ಈ ಗುಣಲಕ್ಷಣಗಳು ನಿಮ್ಮ ಉದರದೊಳಗೆ ಅವಳಿ ಮಕ್ಕಳಿವೆ ಎಂದು ಹೇಳುತ್ತವೆ!

ಸಾಮಾನ್ಯ ಗರ್ಭಿಣಿಯರಿಗಿಂತ ದಪ್ಪದಾದ ಹೊಟ್ಟೆಯನ್ನು ನೀವು ಹೊಂದಿದ್ದರೆ, ನೀವು ಅವಳಿ ಶಿಶುಗಳನ್ನು ಹೊಂದಿರುವಿರಿ ಎಂದು ಹೇಳುವುದು ಸಹಜ, ಆದರೆ ಅದು ಪ್ರತಿಬಾರಿಯೂ ನಿಜವಲ್ಲ. ಸ್ಕ್ಯಾನ್ ಮೂಲಕ ನಿಮಗೆ ನಿಖರವಾಗಿ ಉದರದೊಳಗೆ ಎಷ್ಟು ಶಿಶುಗಳಿವೆ ಎಂದು ತಿಳಿಯುತ್ತದೆ. ಆದರೆ ಈ ಲಕ್ಷಣಗಳನ್ನು ನೀವು ಗಮನಿಸಿದರೆ ಗರ್ಭದೊಳಗೆ ಅವಳಿ ಮಕ್ಕಳಿರುವುದನ್ನು ನೀವು ತಿಳಿದುಕೊಳ್ಳಬಹುದು.

ಈ ಆರಂಭಿಕ ಚಿಹ್ನೆಗಳು ನೀವು ಅವಳಿ ಮಕ್ಕಳ ತಾಯಿ ಆಗುತ್ತಿರುವಿರಿ ಎಂದು ಸೂಚಿಸುತ್ತವೆ

೧.ಗರ್ಭಾವಸ್ಥೆಯ ಮೊದಲ ಎರಡು ವಾರಗಳಲ್ಲಿ ಹೆಚ್ಚಿದ HCG ಮಟ್ಟದಿಂದ ತೀವ್ರ ಬೆಳಗ್ಗಿನ ಕಾಯಿಲೆಯನ್ನು ಅನುಭವಿಸುವಿರಿ. ನೀವು ಮುಟ್ಟನ್ನು ನಿಲ್ಲಿಸುವ ಮೊದಲು ವಾಕರಿಕೆ ಕೂಡ ಕಾಡಬಹುದು.

೨.ಗರ್ಭಾವಸ್ಥೆಯ ೨-೩ವಾರಗಳಲ್ಲಿ, ಆಯಾಸ, ಬಳಲಿಕೆ, ನಿದ್ರಾಹೀನತೆ ನಿಮ್ಮನ್ನು ಆವರಿಸಬಹುದು. ಎರಡು ಕಂದಮ್ಮಗಳಿಗೆ ನೀವು ಪೋಷಣೆ ಮಾಡುವುದರಿಂದ ಸರಿಯಾದ ನಿದ್ರೆ ಮತ್ತು ಆರೋಗ್ಯಕರ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ.

೩.ನೀವು ಅವಳಿ ಶಿಶುಗಳನ್ನು ಹೊಂದಿದ್ದರೆ, ಎರಡು ಶಿಶುಗಳ ಪೋಷಣೆಗಾಗಿ ಹೆಚ್ಚು ಹಸಿವನ್ನು ಕಾಣುವಿರಿ. ತಾಯಿಯ ಹೊಟ್ಟೆ ಮತ್ತು ಗರ್ಭಶಾಯ ಸಾಮಾನ್ಯ ಗರ್ಭಿಣಿಯರಿಗಿಂತ ದೊಡ್ಡದಾಗಿರುತ್ತದೆ.

೪.ಗರ್ಭಾವಸ್ಥೆಯನ್ನು ರಕ್ತದಲ್ಲಿ ಅಥವಾ ಮೂತ್ರದಲ್ಲಿ ಹೆಚ್ಚಿದ HCG ಮಟ್ಟವನ್ನು ನೋಡಿ ಪತ್ತೆಮಾಡುವುದು, ಈ ಮಟ್ಟವು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಿದ್ದರೆ ಅದು ನೀವು ಅವಳಿ ಮಕ್ಕಳ ತಾಯಿ ಎಂದು ತೋರಿಸುವ ಮೊದಲ ಚಿಹ್ನೆ, ನಿಮ್ಮ ಮುಟ್ಟನ್ನು ತಪ್ಪಿದ ನಂತರ ಗರ್ಭಿಣಿ ಪರೀಕ್ಷೆ ಮಾಡಿಸಿದಾಗ ತುಸು ಕಂದು ಬಣ್ಣದ ಗೆರೆ ಕಾಣಿಸಿದರೆ ನೀವು ಗರ್ಭಿಣಿಯಾಗಿರುವಿರಿ, ಒಂದು ವೇಳೆ ನೀವು ಅವಳಿ ಮಕ್ಕಳನ್ನು ಹೊಂದಿದ್ದರೆ, ಈ ಗೆರೆ ಗಾಢ ಬಣ್ಣದಿಂದ ಕೂಡಿರುತ್ತದೆ.

೫.ನೀವು ಅವಳಿ ಶಿಶುವನ್ನು ಹೊಂದಿದ್ದರೆ, ಬೇಗನೆ ತೂಕವನ್ನು ಪಡೆದುಕೊಳ್ಳುವಿರಿ.

೬.ಅವಳಿ ಶಿಶುವಾಗಿದ್ದರೆ, ಗರ್ಭದಲ್ಲಿ ಭ್ರೂಣಗಳ ಚಲನವಲನ ಬೇಗನೆ ಶುರು ಆಗುತ್ತದೆ ಮತ್ತು ಆಗಾಗ್ಗೆ ಚಲನೆಯನ್ನು ಮಾಡುತ್ತಿರುತ್ತವೆ.

೭.ಮೊದಲನೇ ತ್ರೈಮಾಸಿಕದ ಕೊನೆಯ ಹಂತದಲ್ಲಿ, ಮಗುವಿನ ಹೃದಯ ಬಡಿತವನ್ನು ಪರೀಕ್ಷಿಸಲು ವೈದ್ಯರು ಸಲಹೆ ನೀಡಬಹುದು, ಈ ಸಮಯದಲ್ಲಿ ನೀವು ಎರಡು ಹೃದಯ ಬಡಿತವನ್ನು ಆಲಿಸಬಹುದು.

೮.ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದು ಗರ್ಭಾವಸ್ಥೆಯಲ್ಲಿ ಸಾಮಾನ್ಯ, ಆದರೆ ಅವಳಿ ಗರ್ಭಿಣಿಯರಲ್ಲಿ, ಹೆಚ್ಚು ಹಿಗ್ಗಿದ ಗರ್ಭಾಶಯದಿಂದ, ಮೂತ್ರಕೋಶದ ಮೇಲೆ ಇರುವುದರಿಂದ ಹೆಚ್ಚು ಬಾರಿ ಮೂತ್ರ ಹೋಗುವುದು ಸಾಮಾನ್ಯವಾಗುತ್ತದೆ. ನಿಮ್ಮ ದೇಹವನ್ನು ನೀರಿನಾಂಶದಿಂದ ಕೂಡಿರುವಂತೆ ಮಾಡಲು ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸಿ.

೯.ನಿಮ್ಮ ಹೃದಯದ ಬಡಿತವು ಹೆಚ್ಚಾಗುತ್ತದೆ, ಹೃದಯವು ಆಮ್ಲಜನಕವನ್ನು ಪೂರಕವಾಗಿ ಒದಗಿಸಬೇಕಾಗಿರುವುದರಿಂದ ಇದು ಸಾಮಾನ್ಯ.

Leave a Reply

%d bloggers like this: