ಗರ್ಭಾವಸ್ಥೆಯಲ್ಲಿ ತೂಕ : ನೀವು ತಿಳಿದಿರಲೇಬೇಕಾದ ಸಂಗತಿ!

ಗರ್ಭಾವಸ್ಥೆಯಲ್ಲಿ ನಿಮ್ಮ ತೂಕ ಜಾಸ್ತಿ ಆಗುತ್ತದೆ ಎಂಬುವುದು ನಿಮಗೆ ತಿಳಿದಿರುವ ವಿಷಯ, ಆದರೆ ಕೆಲವೊಮ್ಮೆ ವೈದ್ಯರು ನೀವು ಅಧಿಕ ತೂಕವನ್ನು ಪಡೆದಿರುವಿರಿ ಇದರಿಂದ ಹೆರಿಗೆ ಸಮಯ ಅಥವಾ ಮಗುವಿಗೆ ತೊಂದರೆ ಆಗುವ ಸಾಧ್ಯತೆ ಇದೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ಗರ್ಭಾವಸ್ಥೆಯಲ್ಲಿ ಅಧಿಕ ತೂಕವನ್ನು ಪಡೆಯುವುದು ಅಥವಾ ಕಡಿಮೆ ತೂಕವನ್ನು ಹೊಂದಿರುವುದು ಮಗುವು ಗರ್ಭದೊಳಗೆ ಆರೋಗ್ಯವಾಗಿ ಬೆಳೆಯಲು ತೊಂದರೆಯಾಗಬಹುದು.

ಗರ್ಭಾವಸ್ಥೆಯಲ್ಲಿ ತೂಕವನ್ನು ಅಳೆಯಲು ದೇಹ ದ್ರವ್ಯರಾಶಿ ಸೂಚಿಯನ್ನು ಬಳಸುವರು(BMI – Body Mass Index). BMI ಎಂದರೇನು? ಅದನ್ನು ಹೇಗೆ ಕಂಡುಹಿಡಿಯುವುದು? ಎಲ್ಲವನ್ನು ಇಲ್ಲಿ ವಿವರಿಸಲಾಗಿದೆ.

BMI ಎಂದರೆ ನಿಮ್ಮ ದೇಹದಲ್ಲಿ ಎಷ್ಟು ಕೊಬ್ಬಿನಾಂಶ ಇದೆ ಎಂಬುದನ್ನು ತಿಳಿಯಲು ಅಳೆಯುವುದು, ಇದರಿಂದ ನೀವು ಆರೋಗ್ಯಕರ ತೂಕವನ್ನು ಹೊಂದಿರುವಿರಾ ಅಥವಾ ಇಲ್ಲವೇ ಎಂಬುದನ್ನು ತಿಳಿಯಬಹುದು. ಇದನ್ನು ನಿಮ್ಮ ಎತ್ತರಕ್ಕೆ ಅನುಗುಣವಾಗಿ ಕಂಡು ಹಿಡಿಯುವುದು.

ಇದನ್ನು ಕಂಡು ಹಿಡಿಯಲು ಈ ಸೂತ್ರವನ್ನು ಬಳಸಿ.

BMI = ತೂಕ(kg) ➗ ಎತ್ತರ2 (ಮೀಟರ್2)

ತೂಕ kg ಯಲ್ಲಿ ಮತ್ತು ಎತ್ತರ ಮೀಟರ್ ನಲ್ಲಿ ಇರಬೇಕು. ಉದಾಹರಣೆಗೆ ೬೫kg ತೂಕ ಮತ್ತು ೧.೬೨ಮೀಟರ್ ಉದ್ದ, BMI = ೨೪.೭೭

BMI ಮೌಲ್ಯ ೧೫ಕ್ಕಿಂತ ಕಡಿಮೆ ಇದ್ದರೆ, ತೀರಾ ಕಡಿಮೆ ತೂಕವನ್ನು ಹೊಂದಿರುವಿರಿ ಎಂದರ್ಥ.

BMI ಮೌಲ್ಯ ೧೬ ರಿಂದ ೧೮.೫ ಇದ್ದರೆ, ಕಡಿಮೆ ತೂಕ ಇರುವಿರಿ.

BMI ಮೌಲ್ಯ ೧೮.೫ ರಿಂದ ೨೫ ಇದ್ದರೆ, ಸಾಮಾನ್ಯ ತೂಕ ಇರುವಿರಿ(ಆರೋಗ್ಯಕರ ತೂಕ).

BMI ಮೌಲ್ಯ ೨೫ ರಿಂದ ೩೦ ಇದ್ದರೆ, ಹೆಚ್ಚು ತೂಕ ಇರುವಿರಿ.

BMI ಮೌಲ್ಯ ೩೦ ರಿಂದ ೩೫ ಇದ್ದರೆ, ಹೆಚ್ಚು ಬೊಜ್ಜನ್ನು ಹೊಂದಿರುವಿರಿ.

BMI ಮೌಲ್ಯ ೪೦ಕ್ಕಿಂತ ಹೆಚ್ಚಿದ್ದರೆ, ನೀವು ಅತಿ ಹೆಚ್ಚು ಬೊಜ್ಜನ್ನು ಹೊಂದಿರುವಿರಿ.

ನಿಮ್ಮ BMI ಆಧಾರದ ಮೇಲೆ ನೀವು ಆರೋಗ್ಯಕರ ತೂಕವನ್ನು ಹೊಂದಿರುವಿರಾ ಅಥವಾ ಹೊಂದಿಲ್ಲವಾ ಎಂದು ಹೇಳಬಹುದು. ಈ ಕೆಳಗಿನ ಪಟ್ಟಿ ನಿಮ್ಮ ಪೂರ್ವ ಗರ್ಭಾವಸ್ಥೆಯ ತೂಕವನ್ನು ಆಧಾರಿಸಿ ಈಗ ನೀವು ಎಷ್ಟು ತೂಕವನ್ನು ಪಡೆಯಬಹುದು ಮತ್ತು ಇದು ಆರೋಗ್ಯಕರ ತೂಕ ಎಂದು ಹೇಳುತ್ತದೆ.

ಗರ್ಭಾವಸ್ಥೆಗೆ ಮುನ್ನ BMI

ತೂಕದ ವರ್ಗ

ಇಷ್ಟು ತೂಕವನ್ನು ಪಡೆಯುವುದು

18.5 ಕ್ಕಿಂತ ಕಡಿಮೆ

ಕಡಿಮೆ ತೂಕ

13 – 18 kg

18.5 – 25

ಸಾಮಾನ್ಯ(ಆರೋಗ್ಯಕರ)

11 – 16 kg

25 – 29.9

ಅಧಿಕ ತೂಕ

7 – 11 kg

30ಕ್ಕಿಂತ ಹೆಚ್ಚು

ಬೊಜ್ಜು

5 – 9 kg

ಕೆಳಗಿನ ಚಾರ್ಟ್ ನಿಮಗೆ ಸ್ಪಷ್ಟ ಮಾಹಿತಿ ನೀಡುತ್ತದೆ

Leave a Reply

%d bloggers like this: