ನೀರೇ ಹೊಡೆದಿಲ್ಲದೆ ಆಮ್ನಿಯೋಟಿಕ್ ಚೀಲದೊಳಗೆಯೇ ಜನಿಸಿದ ಮಗುವಿನ ವಿಡಿಯೋ!

ನೀವು ಎಂದಾದರೂ ಮಗುವು ಆಮ್ನಿಯೋಟಿಕ್ ಚೀಲದ ಒಳಗೇ ಇದ್ದಕೊಂಡು ಭೂಮಿಗೆ ಬಂದಿರುವುದು ನೋಡಿದ್ದೀರಾ? ಆಮ್ನಿಯೋಟಿಕ್ ಚೀಲ ಎಂದರೆ, ಗರ್ಭದ ಒಳಗೆ ತಿಳಿ, ಪಾರದರ್ಶಕ ದ್ರವ್ಯ ತುಂಬಿಕೊಂಡ ಒಂದು ಚೀಲ. ಇದುವೇ ಬೆಳೆಯುವ ಭ್ರೂಣಕ್ಕೆ ಆಶ್ರಯ ನೀಡುವುದು.

ಬಹುತೇಕ ಪ್ರಕರಣಗಳಲ್ಲಿ ಹೆರಿಗೆ ಸಮಯದಲ್ಲಿ ಈ ಆಮ್ನಿಯೋಟಿಕ್ ಚೀಲ ತಾನಾಗಿಯೇ ಹರಿದು ಹೋಗುತ್ತದೆ – ಇದನ್ನೇ ನಾವು ನೀರು ಹೊಡೆಯೋದು ಎಂದು ಹೇಳುವುದು. ಆದರೆ ಈ ಪ್ರಕರಣದಲ್ಲಿ ಆಗಿದ್ದೆ ಬೇರೆ. ಮಗುವು ಹೆರಿಗೆಯ ನಂತರವೂ ಇನ್ನೂ ಆಮ್ನಿಯೋಟಿಕ್ ಚೀಲದ ಒಳಗೆಯೇ ಮುದುರಿಕೊಂಡು ಕುಳಿತಿತ್ತು. ನೋಡಲಿಕ್ಕೂ ಅದ್ಭುತ ಹಾಗು ಕಾಣಿಸಿಕೊಳ್ಳುವುದು ಬಹಳ ವಿರಳ. ಏಕೆಂದರೆ ಇಂತಹ ಪ್ರಕರಣ 80000 ಹೆರಿಗೆಗಳಲ್ಲಿ ಒಮ್ಮೆ ಮಾತ್ರ ಎದುರಾಗುವುದು.

ಫೇಸ್ಬುಕ್ ಅಲ್ಲಿ ಅರೋಗ್ಯ ಸಂಸ್ಥೆಯೊಂದು ಪೋಸ್ಟ್ ಮಾಡಿರುವ ಈ ವಿಡಿಯೋವನ್ನು ಈಗಾಗಲೇ ಸುಮಾರು 50 ಲಕ್ಷ ಮಂದಿ ನೋಡಿ ಬೆರಗಾಗಿದ್ದಾರೆ.

ಇದು ನೋಡಲು ಸುಂದರವಾಗಿದ್ದರೂ, ಅಷ್ಟೇ ವಿಚಿತ್ರವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ನೀವು ಈ ಚೀಲವನ್ನು ನೋಡಬಹುದು. ಅದು ಬಹುತೇಕ ಸಂಪೂರ್ಣ ಪಾರದರ್ಶಕವಾಗಿದೆ. ಅದರೊಳಗೆ ದ್ರವ್ಯ ತುಂಬಿಕೊಂಡಿದ್ದು, ನೀವು ಮಗುವು ಇನ್ನೂ ತನ್ನ ಕರುಳುಬಳ್ಳಿ  ಜೊತೆಗಿರುವುದು ಕಾಣಬಹುದು. ಆ ಚೀಲದ ಒಳಗೆ ಕೂಡ ಮಗುವು ತನ್ನ ಚಲನವಲನಗಳನ್ನ ನಡೆಸುತ್ತಿದೆ. ಆದರೆ ಈ ಚೀಲವು ಮುಚ್ಚಿಕೊಂಡಿದ್ದರು ಮಗುವಿಗೆ ಯಾವುದೇ ತೊಂದರೆ ಇಲ್ಲ. ಏಕೆಂದರೆ, ಅದಕ್ಕೆ ಬೇಕಿರುವ ಆಮ್ಲಜನಕ ಅದರ ಕರಳುಬಳ್ಳಿಯಿಂದ ಅದಕ್ಕೆ ಸಿಗುತ್ತಿದೆ.

 

Leave a Reply

%d bloggers like this: