ನಿಮ್ಮ ಪತಿಯು ನಿಮ್ಮಲ್ಲಿ ಇಷ್ಟಪಡುವ ಗುಣ ಯಾವುದು ಎಂಬ ಬಗ್ಗೆ ನಿಮ್ಮ ರಾಶಿ ಹೀಗೆ ಹೇಳುತ್ತದೆ

ರಾಶಿಯ ಮೇಲೆ ಆಧಾರಿತವಾದ ಅಭಿಪ್ರಾಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತದೆ. ನಿಮ್ಮ ಹಣೆಬರಹವು ಸಂಪೂರ್ಣವಾಗಿ ರಾಶಿ-ನಕ್ಷತ್ರಗಳ ಮೇಲೆಯೇ ಅವಲಂಬಿತ ಆಗಿರುತ್ತದೆ ಎಂದು ನಾನು ಹೇಳುವುದಿಲ್ಲ. ಆದರೆ, ಇವುಗಳು ನಮ್ಮ ಸಂಬಂಧಗಳ ಬಗ್ಗೆ ಮತ್ತು ನಮ್ಮ ವ್ಯಕ್ತಿತ್ವದ ಬಗ್ಗೆ ಏನು ತಿಳಿಸುತ್ತವೆ ಎಂದು ತಿಳಿದುಕೊಳ್ಳುವುದರಲ್ಲೂ ಒಂಥರಾ ಮಜಾ ಇದೆ. ಹೀಗಾಗಿ ನಾನು ಇದರ ಬಗ್ಗೆ ಹೆಚ್ಚು ಹುಡುಕುತ್ತಾ ಹೋದ ಹಾಗೆ, ನಿಮ್ಮ ರಾಶಿಯ ಪ್ರಕಾರ ನಿಮ್ಮ ಪತಿಯು ನಿಮ್ಮ ಬಗ್ಗೆ ಅತ್ಯಂತ ಹೆಚ್ಚು ಇಷ್ಟ ಪಡುವ ವಿಷಯ ಯಾವುದು ಎಂಬ ಮಾಹಿತಿಯನ್ನ ಕಲೆ ಹಾಕಿದೆ. ಅದನ್ನು ನೀವೂ ಓದಿ.

೧. ಮೇಷ

ಅದು ನಿಮ್ಮ ಮಗುವಿನ ಶಾಲೆಯ ಸ್ಪೋರ್ಟ್ಸ್ ಡೇ ದಿನದ ಓಟದ ಸ್ಪರ್ಧೆಯಲ್ಲಿ ನಿಮ್ಮ ಮಗುವಿಗೆ ಚೀರಿ ಬೆಂಬಲ ನೀಡುವುದೇ ಇರಲಿ ಅಥವಾ ಸಂಬಳ ಬರುವುದು ತಡವಾಗಿ 2-3 ವಾರಗಳ ಕಾಲ ಪುಡಿಗಾಸಲ್ಲೇ ನಿಭಾಯಿಸುವುದೇ ಇರಲಿ, ಅದರಲ್ಲಿ ನೀವು ತೋರುವ ಪಾಸಿಟಿವ್ ವ್ಯಕ್ತಿತ್ವ ಮತ್ತು ಸಂಸಾರ ಸಾಗಿಸಲು ಬೇಕಿರುವ ಜೀವನ ಉತ್ಸಾಹವೇ ನಿಮ್ಮ ಪತಿಯನ್ನ ನಿಮ್ಮೆಡೆಗೆ ಇನ್ನಷ್ಟು ಸೆಳೆಯುವುದು.

೨. ವೃಷಭ

ಸಂಸಾರ ಅಥವಾ ಮಕ್ಕಳ ಪೋಷಣೆ ಎಂಬುದು ಬಂದಾಗ, ಎಲ್ಲದಕ್ಕಿಂತ ಹೆಚ್ಚು ಬೇಕಿರುವ ಎರಡು ವಿಷಯಗಳು ಎಂದರೆ ಅವು – ತಾಳ್ಮೆ ಮತ್ತು ಸ್ಥಿರತೆ. ಈ ಎರಡು ಅಂಶಗಳು ನಿಮ್ಮಲ್ಲಿ ಇದ್ದು, ನಿಮ್ಮ ಪತಿಯು ಇವುಗಳ ಕಾರಣದಿಂದಲೇ ಅವರು ಯಾವಾಗಲು ನಿಮ್ಮ ಮೇಲೆ ಭರವಸೆ ಇಡುವುದು. ನಿಮ್ಮ ಸ್ಥಿರ ವ್ಯಕ್ತಿತ್ವ ಮನೆಗೆ ಒಂದು ಶಾಂತಿ ತರುವ ಶಕ್ತಿ ಆಗಿರುತ್ತದೆ.

೩. ಮಿಥುನ

ಇವರಲ್ಲಿ ಇರುವ ಎರಡು ಮುಖ್ಯ ಗುಣಗಳು ಎಂದರೆ – ನೀವು ತಾಯಿಯಾಗಿ ಮಕ್ಕಳಿಗೆ, ಹೆಂಡತಿಯಾಗಿ ನಿಮ್ಮ ಪತಿಗೆ ತೋರುವ ಗರಿಷ್ಟ ಮಟ್ಟದ ಪ್ರೀತಿ ಮತ್ತು ಎಲ್ಲದಕ್ಕೂ ಬೇಗನೆ ಹೊಂದಿಕೊಳ್ಳುವುದು. ಈ ಅಂಶಗಳೇ ನೀವು ಎಂತಹಾ ಸಮಯದಲ್ಲೂ ಕೂಡ ನಿಮ್ಮ ಪತಿಗೆ ಬೆನ್ನೆಲುಬಾಗಿ ನಿಂತಿರುತ್ತೀರಿ ಎಂಬ ನಂಬಿಕೆಯನ್ನ ನಿಮ್ಮ ಪತಿಯಲ್ಲಿ ಹುಟ್ಟಿಸುವುದು. ಇದೇ ಕಾರಣಕ್ಕೆ ಅವರು ನಿಮ್ಮನ್ನ ಇನ್ನಷ್ಟು ಹೆಚ್ಚು ಪ್ರೀತಿಸುವುದು.

೪. ಕಟಕ

ನೀವು ಹೇಗೆ ನಿಮ್ಮ ಸೃಜನಶೀಲತೆ ಮತ್ತು ಸಹಾನುಭೂತಿ ಬಳಸಿ ನಿಮ್ಮ ಮಕ್ಕಳೊಂದಿಗೆ ಎಂದಿಗೂ ಅಳಿಯದ ಗಟ್ಟಿಯಾದ ಸಂಬಂಧ ಬೆಸೆಯುತ್ತಿರಿ ಎಂಬುದನ್ನ ನಿಮ್ಮ ಪತಿಯು ತುಂಬಾನೇ ಆರಾಧಿಸುತ್ತಾರೆ. ನೀವು ನಿಮ್ಮ ಮಕ್ಕಳಿಗೆ ಕಥೆಗಳನ್ನ ಹೇಳುವುದು ಇರಬಹುದು, ಅವರ ಸ್ಕೂಲ್ ಪ್ರಾಜೆಕ್ಟಿಗೆ ಸಹಾಯ ಮಾಡುವುದೇ ಇರಬಹುದು, ನಿಮ್ಮ ಮಕ್ಕಳು ನಿಮ್ಮನ್ನು ಯಾವಾಗಲೂ ನಂಬಿಕೊಳ್ಳಬಹುದು.

೫. ಸಿಂಹ

ನೀವು ಯಾವಾಗಲೂ ಜನರಲ್ಲಿರುವ ಒಳ್ಳೆಯ ಅಂಶಗಳನ್ನ ಗುರುತಿಸುತ್ತೀರಾ ಮತ್ತು ಎಂತಹ ಗಂಭೀರ, ಉದ್ವಿಗ್ನ ಸಂದರ್ಭವನ್ನೂ ನಿಮ್ಮ ಮಾತುಗಳಿಂದ ತಿಳಿಗೊಳಿಸುತ್ತೀರಾ. ಇದೇ ಕಾರಣಕ್ಕೆ ನಿಮ್ಮ ಪತಿಯು ನಿಮ್ಮನ್ನು ಮನೆಯ ಬೆಳಕಿನ ಕಿರಣದಂತೆ ಕಾಣುವುದು. ಮಕ್ಕಳ ಪೋಷಣೆ ಎಂಬುದು ಒಂದು ಕಷ್ಟದ ವಿಷಯ, ಹೀಗಾಗಿಯೇ ನಿಮ್ಮ ಉತ್ಸಾಹಿ ಗುಣವನ್ನ ನಿಮ್ಮ ಪತಿಯು ಹಂಚಿಕೊಳ್ಳಲು ಬಯಸುತ್ತಾರೆ.

೬. ಕನ್ಯಾ

ನೀವು ಇಲ್ಲದೆಯೇ ನಿಮ್ಮ ಕುಟುಂಬದ ದೈನಂದಿನ ಬದುಕು ಹಳ್ಳ ಹಿಡಿಯುತ್ತದೆ ಎಂಬುದು ನಿಮ್ಮ ಪತಿಗೆ ಚೆನ್ನಾಗಿ ಗೊತ್ತು. ನೀವು ಕೇವಲ ಮನೆಗೆಲಸದ ವಿಷಯ ಅಷ್ಟೇ ಅಲ್ಲ ವೃತ್ತಿ, ಸ್ನೇಹ, ಸಂಬಂಧಗಳಲ್ಲೂ ಅಚ್ಚುಕಟ್ಟು. ಎಲ್ಲವನ್ನು ನಿಯೋಜಿತವಾಗಿ ಮಾಡುವ ಈ ನಿಮ್ಮ ಗುಣವೇ ನಿಮ್ಮ ಪತಿಗೆ ತುಂಬಾ ಇಷ್ಟ.

೭. ತುಲಾ

ಸಂಸಾರದ ಬಂಡಿ ಸಾಗಲು, ಎರಡೂ ಗಾಲಿಗಳು ಕೆಲಸ ಮಾಡಬೇಕು. ಅರ್ಥಾತ್, ಗಂಡ ಹೆಂಡತಿ ಇಬ್ಬರೂ ಜವಾಬ್ದಾರಿಗಳನ್ನ ಹಂಚಿಕೊಂಡು ನಿರ್ವಹಿಸಬೇಕು. ಇದನ್ನು ತುಲಾ ರಾಶಿ ಅವರಾದ ನೀವು ಚೆನ್ನಾಗಿ ಅರ್ಥೈಸಿಕೊಂಡಿರುತ್ತೀರಾ. ನಿಮ್ಮ ಪತಿಗೆ ಅವರು ಒಂದು ಒಳ್ಳೆಯ ಟೀಮ್ ಪ್ಲೇಯರ್ ಜೊತೆ ಸಾಗುತ್ತಿದ್ದೇನೆ ಎಂಬುದು ಗೊತ್ತಿರುತ್ತದೆ. ಜೊತೆಗೂಡಿ ಕೆಲಸ ಮಾಡುವ ಈ ನಿಮ್ಮ ಗುಣವೇ ನಿಮ್ಮ ಪತಿಯು ನಿಮ್ಮಲ್ಲಿ ಆರಾಧಿಸುವುದು.

೮. ವೃಷ್ಚ್ಜಿಕ

ಕಠಿಣ ಪರಿಸ್ಥಿತಿಗಳೇ ಕಠಿಣ ವ್ಯಕ್ತಿಗಳನ್ನ ಹುಟ್ಟು ಹಾಕುವುದು. ನೀವು ಅಂತಹ ಕಠಿಣ ವ್ಯಕ್ತಿಗಳಲ್ಲಿ ಒಬ್ಬರು. ಎಂತಹ ಕಷ್ಟಕರ ಸಂದರ್ಭದಲ್ಲೂ ದೃತಿಗೆಡದೆ ಮುನ್ನುಗುವ ಗುಣ ನಿಮ್ಮದು. ನೀವು ಹೇಗೆ ಇಂತಹ ಪರಿಸ್ಥಿತಿಗಳಲ್ಲಿಯೂ ಸುಂದರವಾಗಿ ಅರಳುವುದೇ ನಿಮ್ಮ ಪತಿಯು ನಿಮ್ಮನ್ನು ಆರಾಧಿಸಲು ಕಾರಣ.

೯. ಧನು

ನಿಮಗೆ ಹೊಸ ಜಾಗಗಳಿಗೆ ಹೋಗುವುದು, ಹೊಸ ಅನುಭವಗಳನ್ನ ಪಡೆದುಕೊಳ್ಳುವುದಕ್ಕೆ ಬಹಳ ಇಷ್ಟ. ಹೀಗಾಗಿಯೇ ನೀವು ನಿಮ್ಮ ಕುಟುಂಬಕ್ಕೆ ಎಂದು ಏನಾದರೂ ಹೊಸ ಹೊಸ ಪ್ಲಾನ್ ಮಾಡುತ್ತಲೇ ಇರುತ್ತೀರಾ. ಅದು ಪ್ರವಾಸ ಹೋಗುವುದು ಇರಬಹುದು ಅಥವಾ ಸಿನಿಮಾಗೆ ಹೋಗುವುದೇ ಇರಬಹುದು. ನೀವು ಯಾವಾಗಲು ನಿಮ್ಮ ಕುಟುಂಬಕ್ಕೆ ತಾಜಾ ಗಾಳಿ ಬಿಸುತ್ತಲೇ ಇರುವಂತೆ ನೋಡಿಕೊಳ್ಳುತ್ತೀರಾ, ಇದುವೇ ನಿಮ್ಮ ಕುಟುಂಬವನ್ನ ಇನ್ನಷ್ಟು ಒಟ್ಟಿಗೆ ಕೂಡಿಸುವುದು. ಈ ಗುಣವೇ ನಿಮ್ಮ ಪತಿಗೆ ಇಷ್ಟವಾಗುವುದು.

೧೦. ಮಕರ

ಮಕರ ರಾಶಿಯವರು ಇತರೆ ರಾಶಿಯವರಿಗಿಂತ ಹೆಚ್ಚು ಕೌಟುಂಬಿಕ ಜೀವನ ಮತ್ತು ಕಟ್ಟುಪಾಡುಗಳಿಗೆ ಬದ್ಧರಾಗಿರುತ್ತಾರೆ. ನಿಮ್ಮ ಸಂಗಾತಿಗೆ ಇದಕ್ಕಿಂತ ಖುಷಿಯ ವಿಷಯ ಇನ್ನೇನು ಬೇಕು? ನೀವು ನಿಮ್ಮ ಪೂರ್ವಜರಿಂದ ಬಂದ ಆಚಾರ-ವಿಚಾರ, ಆಹಾರ ಪದ್ಧತಿ, ಕಥೆಗಳು, ಹಬ್ಬ-ಆಚರಣೆಗಳು, ಎಲ್ಲವನ್ನೂ ಮುಂದಿನ ಪೀಳಿಗೆ, ಅಂದರೆ ನಿಮ್ಮ ಮಕ್ಕಳಿಗೆ ಧಾರೆ ಎರೆಯುವದಕ್ಕೆ ಬದ್ಧರಾಗಿರುತ್ತೀರಾ. ಇದು ನಿಮ್ಮ ಪತಿಯು ನಿಮ್ಮನ್ನು ಇನ್ನಷ್ಟು ಹೆಚ್ಚು ಇಷ್ಟ ಪಡುವಂತೆ ಮಾಡುತ್ತದೆ.

೧೧. ಕುಂಭ

ನಿಮ್ಮ ಸ್ವಾವಲಂಬನೆ ಮತ್ತು ಸಾಮಾಜಿಕ ಸಮಾನತೆಯ ವಿಚಾರ – ಈ ಕಾರಣಗಳಿಂದಲೇ ನಿಮ್ಮ ಪತಿಗೆ ಮೊದಲಿನಿಂದಲೂ ನೀವು ಎಂದರೆ ಇಷ್ಟ. ಆದರೆ ಅವರು ಇನ್ನು ಹೆಚ್ಚು ಇಷ್ಟ ಪಡುವ ವಿಷಯ ಎಂದರೆ, ಅದು ನೀವು ಈ ಗುಣಗಳನ್ನು ನಿಮ್ಮ ಮಕ್ಕಳಲ್ಲಿ ಬಿತ್ತುವುದು. ನಿಮ್ಮ ಮಕ್ಕಳಿಗೆ ಉತ್ತಮ ಸಾಮಾಜಿಕ ಪ್ರಜ್ಞೆ ಮತ್ತು ನ್ಯಾಯದ ಬಗ್ಗೆ ಅಭಿಪ್ರಾಯ ಬೆಳೆಸಿಕೊಳ್ಳಲು ನೀವು ಹಾಕಿ ಕೊಡುವ ಅಡಿಪಾಯದ ಬಗ್ಗೆ ನಿಮ್ಮ ಪತಿಗೆ ಹೆಮ್ಮೆ ಇದೆ.

೧೨. ಮೀನಾ

ಮೀನಾ ರಾಶಿಯವರು ಉಳಿದೆಲ್ಲಾ ರಾಶಿಯವರಿಗಿಂತ ಬಹಳ ಹೆಚ್ಚು ಭಾವನತ್ಮಕ ಜೀವಿಗಳು. ಹಾಗು ಈ ಭಾವನಾತ್ಮಕತೆ ಜೊತೆಗೆ ಅವರಲ್ಲಿ ಸಹಾನುಭೂತಿ ಮತ್ತು ಜ್ಞಾನ ಕೂಡ ಇರುತ್ತವೆ. ನಿಮ್ಮ ಮೃದುತ್ವವನ್ನು ನಿಮ್ಮ ಪತಿ ತುಂಬಾನೇ ಇಷ್ಟ ಪಡುತ್ತಾರೆ. ನಿಮ್ಮ ಕುಟುಂಬದ ಹೃದಯವೇ ನೀವು. ಏನಾದರು ದೊಡ್ಡ ಪ್ರಶ್ನೆಯೊಂದು ಎದುರಾಗಿ, ಮನಸ್ಸು ಮತ್ತು ಮೆದುಳಿನ ನಡುವೆ ಘರ್ಷಣೆ ಉಂಟಾದರೆ, ಎಲ್ಲರು ಬರುವುದೇ ನಿಮ್ಮ ಬಳಿ.

Leave a Reply

%d bloggers like this: