ಇನ್ನೂ ಹುಟ್ಟಿರದ ಮಗುವಿನೊಂದಿಗೆ ಈ ತಾಯಂದಿರು ಹ್ಯಾಲೋವೀನ್ ಆಚರಿಸಿದ್ದು ಹೀಗೆ!

ನೀವು ಕೂಡ ಹೆಮ್ಮೆ, ಖುಷಿಯಿಂದ ಬಸುರಿ ಹೊಟ್ಟೆ ಯನ್ನ ಹೊತ್ತಿದ್ದರೆ, ನೀವೂ ಹೀಗೆ ಮಾಡಿಕೊಳ್ಳಬೇಕು ಎಂಬ ಉಪಾಯ ನಿಮ್ಮಲ್ಲಿ ಮೂಡಬಹುದು. ಒಂದು ವೇಳೆ ನೀವು ಗರ್ಭಧರಿಸಿಲ್ಲ ಎಂದರೂ ಪರವಾಗಿಲ್ಲ, ಈ ಚಿತ್ತಾರಗಳು ನಿಮ್ಮ ಮೊಗದಲ್ಲಿ ನಗು ತರಿಸುತ್ತವೆ. ಪಾಶ್ಚಾತ್ಯ ದೇಶಗಳಲ್ಲಿ ಆಚರಿಸುವ ಹ್ಯಾಲೋವೀನ್ ಸಂದರ್ಭದಲ್ಲಿ ಮಕ್ಕಳಿಗೆ ವಿಧವಿಧವಾದ ವೇಷ ಭೂಷಣ ಹಾಕಿಸಿ, ಹಲವಾರು ಮನೋರಂಜನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಗರ್ಭಿಣಿ ಹೆಂಗಸರು ಇನ್ನೂ ಭೂಮಿಗೆ ಬಂದಿರದ ತಮ್ಮ ಮಕ್ಕಳಿಗೆ ವೇಷ ಹಾಕಿಸಿದ ಪರಿ ಇದು ಎಂದು ಅನ್ನಬಹುದು! ಒಂದು ಚಿಕ್ಕ ಪೈಂಟ್ ಬ್ರಷ್ ಮತ್ತು ವಾಟರ್ ಪೈಂಟ್ ಬಳಸಿ, ಎಲ್ಲರ ಮುಖದಲ್ಲೂ ಮಂದಹಾಸ ತರಿಸುವಂತ ಕೆಲಸ ಈ ಗರ್ಭಿಣಿ ಹೆಂಗಸರು ಮಾಡಿದ್ದಾರೆ. ಅಂಥವುಗಳಲ್ಲಿ ಅತ್ಯುತ್ತಮವಾದವುಗಳನ್ನ ನಾವು ಆಯ್ದು ಇಲ್ಲಿ ನಿಮ್ಮ ಮುಂದೆ ಇಟ್ಟಿದ್ದೇವೆ, ನೋಡಿ, ಖುಷಿ ಪಡಿ :

Leave a Reply

%d bloggers like this: