯನ್ನು ನಿರ್ವಹಿಸುತ್ತಿದ್ದು, ಉತ್ತಮ ಆರೋಗ್ಯಕರ ಆಹಾರ ಸೇವನೆ ಮಾಡುತ್ತಿದ್ದರೆ, ೨೫ ರಿಂದ ೨೯ ವರ್ಷ ವಯಸ್ಸು ಗರ್ಭಧರಿಸಲು ಸೂಕ್ತ ಸಮಯವಾಗಿದೆ, ಗರ್ಭಾವಸ್ಥೆಯನ್ನು ಉತ್ತಮವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಈ ಸಮಯದಲ್ಲಿ ಮಹಿಳೆಯರು ಹೊಂದಿದ್ದು, ಮಗುವಿನ ಜವಾಬ್ದಾರಿಯನ್ನು ನಿಭಾಯಿಸಲು ಭಾವನಾತ್ಮಕವಾಗಿಯೂ ಪರಿಪಕ್ವತೆಯನ್ನು ಹೊಂದಿರುತ್ತಾರೆ.

೩.ವೃತ್ತಿ-ಆಧಾರಿತ ಮಹಿಳೆಯರು ಕೂಡ ತಮ್ಮ ೩೦ನೇ ವಯಸ್ಸಿನ ಒಳಗಡೆ ಗರ್ಭಧರಿಸುವುದು ಉತ್ತಮವಾಗಿದೆ.

೪.೩೦ರ ನಂತರ ೪೦ರ ಒಳಗೆ ಗರ್ಭಧರಿಸುವುದು, ಮಹಿಳೆಯು ಗೆಸ್ಟೇಶನಲ್ ಡೈಯಾಬಿಟೀಸ್ ಮತ್ತು ಅಧಿಕ ರಕ್ತದೊತ್ತಡದಂತಹ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ.

೫.೩೫ರ ನಂತರ ಗರ್ಭಾವಸ್ಥೆಯಲ್ಲಿ ಗೆಸ್ಟ್ರೇಷನಲ್ ಡೈಯಾಬಿಟೀಸ್ ತುಂಬಾ ಗಂಭೀರ ಸಮಸ್ಯೆಯಾಗಿ ಕಾಡಬಹುದು.

೬.೩೦ರ ನಂತರ ಫಲವತ್ತತೆ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ಮಗುವಿನ ಜವಾಬ್ದಾರಿಯನ್ನು ೨೦ರ ವಯಸ್ಸಿಗಿಂತ ಈಗ ಹೆಚ್ಚು ಚೆನ್ನಾಗಿ ನಿಭಾಯಿಸಬಹುದು.

೭.೪೦ರ ನಂತರ ಗರ್ಭಧರಿಸುವುದು ಕಣ್ಣಾಮುಚ್ಚಾಲೆ ಆಟ ಆಗಬಹುದು.

೮.೩೨ರ ನಂತರ ಮಗು ಪಡೆಯಲು ಚಿಂತಿಸಿದ್ದರೆ, ನಿಮ್ಮ ದೈಹಿಕ ಸ್ಥಿತಿಯನ್ನು ಆರೋಗ್ಯವಾಗಿ ಕಾಪಾಡಿಕೊಳ್ಳುವುದನ್ನು ಮರೆಯದಿರಿ, ಗರ್ಭಾವಸ್ಥೆಯಲ್ಲಿ ಮತ್ತು ನಂತರ ನೀವು ಆಯಾಸವನ್ನು ಅನುಭವಿಸಬೇಕಾದೀತು.

ಮೇಲಿನ ಅಂಶಗಳು ನಿಮಗೆ ಮಗುವನ್ನು ಪಡೆಯಲು ಯಾವುದು ಸೂಕ್ತ ಸಮಯ ಎಂದು ತಿಳಿಸುತ್ತವೆ, ನಿಮ್ಮ ಜೀವನದ ಅಂಶಗಳನ್ನು ಪರಿಗಣಿಸಿ, ಈ ಅಂಶಗಳನ್ನು ಪರಿಗಣಿಸಿ ನಿಮ್ಮ ಮುದ್ದು ಕಂದಮ್ಮನನ್ನು ಪಡೆಯಲು ಉತ್ತಮ ವಯಸ್ಸು ಯಾವುದು ಎಂದು ನೀವೇ ತೀರ್ಮಾನಿಸಿ.

Leave a Reply

%d bloggers like this: